More

    ಈ ರಾಶಿಯವರಿಗೆ ಮನಸ್ಸಿಗೆ ಸಂತೋಷವನ್ನು ತರುವ ಸಮಯ: ವಾರಭವಿಷ್ಯ

    ಈ ರಾಶಿಯವರಿಗೆ ಮನಸ್ಸಿಗೆ ಸಂತೋಷವನ್ನು ತರುವ ಸಮಯ: ವಾರಭವಿಷ್ಯ

    ಮೇಷ

    ಮೇಷ ರಾಶಿಯಲ್ಲಿ ಗುರು, ರಾಹು- ರವಿಯ ಜತೆಗೆ ಇದ್ದಾಗ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಗೆಲುವುಗಳನ್ನು ನೀಡಿದ್ದಾನೆ. ಅಂದರೆ ಗುರು ರಾಹು ಸಂಪರ್ಕದಲ್ಲಿದ್ದಾಗ ಅಧಿಕಾರ ಮಾಡಿದವರನ್ನು ಅಧಿಕಾರವನ್ನು ನಿಲ್ಲಿಸಿ ಜನಾ ದೇಶವನ್ನು ಜನನುರಾಗವನ್ನು ಪಡೆಯಲು ದಾರಿ ಮಾಡಿಕೊಡುವುದಿಲ್ಲ. ದೇವರು ನಮಗೆ ಕೊಟ್ಟ ಸ್ಥಾನಮಾನ ಉಳಿಸಿಕೊಂಡು ಎಲ್ಲವನ್ನೂ ಎಲ್ಲರನ್ನೂ ತನ್ನಂತೆ ಕಾಣಬೇಕೆಂಬುದು ಇದರಲ್ಲಿ ಇರುವ ನೀತಿ ಪಾಠವನ್ನು ಬುಧನು ಸಾರಿದ್ದಾನೆ. ಗುರು ರಾಹು ಸಂಧಿಯಾಗಿದ್ದು ಎಚ್ಚರಿಕೆಯಿಂದ ಮುಂದೆ ಸಾಗಬೇಕು. ಸುಬ್ರಹ್ಮಣ್ಯನ ಪ್ರಾರ್ಥನೆ ಸದಾ ಇರಲಿ.

    ವೃಷಭ

    ವೃಷಭ ರಾಶಿಯಲ್ಲಿ ಗುರು, ರಾಹು ಇಬ್ಬರೂ ಕುಳಿತು ಪರಮಾನ್ನ ಪಂಚಾಮೃತ ಕೊಡರು. ನೀವು ಮಾಡಿದ ಅಡುಗೆ ಬೇರೆಯವರು ತಿಂದು ನಿಮಗೆ ಬಂದ ಅನ್ನದಾನದ ಪುಣ್ಯವನ್ನು ಬೇರೊಬ್ಬರು ಪಡೆಯುವ ಸಮಯ. ಇರುವುದಕ್ಕೆ ತೃಪ್ತಿ ಪಟ್ಟುಕೊಂಡು ಸದ್ಯದಲ್ಲಿ ಮನಸ್ಸನ್ನು ವಿಕಾರ ಮಾಡಿಕೊಳ್ಳದೆ ನಿಮ್ಮ ಕೆಲಸದಲ್ಲಿ ಮುಂದೆ ಸಾಗಿ . ಅಕ್ಟೋಬರ್ 13ರವರೆಗೂ ಕಾದಿರಿ. ಶಿವ ಸಹಸ್ರನಾಮ ಪಾರಾಯಣ ಮಾಡಿ ಅಮೃತವನ್ನು ಕುಡಿದರೆ ಯಾವ ಫಲವಿದೆಯೋ ಶಿವಪೂಜೆಯಿಂದ ಅದೇ ಫಲವು ಸಿಗುತ್ತದೆ.

    ಮಿಥುನ

    ದ್ವಾದಶದಲ್ಲಿ ಸೂರ್ಯನು ಬಂದರೂ ಪರವಾಗಿಲ್ಲ. ಏಕಾದಶದಲ್ಲಿ ಇರುವ ಗುರು, ರಾಹು ಶುಭವನ್ನುಂಟು ಮಾಡುತ್ತಾರೆ. ನಿಮಗೆ ಶುಭ್ರವಾದ ಜೀವನವನ್ನು ಶುದ್ಧವಾದ ಮನಸ್ಸನ್ನು ಕೊಟ್ಟು ಚಿಂತಿಸಿದ ಕಾರ್ಯಗಳು ನೆರವೇರುತ್ತವೆ. ನಿಮ್ಮನ್ನು ಮುನ್ನುಗ್ಗಿಸಿ ನಿಮ್ಮ ಪರಿಶ್ರಮಕ್ಕೆ ಸಾಫಲ್ಯತೆ ನೀಡುತ್ತಾರೆ. ಶ್ರೀರಾಮಚಂದ್ರನನ್ನು ಪೂಜಿಸಿ. ರಾಮ ನಾಮವನ್ನು ಜಪಿಸಿ. ರಾಮ ನಾಮ ಸ್ಮರಣೆ ಮಾಡುತ್ತಾ, ರಾಮ ನಾಮವನ್ನು ನಿಮ್ಮ ಮುದ್ದಾದ ಅಕ್ಷರದಿಂದ ಬರೆಯಿರಿ. ಅಧಿಕ ಸುಖ ಸಂತೋಷ ಸಿಗುತ್ತದೆ.

    ಕಟಕ

    ಕುಜನು ಶತ್ರುವಿನ ಮನೆಯ ಸಂಪರ್ಕದಲ್ಲಿದ್ದು, ಶುಕ್ರನು ಅಲ್ಲೇ ಇದ್ದಾನೆ. ಏಕಾದಶದಲ್ಲಿ ಸೂರ್ಯನು ಇರುವುದರಿಂದ ಆರೋಗ್ಯ ಸಮಸ್ಯೆ ಇರುವುದಿಲ್ಲ. ತಲೆ ಗಟ್ಟಿ ಇದೆ ಎಂದು ನೂರು ಕೆಜಿ ಭಾರವನ್ನು ಹೊರಬಾರದು. ಕೈಲಾದಷ್ಟು ಮಾತ್ರ ಕೆಲಸವನ್ನು ಮಾಡಬೇಕು. ದೇವರನ್ನು ಸದಾ ನೆನೆಯಬೇಕು. ಶಿವಧ್ಯಾನವೇ ಪ್ರಧಾನವಾದದ್ದು. ಗುರು ಚರಿತ್ರೆ 14 ಅಧ್ಯಾಯ ಪಾರಾಯಣ ಮಾಡಿ. ನಿಮಗೆ ಬೇಕಾದನ್ನು ಕೊಟ್ಟು ನಿಮ್ಮನ್ನು ಮುನ್ನಡೆಸುತ್ತಾನೆ.

    ಸಿಂಹ

    ಸಿಂಹ ರಾಶಿಯವರಿಗೆ 9ರಲ್ಲಿ ಗುರುವಿದ್ದು, ಶನಿಯು ಸಪ್ತಮದಲ್ಲಿ ಇದ್ದರೂ ಸ್ವ ಕ್ಷೇತ್ರದಲ್ಲಿ ಇರುವುದರಿಂದ ಕೇಡನ್ನು ಮಾಡುವುದಿಲ್ಲ. ಮನಸ್ಸಿನಂತೆ ಎಲ್ಲಾ ಕೆಲಸಗಳು ನಡೆಯುವುದೂ ಇಲ್ಲ. ಆದರೆ, ಆತಂಕಪಡುವ ಕಾಲವಲ್ಲ. ದೈವವು ನಿಮ್ಮ ಬೆನ್ನ ಹಿಂದೆ ಇದೆ. ಗುರು ವಾಕ್ಯಕ್ಕೆ ಬೆಲೆ ಕೊಟ್ಟು ಗುರುಗಳ ಧ್ಯಾನ ಮಾಡಿದರೆ ಸಾಕು ಅರಿಷ್ಟಗಳು ದೂರವಾಗಿ ಅಭಿಷ್ಟಗಳು ದೊರೆಯುತ್ತವೆ. ಗುರು ಚರಿತ್ರೆಯ ಪಾರಾಯಣ ನಿತ್ಯವೂ ಇರಲಿ. ಶನಿ ಸ್ತೋತ್ರವನ್ನು ಪಠಿಸಿ.

    ಕನ್ಯಾ

    ಕೊಟ್ಟ ಮಾತನ್ನು ನಡೆಸದೆ ಕೆಡಬೇಡಿ. ಗುರುವೂ 6,8, 12ರ ಸ್ಥಾನಕ್ಕೆ ಬಂದಾಗ ರೋಗ ಋಣ ಶತ್ರು ಬಾಧೆ ಕಾಡುತ್ತದೆ. ಋಣ ಭಾರವನ್ನು ಪರಿಹರಿಸಿಕೊಳ್ಳಿ. ಕೊಟ್ಟ ಮಾತನ್ನು ಪೂರೈಸಿಕೊಳ್ಳಿ. ಜತೆಗೆ ಮಹಾವಿಷ್ಣುವಿನ ಪ್ರಾರ್ಥನೆ ಸದಾ ಇರಲಿ. ವೆಂಕಟೇಶ್ವರನನ್ನು ಪೂಜಿಸಿ. ಭಕ್ತಿ, ಮುಕ್ತಿ, ಧನವನ್ನು ಕೊಡುತ್ತಾನೆ.

    ತುಲಾ

    ಗುರು ಸಪ್ತಮದಲ್ಲಿ ಇದ್ದು ದುಃಖವನ್ನು ಪರಿಹರಿಸಿ ಸುಖ, ಲಾಭಗಳನ್ನು ಕೊಡುತ್ತಾನೆ. ಸಂತೋಷವೆಂಬ ವೈಢೂರ್ಯವನ್ನು, ಚಾಣಕ್ಯನ ಬುದ್ಧಿಯನ್ನು, ವಿದ್ಯೆಯಿಂದ ಲಾಭವನ್ನು, ಲಕ್ಷ್ಮಿ ಕಟಾಕ್ಷವನ್ನು ನೀಡುತ್ತಾನೆ. ಕೊಲ್ಹಾಪುರದ ಮಹಾಲಕ್ಷ್ಮಿಯನ್ನು ಪೂಜಿಸಿ. ನಿಮಗೆ ಜನ್ಮ ಕೊಟ್ಟ ತಾಯಿಗೆ ನಮಸ್ಕರಿಸಲು ಮರೆಯದಿರಿ. ಎಲ್ಲವೂ ಸುಖವಾಗಿರುತ್ತದೆ.

    ವೃಶ್ಚಿಕ

    ಚತುರ್ಥದಲ್ಲಿ ಶನಿಯು 6ರಲ್ಲಿ ಗುರು ಇದ್ದರೂ ಪರವಾಗಿಲ್ಲ. ಜನ್ಮಜನ್ಮಾಂತರ ಪುಣ್ಯ ಒದಗಿ ಬಂದು ನಿಮ್ಮನ್ನು ಉದ್ಧರಿಸಿ ಸಾಲವನ್ನು ಸಮುದ್ರದಲ್ಲಿ ಕೊಚ್ಚಿ ಹೋಗುವಂತೆ ಮಾಡುತ್ತಾನೆ. ಅನಪೇಕ್ಷಿತವಾಗಿ ಪರಿಪೂರ್ಣ ಧನ ಸಂಪತ್ತು ಲಭಿಸುತ್ತದೆ. ಮಾಡುವ ಕೆಲಸದಲ್ಲಿ ಶ್ರದ್ಧೆಯನ್ನು ಅಳವಡಿಸಿಕೊಂಡರೆ ಸುಖದ ಹಾದಿಯಲ್ಲಿ ನಡೆಯುತ್ತೀರಾ. ಪಳನಿ ಸುಬ್ರಮಣ್ಯನನ್ನು ಅರ್ಚಿಸಿ. ಗುರು ಚರಿತ್ರೆಯ 5ನೇ ಅಧ್ಯಾಯವನ್ನು ಪಾರಾಯಣ ಮಾಡಿ.

    ಧನು

    ನೋಡಲು ಸುಂದರವಾಗಿದ್ದೀರಿ. ಅಲ್ಲಿಂದ ಇಲ್ಲಿ ಎಲ್ಲಿಂದೆಲ್ಲೋ ದೇವತಾ ಸ್ವರೂಪಿ ಹನುಮಾನ್ ವೇಷ ಧರಿಸಿ ಹಾರುತ್ತೀರಾ. ಸಿಟ್ಟು ಬಂದರೆ ಹನು ಮಂತನು ರಾಕ್ಷಸರನ್ನು ಪುಡಿ ಮಾಡಿದ ಹಾಗೆ ಮಾಡುತ್ತೀರಾ. ಪಂಚಮದಲ್ಲಿರುವ ಗುರು ಕಟಾಕ್ಷವು, ತೃತೀಯದಲ್ಲಿರುವ ಶನಿಯು ಸಂಪತ್ ಭರಿತ ಜೀವನ, ಉಲ್ಲಾಸ, ಮನಸ್ಸಿಗೆ ಸಂತೋಷವನ್ನು ತರುವ ಸಮಯ. ಈ ಸಮಯ ಸದುಪಯೋಗ ಮಾಡಿಕೊಳ್ಳಿ. ಧನ ಬರು ವುದು ಯೋಗಾನು ಯೋಗಗಳಿಂದ. ಜನ್ಮಾಂತರದ ಪುಣ್ಯದಿಂದ. ಎಲ್ಲವೂ ಒಳ್ಳೆಯದೇ ಇರುವುದರಿಂದ ಎಲ್ಲವನ್ನೂ ಸ್ವೀಕಾರ ಮಾಡಿ ಪರೋಪಕಾರಿಗಳಾಗಿ ಬದುಕಿ. ನಿಮ್ಮ ಮಾತಾಪಿತರಿಗೆ ವಂದಿಸಿ ದೈವಬಲ ವೃದ್ಧಿಸಿಕೊಳ್ಳಿ.

    ಮಕರ

    ಶನಿ ಯಾವ ಕೆಡಕನ್ನು ಉಂಟು ಮಾಡುವುದಿಲ್ಲ. ಅವನ ಮನಸ್ಸಿಗೆ ಬಂದಾಗ ಯಾರಿಗೆ ಶಿಕ್ಷೆಯನ್ನು ಕೊಡಬೇಕೋ ಕೊಟ್ಟೆ ತೀರುತ್ತಾನೆ. ಯಾರಿಗೆ ಲಾಭ ತರಬೇಕೋ ಲಾಭವನ್ನು ಕೊಟ್ಟು ಜೀವನವನ್ನು ನಡೆಸುವಂತೆ ಮಾಡುತ್ತಾನೆ. ಕೆಲಸವು ಒಂದು ಮಟ್ಟಕ್ಕೆ ಬಂದು ಕಷ್ಟಗಳಿಂದ ಪಾರಾಗುವ ಸಮಯ. ಶನಿ ಸ್ತೋತ್ರವನ್ನು ಪಠಿಸಿ. ಶನಿಪ್ರದೋಷದ ಕಥೆಯನ್ನು ಪಾರಾಯಣ ಮಾಡಿ, ಸುಖ- ನೆಮ್ಮದಿ ಸಿಗುತ್ತದೆ.

    ಕುಂಭ

    ಗುರು ತೃತೀಯದಲ್ಲಿ ಇದ್ದರೂ ಶನಿಯು ಜನ್ಮಕ್ಕೆ ಬಂದಿದ್ದಾನೆ. ದೇವರೇ ನಿಮ್ಮನ್ನು ಸಂರಕ್ಷಿಸಬೇಕು. ತೃತೀಯ ಗುರು ಏನನ್ನು ಹಾಳು ಮಾಡದಿದ್ದರೂ ವಿಶೇಷ ಫಲದಾಯಕನಲ್ಲ. ಪ್ರತಿನಿತ್ಯ ಉಮಾಮಹೇಶ್ವರನ ಪ್ರಾರ್ಥನೆ ಮಾಡಿ, ಪೂಜೆಯನ್ನು ಸಲ್ಲಿಸಿ. ನಿಮ್ಮ ಬದುಕು ಸುಧಾರಿಸುವುದರಲ್ಲಿ ಸಂದೇಹ ಬೇಡ. ಶರೀರಕ್ಕೆ ಸಾಕಷ್ಟು ವಿಶ್ರಾಂತಿಯನ್ನು ಕೊಟ್ಟು ಮನಸ್ಸನ್ನು ಉದ್ವಿಗ್ನಗೊಳ್ಳದಂತೆ ನೋಡಿಕೊಳ್ಳಿ. ನಿಮ್ಮ ಬಾಳು ಸುಂದರವಾಗಿರುತ್ತದೆ.

    ಮೀನ

    ದ್ವಿತೀಯದಲ್ಲಿ ಗುರುವಿರುವುದು ನಿಮ್ಮ ಸಂರಕ್ಷಣೆ ಮಾಡಲೆಂದೇ. ದ್ವಾದಶದಲ್ಲಿ ಶನಿ ಇದ್ದು ಸಾಕಷ್ಟು ದುಃಖವನ್ನು ಕೊಟ್ಟರೂ ಗುರುವೇ ಅದನ್ನು ನಿವಾರಿಸು ತ್ತಾನೆ. ಪ್ರತಿನಿತ್ಯ ಶನಿ ಸ್ತೋತ್ರ ಪಠಿಸಿ. ಶನಿವಾರದಂದು ಉಪವಾಸದಿಂದಿರಿ. ಎಳ್ಳೆಣ್ಣೆ ದೀಪವನ್ನೂ ಹಚ್ಚಿ. ಎಳ್ಳೆಣ್ಣೆ ದಾನ ನೀಡಿ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕ್ಷಿಪ್ರವಾಗಿ ನಿಮ್ಮ ಕೆಲಸಗಳು ನಡೆದು ಆನಂದವು ದೊರಕುತ್ತದೆ.

    ಶಿಕ್ಷಣ ಕ್ಷೇತ್ರದ ಪ್ರಗತಿಗೆ ಸರ್ಕಾರ ಆದ್ಯತೆ; ವಿಜಯವಾಣಿ-ದಿಗ್ವಿಜಯ ನ್ಯೂಸ್ ‘ಎಜುಕೇಷನ್ ಎಕ್ಸ್‌ಪೋ’ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

    ವೃದ್ಧೆಯ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್​ ಹಾಕಿ ಕೊಲೆಗೈದು ಚಿನ್ನಾಭರಣ ಒಯ್ದ ದುಷ್ಕರ್ಮಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts