19.5 C
Bangalore
Wednesday, December 11, 2019

ವಾರ ಭವಿಷ್ಯ: ಈ ರಾಶಿಯವರು ಮಕ್ಕಳ ವಿಷಯದಲ್ಲಿ ಮೃದುವಾಗಿ ವರ್ತಿಸಿ. ಇಲ್ಲದಿದ್ದರೆ ಮನಸ್ತಾಪ ಬೆಳೆಯುತ್ತದೆ.

Latest News

ತಳೇವಾಡ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು: ಇಂದು ಮೃತ ದೇಹ ಪತ್ತೆ

ವಿಜಯಪುರ: ಕೆರೆಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ತಳೇವಾಡ ಗ್ರಾಮದಲ್ಲಿ ಸಂಭವಿಸಿದೆ. ಸುದೀಪ (10)...

ಗ್ರಾಹಕರಿಗೆ ಸಿಹಿ ಸುದ್ದಿ: ಹೊಸ ಬೆಳೆಯ ಆಗಮನದಿಂದ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಇಳಿಕೆ

ನವದೆಹಲಿ: ಇತ್ತೀಚಿನ ವಾರಗಳಲ್ಲಿ ಗ್ರಾಹಕರಿಗೆ ಗಗನಕುಸುಮವಾಗಿದ್ದ ಈರುಳ್ಳಿ ಬೆಲೆಯು ಕೊಂಚ ಕೊಂಚವಾಗಿ ಇಳಿಯುವ ಲಕ್ಷಣಗಳು ಕಾಣುತ್ತಿವೆ. ರೈತರು ಹೊಸ ಬೆಳೆಯನ್ನು ಗುಜರಾತ್​ ಮತ್ತು...

ನ್ಯೂಜೆರ್ಸಿ ಕಿರಾಣಿ ಅಂಗಡಿಯಲ್ಲಿ ಶಂಕಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ : 6 ಮಂದಿ ಸಾವು

ನ್ಯೂಯಾರ್ಕ್: ನ್ಯೂಜೆರ್ಸಿ ನಗರದ ಜೆರ್ಸಿಯಲ್ಲಿರುವ ಕಿರಾಣಿ ಅಂಗಡಿಯಲ್ಲಿ ಅಡಗಿ ಕುಳಿತ​ ಶಂಕಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಇಬ್ಬರು...

ಸಿಎಂ ಬಿಎಸ್​ವೈ ಪುತ್ರ ವಿಜಯೇಂದ್ರರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಬುಲಾವ್​!

ಬೆಂಗಳೂರು: ಉಪಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಬಹುತೇಕ ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರವನ್ನು ಸುಭದ್ರ ಮಾಡಿಕೊಂಡಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಮಂಡ್ಯದ ಕೆ.ಆರ್​.ಪೇಟೆ...

ಜೋಳದ ಬೆಲೆ ಏರಿಕೆ: ರೊಟ್ಟಿಯೂ ಈಗ ಬಲು ತುಟ್ಟಿ!

ಲಕ್ಷ್ಮೇಶ್ವರ: ರೊಟ್ಟಿ ತಿಂದವನೇ ಬಲು ಗಟ್ಟಿ ಎಂಬುದು ಉತ್ತರ ಕರ್ನಾಟಕದ ನಾಣ್ಣುಡಿ. ಆದರೆ, ಈಗ ರೊಟ್ಟಿಯೂ ತುಟ್ಟಿಯಾಗುತ್ತಿದೆ. ಜೋಳದ ಬೆಲೆ ದಿನೇದಿನೆ...

ಮೇಷ: ನೀವು ಶಾಂತವಾಗಿದ್ದರೂ ನಿಮ್ಮನ್ನು ಅಶಾಂತ ರೂಪಕ್ಕೆ ತಳ್ಳುವವರನ್ನು ನೀವು ಎದುರಿಸಬೇಕಾಗುತ್ತದೆ. ಗೆಲ್ಲುವುದು ನಿಮಗೆ ಸಾಧ್ಯವಾದರೂ ನಿಮ್ಮ ಚೈತನ್ಯವನ್ನು ಕಲಕುವ ವಿಚಾರ ಹೆಚ್ಚು ಸ್ಪಷ್ಟ. ವ್ಯಾಪಾರದಲ್ಲಿ ಹೊಸದು, ಹಳೆಯದು ಎಂಬ ಎರಡೂ ದಾರಿಯ ಬಗೆಗೆ ಜ್ಞಾನವಿರಲಿ. ಆಧುನಿಕತೆಯ ಜತೆಗೆ ಹಳೆಯ ವಿಧಾನಗಳನ್ನೂ ಸೂಕ್ಷ್ಮವಾಗಿ ಬೆರೆಸಿ. ಸಹೋದರರ ಜತೆಗೆ ಹೊಂದಿಕೊಂಡು ಹೋಗಬೇಕಾದದ್ದು ಅನಿವಾರ್ಯ. ಒಂದು ಮಾತು ಜಾಸ್ತಿಯಾಗಿ ಬಂದರೂ ಜಾಣ್ಮೆಯಿಂದ ನಿಭಾಯಿಸಿ. ಆ ಶಕ್ತಿ ನಿಮಗಿದೆ. ಅನ್ನಪೂರ್ಣೆಶ್ವರಿಯನ್ನು ಸ್ತುತಿಸಿ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 3

ವೃಷಭ: ಧೈರ್ಯವನ್ನು ಹೊಂದಿರಿ. ಶನೈಶ್ಚರನು ಯೋಗಕಾರಕನಾಗಿರಬೇಕಾದವನು ಅಸ್ತವ್ಯಸ್ತಗೊಂಡಿದ್ದಾನೆ.ಚಂದ್ರನು ಭೀತ ಸ್ಥಿತಿಯಲ್ಲಿಡುತ್ತಾನೆ. ಆದರೆ ಇಳಿಹೊತ್ತಿನಲ್ಲಿ ಒಂದು ಚಿಕ್ಕ ಸೌಭಾಗ್ಯದೀಪವನ್ನು ದುರ್ಗಾಗೆ ಬೆಳಗಿ ಧ್ಯಾನಾಸಕ್ತರಾಗಿ. ರಾಮರಕ್ಷಾ ಸ್ತೋತ್ರ ಓದಿ. ಧನಧಾನ್ಯಾದಿಗಳನ್ನು ಸುವ್ಯವಸ್ಥಿತವಾಗಿ ಭದ್ರಗೊಳಿಸಿಕೊಳ್ಳುವಲ್ಲಿ ಇದರಿಂದ ಒಳಿತಿದೆ. ಚಿನ್ನಾಭರಣ ವ್ಯಾಪಾರದಲ್ಲಿ ಇರುವವರಾಗಿದ್ದರೆ ಆಳುಮಕ್ಕಳ ಬಗ್ಗೆ ಎಚ್ಚರ ಇರಲಿ. ಆಸ್ತಿಯ ವಿಚಾರದಲ್ಲಿ ಬಿಗಿಯಾಗಿರಿ. ಕಾಗದ ಪತ್ರ ಮತ್ತು ಕಡತಗಳನ್ನು ಭದ್ರವಾಗಿರಿಸಿಕೊಳ್ಳಲು ಮರೆಯದಿರಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 1

ಮಿಥುನ: ರಾಹುಪೀಡೆಯಿಂದಾಗಿ ಜತೆಗೆ ಇರದೆ ಯಾವುದೋ ನಿಗೂಢ ಶಕ್ತಿಯ ಜತೆ ಮಾತನಾಡುವ ಎಂದನಿಸುತ್ತಿರುತ್ತದೆ. ಆದರೆ ಜಾತಕದಲ್ಲಿ ಪ್ರಬಲ ಗುರುಗ್ರಹ ಅಥವಾ ಬುಧ ಗ್ರಹ ಜತೆಗೂಡಿರುವ ಉತ್ತಮ ಯೋಗ ಇದ್ದಲ್ಲಿ ದೈವಶಕ್ತಿಯೇ ನಿಮ್ಮ ಜತೆ ಅನುಗ್ರಹಿಸುವಂತಾಗಲು ರಾಹುಗ್ರಹವೇ ಬೆಂಬಲ ನೀಡುತ್ತದೆ. ಅಧಿಕಾರ ಯೋಗ, ಡಬಲ್ ಪ್ರಮೋಷನ್, ಉತ್ತಮವಾದ ಅರ್ಥಪೂರ್ಣ ಪುರಸ್ಕಾರಗಳಿಗೆ ನಿಮ್ಮ ದಾರಿ ತೆರೆದುಕೊಳ್ಳುವ ಬೆಳವಣಿಗೆ ಚಿಗುರಿಕೊಳ್ಳುತ್ತದೆ. ಗುರುಬಲವನ್ನು ಪಡೆದಿದ್ದೀರಿ. ಬಾಲಗಣಪತಿಯನ್ನು ಆರಾಧಿಸಿ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 6

ಕಟಕ: ಜ್ಯೇಷ್ಠೆಯನ್ನು ಆರಾಧಿಸಿದರೆ ಹಣ ಕಳೆದುಕೊಳ್ಳುವ ಯೋಗ ದೂರವಾಗಲು ಸಾಧ್ಯ. ಮರೆಗುಳಿತನ ತೊಂದರೆ ತರಬಹುದು. ನಿಮ್ಮ ಮಕ್ಕಳ ವಿಷಯದಲ್ಲಿ ಮೃದುವಾಗಿ ವರ್ತಿಸಿ. ಇಲ್ಲದಿದ್ದರೆ ಮನಸ್ತಾಪ ಬೆಳೆಯುತ್ತದೆ. ‘ಓಂ ಅಘೊರ ರುದ್ರ ಪ್ರಚೋದಯಾತ್’ ಎಂಬ ಮೂಲಮಂತ್ರ ಪಠಿಸಿ. ಯಾವುದೇ ಭಯಾನಕವಾದ ವರ್ತಮಾನವನ್ನು ನಿಯಂತ್ರಿಸುವ ಶಕ್ತಿ ಪಡೆಯುತ್ತೀರಿ. ವಾಯವ್ಯ ದಿಕ್ಕಿನ ಲಾಭಕರ ವಿಚಾರವೊಂದು ವರವಾಗಿ ಬರಲಿದೆ. ತಲೆಹರಟೆ ಎಂದು ತಿಳಿದುಕೊಂಡ ವ್ಯಕ್ತಿಯೇ ಅನೂಹ್ಯವಾದ ಒಳಿತೊಂದಕ್ಕೆ ದಾರಿ ತೆರೆಯುವ ಅವಕಾಶ ಇದೆ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 9

ಸಿಂಹ: ನಿಮ್ಮ ವರ್ತಮಾನಕ್ಕೆ ಏನೋ ಅಡೆತಡೆಗಳು, ಸ್ವಪ್ನ ಭ್ರಾಂತಿಗಳು ಎದುರಾಗಿ ನಿಮ್ಮನ್ನು ಹಣ್ಣು ಮಾಡುತ್ತವೆ. ವಾಯು ಪುತ್ರ ಕಲಿ ಹನುಮನನ್ನು ಧ್ಯಾನಿಸಿ. ಆಕಸ್ಮಿಕ ಅವಘಡ, ಅನಾರೋಗ್ಯಗಳಿಂದ ಮುಕ್ತಿ ಎಂದು ಶಾಸ್ತ್ರ ಶ್ರುತಪಡಿಸುತ್ತಿದೆ. ಅಧಿಕಾರವೂ ಧನಬಲವೂ ವ್ಯವಹಾರ-ವಹಿವಾಟಿನಲ್ಲಿ ಸಮೃದ್ಧಿಯೂ ಇರುವಲ್ಲಿ ಅಸಹಾಯಕತೆಯಿಂದ ಏನೂ ಬೇಡ ಎಂಬ ಎಂಬ ಭಾವನೆ ಬರುತ್ತದೆ. ಆದರೆ ನಿಮ್ಮ ಕ್ರಿಯಾಶೀಲತೆಯನ್ನು ದೃಢವಾಗಿ ನಂಬಿ. ಕಳವಳದ ದಾರಿಯಲ್ಲೂ ಸರ್ರನೆ ಮಿಂಚೊಂದು ಪೂರ್ಣ ರೇಖೆಗೆ ದಾರಿ ಮಾಡುತ್ತದೆ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 2

ಕನ್ಯಾ: ಸಿಟ್ಟು ಬೇಡ. ‘ಸಿಟ್ಟು ಬರುವ ಹಾಗೆ ಮಾಡಿದರು, ಹಾಗಾಗಿ ರೌದ್ರಾವತಾರ ಪ್ರದರ್ಶಿಸಬೇಕಾಯಿತು’ ಎನ್ನುವುದೂ ಬೇಡ. ಮೈಂಡ್​ಗೇಮ್ ನಡೆಯುತ್ತಿರುತ್ತದೆ. ವಿರೋಧಿಗಳು ಇದನ್ನು ನಡೆಸಿಯೇ ತಿರುತ್ತಾರೆ. ಕೆಲಸದ ಸ್ಥಳದಲ್ಲಿ ಒತ್ತಡ, ವಿನಾಕಾರಣ ಕಿರುಕುಳ, ಬೇರೆ ಕೆಲಸ ಹುಡುಕೋಣ ಎಂದರೆ ಏನೋ ಒಂದು ಅಡೆತಡೆ ಇರುತ್ತವೆ. ಮಾನಸಿಕ ಸ್ಥೈರ್ಯದೊಂದಿಗೆ ಹೆಜ್ಜೆ ಇಡುವಿರಾದರೆ ಗೆದ್ದು ಬೀಗುತ್ತೇನೆ ಎಂಬುದರ ಬದಲು ಸೋತು ಗೆಲ್ಲುತ್ತೇನೆ ಎಂಬುದಾಗಿ ದೃಢ ನಿಶ್ಚಯ ಹೊಂದುವಿರಾದರೆ ಯಶಸ್ಸಿದೆ. ಬಿಲ್ಡರ್​ಗಳಾಗಿದ್ದರೆ ರಾಹು ಪೀಡೆ ಇದೆ. ಜಗನ್ಮಾತೆ ತ್ರಿಪುರ ಸುಂದರಿಯನ್ನು ಸ್ತುತಿಸಿ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 7

ತುಲಾ: ಮನೆಯ ಕುರಿತು ಹಣ ತೊಡಗಿಸಿದ್ದರೆ ತಲೆನೋವಿಗೆ ಅವಕಾಶವಿದೆ. ನರಸಿಂಹ ಕರಾವಲಂಬ ಸ್ತೋತ್ರ ಪಠಣ ನಡೆಸಿ. ಸಿನಿಮಾ ಹಂಚಿಕೆದಾರರು, ಕಾಂಟ್ರಾಕ್ಟರ್​ಗಳಿಗೆ ಬಿಗುವಿನ ದಿನಗಳು. ಭತ್ತದ (ಅಕ್ಕಿ) ಅರಳಿಗೆ ಮೊಸರು ಹಾಗೂ ತೆಂಗಿನ ತುರಿ ಬೆರೆಸಿ ಉಪ್ಪು ಹಾಕಿರದ ನೈವೇದ್ಯವನ್ನು ನಿಮಿಷಾಂಬೆಗೆ ಮಾಡಿ. ಅಡೆತಡೆಗಳಿರುವ ವ್ಯಾಜ್ಯಗಳಿಂದ ತುಂಬಿದ ವರ್ತಮಾನದಲ್ಲಿ ಪ್ರಾಪ್ತಿಯ ಸಲುವಾಗಿನ ಗೆಲುವಿಗೆ ಇದರಿಂದ ದಾರಿ. ಮಕ್ಕಳ ಬಗ್ಗೆ ಎಚ್ಚರ ಇರಲಿ. ಬಾಳಸಂಗಾತಿಯ ಆರೋಗ್ಯದ ಬಗ್ಗೆ ಗಮನ ಕೊಡಿ. ನಿಶ್ಚಿತ ಕಾರಣವಿರದೆ ವಜ್ರಧಾರಣೆ ಮಾಡಬಾರದು.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 5

ವೃಶ್ಚಿಕ: ಓಂ ಗುರುದೇವಾಯ ವಿದ್ಮಹೇ, ಪರಬ್ರಹ್ಮಾಯ ಧೀಮಹಿ, ತನ್ನೋ ಶ್ರೀ ಗುರು ಪ್ರಚೋದಯಾತ್ ಎಂಬುದಾಗಿ ಸದ್ಗುರುವಿನ ಧ್ಯಾನ 108 ಬಾರಿ ಮಾಡಿ. ಸಾಡೇಸಾತಿ ದಿನಗಳು ಮುಗಿಯುತ್ತ ಬಂದಿದ್ದರೂ ನಿರಾಳವಾಗಿ ಇರಲು ಆಗದು. ನಿಮ್ಮ ಕೆಲಸದ ವಿಷಯದ ಷಡ್ಯಂತ್ರವೊಂದನ್ನು ನಿರ್ವಿುಸಿ ಕಿರುಕುಳ ನೀಡುವ ತಯಾರಿಯು ಯಾರಿಂದಲೋ ನಡೆಯುತ್ತಿರಬಹುದು. ಅಸೂಯೆಯಿಂದ ವಿರೋಧಿಗಳು ಏನು ಬೇಕದರೂ ಮಾಡಬಹುದು. ಕಳತ್ರ ದೋಷ ನಿವಾರಣೆ ಆಗಬೇಕು. ದತ್ತಾತ್ರಯನನ್ನು ಸ್ತುತಿಸಿ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 8

ಧನು: ಹಣ ಕೊಡುವ, ಕೊಡಿಸುವ ಉಪದ್ವ್ಯಾಪ ಬೇಡ. ರೇಸು, ಮಟ್ಕಾ, ಬೆಟ್ಟಿಂಗ್, ಲಾಟರಿ ವ್ಯವಹಾರಗಳಲ್ಲಿ ಹಣ ತೊಡಗಿಸಲು ಮನಸ್ಸಾಗಬಹುದು. ನಿಮ್ಮ ರಾಶ್ಯಾಧಿಪನನ್ನು ಆವರಿಸಿರುವ ಕೇತು, ಶನೈಶ್ಚರ ಹಾಗೂ ಶುಕ್ರ ಗ್ರಹಗಳು ವರ್ತಮಾನವನ್ನು ನಿಂತ ನೀರಾಗಿಸಿದ್ದು ಸಾಡೇಸಾತಿ ಕಾಟ ಸಾಗಿದೆ. ಮಕ್ಕಳು ನಿಮ್ಮ ಕುರಿತಾಗಿ ಮಧುರ ಭಾವನೆಗಳೊಂದಿಗೆ ಬೆಳಕಿನ ಕುಡಿಯಾಗಿ ದಾರಿ ಬೆಳಗಲಿದ್ದಾರೆ. ಅವರನ್ನು ಆದರದಿಂದ ಕಾಣುವುದು. ಸಂಭಾಳಿಸುವುದು. ಬಿಳಿ ಹೂಗಳ ಜತೆ ತುಳಸೀದಳ ಸೇರಿಸಿ ವಿಷ್ಣುವನ್ನು ಆರಾಧಿಸಿ. ಹನುಮಾನ್ ಚಾಲೀಸಾ ಓದಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 2

ಮಕರ: ನಷ್ಟದ ಮನೆಯಲ್ಲಿರುವ ಶನೈಶ್ಚರ ನಿಮಗೀಗ ದುರ್ಬಲ. ಸದಾ ಉತ್ಸಾಹದ ಬುಗ್ಗೆಯಾದ ನೀವು ಈಗ ಮಂಕಾಗಿದ್ದೀರಿ. ಏಕಾಗ್ರತೆಯಿಂದ ರಾಮರಕ್ಷಾ ಸ್ತೋತ್ರ ಪಠಿಸಿ. ತೀರಾ ಅಂಕುಡೊಂಕಾದ ರಸ್ತೆಗಳನ್ನು ಸರಿಪಡಿಸುವ ವಿಸ್ಮಯಕಾರಕ ಬೆಳವಣಿಗೆ ಲಭ್ಯ. ವಿವಾಹಾಪೇಕ್ಷಿಗಳು ವಿವಾಹದ ನಂತರದ ದಾಂಪತ್ಯದಲ್ಲಿನ ಕ್ಷೋಭೆಗಳು ಪರಿಣಾಮಕಾರಿಯಾದ ರೀತಿಯಲ್ಲಿ ನಿಯಂತ್ರಿಸಲ್ಪಡಬೇಕು. ಅನಾವಶ್ಯಕವಾದ ಅಶಾಂತಿ ಮುಂದುವರಿಯದಂತೆ ನಿಗಾ ವಹಿಸಿ. ಹಣ ಇದ್ದರೂ ಅಶಾಂತಿಯ ಕಿಚ್ಚು ನೋವು ತರಬಹುದು.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 4

ಕುಂಭ: ಇದ್ದಕ್ಕಿದ್ದ,ತೆ ಸುಸ್ತು, ಕಾಲುನೋವು, ವಾಯುಪ್ರಕೋಪ, ಆಸಿಡಿಟಿ ಇತ್ಯಾದಿಗಳನ್ನು ನಿಯಂತ್ರಿಸಲು ಮುಂದಾಗಿ. ಈಗ ಸೂಕ್ತವಾಗಿ ಇದನ್ನು ನಿಯಂತ್ರಿಸಿದರೆ ಕೆಲವೇ ದಿನಗಳಲ್ಲಿ (ಫೆಬ್ರವರಿ 2020) ಬರುವ ಸಾಡೇಸಾತಿ ಶನಿಕಾಟವನ್ನು ಎದುರಿಸಲು ಬೇಕಾದ ತಯಾರಿಗೆ ವೇದಿಕೆ ನಿರ್ವಣಗೊಳ್ಳುತ್ತದೆ. ಮಕ್ಕಳ ಬಗೆಗೆ ಪ್ರೋತ್ಸಾಹದ ಮಾತುಗಳು ಇರಲಿ. ಚಿಕ್ಕವರಾದ್ದರಿಂದ ಬದುಕಿನ ಅನುಭವ ಇರುವುದಿಲ್ಲ. ಅವಸರದ ನಿರ್ಣಯ ತಳೆದು ನಿಮಗೆ ಕಿರಿಕಿರಿ ತರಬಹುದು. ನೀಲಿ ಬಟ್ಟೆಯಲ್ಲಿರಿಸಿದ ಅಕ್ಷತೆ, ಅರಿಷಿಣ, ಕುಂಕುಮದ ಎದುರು ಶ್ರೀ ಲಲಿತಾ ಸಹಸ್ರನಾಮ ಓದಿ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 4

ಮೀನ: ವಿಪುಲವಾದ ಅನುಭವ ಇದ್ದರೂ ನಿಮ್ಮದಾದ ವಹಿವಾಟುಗಳನ್ನು ನಿಯಂತ್ರಿಸುವಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೀಟಲೆ ತರುತ್ತಿವೆ. ಬಂಧುಗಳಲ್ಲಿಯೇ ವಿರಸ ಮೂಡಿಸಲೂ ಹಿಂಜರಿಯಲಾರರು. ವಿಷ್ಣು ಹಾಗೂ ಶಂಕರನ ಧ್ಯಾನ ಮುಂದುವರಿಯಲಿ. ಎಲ್ಲರನ್ನೂ ವಿಶ್ವಾಸದಿಂದ ನೋಡುವುದು ಕ್ಷೇಮ. ಸಲಿಗೆ ದುರುಪಯೋಗ ಮಾಡಿಕೊಳ್ಳಲು ಬಿಡಬೇಡಿ. ಷೇರು ಮಾರುಕಟ್ಟೆ ವಿಚಾರದಲ್ಲಿ ಪ್ರಗತಿ, ವಿಶೇಷವಾಗಿ ನಿಮ್ಮ ನಿರಂತರವಾದ, ಎಚ್ಚರಿಕೆಯ ಪರಿಶ್ರಮದೊಂದಿಗೆ ಸುರಕ್ಷಿತ ದಡ ತಲುಪಲು ಸಾಧ್ಯವಿದೆ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 6

Stay connected

278,740FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...