ವಾರ ಭವಿಷ್ಯ|07-07-2019ರಿಂದ 13-07-2019ರವರೆಗೆ

ಮೇಷ: ಆರ್ಥಿಕತೆಯ ವಿಷಯಗಳ ಸುತ್ತ ಎಚ್ಚರವಹಿಸಲೇಬೇಕೆಂದು ಮನದಟ್ಟು ಮಾಡಿಕೊಳ್ಳಿ. ಏನೇ ಬೊಬ್ಬೆ ಹೊಡೆದರೂ ಇಲಿ ಹೋಗುವುದನ್ನು ನಿಯಂತ್ರಿಸುವುದಾಗುತ್ತದೆಯೇ ವಿನಾ ಹುಲಿ ಹೋಗುವುದನ್ನಲ್ಲ. ವಿಶೇಷವಾಗಿ ಮಕ್ಕಳ ವಿಚಾರದಲ್ಲಿ ಸೂಕ್ತವಾದ ಲಕ್ಷ್ಯ ಕೊಡಲೇಬೇಕು. ತಿಳಿದಿರದ ನಿಟ್ಟಿನಲ್ಲಿ ಅವರು ಖರ್ಚುವೆಚ್ಚಗಳಿಗೆ ದಾರಿ ಮಾಡುತ್ತಾರೆ. ಒಂದಕ್ಕೊಂದು ಹೊಂದಿಕೊಳ್ಳಲಾಗದ ಶುಕ್ರನು, ರವಿಯು, ರಾಹುವು ಧೈರ್ಯ ಕುಗ್ಗಿಸುವ ವರ್ತಮಾನ ಸೃಷ್ಟಿಸುವ ತವಕದಲ್ಲಿರುತ್ತವೆ. ಪರಮಗುರು ಸ್ವರ್ಣಾಕರ್ಷಣ ಭೈರವನನ್ನು ಆರಾಧಿಸಿ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 2

ವೃಷಭ: ಸುಖದ ವಿಚಾರಗಳು ದೃಢವಾಗಿ ತೆರೆದುಕೊಳ್ಳುವ ವರ್ತಮಾನ ನಿಮಗೆ ಸ್ಪಷ್ಟವಾಗಿ ಗೋಚರಿಸುತ್ತಿರುತ್ತವೆ. ನಿಮಗಿಂತ ದಡ್ಡರು ನೀಡುವ ಸಲಹೆಗಳನ್ನು ಸ್ವೀಕರಿಸಿ ಸೋಲುವಂತೆ ಮಾಡುವ ಹುನ್ನಾರಕ್ಕೆ ಚಂದ್ರ ನೀಡುವ ಧೈರ್ಯದಿಂದಾಗಿ ಬಲಿಯಾಗುತ್ತೀರಿ. ಭಾಗ್ಯ ನೀಡಬೇಕಾದ ಶನೈಶ್ಚರ ಬಸವಳಿದಿದ್ದಾನೆ. ಕೆಲಸದ ಸ್ಥಳದಲ್ಲಿ ಎಲ್ಲರೂ ಪೀಡೆ ಒದಗಿಸಲು ಸಾಧ್ಯ. ಆದರೆ ಬುದ್ಧಿಬಲದ ಮೃದುತನ ಕೂಡಿದ ಆದರೆ ಸ್ಪಷ್ಟವಾಗಿ ಸಂದೇಶ ರವಾನೆಯಾಗುವ ಮಾತಿನ ಬಲ ಬೇಕು. ಕಾರ್ಯವಾಸಿ ಕತ್ತೆಕಾಲು ಎಂಬುದು ಮನಸ್ಸಿನಲ್ಲಿರಲಿ. ಪರಮೇಶ್ವರಿಯನ್ನು ಸ್ತುತಿಸಿ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 5

ಮಿಥುನ: ನಿಮ್ಮ ತೊಡಗಿಸಿಕೊಳ್ಳುವಿಕೆ ಹೇಗೆ ಎಂಬುದರ ಮೇಲೆ ಬಾಳ ಸಂಗಾತಿಯಿಂದ ಸಹಾಯ ಸಿಗಲು ಸಾಧ್ಯ. ನಿಮ್ಮ ಮಾತುಗಳನ್ನು ಅರ್ಥಪೂರ್ಣವಾಗಿ ನಿಗ್ರಹಿಸಿಕೊಂಡೇ, ಶಿಸ್ತಿನ ಹಳಿಯ ಮೇಲೆ ಚಲನಶೀಲತೆಯನ್ನು ಸಕಾರಾತ್ಮಕವಾಗಿ ಮಾತಿನ ಮೂಲಕ ಸಾಧಿಸಿಕೊಳ್ಳಲು ಸಫಲರಾದರೆ ಯಶಸ್ಸನ್ನು ನಿರೀಕ್ಷಿಸಬಹುದು. ಕಾರ್ಯ ಯೋಜನೆ ಸಫಲಗೊಳ್ಳುವ ವಾರ ಇದು. ಅತಿಥಿಗಳು, ಗೆಳೆಯರು ಇಲ್ಲವೇ ಯಾವುದೇ ಮುಂದೂಡಬಹುದಾದ ವಿಚಾರಗಳನ್ನು ಈ ವಾರ ತಪ್ಪಿಸಿಕೊಳ್ಳಿ. ಮಹತ್ವದಾದುದನ್ನು ಸೂಕ್ಷ್ಮವಾಗಿ ಸಾಧಿಸಿ. ದುರ್ಗಾಳನ್ನು ಸ್ತುತಿಸಿ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 7

ಕಟಕ: ಸಂತೋಷ ತುಂಬಿದ ವಾತಾವರಣ ಇರುತ್ತದೆ. ಗುರುಬಲದ ಸತ್ವದಿಂದಾಗಿ ಕೆಂಡವನ್ನೂ ವೈಚಾರಿಕ ಶಕ್ತಿಯ ನೆಲೆಯಲ್ಲಿ ಕೈಯಲ್ಲಿಯೇ ಹಿಡಿದು ದೂರ ತಳ್ಳುವ ಅತುಳ ಬಲ ಪ್ರದಾನವಾಗುತ್ತದೆ. ಮನೋಬಲ ಸ್ಥಿತವಾಗಿರುವ ಉತ್ತಮ ಕಾಲ. ಯೋಚನೆಗಳು ತರ್ಕಪೂರ್ಣವಾಗಿರುತ್ತವೆ. ಭೂಮಿ, ಸೈಟು, ಮನೆ ಅಥವಾ ಬರಬೇಕಾದ ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸ್ಪಷ್ಟವಾದ ಸ್ವರೂಪಗಳು ಕಾಗದಪತ್ರದಲ್ಲಿ ಅಧಿಕೃತವಾಗಿ ದಾಖಲೆಗೊಳ್ಳುವ ವಿಚಾರಕ್ಕೆ ಒತ್ತುನೀಡಿ ಬೇಗ ಮುಗಿಸಿಕೊಳ್ಳಿ. ನರಸಿಂಹ ಸ್ತುತಿಸಿ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 3

ಸಿಂಹ: ನಿಮ್ಮ ಅದೃಷ್ಟದ ಸೂರ್ಯ ಪರಮೋಚ್ಚ ಶಕ್ತಿಯನ್ನು ಪಡೆದಿರುವ ಕಾಲಘಟ್ಟ. ಒಳಿತಿನ ದಾರಿಗೆ, ವರ್ಚಸ್ಸು, ಸ್ಥಾನಮಾನಗಳ ಸಿದ್ಧಿಗೆ ವಿಪುಲ ಅವಕಾಶ. ಮಂಗಳಮಯಿಯಾದ ಶ್ರೀದೇವಿ ಪಾರ್ವತಿಯನ್ನು ಸ್ತುತಿಸಿ. ಸನ್ಮಾರ್ಗಗಳನ್ನು ಹಿಡಿಯುವುದಕ್ಕೆ ಕೈದೀವಿಗೆಯಾಗುವ ಅನುಗ್ರಹ ಅವಳಿಂದಾಗಿ ಸುರಕ್ಷಿತ. ವಿಷ ಉಗುಳುವ ಜನರು ಸಿಗುತ್ತಾರೆ. ಚಾತುರ್ಯದಿಂದ ಅವರನ್ನು ನಿಭಾಯಿಸಿ. ವಿಷವೇ ಅಮೃತವಾಗುವ, ವೈರಿಗಳಿಂದಲೂ ಉಪಯೋಗ ಸಿಗುವ (ಆದರೆ ಬುದ್ಧಿಬಲ, ಆತ್ಮಬಲದಿಂದಲೇ ನಿಗ್ರಹಿಸಬೇಕು ಅವರನ್ನು) ವರ್ತಮಾನ ದಟ್ಟವಾಗಿದೆ. ವಿರುದ್ಧ ಲಿಂಗಿಗಳ ಬಗ್ಗ್ಗೆ ಜಾಗ್ರತೆ ಇರಲಿ.

ಶುಭದಿಕ್ಕು: ವಾಯವ್ಯ 5

ಕನ್ಯಾ: ಕೊಡಬೇಕಾದವರ ಸಾಲದ ವಿಚಾರದಲ್ಲಿ ಬಿಕ್ಕಟ್ಟುಗಳು ಸಾಧ್ಯ. ಪಡೆಯುವಾಗ ಸುಖಕರವಾಗಿರುವಂತೆ ಕಂಡ ಸಾಲದ ಹಣ ಈಗ ತಲೆ ತಗ್ಗಿಸುವ ವಿಚಾರಕ್ಕೆ ದಾರಿಯಾಗಬಹುದು. ಸಾಲವನ್ನು ಕೊಡಲು ಹೋಗಬೇಡಿ. ಶಕ್ತಿ ದೇದೀಪ್ಯಳಾದ ಮಹಾಮಾಯಿಯನ್ನು ಆರಾಧಿಸಿ. ಪ್ರಾಪ್ತಿಯ ವಿಚಾರ ಸರಳ. ಹಣಕಾಸಿನ ವಿಚಾರ ನಿರಾಳ. ಖರ್ಚಿನ ದಾರಿಯ ವಿಚಾರ ವಿಮಶಿಸಿ ಅವಶ್ಯವಾದ, ಅನಿವಾರ್ಯವಾದ ಖರ್ಚು ಮಾಡಿ. ಈಗಿರುವ ಸ್ಥಿತಿಗತಿಗಳು ಉತ್ತಮವಾಗುವ, ಇನ್ನಿಷ್ಟು ಅರ್ಥಪೂರ್ಣವಾಗುವ ಕಾಯಕ ನಿಮಗೆ ತಿಳಿದದ್ದೇ. ವ್ಯವಧಾನ ಹಾಗೂ ಶಿಸ್ತಿನಿಂದ ಏಳಿಗೆಗೆ ಮುನ್ನುಗ್ಗಿರಿ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 2

ತುಲಾ: ಆರೋಗ್ಯದಲ್ಲಿ ನಿಗಾ ಇರಲಿ. ಹಾಗೆಂದ ಮಾತ್ರಕ್ಕೆ ಜರೂರಾದ ಕಾರ್ಯಗಳನ್ನು ಮುಂದೂಡಲಾಗದು. ಕಾರ್ಯಗಳ ನಡುವೆ ವಿರಾಮ ಮಾಡಿಕೊಳ್ಳಿ. ಬುಧನು ಲಾಭದ ವಿಚಾರದಲ್ಲಿ ಅಂತಿಮವಾದ ಜಯ ಕೊಟ್ಟರೂ ಕುಜನ ಕಾರಣದಿಂದ ವಿಪರೀತ ಸುಸ್ತು, ಸಿಟ್ಟು, ಖಿನ್ನತೆ ಕಾಡಬಹುದು. ಗಣೇಶನನ್ನು ಸ್ತುತಿಸುವ, ಗಣೇಶನ ಧ್ಯಾನ, ಜಪ ವಿಶೇಷಗಳು ಕ್ಲೇಶ, ಒತ್ತಡಗಳನ್ನೂ ದೂರ ಮಾಡಬಲ್ಲದು. ಕೆಲಸದ ಸ್ಥಳದಲ್ಲಿಯೂ ಅವಿರತವಾದ ಶ್ರಮ ಮತ್ತು ನಿರೀಕ್ಷೆಯ ಕೊರಳು ಚಾಚಿ ಕಾಯುವ ಬಿಕ್ಕಟ್ಟುಗಳ ನಡುವೆಯೇ ಪ್ರಮೋಷನ್ ಪಡೆಯಬೇಕಾಗುತ್ತದೆ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 8

ವೃಶ್ಚಿಕ: ವೈರಿಗಳನ್ನು ಸದೆಬಡಿಯಲು ಕಾಲದ ನೆರವು ಸಿಗುವುದು ಕಷ್ಟ. ತಾಳ್ಮೆಯೊಂದೇ ವಜ್ರಾಯುಧವಾಗಿರಲಿ. ಕಾಲರಾಯ ಪರ್ವಪುಣ್ಯದ ಪಾಲನ್ನು ಸರ್ಪ ಸರಪಳಿಯಲ್ಲಿ ಸದ್ಯ ಬಂಧಿಸಿ ಮನೋಮಂಡಲವನ್ನು ಅಸ್ತವ್ಯಸ್ತಗೊಳಿಸುತ್ತಿದ್ದಾನೆ. ‘ಋಣಾನುಬಂಧ ರೂಪೇಣ …’ ಎಂಬ ಮಾತು ನೆನಪಿರಲಿ. ತದಕಾರಣ, ಆರ್ಥಿಕತೆ, ಬಾಳ ಸಂಗಾತಿ, ಮಕ್ಕಳು ಹಾಗೂ ಮನೆಯ ಇತ್ಯಾದಿ ವಿಚಾರಗಳೆಲ್ಲವೂ ನಿಮ್ಮನ್ನು ಆಗ್ರಹಪೂರ್ವಕವಾಗಿ ಪರೀಕ್ಷೆಯೊಡ್ಡದ ಕಾಲವಾಗಿದೆ. ಶ್ರೀ ವೆಂಕಟೇಶ್ವರ ಅಷ್ಟಕ, ರಾಮರಕ್ಷಾ ಸ್ತೋತ್ರ ಪಠಣ ಮಾಡಿ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 6

ಧನು: ಗುರುವು ಕತ್ತಲಲ್ಲಿದ್ದರೂ ಕಿರಿಯರು ಸಹಾಯಕ್ಕೆ ಬರುತ್ತಾರೆ. ನಿಮ್ಮ ಪ್ರಾಮುಖ್ಯತೆ ಅರಿತವರಿಂದ ಶ್ಲಾಘನೆ ಇದೆ. ಸ್ಥಾನಮಾನಗಳ ವಿಷಯದಲ್ಲಿ ಹತ್ತಿರದವರು ಅನ್ಯಾಯ ಮಾಡುವ ವಿಚಾರ ಇದ್ದೇ ಇರುತ್ತದೆ. ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಮತೋಲನ ಇರಲಿ. ಸಿನಿಮಾ ವ್ಯವಹಾರ, ನಟನೆ, ಮಾಧ್ಯಮ, ಮಾಡೆಲಿಂಗ್​ನಲ್ಲಿ ಕಾರ್ಯ ಪ್ರವೃತ್ತರಾದ ಜನ ಪರಮೋಚ್ಚ ಕಾಣುವುದು ಸೂರ್ಯಶುಕ್ರರ ಸಲಹದ ಕಾರಣದಿಂದಾಗಿ ಕಷ್ಟಕರ. ದಿವ್ಯಕ್ಕೆ ಬೇಕಾದ, ಕನಸು ನನಸಾಗುವ ಅಮೋಘ ವರ್ತಮಾನದ ತಾಯಿ ಶಾಂಭವಿಯ ಸ್ತುತಿಯಿಂದ ಸಾಧ್ಯ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 9

ಮಕರ: ದೇವದೂತರು ಕಣ್ಣಿಗೆ ಕಾಣಿಸುವ ಸ್ವರೂಪದಲ್ಲಿ ಬಂದಾಗ ನೀವು ಗಮನಿಸದಿರುವ ಸಾಧ್ಯತೆ ಅಧಿಕ. ಕ್ಷೀಣಬಲವೂ ದೈತ್ಯ ಬಲವನ್ನು ಜಝುರಿತಗೊಳಿಸುವುದು ದೈವ ಬಲದ ಅನುಗ್ರಹದಿಂದ ಸಾಧ್ಯ. ಮನಸ್ಸು ಕಲಕಿ ಹೋಗಿರುತ್ತದೆ. ನಂಬಿದವರೇ ಕೈಕೊಟ್ಟಾಗ ದುಃಖ ಇಮ್ಮಡಿಸುತ್ತದೆ. ಆದರೆ ಮಾರುತಿ, ದೇವಿಯನ್ನು ನಂಬಿ ಆರಾಧಿಸಿ. ಚಿನ್ನದ ಟೇಬಲ್ ಎದುರು ಕುಳಿತು, ಹಣಕ್ಕೆ ಏನು ಮಾಡಲಿ ಎಂದು ದುಃಖಿಸುವ ಸಂದರ್ಭದಲ್ಲಿ ಅಗೋಚರವಾದ, ಆದರೆ ಉತ್ಸಾಹ ತುಂಬಿಸುವ, ಮುಂದಿನ ಯೋಜನೆಗೆ ಮುಂದಾಗಿಸುವ ಶಕ್ತಿಯೊಂದು ನೆರವಿಗೆ ಬರುತ್ತದೆ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 1

ಕುಂಭ: ಯಶಸ್ಸು ನಿಮಗೆ ಸಿಗಲೇಬೇಕು. ಆದರೆ ನಿಧಾನವಾಗಿ ಅದು ಲಭ್ಯ. ಅವಸರಿಸುವ ಮನೋಭಾವ ನಿಮಗೆ ಸರ್ಪದೋಷದಿಂದಾಗಿ ಹರಳುಗಟ್ಟುತ್ತದೆ. ರಾಹು ಕವಚ ಪಠಿಸಿ. ವಿಶೇಷವಾಗಿ ಧೈರ್ಯವೂ, ಬುದ್ಧಬಲವೂ ಒಂದು ಹದದಲ್ಲಿ ಸ್ಥಾಯಿಗೊಳ್ಳಬೇಕು. ಸರ್ಕಾರಿ ಕಂಟ್ರಾಕ್ಟ್​ದಾರರು, ಅಬಕಾರಿ ಸರಕುಗಳ ಮಾರಾಟಗಾರರು, ಕೆಲವು ಕಾ್ದ್ದಯೆಳ ಕಾರಣದಿಂದಾಗುವ ಬಿಕ್ಕಟ್ಟು ಎದುರಿಸಲು ಸಾಧ್ಯ. ಆದರೆ ಮಾತೃರೂಪದ ಶಕ್ತಿ ಸ್ತೋತ್ರ ನಿಮ್ಮನ್ನು ಅನುಗ್ರಹಿಸಲಿದೆ. ಪಿತೃಪಿತಾಮಯ ನೆನೆದು ಕಾಗೆಗಳಿಗೆ ದಾಲ್ ಬೆರೆಸಿದ ಅನ್ನವನ್ನು ಮನೆಯ ಸೂರಿನ ಮೇಲೆ ಇರಿಸಿ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 6

ಮೀನ: ನೀವು ಹತ್ತಬಯಸಿದ ಯಶಸ್ಸಿನ ಏಣಿ ನಿಮ್ಮ ಪ್ರತಿಭೆಯ ಫಲವಾಗಿ ರೂಪುಗೊಂಡ ಅಸಾಮಾನ್ಯ ಸಾಧನ. ಇದನ್ನು ಕೆಲವು ಸಲ ನೀವೇ ಅಷ್ಟೇನು ಮುಖ್ಯವಲ್ಲ ಎಂದು ನಿರ್ಲಕ್ಷ್ಯ ಮಾಡುತ್ತೀರಿ. ವರ್ಷವಿಡೀ ವಸಂತಕಾಲದ ಸೌರಭವನ್ನು ನಿರೀಕ್ಷಿಸಲಾಗದು. ಕಬ್ಬಿಣವನ್ನು ಚಿನ್ನವನ್ನಾಗಿಸುವ ರಸಕಲೆ ನಿಮಗೆ ಅಮೂರ್ತದಿಂದ ಮೂರ್ತಕ್ಕೆ ತಿರುಗಿಸುವ ನಿಮ್ಮ ಯೋಚನಾ ಆಸಕ್ತಿ ಹಾಗೂ ಶ್ರಮವರಿಯದ ದುಡಿಮೆ ಇವು ಸಂಯುಕ್ತವಾಗಿ ದೊರೆತಿದೆ. ಮಹೇಶ್ವರಿ ಹಾಗೂ ಮಾರುತಿಯ ಅನುಗ್ರಹ ಪಡೆಯಿರಿ. ಯಶಸ್ಸಿಗೆ ದಾರಿ ಇದೆ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 4

Leave a Reply

Your email address will not be published. Required fields are marked *