More

  ಈ ರಾಶಿಯವರಿಗೆ ದುಡಿಮೆಯಿಂದ ಹೆಚ್ಚಿನ ಧನಲಾಭ: ವಾರಭವಿಷ್ಯ

  ಈ ರಾಶಿಯವರಿಗೆ ದುಡಿಮೆಯಿಂದ ಹೆಚ್ಚಿನ ಧನಲಾಭ: ವಾರಭವಿಷ್ಯ

  ಮೇಷ ರಾಶಿ

  ಮೇಷ ರಾಶಿಗೆ ಚತುರ್ಥದಲ್ಲಿ ಕುಜನು ಇದೇ ಮೇ 30ರಂದು ಬಂದು ಚಂದ್ರನ ಮನೆಯಲ್ಲಿ ನೆಲೆಸಿದ್ದಾನೆ. ಮೇಷ ರಾಶಿಯಲ್ಲಿ ರಾಹು, ಬುಧ, ಗುರು ಉಪಸ್ಥಿತರಿದ್ದು, ದ್ವಿತೀಯದಲ್ಲಿ ಸೂರ್ಯನು ನೆಲೆಸಿದ್ದಾನೆ. ಮೇಷ ರಾಶಿಗೆ ಈಗ ದಿನಗಳ ಚಲನವಲನ ತಕ್ಕಮಟ್ಟಿಗೆ ಅನುಕೂಲ ಮಾಡಿಕೊಟ್ಟರೂ ಗುರು, ರಾಹು ಸಂಧಿ ಇರುವುದರಿಂದ ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಉಂಟಾಗಿ ನಿಧಾನವಾಗಿ ಫಲವನ್ನು ಕೊಡುತ್ತಾರೆ. ವಿಘ್ನನಿವಾರಕ ಚಿಂತಾಮಣಿ ಗಣಪತಿಯನ್ನು ಪ್ರಾರ್ಥಿಸಿ.

  ಮಿಥುನ ರಾಶಿ

  ಒಳ್ಳೆಯ ಮನಸ್ಸಿದ್ದು ಅನ್ಯರಿಗೆ ದ್ವೇಷ, ಅಸೂಯೆಗಳಿಂದ ಕೆಡಕನ್ನು ಬಯಸದೆ ಇದ್ದರೆ ಏಕಾದಶದಲ್ಲಿ ಗುರು ರಾಹುವಿನೊಂದಿಗೆ ಕೂಡಿದ್ದರೂ ಶುಭವನ್ನು ತರುತ್ತಾನೆ. 9ನೇ ಸ್ವಕ್ಷೇತ್ರದಲ್ಲಿ ಇರುವುದರಿಂದ ನಿರೀಕ್ಷೆಯಂತೆ ನಿಮ್ಮ ಕೆಲಸಗಳು ಸಾಗಿ ನಿಮಗೆ ಫಲದಾಯಕವಾಗಿರುತ್ತದೆ. ದ್ವಾದಶದಲ್ಲಿ ಸೂರ್ಯನಿದ್ದು ಸೂರ್ಯನಾರಾಯಣನನ್ನು ಅರ್ಚನೆ ಮಾಡಿ. ಸುಖವನ್ನು ಪಡೆಯಿರಿ. ಒಟ್ಟಾರೆ ದೈವಬಲ ವೃದ್ಧಿಸಿಕೊಂಡು ನಿಮ್ಮ ಬಾಳನ್ನು ಅಂದವಾಗಿರಿಸಿಕೊಳ್ಳಿ. ಸುಂದರಕಾಂಡ ಪಾರಾಯಣವನ್ನು ನಿತ್ಯವೂ ಮಾಡಿ.

  ಕಟಕ ರಾಶಿ

  ಚಂದ್ರನ ಮನೆಯಲ್ಲಿ ಅಂಗಾರಕನು ಶುಭಾಶಯದಲ್ಲಿ ಇರುವುದಿಲ್ಲ. ಗ್ರಹ ಸ್ಥಿತಿಗಳು ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಅಷ್ಟಮದಲ್ಲಿ ಶನಿ ದಶಮದಲ್ಲಿ ಗುರು ಬೇಕಾದ್ದನ್ನು ಕೊಡಲು ನಿರಾಕರಿಸಿದರೂ ನಿಮ್ಮ ಪೂರ್ವ ಪುಣ್ಯದಿಂದ ಇಷ್ಟಾರ್ಥಗಳು ನೆರವೇರುತ್ತವೆ. ಶ್ರೀರಾಮಚಂದ್ರನನ್ನು ಪೂಜಿಸಿ. ವಿಷ್ಣುವಿನ ದಶಾವತಾರದ ನರಸಿಂಹನನ್ನು ಪೂಜಿಸಿ ಪ್ರಾರ್ಥಿಸಿ. ಸುಖವಾಗಿ ಇರುತ್ತೀರ.

  ವೃಷಭ ರಾಶಿ

  ಸೂರ್ಯನು ವೃಷಭದಲ್ಲಿ ಇದ್ದು , ಶನಿ ದಶಮ ಸ್ಥಾನದಲ್ಲಿ ಇದ್ದಾನೆ. ನಿಮಗೆ ಆಯಾಸ, ಆಲಸ್ಯ, ನೂರಾರು ಚಿಂತೆಗಳು ಮೂಡುತ್ತವೆ. ಮನ ಶಾಂತಿಯು ಪರಿಪೂರ್ಣವಾಗಿ ಇರಲು ಸಾಧ್ಯವಾಗುವುದಿಲ್ಲ. ದುರ್ಗಾಷ್ಟೋತ್ತರವನ್ನು ಪಾರಾಯಣ ಮಾಡಿ. ದುರ್ಗೆಯು ನಿಮ್ಮನ್ನು ಹರಸಿ ಮುನ್ನಡೆಸುತ್ತಾಳೆ.

  ಸಿಂಹ ರಾಶಿ

  9ರಲ್ಲಿ ಗುರು ಇದ್ದು ಸ್ವಕ್ಷೇತ್ರದಲ್ಲಿ ಶನಿಯು ಸಪ್ತಮದಲ್ಲಿ ಗತನಾಗಿದ್ದಾನೆ. ಗುರುವಿನ ಕೃಪೆಯೊಂದಿದ್ದರೆ ಛತ್ರಿ ಚಾಮರ ರಾಜ ಸನ್ಮಾನಗಳು ನಿಮಗೆ ಸಿಗುತ್ತವೆ. ಗುರುವನ್ನು ಅನಂತ ಭಕ್ತಿಯಿಂದ ಪೂಜಿಸಿ ಬೇಡಿದರೆ ಇಷ್ಟಾರ್ಥಗಳು ನೆರವೇರುತ್ತವೆ. ಕಷ್ಟವೂ ಕಳೆದು ಸುಖದ ಹಾದಿಯನ್ನು ಹಿಡಿಯುತ್ತದೆ.

  ಕನ್ಯಾ ರಾಶಿ

  ಕನ್ಯಾ ರಾಶಿಗೆ ಶನಿಯು ಶುಭಾಶಯದಲ್ಲಿ ಇದ್ದರೂ , ದೈವ ಬಲುವು ಶೂನ್ಯವಾಗಿದೆ. ಏಕೆಂದರೆ ಗುರು ಅಷ್ಟಮದಲ್ಲಿದ್ದು ರೋಗ ಋಣ ಬಾಧೆಗಳಿಂದ ಹಾಗೂ ಹಿತ ಶತ್ರುಗಳಿಂದ ತೊಂದರೆಯನ್ನು ತಂದು ಒಡುತ್ತಾನೆ. ಶನಿ ಪ್ರಾರ್ಥನೆಯನ್ನು ಮಾಡಿ. ಅಷ್ಟಮ ಗುರುವಿಗೆ ಗಾಣಗಾಪುರ ದತ್ತಾತ್ರೇಯನನ್ನು ಪೂಜಿಸಿ. ನಿತ್ಯವೂ ಗುರುಚರಿತ್ರೆಯ 11ನೇ ಅಧ್ಯಾಯವನ್ನು ಪಾರಾಯಣ ಮಾಡಿ. ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ.

  ವೃಶ್ಚಿಕ ರಾಶಿ

  ಓಡಬೇಕು ಆದರೆ ಆಯಾಸವಾಗುವ ಹಾಗೆ ಓಡಬಾರದು. ಆರಂಭದಲ್ಲಿ ನಾ ಮುಂದು ಎಂದು ಓಡಿದರೆ ದೇಹಕ್ಕೆ ಅತಿಯಾದ ಆಯಾಸ ಆಗುತ್ತದೆಯೇ ಹೊರತು ಶ್ರಮಕ್ಕೆ ಫಲ ಸಿಗುವುದಿಲ್ಲ. ಶ್ರಮ ಸಾರ್ಥಕವಾಗಬೇಕಾದರೆ ನಿಮ್ಮ ಓಟ ಬಲಿಷ್ಠವಾಗಿರಬೇಕು. ಸುಬ್ರಹ್ಮಣ್ಯನನ್ನು ಪೂಜಿಸಿದರೆ ನಿಮ್ಮ ಆರ್ಥಿಕ ಭಂಡಾರವನ್ನು ತುಂಬುತ್ತಾನೆ. ನಾಲ್ಕರಲ್ಲಿ ಶನಿ ಸ್ವಕ್ಷೇತ್ರದಲ್ಲಿ ಇರುವುದರಿಂದ ಯಾವ ಕೆಡಕನ್ನು ಉಂಟು ಮಾಡುವುದಿಲ್ಲ. ಆರರ ಗುರುವಿಗೆ ಗುರು ದತ್ತಾತ್ರೇಯ ಚರಿತ್ರೆ 14ನೇ ಅಧ್ಯಾಯ ಪಾರಾಯಣ ಮಾಡಿ ನಿಮ್ಮ ಜೀವನ ಪಾವನಗೊಳಿಸಿಕೊಳ್ಳಿ.

  ತುಲಾ ರಾಶಿ

  ಲಗ್ನದಲ್ಲಿ ಕೇತು ಇದ್ದು, ನೀವು ಗಣಪತಿಯನ್ನು ಪೂಜಿಸಿ ಪ್ರಾರ್ಥಿಸಲೆಂದೇ ಕೂತಿರುತ್ತಾನೆ. ಗಣೇಶನನ್ನು ಪೂಜಿಸಿದರೆ ವಿಘ್ನಗಳನ್ನು ಗೆದ್ದಂತೆ. ಶುಕ್ರನು 9ರಲ್ಲಿ ಕಟಕದಲ್ಲಿ ಇದ್ದು, ದುಡಿಮೆಯಿಂದ ಹೆಚ್ಚಿನ ಧನ ಲಾಭವಾಗುವ ಸೂಚನೆ ಕಾಣುತ್ತಿದೆ. ಗುರು ಸಪ್ತಮದಲ್ಲಿ ಬಂದ ಕೂಡಲೇ ಮಂಗಳ ಕಾರ್ಯವನ್ನು ಮಾಡಿಸಿ ಶುಭವನ್ನು ನೀಡಿ ಸಂತೋಷವನ್ನು ತಂದಿದ್ದಾನೆ. ತುಲಾ ರಾಶಿ ಅಧಿಪತಿಯು ಕಟಕದಲ್ಲಿ ಇರುವುದರಿಂದ ಶುಕ್ರನಿಗೆ ಶುಕ್ರ ಅಷ್ಟೋತ್ತರವನ್ನು ಪಾರಾಯಣ ಮಾಡಿ.

  ಧನುರ್ ರಾಶಿ

  ವಿದ್ಯೆಗೆ ಮಿತಿಯಿಲ್ಲ. ವೇದ ರಾಶಿಗಳನ್ನು ಇನ್ನೂ ಕಲಿಯುವ ಹಾದಿ ಯಾರಿಗೂ ತಿಳಿದಿಲ್ಲ. ಧನುರ್ ರಾಶಿಯಲ್ಲಿ ಹುಟ್ಟಿರುವ ನೀವು ಮತ್ತೊಬ್ಬರಿಗೆ ಸಹಾಯವನ್ನು ಮಾಡಿದರೆ ಧನ, ಸಂತೋಷ, ಸುಖವನ್ನು ದೇವರು ನೀಡುವ ಸಮಯವಿರುವುದು. ಸಮಯ ವ್ಯಯ ಮಾಡಿದರೆ ಧನ ವ್ಯಯ ಮಾಡಿದಂತೆ . ಇದು ನೀವು ಧನವನ್ನು ಸಂಪಾದಿಸುವ ಸಮಯವೆಂದು ಸೂಚಿಸುತ್ತದೆ. ದೈವ ಕೃಪೆ ಇರಲಿ. ಚಂಡಿಕಾ ಪಾಠದ ಒಂದೊಂದು ಅಧ್ಯಾಯವನ್ನು ಪ್ರತಿದಿನವೂ ಪಾರಾಯಣ ಮಾಡಿ ಶುಭವನ್ನು ಕಂಡುಕೊಳ್ಳಿ.

  ಮೀನ ರಾಶಿ

  ದ್ವಾದಶದಲ್ಲಿ ಶನಿಯ ಸಂಚಾರವಿದ್ದರೂ ಮಾಡುವ ಕೆಲಸಗಳಲ್ಲಿ ಅಡೆತಡೆಗಳು ಬರಬಹುದು. ಅದನ್ನೇ ಎಣಿಸಿ ಕುಳಿತರೆ ಜೀವನವು ಮುಂದೆ ಸಾಗದು. ನಿಮ್ಮ ಜೀವನದ ದೋಣಿಯನ್ನು ಸಾಗಿಸಿ, ದೇವರೇ ದಡವನ್ನು ಸೇರಿಸುತ್ತಾನೆ. ದೃಢವಾದ ಗುರು ಭಕ್ತಿ ಇರಲಿ. ಶನಿ ಸಂಚಾರದಲ್ಲಿ ಆಧ್ಯಾತ್ಮ ರಾಮಾಯಣ ಪಾರಾಯಣ ಮಾಡಿದರೆ, ಕಷ್ಟಗಳನ್ನು ತೀರಿಸಿ ನಷ್ಟವಿಲ್ಲದೆ ದೇವರು ನಿಮ್ಮನ್ನು ಮುನ್ನಡೆಸುತ್ತಾನೆ.

  ಕುಂಭ ರಾಶಿ

  ಮೇಷದಲ್ಲಿ ಗುರು ರಾಹು ಸ್ಥಿತರಾಗಿದ್ದು , ನಿಮ್ಮಕುಲಗುರುಗಳನ್ನು ಸಂದರ್ಶಿಸಿ. ಕೃಷ್ಣಾಷ್ಟೋತ್ತರವನ್ನು, ನಾಗರಾಜ ಅಷ್ಟೋತ್ತರವನ್ನು ಪಾರಾಯಣ ಮಾಡಿದರೆ ನಿಮ್ಮ ಕೆಲಸಗಳು ಮುಂದೆ ಸಾಗಿ ಅಧಿಕ ಲಾಭ ಒದಗಿಬರುತ್ತದೆ. ಏನು ಮಾಡಬೇಕು ಏನು ಮಾಡಬಾರದೆಂಬ ಸೂಚನೆಯನ್ನು ಕೊಟ್ಟು ನಿಮ್ಮನ್ನು ಸಂರಕ್ಷಿಸುತ್ತಾರೆ. ಲಗ್ನದಲ್ಲೇ ಶನಿ ಇರುವುದರಿಂದ ನಕಾರಾತ್ಮಕ ಚಿಂತನೆಗಳಿಗೆ ಅವಕಾಶ ಬೇಡ. ಸ್ಥಿರ ಮನಸ್ಸಿದ್ದರೆ ಕೆಲಸಗಳನ್ನು ಗೆಲ್ಲುವ ಛಲ ಮೂಡಿ ಜೀವನವು ಸಾಕಾರಗೊಳ್ಳುತ್ತದೆ.

  ಮಕರ ರಾಶಿ

  ಮನಸಂಂಕಲ್ಪ ಒಂದಿದ್ದರೆ ಏನನ್ನಾದರೂ ಸಾಧಿಸಬಹುದು. ಟೈಮ್​ವುನಿ ಎಂಬುದು ಆಂಗ್ಲ ಭಾಷೆಯ ನಾಣ್ಣುಡಿ . ಸಮಯಕ್ಕೆ ಸರಿಯಾಗಿ ಎದ್ದು ನಿಮ್ಮ ಕೆಲಸವನ್ನು ಮಾಡಿದರೆ, ಈಶ್ವರನನ್ನು ಪೂಜಿಸಿದರೆ ದ್ವಾದಶ ಶನಿಯು ಪ್ರೀತ್ಯರ್ಥ ಗೊಂಡು ಶುಭವನ್ನು ತರುತ್ತಾನೆ. ಗುರುವಿಗಾಗಿ ಪ್ರತಿ ಸೋಮವಾರ ಈಶ್ವರನನ್ನು ಪೂಜಿಸಿ. ಮನಸ್ಸಿಗೆ ಶಾಂತಿಯು ಸಿಕ್ಕು ನಿಮ್ಮ ಕಾರ್ಯಗಳಲ್ಲಿ ಜಯ ದೊರೆತು ಸಾಕಷ್ಟು ಲಾಭವಾಗುತ್ತದೆ.

  ಯುವನಿಧಿ ಯೋಜನೆ ಅನುಷ್ಠಾನಕ್ಕೆ ಆದೇಶ; ಏನಿದೆ ಷರತ್ತು? ತಪ್ಪಿಗೆ ದಂಡವೂ ಇದೆ ಎಚ್ಚರಿಕೆ!

  ಕಾಂಗ್ರೆಸಿಗರಿಂದ ಕಾನೂನು ಕಿರುಕುಳ; ಬಿಜೆಪಿ ಕಾರ್ಯಕರ್ತರಿಗಾಗಿ ಹೆಲ್ಪ್​ಲೈನ್​: ಸಂಸದ ತೇಜಸ್ವಿ ಸೂರ್ಯ

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts