ಕಡೂರು: ಕಾರ್ಗಿಲ್ ಯುದ್ದ ಭಾರತ ಹಾಗೂ ನಮ್ಮ ಸೈನ್ಯದ ಪಾಲಿಗೆ ಮಹತ್ವವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ಯುವಮೋರ್ಚಾ ಏರ್ಪಡಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಬೈಕ್ ರ‌್ಯಾಲಿ ಪ್ರಯುಕ್ತ ತರೀಕೆರೆಯಿಂದ ಆಗಮಿಸಿದ ಕಾರ್ಗಿಲ್ ವಿಜಯಜ್ಯೋತಿ ರಥಯಾತ್ರೆಯನ್ನು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿ ಮಾತನಾಡಿದರು.
ಭಾರತ ವೀರರು ತ್ಯಾಗ ಬಲಿದಾನದ ಲವಾಗಿ ಕಾರ್ಗಿಲ್ ಯುದ್ದದಲ್ಲಿ ವಿಜಯದ ಪತಾಕೆ ಹಾರಿಸಿದ ನೆನಪು 25 ವರ್ಷಗಳು ಪೂರೈಸಿರುವುದು ಭಾರತದ ಪಾಲಿಗೆ ಹೆಮ್ಮೆಯ ದಿನವಾಗಿದೆ. ಯುದ್ದದಲ್ಲಿ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ತನ್ನ ದೇಶದ ಘನತೆ ಸಾಹಸವನ್ನು ಎತ್ತಿ ಹಿಡಿದಿದ್ದರು. ಇವರ ತ್ಯಾಗ ಬಲಿದಾನ ದೇಶಪ್ರೇಮಾ ಪ್ರತಿಯೊಬ್ಬ ಭಾರತೀಯರಿಗೆ ಸ್ಪೂರ್ತಿಯಾಗಿದೆ ಎಂದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಜೇಯ್ ಒಡೆಯರ್ ನೇತೃತ್ವದಲ್ಲಿ ಕೆಎಲ್‌ವಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ತಿರಂಗ ಧ್ವಜ ಹಿಡಿದು ಬೈಕ್ ರ‌್ಯಾಲಿ ನಡೆಸಲಾಯಿತು. ನಿವೃತ್ತ ಸೈನಿಕರ ಸಂಘದ ಸದಸ್ಯರು ಮೆರವಣಿಗೆಯಲ್ಲಿ ಸಾಥ್ ನೀಡಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ಕೋಶಾಧ್ಯಕ್ಷ ದಾನಿ ಉಮೇಶ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶೇಖರಪ್ಪ, ಪುರಸಭಾ ಸದಸ್ಯರಾದ ಯತೀರಾಜ್, ಗೋವಿಂದು, ಸುಧಾ ಉಮೇಶ್ ಮುಖಂಡರಾದ ರಾಜಾನಾಯ್ಕ, ಚೌಳಹಿರಿಯೂರು ರವಿ, ಕೆ.ಆರ್.ಚಂದ್ರು, ಟಿ,.ಆರ್. ಲಕ್ಕಪ್ಪ, ಚಿನ್ನರಾಜು, ವೆಂಕಟೇಶ್, ಮತಿಘಟ್ಟ ನವೀನ್, ಭರತ್‌ಕೆಂಪರಾಜ್, ನಾಗೇಂದ್ರ ಅಗ್ನಿ, ಕುಮಾರ ಪಾಟೀಲ, ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು
ಕಾರ್ಗಿಲ್ ವಿಜಯ ರಥಯಾತ್ರೆಗೆ ಸ್ವಾಗತ
You Might Also Like
Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?
ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…
ನಿಮ್ಮ ಮಕ್ಕಳಿಗೆ ಪ್ರತಿನಿತ್ಯ ಟೀ ಕೊಡ್ತಿದ್ದೀರಾ? ಹೌದು ಎಂದಾದರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು! Tea
Tea : ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು…
ನಿಮಗೆ ದೃಷ್ಟಿ ದೋಷವಾಗಿದ್ರೆ..ನಿಂಬೆ ಹಣ್ಣಿನಿಂದ ಹೀಗೆ ಮಾಡಿದರೆ ಸಾಕು! Drishti Dosha
Drishti Dosha: ಸಾಮಾನ್ಯವಾಗಿ ಕೆಟ್ಟ ದೃಷ್ಟಿ ಬಿದ್ದಿದೆ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಮನೆ ವ್ಯವಹಾರ,…