ವಾರ ಭವಿಷ್ಯ| 14-07-2019ರಿಂದ 20-07-2019ರವರೆಗೆ

ಮೇಷ: ಅಸಮಾನತೆಯನ್ನು ಮಾಡಲಾರಿರಿ. ಗುಣ ನೋಡಿ ಯಾವುದೇ ವ್ಯಕ್ತಿಯನ್ನು ಆರಾಧಿಸುತ್ತೀರಿ. ಆದರೆ ನೀವು ಆದರಿಸುವ ವ್ಯಕ್ತಿಗಳೇ ತಿರುಗಿ ಬೀಳುವ ಸಾಧ್ಯತೆ ಅಧಿಕ. ಪ್ರಧಾನವಾಗಿ ಕೇತುವು ಲಾಭದಾಯಕನಾದ ಶನೈಶ್ಚರನನ್ನು ದಿಗ್ಬಂಧನದಲ್ಲಿರಿಸಿದ್ದಾನೆ. ಶನೈಶ್ಚರನ ಕಾರಣದಿಂದಾಗಿ ಧೈರ್ಯಕ್ಕೆ ತಾಪತ್ರಯ ಲಭ್ಯ. ಹಣಕಾಸಿನ ಪರದಾಟಗಳಿಂದಾಗಿ ನಿಮಗೆ ಕೆಲವು ಸಲ ಕ್ಷುಲ್ಲಕ ಜನರಿಂದ ತೊಂದರೆಯಾಗಬಹುದು ಅಥವಾ ಹೊಯ್ದಾಟದ ಮನಸ್ಸು ಉಂಟಾಗಿ, ಯಾವುದೇ ನಿರ್ಧಾರಕ್ಕೆ ಬರಲು ಪರದಾಡಿಸಬಹುದು. ದಕ್ಷಿಣಾಮೂರ್ತಿಯನ್ನು ಆರಾಧಿಸಿ. ದಾರಿ ಲಭ್ಯ. ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 2

 

ವೃಷಭ: ವರ್ಚಸ್ಸಿನ ವಿಚಾರ ನಿಮ್ಮ ಆರ್ಥಿಕ ಸ್ಥಿತಿಯ ಶಿಥಿಲತೆಯಿಂದಾಗಿ ಒರೆಗಲ್ಲಿನ ಮೇಲೆ ನಿಂತಿದೆ ಎಂಬ ವ್ಯಾಕುಲತೆ ಅರ್ಥವಾಗುವಂಥದ್ದು. ಆದರೆ ಪ್ರಾರಬ್ಧದ ವಿಚಾರಗಳಲ್ಲಿ ಕೆಲವು ಸಹಿಸಲು ದುರ್ಭರವಾಗುವ ಸಮಸ್ಯೆಗಳನ್ನು ನಿರ್ವಿುಸಿಯೇ ತೀರುವ ಶನೈಶ್ಚರ, ಕೇತು, ರಾಹು ಹಾಗೂ ಚಂದ್ರ ಗ್ರಹಗಳು ನಿಮ್ಮ ವಿರುದ್ಧವಾಗಿ ಕೆಲಸ ಮಾಡುತ್ತಿವೆ. ವಾಮನ ಸಿದ್ಧಿಮಂತ್ರಗಳನ್ನು ಪಠಿಸಿ. ನಾಲ್ಕೈದು ಒಣದ್ರಾಕ್ಷಿಗಳನ್ನು ನೀರಿನಲ್ಲಿ ಹಾಕಿ ಮನೆಯ ಉತ್ತರ ದಿಕ್ಕಿನಲ್ಲಿ ನಿಂತು ಚೆಲ್ಲಿ. ವಿಷ್ಣುಸ್ತುತಿಯಿಂದ ಒಳಿತಾಗಲಿದೆ. ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 9

 

ಮಿಥುನ: ಆರೋಗ್ಯದ ಬಗ್ಗೆ ಎಚ್ಚರವಿರಲಿ. ಎಲ್ಲಾ ಕೆಲಸ ಕಾರ್ಯಗಳು ಅಥವಾ ಪಾಲುದಾರಿಕೆ ಬಿಸಿನೆಸ್​ಗಳನ್ನು ಲಾಭದಾಯಕವಾಗಿ ನಡೆಸಲು ಅವಕಾಶಗಳಿವೆ. ಸಾಲ ಕೊಡುವ ವಿಚಾರದಲ್ಲಿ ಎಚ್ಚರ. ರಾಹುವಿನ ಕಾರಣದಿಂದಾಗಿ ತಪು್ಪ ವ್ಯಕ್ತಿಗೆ ಸಾಲ ಕೊಡುವ ನಿರ್ಧಾರ ನಿಮ್ಮನ್ನು ನಾಳೆಗೆ ತೊಂದರೆಗೆ ನೂಕುವ ಸಾಧ್ಯತೆ ಜಾಸ್ತಿ. ಮನೆ ದೇವರ ಸ್ತುತಿ, ಆರಾಧನೆಯಿಂದ ಕ್ಷೇಮ. ಕುಜನ ದೋಷದ ನಿವಾರಣೆಗೆ ಬಿಳಿ ಖಾಲಿ ಕಾಗದದ ಮೇಲೆ, ಕಣ್ಣಿಗೆ ಲೇಪಿಸುವ ಕಾಡಿಗೆಯಲ್ಲಿ ನಿಮ್ಮ ಹೆಸರು ಬರೆಯಿರಿ. ಕಾಗದವನ್ನು ಉತ್ತರ ದಿಕ್ಕಿನ ಖಾಲಿ ಜಾಗದಲ್ಲಿ ಎಸೆಯಿರಿ. ಹಿಂದಿರುಗಿ ನೋಡದಿರಿ. ಶುಭದಿಕ್ಕು: ಪೂರ್ವ ಶುಭಸಂಖ್ಯೆ: 6

 

ಕಟಕ: ಕೆಲಸದ ಸ್ಥಳದಲ್ಲಿ ಒತ್ತಡ ಸೃಷ್ಟಿಯಾಗುತ್ತದೆ. ಚಾಣಾಕ್ಷತೆಯಿಂದ ವೈರಿಗಳನ್ನು ಗುರುತಿಸಿಕೊಂಡು ಸೂಕ್ತವಾಗಿ ನಿಗ್ರಹಿಸಿ. ಗಣೇಶನ ಸ್ತುತಿಯಿಂದಾಗಿ ಮೇಧಾಶಕ್ತಿ ಸಂವರ್ಧನೆ ಸಾಧ್ಯ. ವಿಘ್ನಗಳನ್ನು ನಿವಾರಿಸಿಕೊಂಡು ಕಾರ್ಯ ಸಾಫಲ್ಯತೆಗಾಗಿ ಅವಕಾಶ ಲಭ್ಯ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಕೆಲವು ಸಮಾಧಾನಕರ ಹೊಂದಾಣಿಕೆಗಳ ಕುರಿತು ನಯಗಾರಿಕೆಯೊಂದಿಗೆ ಎದುರಾಳಿಗಳು ಬರಬಹುದು. ಆದರೆ ಏಕಾಏಕಿ ಎಲ್ಲವನ್ನೂ ಒಪ್ಪಿಕೊಳ್ಳದಿರಿ. ಯೋಚನೆಗಾಗಿ ತುಸು ಕಾಲಾವಕಾಶವನ್ನು ಕೇಳಿ ನೋಡಿ. ರ್ಚಚಿಸಿ ನಿರ್ಧಾರ ತೆಗೆದುಕೊಳ್ಳಿ. ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 5

 

ಸಿಂಹ:  ಮಾತುಗಳು ಬರುತ್ತವೆ. ನೋವನ್ನು ಎಬ್ಬಿಸುವ ನೇರ ಮಾತುಗಳಾಗಲೀ, ಅಪ್ರತ್ಯಕ್ಷ ಮಾತುಗಳೇ ಇರಲಿ, ನಿಮ್ಮ ಭಾವನೆ, ಹತಾಶೆ ತೋರದಿರಿ. ನಿಮ್ಮನ್ನು ಬೆಂಬಲಿಸುವ ಅನೇಕರು ನಿಮ್ಮ ಜತೆಗಿದ್ದಾರೆ ಎಂಬ ಯೋಚನೆ ಹೊಂದಿ ನಿರುದ್ವಿಗ್ನರಾಗಿರಿ. ಕಾಲದ ವಿಚಾರ ಶೇ. 50ರಷ್ಟು ನಿಮ್ಮ ಬೆನ್ನಿಗಿದೆ. ಇನ್ನು ಶೇ. 50ರಷ್ಟರ ಅಡ್ಡಗೋಡೆಯ ಮೇಲಿನ ದೀಪದಂತಿರುತ್ತದೆ. ಬರಬೇಕಾದ ಹಣಕಾಸಿನ ವಿಚಾರದಲ್ಲಿ ಗೆಲುವಿನ ತೆಳುವಾದ ಲೇಪ ಇದ್ದೇ ಇರುತ್ತದೆ. ಇನ್ನೂ ಸ್ವಲ್ಪ ಶ್ರಮಪಡಬೇಕಾದ ಅನಿವಾರ್ಯತೆ ಬರುತ್ತದೆ. ಮಹಾಲಕ್ಷ್ಮಿಯನ್ನು ಸ್ತುತಿಸಿ. ಆರ್ಥಿಕತೆಯ ವಿಚಾರಕ್ಕೆ ಸಿದ್ಧಿ ಸಿಗಲು ಸಾಧ್ಯ. ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 8

 

ಕನ್ಯಾ: ಆಪತ್ತು ಬರಬಹುದು ಎಂಬ ಭಯ ನಿಮ್ಮಲ್ಲಿ ನಿರಂತರವಾಗಬಹುದು, ಚಂದ್ರ ದಶಾಕಾಲವಾಗಿದೆ. ದೋಷವು ಚಂದ್ರನಿಗಿದ್ದಲ್ಲಿ ಮಾನಸಿಕ ತೊಳಲಾಟಗಳಿಗೆ ಚಂದ್ರ ಕಾರಣವಾಗಲು ಸಾಧ್ಯ. ಅಬಾಧಿತ ಎಂದು ತಿಳಿದಿದ್ದ ಹಣದ ನಿರಾಳತೆಗೆ ಭಗ್ನ ಬರಬಹುದು. ಶುಕ್ರ ದಶಾ ಕಾಲವಾಗಿದ್ದು, ಲಕ್ಷ್ಮಿನಾರಾಯಣ ಹೃದಯ ಸ್ತೋತ್ರ ಪಠಿಸಿ. ಉತ್ತಮ ಭವಿಷ್ಯದ ಬಗೆಗಿನ ಮುಂಚಿನ ದಾರ್ಢ್ಯತೆಯ ಹೆಜ್ಜೆಗಳನ್ನಿಡಲು ಸಾಧ್ಯ. ಮನೆ ಅವಿಭಕ್ತ ಕುಟುಂಬವಾಗಿದ್ದಲ್ಲಿ ಮಾತಿಗೆ ನಿಯಂತ್ರಣ ಹಾಕಿ. ನೀವೇ ಯಜಮಾನಿಕೆ ಹೊಂದಿದ್ದರೆ ಮೌನ ಸಂಜೀವಿನಿಯಾಗಿದೆ. ಆದಿತ್ಯ ಹೃದಯ ಮಂತ್ರ ಭಾಗ ಓದಿ. ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 2

 

ತುಲಾ: ಯಶಸ್ಸಿನ ಕುದುರೆ ಏರಿ ಸವಾರಿ ನಡೆಸಲು ಸಾಧ್ಯವಿದೆಯಾದರೂ ದಿಕ್ಕು ತಪ್ಪಿ, ದಾರಿ ಬಳಸುದಾರಿ ಆದೀತು. ಅತಿಯಾದ ಆತ್ಮವಿಶ್ವಾಸ ಯಾವುದೇ ಕಾರಣಕ್ಕೂ ಬೇಡ. ಚತುರತೆಯಿಂದ ಜನರನ್ನು ನಿಯಂತ್ರಿಸಿ. ಉತ್ತಮರನ್ನು ತುಸು ಕಷ್ಟಪಟ್ಟೇ ಹುಡುಕಾಡುವುದು ಈಗ ನಿಮಗೆ ಅನಿವಾರ್ಯ. ಮಾತಿನ ನಯಗಾರಿಕೆಯಿಂದ ಧೂರ್ತರೂ ಉತ್ತಮರಂತೆ ಕಾಣಿಸಿಕೊಳ್ಳುತ್ತಾರೆ. ನಿಮ್ಮ ಸ್ವಂತದ್ದಾದ ಆಸ್ತಿಯ ಮೇಲೆ ತಮ್ಮ ಸವಾರಿ ಮಾಡುತ್ತಾರೆ. ಗಿಡದಿಂದ ಹೊಸದಾಗಿ ಕಿತ್ತು ತೆಗೆದ ಹಳದಿ ಹೂವುಗಳಿಂದ ನರಸಿಂಹನನ್ನು ಆರಾಧಿಸಿ. ಮಂಗಳಮಯ ಕೆಲಸಕ್ಕೆ ದಾರಿ ಲಭ್ಯ. ಶುಭದಿಕ್ಕು: ಪೂರ್ವ ಶುಭಸಂಖ್ಯೆ: 6.

 

ವೃಶ್ಚಿಕ: ವಹಿವಾಟು ನಡೆಸಬಲ್ಲ ಮನೋಬಲ ತೋರಲು ತೊಡಕುಗಳು ಬರುತ್ತವೆ. ಏನೂ ಬೇಡ ಅನ್ನುವಂತಾಗಿ ಜಡತೆ ತಲೆದೋರುತ್ತದೆ. ಅನೂಹ್ಯವಾದ ಆಕ್ರಮಣವನ್ನು ಯಾರೋ ಮಾಡುತ್ತಿದ್ದಾರೆಂಬ ಭಾವನೆ ಬರುತ್ತಿರುತ್ತದೆ. ಯಶಸ್ಸಿನ ಒಂದೊಂದೇ ಮೆಟ್ಟಿಲೇರಲು ಪ್ರಯತ್ನಿಸಿ. ಒಂದೇ ಬಾರಿಗೆ ಜಿಗಿದು ಮೇಲೇರಬೇಕೆಂದರೆ ಅದೃಷ್ಟ ಸಹಕರಿಸದು. ಗರುಡನ ಶಕ್ತಿ ಪಡೆದ ಶಕ್ತಿ ಧಾತುಗಳನ್ನು ಪೂಜಿಸಿ, ಖಿನ್ನತೆಯನ್ನು ನಿವಾರಿಸಿಕೊಂಡು ಲವಲವಿಕೆ ಪಡೆಯಲು ಸಾಧ್ಯ. ಸೂರ್ಯ ಸ್ತುತಿ ಮತ್ತು ಪಾಂಡುರಂಗನ ಸ್ತುತಿಯಿಂದ ಉತ್ತಮ ಯಶಸ್ಸು ಸಾಧ್ಯ. ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 3

 

ಧನು:  ವಿಚಿತ್ರವಾದ ಒಂದು ಅಧೀರತೆ ನಿಮ್ಮನ್ನು ಕಾಡಬಹುದು. ಉರಿ ಹೊತ್ತಿಸುವ ಸಾಮರ್ಥ್ಯವನ್ನು ರಾಹುಕೇತುಗಳು ಪ್ರಧಾನವಾಗಿ ಮಾಡುತ್ತಿರುತ್ತಾರೆ. ಕ್ಷೀಣ ಚಂದ್ರನು ಉದ್ರೇಕಗಳಿಗೆ ಕಾರಣನಾಗುತ್ತಾನೆ. ನಿಮ್ಮ ಬೆಲೆ ಬಾಳುವ ವಸ್ತುಗಳಿಗೆ ತೊಂದರೆ ತಂದುಕೊಳ್ಳದಿರಿ. ತಡೆಯಲಾಗದ ಕಾಟಗಳು ಬಂದರೆ ಬರಲಿ, ನಿಗೂಢ ಶಕ್ತಿಗಳ ಆಕ್ರಮಣ ನಡೆದಾಗ ಆತ್ಮಸಂಯಮದಿಂದಲೇ ಗೆಲುವಿನ ದಾರಿ ನಿರ್ವಿುಸಿಕೊಳ್ಳಬೇಕು. ವ್ಯಾಪಕ ಅಡೆತಡೆಗಳು ಎದುರಾದರೂ ನಿಮ್ಮ ಪ್ರಾಬಲ್ಯದಿಂದ ಎದುರಿಸಿ ಗೆಲ್ಲಿ. ಮನಸ್ಸನ್ನು ಉದ್ರೇಕಗೊಳ್ಳಲು ಬಿಡದಿರಿ. ಧೈರ್ಯವೇ ನಿಮಗೆ ಬಲ. ಶುಭದಿಕ್ಕು: ಉತ್ತರ ಶುಭಸಂಖ್ಯೆ: 7

 

ಮಕರ:  ಧೈರ್ಯದಿಂದಲೇ ಇರುವ ನೀವು ಅಧೀರರಾಗುವ ಸಂಗತಿ ಸರ›ನೆ ಬಂದು ನಿಲ್ಲಬಹುದು. ಹೊಂದಾಣಿಕೆಯ ವಿಷಯದಲ್ಲಿ ಬಾಳಸಂಗಾತಿಯೊಡನೆ ಮೃದು ಧೋರಣೆ ತೆಗೆದುಕೊಳ್ಳಿ. ತಾಳ್ಮೆ, ಗಡಿಬಿಡಿ, ಆತುರಗಳೂ ತೊಂದರೆ ತರಬಹುದು. ದೈವವೇ ಸಹಕರಿಸಬೇಕು. ಮಾರುತಿಯನ್ನು ಆರಾಧಿಸಿ. ಮಾರುತಿಯ ಕೃಪೆ ಇರುವಲ್ಲಿ ಸೋಲು ಬರಲಾರದು. ಭೂವಿಜ್ಞಾನಿಗಳು, ಕೃಷಿಕರು, ಲೋಹ ಅದಿರು ವ್ಯವಹಾರ ನಡೆಸುವ ಮಂದಿ ಮಾನಸಿಕ ಕ್ಲಿಷ್ಟತೆ ಎದುರಿಸುತ್ತೀರಿ. ಮಕ್ಕಳು ಸೂಕ್ತವಾದ ನೆರವು ನೀಡಲು ಮುಂದಾಗಿ. ಸಂತಸ ಸಾಧ್ಯ. ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 1

 

ಕುಂಭ: ಆಪ್ತರೊಬ್ಬರ ವಿಚಾರದಲ್ಲಿ ಅಹಿತಕರವಾದ ಘಟನೆ ನಡೆಯಬಹುದು. ಶಕ್ತಿ ಸ್ವರೂಪಿಣಿಯಾದ ಚಾಮುಂಡಿಯನ್ನು ಪ್ರಾರ್ಥಿಸಿ. ವರ್ಚಸ್ಸಿನ ವಿಚಾರದಲ್ಲಿ ದಾರಿ ಸುಲಭವಾಗಿರದಿದ್ದರೂ ಪ್ರಯತ್ನಿಸಿ. ಮುನ್ನುಗ್ಗುವ ಧೈರ್ಯ ಇರಲಿ. ಶನೈಶ್ಚರನ ಅನುಗ್ರಹಗಳಿದ್ದರೂ, ವಿಘ್ನಗಳನ್ನು ನಿರ್ವಿುಸುವ ಕೇತು ತೊಡಕಾಗಿ ನಿಲ್ಲುತ್ತಾನೆ. ಸದ್ಭಾವನೆ ತೋರಿದರೂ ಭಿನ್ನಾಭಿಪ್ರಾಯ ಹೊಂದುವ ಜನರನ್ನು ಸಮಾಧಾನದಿಂದ ಎದುರಿಸಿ. ಸಕ್ಕರೆಯ ಜತೆ ಕಡೆಲೆಹಿಟ್ಟು ಬೆರೆಸಿ ಇರುವೆ ಬರುವ ಕಡೆ ಇಡಿ. ಕಪು್ಪ ಶಕ್ತಿಗಳನ್ನು ದೂರವಿರಿಸಲು ಇದರಿಂದ ಸಾಧ್ಯ. ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 4

 

ಮೀನ: ನಿರ್ಣಯಾತ್ಮಕ ಘಟ್ಟದಲ್ಲಿ ಸೋಲದಿರಿ. ನಿಮ್ಮ ಲಾಗಾಯ್ತಿನ ತೊಂದರೆಯೇ ಅದು. ನಂಬುತ್ತೀರಿ. ನಂತರಕ್ಕೆ ಬಿಡುತ್ತೀರಿ. ಸ್ವಾರ್ಥಿಗಳಿಗೆ ನಿಮ್ಮ ನಿರ್ಣಯದಿಂದ ಅಡೆತಡೆ ಸಿಗುವ ವಿಚಾರ ಸಕಾರಾತ್ಮಕವೇ. ಕೆಲವು ಸ್ವಾಭಿಮಾನಿಗಳು ನಿಮ್ಮಿಂದ ದೂರ ಸರಿಯಲು ಸಾಧ್ಯ. ಹಿನ್ನಡೆಯ ವಿಚಾರದಲ್ಲಿ ಸೂಕ್ತವಾದದ್ದನ್ನು ಅಳೆದು, ತೂಗಿ ಹೆಜ್ಜೆ ಇಡಿ. ನಿಮ್ಮ ವಿರೋಧಿಗಳು ವಾಸ್ತವದಲ್ಲಿ ಯಾರು ಎಂಬುದನ್ನು ನಿರ್ಧರಿಸಿ. ಶೇರು ಮಾರುಕಟ್ಟೆ ವಿಚಾರದಲ್ಲೂ ಸಾಧಕಬಾಧಕಗಳ ಬಗ್ಗೆ ಪೂರ್ತಿ ಗಮನವಿರಲಿ. ಇಷ್ಟ ದೇವತೆಯನ್ನು, ತ್ರಿಪುರಾಂಜಿಯನ್ನೂ ಸ್ತುತಿಸಿ. ಶುಭದಿಕ್ಕು: ಉತ್ತರ ಶುಭಸಂಖ್ಯೆ: 8

Leave a Reply

Your email address will not be published. Required fields are marked *