More

    ಈ ರಾಶಿಯವರು ಹಣ್ಣನ್ನು ಹೆಣ್ಣನ್ನು ಮುಟ್ಟುವುದರಲ್ಲಿ ಎಚ್ಚರ ಇರಬೇಕು: ವಾರಭವಿಷ್ಯ

    ಈ ರಾಶಿಯವರು ಹಣ್ಣನ್ನು ಹೆಣ್ಣನ್ನು ಮುಟ್ಟುವುದರಲ್ಲಿ ಎಚ್ಚರ ಇರಬೇಕು: ವಾರಭವಿಷ್ಯಮೇಷ ರಾಶಿ

    ರಾಶಿಯಲ್ಲಿ ರಾಹು, ಸಪ್ತಮದಲ್ಲಿ ಕೇತು ಇರುವುದರಿಂದ ಸಮಯವು ನಮ್ಮಂತೆ ನಡೆಯುವುದಿಲ್ಲ. ಜಗತ್ತೇ ದೈವಾಧೀನವಾಗಿದ್ದು, ಭಾದ್ರಪದ ಶುದ್ಧ ಚೌತಿಯ ದಿನ ವರಸಿದ್ದಿ ವಿನಾಯಕನ ಪೂಜೆಯನ್ನು ಮಾಡಿದ್ದೇ ಆಗಿದ್ದಲ್ಲಿ ವಿನಾಯಕನ ಪೂಜೆಯಲ್ಲಿ ಭಾಗವಹಿಸಿದ್ದೇ ಆದರೆ ಕೇತುವಿನ ಅನುಗ್ರಹ ಪಡೆದು ಒಳ್ಳೆಯ ವರವನ್ನು ಪಡೆಯುತ್ತಿರೆಂದು ಹೇಳಬಹುದು. ರಾಹುವಿನ ಚಲನಕ್ಕೆ ಕಾದಿರಿ. ಸುಬ್ರಹ್ಮಣ್ಯನನ್ನು ಪೂಜಿಸಿ. ಸಂಕಷ್ಟಗಳು ದೂರವಾಗಿ ಸುಖವು ಬಂದು ಸೇರುವುದು.

    ವೃಷಭ ರಾಶಿ

    ವೇದ ಸಮ್ಮತವಾದ ವಚನದಲ್ಲಿ ಗತಂ ಅಶೋಚಾಯೇತ್ ಪ್ರಜ್ಞಹ. ಕಳೆದು ಹೋದ ದುಃಖ ವಿಚಾರಗಳು, ಮನಸ್ಸಿಗೆ ನೋವಿರಲಿ, ನಲಿವಿರಲಿ ಎಲ್ಲವನ್ನೂ ಮರೆತು ಮುಂದೆ ಸಾಗಬೇಕು. ಮನುಷ್ಯನು ಜೀವನವನ್ನು ಅರ್ಥೈಸಿಕೊಂಡು ಸಾಗಬೇಕು.ಅಸತ್ಯ ಮಾತನಾಡಬಾರದು. ಹಣ್ಣನ್ನು ಹೆಣ್ಣನ್ನು ಮುಟ್ಟುವುದರಲ್ಲಿ ಎಚ್ಚರ ಇರಬೇಕು. 13 ಅಕ್ಟೋಬರ್ ಒಳ್ಳೆಯ ಕಾಲ. ನಾಗರಾಜ ಅಷ್ಟೋತ್ತರ ಪಠಿಸಿ.

    ಮಿಥುನ ರಾಶಿ

    ಈ ರಾಶಿಯವರಿಗೆ ಗುರು ಶನಿ ಶುಭ ಸ್ಥಾನದಲ್ಲಿ ಇದ್ದು ಒಳ್ಳೆಯದನ್ನು ಗ್ರಹಗಳು ಕೊಡಲಿಲ್ಲವೆಂದರೆ ಮನುಷ್ಯನ ಪ್ರಾರಬ್ಧ ಕಾರಣ. ಅದರಿಂದ ಹೊರ ಬರಬೇಕಾದರೆ ಮಿಥುನ ರಾಶಿಯವರು ದೇವರ ಮುಂದೆ ನಿಂತು ನಮ್ಮಿಂದ ಯಾವುದಾದರೂ ತಪ್ಪು ನಡೆದಿದ್ದರೆ ಅನ್ಯರ ವ್ಯಕ್ತಿತ್ವ ಹಾಳು ಮಾಡಿದ್ದರೆ, ಅದನ್ನು ದೇವರ ಮುಂದೆ ಒಪ್ಪಿಕೊಂಡು ಪ್ರಕಟಪಡಿಸಿದರೆ ನಿಮ್ಮಏಳಿಗೆಗೆ ಕಾರಣ ಆಗುತ್ತದೆ. ಮಿಥುನ ರಾಶ್ಯಾಧಿಪತಿ ವಿಷ್ಣುವೇ ಆಗಿರುವುದರಿಂದ ತಿರುವನಂತಪುರದ ಅನಂತ ಪದ್ಮನಾಭನನ್ನು ಅನಂತ ವಾಗಿ ಪ್ರಾರ್ಥಿಸಿ.

    ಕಟಕ ರಾಶಿ

    ಪರಮಾತ್ಮನು ಮನುಷ್ಯನನ್ನು ಅಷ್ಟಂಗದಲ್ಲಿ ಸೃಷ್ಟಿ ಮಾಡಿದ್ದಾನೆ. ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆಯಿರಿ. ಒಂದೊಂದು ಅಂಗ ಮನುಷ್ಯನಿಗೆ ಸೌಂದರ್ಯ ಕೊಡುತ್ತದೆ. ದೇವರು ಕೊಟ್ಟ ಎಲ್ಲ ಅಂಗಾಂಗಗಳನ್ನು, ಅದರಲ್ಲೂ ಕೈ ಕಾಲು ಕಣ್ಣು ಇವುಗಳನ್ನು ಶ್ರೇಷ್ಠ ಮಟ್ಟದಲ್ಲಿ ಕಾಪಾಡಿಕೊಳ್ಳಿ. ಶುದ್ಧವಾದ ಆಹಾರ ಸೇವಿಸಿ. ಎಲ್ಲರ ಆತ್ಮ ಮಂದಿರದಲ್ಲಿ ಮಹಾ ವಿಷ್ಣು ಹೃದಯ ಸಿಂಹಾಸನದಲ್ಲಿ ಕುಳಿತಿದ್ದಾನೆ. ವಿವೇಚನೆ ಇಲ್ಲದೆ ಕೆಲಸವನ್ನು ಮಾಡಿ ತೊಂದರೆಪಡಬೇಡಿ. ನಿಮ್ಮ ಬಾಳನ್ನು ತಿದ್ದಿಕೊಂಡು ತೃಪ್ತಿ ಕಾಣಿರಿ. ಚಂದ್ರ ಅಷ್ಟೋತ್ರರ, ರಾಮಾ ಅಷ್ಟೋತ್ತರ ಪಾರಾಯಣ ಮಾಡಿ. ತಿಂಗಳಿಗೆ ಒಮ್ಮೆ 5 ದಿನ ಸುಂದರ ಕಾಂಡ ಪಾರಾಯಣ ಮಾಡಿ.

    ಕನ್ಯಾ ರಾಶಿ

    ಕಾವೇರಿಯ ಪಶ್ಚಿಮ ದಂಡೆಯಲ್ಲಿ ನೆಲೆಸಿರುವ ಶ್ರೀರಂಗನಾಥನನ್ನು ಪೂಜಿಸಿದರೆ ದಾರಿದ್ರ್ಯ ದುಃಖ ದೂರವಾಗಿ ಹರ್ಷದ ಹೊನಲು ತುಂಬಿ ಬರುತ್ತದೆ. ತಪ್ಪು ಮಾಡಿದವನು ಮಾಡಿದ ತಪ್ಪಿಗೆ ಭಗವಂತನಲ್ಲಿ ನಿವೇದನೆ ಮಾಡಿದರೆ ನೀವು ಮಾಡಿದ ಕೆಲಸದಲ್ಲಿ ಶ್ರೇಯಸ್ಸೂ ದೊರೆಯುತ್ತದೆ. ಅನ್ಯರ ಧನ ಇಟ್ಟುಕೊಳ್ಳಬೇಡಿ. ಶುದ್ಧ ಮನಸ್ಸಿನಿಂದ ಇದ್ದರೆ ದೇವರು ಶುಭ ಫಲವನ್ನೇ ಕೊಡುತ್ತಾನೆ. ಅಷ್ಟಮ ಗುರುವಿಗೆ ಗುರು ದತ್ತಾತ್ರೇಯನನ್ನು ಪೂಜಿಸಿ, ಪ್ರಾರ್ಥಿಸಿ.

    ಸಿಂಹ ರಾಶಿ

    ಗುರುವು 9ರಲ್ಲಿ ಇದ್ದರೂ ರಾಹುವಿನ ಸಂಪರ್ಕದಲ್ಲಿ ಇದ್ದು, ಇನ್ನೇನು ಕೆಲಸ ಆಗಿದೆ ಎಂದು ತಿಳಿಯುವುದರಲ್ಲಿ ಮತ್ತೆ ಎಲ್ಲಿಂದಲೋ ನಿಮ್ಮ ಕಾರ್ಯಗಳಿಗೆ ತಡೆ ಉಂಟಾಗುತ್ತದೆ. ಜೀವನದಲ್ಲಿ ಕತ್ತಲು, ಬೆಳಕು ಸಹಜವಾದ ಪ್ರಕ್ರಿಯೆ. ಸೂರ್ಯನ ರಾಶಿಯಲ್ಲಿ ಹುಟ್ಟಿದ ನಿಮ್ಮ ಸುತ್ತಲೂ ಬೆಳಕು ಸದಾ ಇರುತ್ತದೆ. ಸುಬ್ರಮಣ್ಯನನ್ನು ಅರ್ಚಿಸಿ. ಸೂರ್ಯನಾರಾಯಣ ಅಷ್ಟೋತ್ತರ ಪಠಿಸಿ. ನಿಮ್ಮ ಕೆಲಸ ಕೈಗೂಡುತ್ತದೆ.

    ತುಲಾ ರಾಶಿ

    ತುಲಾ ರಾಶಿಯವರಿಗೆ ಸಪ್ತಮದಲ್ಲಿ ಗುರು ಇರುವುದರಿಂದ ಶನಿ ಪಂಚಮದಲ್ಲಿ ಇದ್ದರೂ ನೀವು ಕಳೆದುಕೊಳ್ಳುವುದು ಏನೂ ಇಲ್ಲ. ಅತಿಯಾದ ಕೆಲಸ ಮಾಡಿ ಮನಸ್ಸನ್ನು ಕೆಡಿಸಿಕೊಂಡರೆ ಅಶಾಂತಿ ಮೂಡುತ್ತದೆ. ದೈವ ಚಿಂತನೆ ಇರಲಿ. ಏನನ್ನಾದರೂ ಸಾಧಿಸಬಹುದು; ಎಲ್ಲವನ್ನೂ ಗೆಲ್ಲಬಹುದು. 24 ಗಂಟೆಯಲ್ಲಿ 24 ನಿಮಿಷವಾದರೂ ದೈವವನ್ನು ಪ್ರಾರ್ಥಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.

    ವೃಶ್ಚಿಕ ರಾಶಿ

    ಗುರು ಎಂಬ ವಸ್ತು ಅಂಗಡಿಯಲ್ಲಿ ಸಿಗುವುದಿಲ್ಲ. ಗುರು ಎಲ್ಲೆ ಇದ್ದರೂ ಕರುಣೆಯಿಂದ ಸಲಹುತ್ತಾನೆ. ಇಂತಹ ಕರುಣಾಮಯಿ ಗುರುವನ್ನು ಪ್ರಾರ್ಥಿಸಿ. ಬರಬೇಕಾದ ಹಣದ ಗಂಟನ್ನು ನಿಮ್ಮ ಮನೆಗೆ ಅವನೇ ತಲುಪಿಸುತ್ತಾನೆ. ಸಾಧನೆಯ ಶುಭ ಫಲವು ಧನ ರೂಪದಲ್ಲಿ ಸಿಗುತ್ತದೆ. ಸುಬ್ರಮಣ್ಯನ ಪೂಜೆ ಇರಲಿ. ನಿಮ್ಮ ಗುರುಗಳನ್ನು ದರ್ಶಿಸಿ ಬನ್ನಿ. ಒಳ್ಳೆಯದಾಗುತ್ತದೆ.

    ಧನುರ್ ರಾಶಿ

    31 ಡಿಸೆಂಬರ್​ವರೆಗೂ ಶರವೇಗದಲ್ಲಿ ಓಡಿ ಆಯಾಸ ಪಡದಿರಿ. ಗುರು, ಶನಿ ತಮ್ಮ ವಕ್ರ ಗತಿ ಕಳೆದ ನಂತರ ನಿಮ್ಮ ಆಶೋತ್ತರಗಳು ಈಡೇರುವುದು. ಯಾವ ಯಾವ ದೇವರನ್ನಾದರೂ ಪೂಜಿಸಿ, ಯಾವ ದೇವರ ಸ್ತುತಿಯನ್ನಾದರೂ ಮಾಡಿ. ಎಲ್ಲವೂ ಏಕರೂಪಿ ಆದ ವಿಷ್ಣುವನ್ನೂ ಈಶ್ವರನನ್ನೂ ತಲುಪುತ್ತದೆ. ನಿತ್ಯ ಗುರುಚರಿತೆ ಪಾರಾಯಣ ಮಾಡಿ. ಪ್ರಾತಃ ಕಾಲದಲ್ಲಿ ನಿತ್ಯ ಒಂದು ಅಧ್ಯಾಯ ಓದಿ. ದೈವ ಬಲ, ಬುದ್ಧಿ ಬಲ ಹೆಚ್ಚಿಸಿಕೊಳ್ಳಿ. ನಿಮಗೆ ರಾಜ ಯೋಗವು ಬರುವ ದಿನ ಹತ್ತಿರದಲ್ಲಿದೆ.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಎನ್​.ಎಂ. ಸುರೇಶ್ ಆಯ್ಕೆ

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts