More

    ವಾರ ಭವಿಷ್ಯ 19ರಿಂದ25ರ ತನಕ | ಈ ರಾಶಿಯವರಿಗೆ ವಾರಾಂತ್ಯಕ್ಕೆ ಶುರುವಾಗುವ ಶನಿಕಾಟ ಎರಡೂವರೆ ವರ್ಷ ಇರಲಿದೆ…

    ಮೇಷ:  ನಿಮ್ಮ ಸೂಕ್ಷ್ಮಮನಸ್ಸನ್ನು ನೋಯಿಸಿ ಸಂತೋಷಪಡುವ ಜನರಿದ್ದಾರೆ. ಕುಜನು ನಿಮ್ಮ ರಾಶಿಯ ಯಜಮಾನನಾಗಿ ಧನಲಾಭ ತರುತ್ತಿದ್ದರೂ ಕಿರಿಕಿರಿಗಳು ತಪ್ಪುವುದಿಲ್ಲ. ಬಹುಪ್ರಮುಖ ಉದ್ದೇಶವೊಂದು ಇನ್ನೇನು ಈಡೇರುತ್ತದೆ ಎನ್ನುವಾಗ ಅದನ್ನು ಅಲ್ಲೇ ಕೈಬಿಡುತ್ತೀರಿ. ಹೊಯ್ದಾಡುವ ಮನಸ್ಸನ್ನು ನಿಗ್ರಹಿಸಿ. ಪ್ರಾಮಾಣಿಕ ಮಾತುಗಳೇ ಆದರೂ ಸರ್ರನೆ ಬಾಯಿ ಬಿಡಬೇಡಿ. ಆಸ್ತಿ ವಿಚಾರಗಳಲ್ಲಿ ತೊಂದರೆ ಸಾಧ್ಯ. ಗಜಗೌರಿ ಸ್ತುತಿ ಕ್ಷೇಮ.
    ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 6

    ವೃಷಭ: ವಾರಾಂತ್ಯಕ್ಕೆ ಅಷ್ಟಮ ಶನಿ ಕಾಟ ದೂರ. ಸ್ವಾಮಿಯು ಈಗ ನಿಮ್ಮ ವಿಚಾರದಲ್ಲಿ ಮೃದುಹೃದಯಿಯಾಗುತ್ತಾನೆ. ಖರ್ಚಿನ ಮೇಲೆ ಹಿಡಿತ ಇರಲಿ. ಸರ್ಪದೋಷ ತಗುಲಿದಾಗ ಶನೈಶ್ಚರನ ಕಾಟಕ್ಕಿಂತ ಕಗ್ಗಂಟುಗಳು ಹೆಚ್ಚು. ದುರ್ಗಾಳನ್ನು ಸ್ತುತಿಸಿ. ರಾಜಕಾರಣಿಗಳಿಗೆ ದೊಡ್ಡ ಜವಾಬ್ದಾರಿ ಸಿಗಬಹುದು. ಯಶಸ್ಸಿನ ಏಣಿ ಏರುವುದು ನಿಶ್ಚಿತ. ವಿರುದ್ಧಲಿಂಗಿಗಳೊಡನೆ ವಿನಾಕಾರಣ ಜಗಳ ಬೇಡ. ಅದರಿಂದ ವರ್ಚಸ್ಸಿಗೆ ಧಕ್ಕೆ.
    ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 9

    ಮಿಥುನ: ವಾರಾಂತ್ಯಕ್ಕೆ ಶುರುವಾಗುವ ಶನಿಕಾಟ ಎರಡೂವರೆ ವರ್ಷ ಇರಲಿದೆ. ಭಯ ಆವರಿಸಿ ಕೆಲಸದಲ್ಲಿ ಕುಂಟುತ್ತೀರಿ. ಮಹಾವಿಷ್ಣುವಿನ, ಅಮೃತತ್ವದ ಗರುಡನ ರಕ್ಷೆ ಇದೆ. ಹಣದ ವ್ಯವಹಾರದಲ್ಲಿ ಅಲ್ಪರು ಕೆಟ್ಟ ಹೆಸರು ತರಬಹುದು. ಸಂಸಾರದಲ್ಲಿ ರಗಳೆ ಹತ್ತದಂತೆ ನೋಡಿಕೊಳ್ಳಿ. ಮಕ್ಕಳು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಸರ್ರನೆ ಉಲ್ಟಾ ಮಾತಾಡಿ ನಿಮ್ಮನ್ನು ನೋವಿಗೆ ತಳ್ಳಿಯಾರು. ಎಚ್ಚರ. ಹನುಮಾನ್ ಚಾಲೀಸಾ ಓದಿ.
    ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 2

    ಕಟಕ: ಒಣಕೊಬ್ಬರಿಗೆ ಸಕ್ಕರೆ ಜೇನುತುಪ್ಪ ಬೆರೆಸಿ ಮಂಗಳವಾರ, ಶುಕ್ರವಾರ ನೈವೇದ್ಯ ಅರ್ಪಿಸಿ ಸೇವಿಸಿ. ಉದರಸಂಬಂಧಿ ಕಿರಿಕಿರಿಗಳನ್ನು ದುರ್ಗಾಳ ಆರಾಧನೆಯಿಂದ ದೂರ ಮಾಡಿಕೊಳ್ಳಿ. ಮೇಲಧಿಕಾರಿಗಳ ಒಲವು ಸಂಪಾದಿಸಿ. ತಡೆಹಿಡಿದ ಪ್ರಮೋಷನ್ ಈಗ ಒದಗಿಬರಲಿದೆ. ಎಣಿಸಿಕೊಳ್ಳದೇ ಯಾರಿಂದಲೂ ಹಣ ಪಡೆಯಬೇಡಿ. ಕೊಟ್ಟಾಗಲೂ ಎಣಿಸಿಕೊಳ್ಳಲು ಹೇಳಿ. ಅನಗತ್ಯ ತೊಂದರೆ ನಿವಾರಣೆಯಾಗಲಿ.
    ಶುಭದಿಕ್ಕು: ಪೂರ್ವ ಶುಭಸಂಖ್ಯೆ: 8

    ಸಿಂಹ: ಪಂಚಮ ಶನಿಕಾಟದ ಕಿರಿಕಿರಿಯಿಂದ ದೂರವಾಗುವುದು ಈ ವಾರಾಂತ್ಯದಲ್ಲಿ ಸಾಧ್ಯವಾಗಲಿದೆ. ಅನುಭವ, ವಾಸ್ತವದ ಅರಿವಿನ ಜತೆ ಮುಂದಿನ ಜೀವನ ಹಸನು ಮಾಡಿಕೊಳ್ಳಿ. ಗುರುಬಲವೂ ಇದೆ. ಬೆನ್ನು, ಮಂಡಿನೋವಿನ ಬಗ್ಗೆ ಕಾಳಜಿ ವಹಿಸಿ. ಸುಖಸಂವರ್ಧಕ ನಿತ್ಯಶುದ್ಧ ಧನ್ವಂತರಿಯನ್ನು ಪ್ರಾರ್ಥಿಸಿ. ಮನೆಯ ವಿಚಾರದಲ್ಲಿ ಕೆಲವು ಬದಲಾವಣೆಗಳಿಗೆ ಅವಕಾಶವಾಗಲಿದೆ. ದತ್ತಾತ್ರಯನನ್ನು ಸ್ತುತಿಸಿ.
    ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 2
     

    ಕನ್ಯಾ: ಶಾಂತವಾಗಿದ್ದ ದಿನಗಳು ಪ್ರಕ್ಷುಬ್ಧವಾಗಲಿವೆ. ಏನಾದರೂ ತಪ್ಪು ಮಾಡಿದ್ದರೆ ಸರಿಪಡಿಸಿಕೊಳ್ಳಿ. ತೆರಿಗೆ, ಸುಂಕಪಾವತಿ, ವಿಮೆ ಹಣ ಪಾವತಿ ಇತ್ಯಾದಿಗಳನ್ನು ಮುಂದೂಡಬೇಡಿ. ಶ್ರೀಮಾರುತಿ ಮೂಲಬೀಜಾಕ್ಷರ ಮಂತ್ರ, ಹನುಮಾನ್ ಚಾಲೀಸಾ ಓದಿ. ಧೈರ್ಯದಿಂದ ಹೆಜ್ಜೆ ಇಡಿ. ಆತುರ ಬೇಡ. ಯೋಚಿಸದೇ ಮುಂದುವರಿಯದಿರಿ. ಬಂಡವಾಳ ಹಾಕಿ ವಹಿವಾಟು ಶುರು ಮಾಡುವ ಮುನ್ನ ತರ್ಕಬದ್ಧವಾಗಿ ಯೋಚಿಸಿ.
    ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 5

    ತುಲಾ: ಗುರುಬಲ ಇಲ್ಲದಿದ್ದರೂ ನಿಮ್ಮ ಶ್ರಮದ ಫಲಕ್ಕೆ ಸಾರ್ಥಕತೆ ಇರುತ್ತದೆ. ಒಂದು ಪ್ರವಾಸ ಗಂಟುಬೀಳಬಹುದು. ಶ್ರೀ ಭದ್ರಕಾಳಿಯ ಮೇಲೆ ಭಾರ ಹಾಕಿ ಪ್ರವಾಸ ಕೈಗೊಳ್ಳಿ. ಅನುಭವ ಇರುವ ಕೆಲಸದ ಸಂಬಂಧ ಮಾತುಕತೆ ಫಲಪ್ರದವಾದರೆ ಪ್ರವಾಸ ಮುಂದುವರಿಯಲಿ. ಹಿಂದೆ ನೀಡಿದ್ದ ಹಣ ವಾಪಸ್ ಬರಲಿದೆ. ಜಾತಕ ಕುಂಡಲಿಯಲ್ಲಿ ಕ್ಷೀಣ ಚಂದ್ರ ದೋಷ ಇದ್ದರೆ ಚಂದ್ರಪೀಡಾ ನಿವಾರಣ ಸ್ತೋತ್ರ ಓದಿ.
    ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 9
     
    ವೃಶ್ಚಿಕ: ಗ್ರಹಣ ಬಿಟ್ಟ ಚಂದ್ರಸೂರ್ಯರಂತೆ ಪ್ರಕಾಶಮಾನರಾಗುವ ದಾರಿಯಲ್ಲಿ ಬಂದು ನಿಂತಿದ್ದೀರಿ. ಏಳೂವರೆ ವರ್ಷದಿಂದ ಸಾಡೇಸಾತಿ ಇತ್ತು. ಈಗ ಧೈರ್ಯ, ಸಾಹಸ ತೋರಿಸಲು ಬೇಕಾದ ಕಸುವನ್ನು ಸ್ವಾಮಿಯು ನೀಡುತ್ತಾನೆ. ಮತ್ತೆ ಅದೇ ತಪ್ಪು ಮಾಡಬೇಡಿ. ಸಂಭಾವಿತರ ಜತೆ ವ್ಯವಹಾರ ಮಾಡಿ. ಸಹಾಯ ಮಾಡಿದವರನ್ನು ಗೌರವಿಸಿ. ತಂದೆ-ತಾಯಿಯ ಆಶೀರ್ವಾದ ಪಡೆಯಿರಿ. ಷಣ್ಮುಖನನ್ನು ಸ್ತುತಿಸಿ.
    ಶುಭದಿಕ್ಕು: ಪೂರ್ವ ಶುಭಸಂಖ್ಯೆ: 1

    ಧನುಸ್ಸು: ಏಳೂವರೆ ವರ್ಷಗಳ ಸಾಡೇಸಾತಿ ಮುಗಿಸಿ ಮುಂದಿನ ಕೊನೆಯ ಎರಡೂವರೆ ವರ್ಷಗಳ ಹಂತಕ್ಕೆ ತಲುಪುತ್ತಿದ್ದೀರಿ. ಏನನ್ನೋ ನಂಬಿ ತಗ್ಗಿಗೆ ಬೀಳಬೇಡಿ. ಮಾಯೆಯ ರೂಪದಲ್ಲಿ ಹಣ, ಭೂಮಿ ಮತ್ತು ವಿರುದ್ಧಲಿಂಗಿಗಳು ತಾಪತ್ರಯ ತರುತ್ತಾರೆ. ಎಲ್ಲ ಸರಿಯಿದ್ದರೂ ತಪ್ಪು ಹುಡುಕುವ ಜನರ ನಡುವೆ ಪರದಾಡಬೇಕಾಗುತ್ತದೆ. ಆರ್ಥಿಕ ವಿಚಾರಗಳು ತಲೆನೋವು ತರುತ್ತವೆ. ದಶರಥರಾಜ ವಿರಚಿತ ಶನಿ ಸ್ತೋತ್ರ ಓದಿ.
    ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 4
     
    ಮಕರ: ಸಾಡೇಸಾತಿಯ ಮೊದಲ ಎರಡೂವರೆ ವರ್ಷ ಮುಗಿಯುವ ಸಂದರ್ಭ ಇದು. ಹನುಮನೇ ನಿಮ್ಮ ರಕ್ಷಣೆಗಾಗಿರುವ ಗಾಯತ್ರಿ ಮಂತ್ರ. ಮತ್ತದೇ ತಪ್ಪು ಮಾಡದಿರಿ. ಹೊಸ ತಪ್ಪೂ ಸಂಭವಿಸದಂತೆ ಮನೋಬಲ, ಅರಿವಿನ ಎಚ್ಚರ ರೂಢಿಸಿಕೊಳ್ಳಿ. ನಾನಾ ವೇಷಗಳಲ್ಲಿ ಬಂದು ಚಿತ್ತಕ್ಷೋಭೆಗೆ ಕಾರಣರಾಗುವ ಧೂರ್ತರನ್ನು ದೂರವಿಡಿ. ಬೆನ್ನು ಹುರಿಯ ಬಗ್ಗೆ ಎಚ್ಚರವಿರಲಿ. ಶುಕ್ರನ ಬಲದಿಂದ ಸಿದ್ಧಿಗೆ ದಾರಿ ಇದೆ.
    ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 7

    ಕುಂಭ: ಈ ವಾರಾಂತ್ಯಕ್ಕೆ ಮಕರ ರಾಶಿ ಪ್ರವೇಶಿಸಲಿರುವ ಶನೈಶ್ಚರ ನಿಮಗೆ ಈಗ ಅಮೃತದ ಬಟ್ಟಲಾಗುವುದಿಲ್ಲ. ಶಿಸ್ತು, ಸಂಯಮ ಇರಲಿ. ವರ್ಚಸ್ಸಿಗೆ ಧಕ್ಕೆ ತರುವ ಧಾತುಗಳು ಎಲ್ಲೆಲ್ಲಿಂದಲೋ ಬಂದು ಸುತ್ತಿಕೊಳ್ಳುತ್ತವೆ. ಗೊತ್ತಿಲ್ಲದ ವ್ಯಕ್ತಿಗಳು ತಲೆನೋವು ತರುತ್ತಾರೆ. ಮಣ್ಣು, ನೀರು, ಗಾಳಿ, ಬೆಂಕಿ, ಆಕಾಶ ನಿಮ್ಮ ಶಕ್ತಿಗೆ ತೊಂದರೆ ತರಬಹುದು. ಶಿವ, ದುರ್ಗೆಯನ್ನು ಆರಾಧಿಸಿ, ವಿಷ್ಣು ಸ್ತುತಿ ಮಾಡಿ. ಹನುಮಾನ್ ಚಾಲೀಸಾ ಪಠಿಸಿ.
    ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 3

    ಮೀನ: ಶನಿರಾಯ ಈಗ ನಿಮ್ಮ ಅರಿಷ್ಟಗಳಿಂದ ಕೈತೊಳೆದುಕೊಳ್ಳಲು ಅವಕಾಶ ನೀಡುತ್ತಿದ್ದಾನೆ. ನಿಮ್ಮ ಹೊಸ ಸಾಹಸಗಳ ಸ್ವರೂಪದಲ್ಲಿ ಜಾಗ್ರತರಾಗಿರಿ. ಶನಿಕಾಟ ಇನ್ನೂ ಎರಡೂವರೆ ವರ್ಷಗಳ ನಂತರ ಬರುವಂತಿದ್ದರೂ ಈಗಲೇ ಅದಕ್ಕೆ ಬೇಕಾದ ಬೀಜಗಳನ್ನು ಹಾಕಲು ಕಾಲರಾಯ ಸಂಚು ಹೂಡುತ್ತಾನೆ. ರೋಚಕವೆನಿಸುವ ಕ್ಷಣಗಳ ಪೂರ್ತಿ ಆಳ ಅಗಲ ಅಂದಾಜಿಸಿ ಮುಂದಿನ ಹೆಜ್ಜೆ ಇಡಿ. ನರಸಿಂಹನನ್ನು ಆರಾಧಿಸಿ.
    ಶುಭದಿಕ್ಕು: ಉತ್ತರ ಶುಭಸಂಖ್ಯೆ: 6

     

    ಎಂ.ಎಂ.ಕೆ.ಶರ್ಮಾ, ಬೆಂಗಳೂರು 94483 13270

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts