ವಾರ ಭವಿಷ್ಯ: ಈ ರಾಶಿಯವರು ಶನಿಕಾಟದ ತೊಂದರೆಯಿಂದ ನಿಮ್ಮದಲ್ಲದ ತಪ್ಪುಗಳಿಗೆ ಬೆಲೆ ತೆರಬೇಕಾಗುತ್ತದೆ

ಮೇಷ: ಶ್ರೀಮನ್ನಾರಾಯಣದ ಸ್ತುತಿಯಿಂದ ಅನೇಕ ರೀತಿಯ ಯುಕ್ತ ಸಫಲತೆಗಳನ್ನು ಪಡೆಯಬಹುದಾಗಿದೆ. ಧೈರ್ಯವನ್ನು ಒದಗಿಸುವ ರಾಹುವಿನ ಶಕ್ತಿ ಅಪಾರವಾಗಿದೆ. ಆದರೂ ಶನೈಶ್ಚರನ ಅಥವಾ ಕೇತು ದಶಾಭುಕ್ತಿಗಳ ಸಮಯವಾಗಿದ್ದರೆ ವಿಳಂಬವನ್ನು, ಜತೆಗೇ ಅಡೆತಡೆಗಳ ಮೂಲಕವಾಗಿ ಹತಾಶ ಸ್ಥಿತಿಯನ್ನೂ ಎದುರಿಸಬೇಕಾಗುತ್ತದೆ. ನಿಮ್ಮ ನಿಜವಾದ ಅನುಭವಗಳನ್ನು ಒಗ್ಗೂಡಿಸಿಕೊಂಡ ಧೈರ್ಯ ಮತ್ತು ಅಚಲ ನಿರ್ಧಾರಗಳಿಂದ ದುಡಿಸಿಕೊಳ್ಳುವಿರಾದರೆ ಸಂತೋಷಕ್ಕೆ ಅವಕಾಶಗಳುಂಟು. ವಿನಾಕಾರಣವಾಗಿ ಯಾರನ್ನೂ ಚುಚ್ಚಿ ನೋಯಿಸಲು ಹೋಗಬೇಡಿ.ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 8

ವೃಷಭ: ಅಷ್ಟಮ ಶನಿ ಕಾಟದ ತೊಂದರೆ ಹೈರಾಣಗೊಳಿಸಿದೆ. ಒಳ್ಳೆಯ ಕೆಲಸ, ಸಂಬಳ ಇದ್ದೂ ನಿಮ್ಮದಲ್ಲದ ತಪು್ಪಗಳಿಗೆ ಬೆಲೆ ತೆರುವುದು ಅನಿವಾರ್ಯವಾಗುತ್ತದೆ. ಮಾತಿನ ವರಸೆ ನಿಯಂತ್ರಣ ಕಳೆದುಕೊಂಡು ಹೊಡೆಯುವ ಹೆಡೆಯ ಸರ್ಪದ ವಿಷದಂತೆ ಇರದಿರಲಿ. ಉಪಕರಿಸುವ ಗೆಳೆಯರೂ ದೂರವಾಗುತ್ತಾರೆ. ಸಹನೆಯ ಫಲವಾಗಿ, ಗಣೇಶನ ಧ್ಯಾನ, ಲಿಪಿ ಸರಸ್ವತಿ ಮಂತ್ರ ಧ್ಯಾನದಿಂದ ಕಷ್ಟಗಳ ನಡುವೆಯೂ ಮಹತ್ವದ ಸ್ಥಾನಮಾನ ಗಳಿಸಬಹುದು. ನಿಮಗೆ ಅನುಭವವಿರದ ಕೆಲಸಕ್ಕೆ ಕೈ ಹಾಕದಿರಿ. ಹೆಗಲ ಮೇಲೆ ಯಾರನ್ನೂ ಕೂರಿಸಿಕೊಳ್ಳದಿರಿ. ನಿಮ್ಮ ವಿನಯವೇ ಜಯಕ್ಕಾಗಿನ ನಿಮ್ಮ ಸಂಜೀವಿವಿ. ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 5

ಮಿಥುನ: ನಿಮಗೆ ಪ್ರಮೋಷನ್ ಸಂದರ್ಭವಾಗಿದ್ದು, ಬಾಸ್ ಕಿರಿಕಿರಿ ಇದ್ದರೆ ತೂಕದ ನಡೆನುಡಿ ನಿಮ್ಮದಾಗಿರಲಿ. ನಮ್ಮ ವಸ್ತ್ರ ಮುಳ್ಳಿನ ಮೇಲಿರುವಾಗ ನಯವಾದ ವಸ್ತ್ರವನ್ನು ಎಳೆದುಕೊಳ್ಳಿ. ಕಾರ್ಯ ಸಾಫಲ್ಯವನ್ನು ನಿರೀಕ್ಷಿಸಬಹುದಾಗಿದೆ. ಕೃಷಿಯ ಸಂದರ್ಭ ಇದ್ದಾಗ ಸ್ವಲ್ಪ ಪಡಿಪಾಟಲುಗಳನ್ನು ಎದುರಿಸಬೇಕಾಗಿ ಬರುತ್ತದೆ. ದುರ್ಗಾಳನ್ನು ಆತ್ಮನಿಷ್ಠೆಯಿಂದ ಆರಾಧಿಸಿ. ಪರಿಪೂರ್ಣವಾದ ಧೈರ್ಯ ನೀಡಿ ಭೀತ ಸ್ಥಿತಿಯನ್ನು ನಿವಾರಿಸುತ್ತಾಳೆ. ತಾಯಿ ತಂದೆಯರ ಆರೈಕೆಗೆ ನಿಗಾ ವಹಿಸಿ. ಧನ್ವಂತರಿ ಅಷ್ಟೋತ್ತರ ಪಠಿಸಿ. ರಾಸಾಯನಿಕ ಘಟಕಗಳ ಉತ್ಪಾದನೆ, ನಿರ್ವಣಗಳ ಉಪ ವಸ್ತುಗಳ ಮಾರಾಟದಿಂದ ಲಾಭವಿದೆ. ಶುಭದಿಕ್ಕು: ಪೂರ್ವ ಶುಭಸಂಖ್ಯೆ: 4

ಕಟಕ: ಆರ್ಥಿಕ ವಿಚಾರಗಳ ಸಂಬಂಧವಾಗಿ ಹೆಣಗಾಡುತ್ತಿರುವ ನಿಮ್ಮ ನಿತ್ಯದ ಕಷ್ಟಗಳ ನಡುವೆ ಆಪ್ತರೋ, ಇಷ್ಟರೋ ಸಾಲವನ್ನೂ ಕೇಳುವ ಸಾಧ್ಯತೆ ಅಧಿಕ. ನಿಮ್ಮ ತೊಂದರೆಗಳ ನಡುವೆ, ಕಷ್ಟವಾಗುವ ಹಾಗೆ ಸಲ ಕೊಡಲು ಮುಂದಾಗದಿರಿ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತು ಅನುಭವಕ್ಕೆ ಬರುತ್ತದೆ. ಮೈ ಉರಿಯುವ ಮಾತು ಕೇಳಿಸಿಕೊಂಡಾಗಲೂ ಮಾತನಾಡಲು ಹೋಗಬೇಡಿ. ಕೆಲವು ಸಲ ಅಸಹಾಯಕತೆ ಹೇಗಿರುತ್ತದೆ ಎಂದರೆ ಬಲಿಷ್ಠವಾದ ಆನೆಗಳೂ, ನಾಯಿಯ ಕರ್ಕಶ ಬೊಗಳುವಿಕೆಯನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಶಿವನನ್ನು ಸ್ತುತಿಸಿ. ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 7

ಸಿಂಹ: ಪಂಚಮ ಶನಿ ಕಾಟದ ತಾಪತ್ರಯಗಳನ್ನು ನಿಗ್ರಹಿಸುವುದಕ್ಕೆ ಹನುಮಾನ್ ಚಾಲೀಸಾ ಓದಿ. ನಿಮ್ಮ ನಿಲುವನ್ನು ಪ್ರಶ್ನಿಸುವ ಅಪಸ್ವರಗಳನ್ನು ಸಹಿಸಿಕೊಳ್ಳಿ. ಕಾರ್ಯವಾಸಿ ಕತ್ತೆ ಕಾಲು ಹಿಡಿಯುವ ವಿಚಾರ ಬಂದಾಗ ಅತಿಯಾದ ವಿಮರ್ಶೆ ಬೇಡ. ಒಳಿತಿನ ಭವಿಷ್ಯಕ್ಕೆ ಮುನ್ನುಡಿ ಬರೆಯಲು ಕಟುವಾದ ವಿಮರ್ಶೆ ಬೇಡ. ಯೋಚಿಸಿ ಮುಂದಿನ ಹೆಜ್ಜೆ ಇಡಿ. ವಿಮರ್ಶೆಗಳಿಂದ ಕೊರಗಬೇಕಾಗಿಲ್ಲ. ಇವು ನಿಮ್ಮನ್ನು ಏನೂ ಮಾಡಲಾರವು. ಒಗ್ಗೂಡಿದ ಹೊಸ ಶಕ್ತಿಯಿಂದಾಗಿ ದ್ವಾದಶಾದಿತ್ಯರ ಸ್ತುತಿಯಿಂದ ಬುದ್ಧಿಮಟ್ಟ, ಚಾಣಾಕ್ಷತೆಯನ್ನು ಬರೆಸುವ ದೈವದ ಸಿದ್ಧಿಯನ್ನು ಪಡೆಯುತ್ತಿರುತ್ತದೆ. ಮುಂದಿನ ವರ್ಷಗಳಲ್ಲಿ ಫಲ ಲಭ್ಯ. ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 5

ಕನ್ಯಾ: ಎಲ್ಲಾ ದಿಕ್ಕನ್ನೂ ಜಯಿಸುವೆ ಎಂಬ ಪ್ರತಾಪ ಬೇಡ. ಒಂದೊಂದೇ ದಿಕ್ಕನ್ನು ಗೆಲ್ಲುವ ಸೂತ್ರ ಗಟ್ಟಿ ಮಾಡಿಕೊಳ್ಳಿ. ಪ್ರಹ್ಲಾದನನ್ನು ಕಾದ ಧರೆ ಚತುರ್ದಶಗೊಡೆಯ ಮಹಾವಿಷ್ಣುವಿನ ಅನುಗ್ರಹ ಗಟ್ಟಿಯಾಗಿದೆ. ಸ್ವಲ್ಪ ಬಿಸಿಲು, ಮಳೆ, ಗಾಳಿಯ ನಡುವೆ ಸಿಕ್ಕಿಬಿದ್ದರೂ, ತುಂಬು ಸಂತೋಷದಿಂದ ಯಶಸ್ಸನ್ನು ಸಂಪಾದಿಸುವ ಅದೃಷ್ಟವನ್ನು ಪಡೆದಿರುತ್ತೀರಿ. ನಿಮ್ಮ ಓಟದ ಗುರಿ ದೊಡ್ಡದೊಂದನ್ನು ತಲುಪುವುದರತ್ತ ಇರುತ್ತದೆ. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಬಹು ದಿನಗಳಿಂದ ನಿರೀಕ್ಷಿಸಿದ ವಿಚಾರ ಮುಂದೂಡಲ್ಪಟ್ಟು ನಿರಾಸೆ ಆದೀತು. ಗಟ್ಟು ಮನಸ್ಸು ಮಾಡಿ. ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 1

ತುಲಾ: ನಿಮ್ಮ ಓಟ ಹೇಗಿದೆ ಎಂದರೆ ಅರ್ಧ ದಾರಿ ಪಯಣಿಸುತ್ತೀರಿ. ಮನಸ್ಸು ಕಂಗೆಡುವ ಸ್ಥಿತಿ ಆವರಿಸಬಹುದಾಗಿದೆ. ಹಠದಿಂದ ಮುಂದುರಿಯುವಂತೆಯೂ ಇಲ್ಲ, ಹಿಂದಿರುಗುವಂತೆಯೂ ಇಲ್ಲ ಎಂಬ ದ್ವಂದ್ವ ಸುಳಿಗಳು ಸುತ್ತಲಾರಂಭಿಸುತ್ತವೆ. ಮುಖ್ಯವಾಗಿ ಹತ್ತಿರದವರೇ ಕೆಲವು ನಷ್ಟಕ್ಕೂ ಕಾರಣರಾಗುತ್ತಾರೆ. ನಿಮ್ಮ ಅಹಾಯಕತೆಗಾಗಿ ನಿಮ್ಮನ್ನು ನೀವೇ ಸಾವರಿಸಿಕೊಳ್ಳಿ. ಆವರಿಸುವ ಮೋಡ ಕರಗುತ್ತದೆ ಎಂಬ ನಂಬಿಕೆ ಬೇಕು. ಒಬ್ಬರೇ ಕುಳಿತು ದುಃಖಿಸಬೇಕಾದ ಸಂದರ್ಭವಿರುತ್ತದೆ. ಮಹಾಗೌರಿಯ ಅನುಗ್ರಹ ಸಿದ್ಧಿ ಇರುವುದರಿಂದ ಕಷ್ಟವಾಗದು. ಲಲಿತಾ ಅಷ್ಟೋತ್ತರ ಓದಿ. ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 6

ವೃಶ್ಚಿಕ: ನೀವು ನಿರಾಶಾವಾದಿಗಳಲ್ಲ. ಆದರೆ ಆಶಾವಾದದ ಜತೆಗೇ ಬೇಕಾದ ದೈವಬಲ ನಿಮ್ಮನ್ನು ಅಸಮಾಧಾನದ ನಡುವೆ ತಂದು ನಿಲ್ಲಿಸಿರುತ್ತದೆ. ಮುಖ್ಯವಾಗಿ ಅಗ್ನಿದುರ್ಗಾಳನ್ನು ಆರಾಧಿಸಿ. ನಿಮ್ಮನ್ನು ಪುಟಗೊಟ್ಟ ಬಂಗಾರದಂತೆ ಪರಿಶೀಲಿಸಲು ಅವಕಾಶ ಮಾಡಿಕೊಡುವ ದುರ್ಗೆ ಸದ್ಯ ಬೆಂಬತ್ತಿ ಬಾಧಿಸುತ್ತಿರುವ ಸಾಡೇಸಾತಿ ಕಾಟವನ್ನು ನಿಗ್ರಹಿಸಲು ಶಕ್ತಿ ಕೊಡುವಂಥದ್ದಾಗಿದೆ. ದುರ್ಗಾ ಹಾಗೂ ಮಾರುತಿಯನ್ನು ಆರಾಧಿಸಿ. ಪ್ರಬಲವಾಗಿ ಬೆಳೆಯಬೇಕಾದ ವಿಚಾರಕ್ಕಾಗಿ ಈಗ ಶಕ್ತಿ ಸಂಗ್ರಹಿಸಿಕೊಳ್ಳುವುದು ಸೂಕ್ತ. ಎಲ್ಲಿ ಹೈರಾಣಗೊಳ್ಳುತ್ತೇನೆ ಎಂಬ ವಿಷಯ ತಿಳಿಯದ ಅಜ್ಞಾನಿ ನೀವೇನಲ್ಲ. ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 9

ಧನು: ನಿಮ್ಮ ಯೋಜನೆಗಳು ವಿಫಲವಾಗುತ್ತಿವೆ ಎಂಬುದಕ್ಕೆ ಶನಿ ಕಾಟವೇ ಎಲ್ಲಾ ರೀತಿಯ ಕಾರಣವಲ್ಲ. ಗುರು ನಷ್ಟದಲ್ಲಿರುವುದರು ನಿಮ್ಮ ವರ್ಚಸ್ಸನ್ನು, ದೊರಕಬೇಕಾದ ಭಾಗ್ಯಕ್ಕೆ ಕುತ್ತು ತಂದು ವರ್ಚಸ್ಸನ್ನು ತಗ್ಗಿಸುತ್ತದೆ. ಕಾಯಬೇಕು ಎಂಬುದು ಎಲ್ಲಾ ಸಂತರು, ಗುರು ಹಿರಿಯರು ಬೋಧಿಸುವ ಮಾತು. ಆದರೆ ಆತುರ ತಪ್ಪಿದ್ದಲ್ಲಿ ಎಂದು ತಿಳಿದು ದುಡುಕುತ್ತಿದ್ದೀರಿ. ಅಂಥರೇ ಅಂದರೆ ನಿಮ್ಮನ್ನು ಮುನ್ನುಗ್ಗಿಸಿ, ತಮಾಷೆ ನಡುವೆ ಜನ ಸಿಗುತ್ತಾರೆ. ಸದ್ಗುರುವಾದ ಭವಾನಿ ಶಂಕರನನ್ನು ಸ್ತುತಿಸಿ. ದಶರಥರಾಜ ವಿರಚಿತ ಶನೈಶ್ಚರ ಸ್ತೋತ್ರ ಪಠಿಸಿ. ಒಳಿತಾಗುತ್ತದೆ. ಶುಭದಿಕ್ಕು: ಪೂರ್ವ ಶುಭಸಂಖ್ಯೆ: 2

ಮಕರ: ಪ್ರಾಮಾಣಿಕವಾಗಿ ಗೆಲ್ಲುವ ಪ್ರಯತ್ನ ನಡೆಸುವ ನಿಮ್ಮ ಪರಿಶ್ರಮವನ್ನು ಮೆಚ್ಚಲೇಬೇಕು. ನಿಜವಾದ ಆಶಾವಾದಿಗಳಾಗಿರುವುದರಿಂದ ಕೆಲವು ಹೊಸ ರೀತಿಯ ಪ್ರಯೋಗಗಳಿಗೆ ಮುಂದಾಗಿ, ಒಳ್ಳೆಯದೇ. ಆದರೆ ಕೆಲವು ಸಲ ದುಡುಕುವ ಹಾಗೆ ಚಂದ್ರನ ವ್ಯತಿರಿಕ್ತ ಪ್ರಚೋದನೆ, ರಾಶ್ಯಾಧಿಪತಿ ಶನೈಶ್ಚರ ಸ್ವಾಮಿಯ ಮೇಲೆ ನಡೆಯುವುದರಿಂದ ಹಾಸ್ಯಾಸ್ಪದರಾಗಿರುತ್ತೀರಿ. ಅಜ್ಞಾನಿಯನ್ನು ದುರಹಂಕಾರಿಯನ್ನು ನಿಮ್ಮ ದಾರಿಗೆ ಪರಿವರ್ತಿಸಿಕೊಳ್ಳುವ ಅಮೃತ ವಿದ್ಯೆಯನ್ನು ಪ್ರದರ್ಶಿಸಿ. ಅ್ವ್ಚಶಿನಿದೇವತೆಗಳನ್ನು ಮತ್ತು ಮಾರುತಿಯನ್ನು ಆರಾಧಿಸಿ. ಶುಭದಿಕ್ಕು: ಉತ್ತರ ಶುಭಸಂಖ್ಯೆ: 4

ಕುಂಭ: ಮನದಲ್ಲಿನ ಆಸೆಯನ್ನು ಈಡೇರಿಸಿಕೊಳ್ಳುವ ವಿಚಾರದಲ್ಲಿ ಆಲಸ್ಯ ಬೇಡ. ಒಂದೋ ಬಾಳ ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗುವ ಸಂಭವನೀಯತೆ ಇರುತ್ತದೆ, ಇಲ್ಲವೇ ಅವರ ಜತೆ ತಪು್ಪ ಕಾರಣಗಳಿಗಾಗಿ ಮುಸುಕಿನ ಗುದ್ದಾಟ ನಡೆಯಬಹುದು. ಆದರೆ ಎಲ್ಲ ವಿಚಾರಗಳನ್ನೂ ನಿಭಾಯಿಸಿಅಶಾಂತಿ ಹುಟ್ಟದಂತೆ ಕಾಪಾಡಿಕೊಳ್ಳಿ. ವರ್ತಮಾನವನ್ನು ವ್ಯಾಪಾರ, ವ್ಯವಹಾರ, ಪಾರ್ಟನರ್​ಷಿಪ್ ವಹಿವಾಟು, ಸೂಕ್ಷ್ಮ ಸರಕುಗಳ ವಿಲೇವಾರಿ ಆಯಾತ ನಿರ್ಯಾತಗಳಲ್ಲಿ ಮಿಂಚಬಲ್ಲಿರಿ. ಸುಲಭವಾಗಿ ಲಾಭದ ದಾರಿ ಕಂಡುಕೊಳ್ಳಬಹುದೆಂಬ ಹುಚ್ಚಾಟ ಬೇಡ. ನಿಖರವಾದ ಸೂತ್ರ, ನಿಯಮ, ರಿವಾಜುಗಳ ಹಳಿಗಳ ಮೇಲೆ ನಡೆಯಿರಿ. ನರಸಿಂಹನನ್ನು ಸ್ತುತಿಸಿ. ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 9

ಮೀನ: ಪರಮೋಚ್ಚವಾದುದನ್ನು ಹಿಡಿಯುವ ಶಕ್ತಿ ಇರುತ್ತದೆಯಾದರೂ ಅದೃಷ್ಟವು ನಿರ್ಣಾಯಕ ವೇಳೆಯಲ್ಲಿ ಕೈಕೊಡುತ್ತದೆ. ಒಂದು ಕಾಲದ ನಿಮ್ಮ ಪರಿಶ್ರಮವನ್ನು ಲೆಕ್ಕ ಹಾಕಿದರೆ ಅದೀಗ ನಿಮ್ಮ ಪರಿಪೂರ್ಣವಾದ ಮಾನಸಿಕ ಸಮಾಧಾನ, ಸುಖ, ತೃಪ್ತಿಯ ವಿಚಾರವಾಗಿ ಸಮೀಕರಣಗಳು ಸೋಲುತ್ತಿರುತ್ತವೆ. ಶಾಂತಿ ಕದಡಿ, ಮನಸ್ಸಿನ ಆರೋಗ್ಯ ಕೆಟ್ಟಂಥ ಅನುಭವ ಆವರಿಸುತ್ತದೆ. ಮನುಷ್ಯನ ಗೋಳೇ ಅದು. ಒಂದೆಡೆಯಲ್ಲಿ ಕೇಂದ್ರೀಕರಿಸಿದ ಗಮನದಿಂದಾಗಿ, ಇನ್ನೊಂದೆಡೆಯ ಮಗ್ಗುಲಿನಲ್ಲಿ ಸೋಲು ಶತಃಸಿದ್ಧ. ಆದರೂ ವಿಶೇಷವಾಗಿ ದತ್ತ ಗುರುವಿನ ಬಗ್ಗೆ ನಿಮ್ಮ ಭಕ್ತಿ ಭಾವ ಬೆಳಗಲಿ.ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 3

Leave a Reply

Your email address will not be published. Required fields are marked *