More

    ಈ ರಾಶಿಯವರು ಒಳ್ಳೆಯ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ: ವಾರಭವಿಷ್ಯ

    ಈ ರಾಶಿಯವರು ಒಳ್ಳೆಯ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ: ವಾರಭವಿಷ್ಯಮೇಷ ರಾಶಿ

    ಗ್ರೀಷ್ಮ ಋತು ಆರಂಭ ಆಗಿ ಉತ್ತರಾಯಣದ ಕಡೆಯ ಮಾಸಕ್ಕೆ ಬಂದು ಸೇರುತ್ತೇವೆ. ಸೂರ್ಯನು ವೃಷಭ ರಾಶಿಗೆ ಬಂದು ಶುಕ್ರನ ಮನೆಯಲ್ಲಿ ಇದ್ದು , ರಾಹು ರವಿ ಗ್ರಹಣವು ಕಳೆದು ನಿಮಗೆ ಅಲ್ಪ ಸಮಾಧಾನವನ್ನು, ನಿತ್ಯ ಸಮಸ್ಯೆಯಲ್ಲಿ ಪರಿಹಾರ ಕಂಡುಕೊಳ್ಳುವಂತೆ ಮಾಡುತ್ತಾನೆ. ನಿತ್ಯ ಸುಬ್ರಹ್ಮಣ್ಯನ ಪ್ರಾರ್ಥನೆ ಅತ್ಯಗತ್ಯ. ಸುಬ್ರಹ್ಮಣ್ಯ ಭುಜಂಗ ಸ್ತೋತ್ರವನ್ನು ಪಾರಾಯಣ ಮಾಡಿ.

    ವೃಷಭ ರಾಶಿ

    ವೃಷಭ ರಾಶಿಯವರಿಗೆ ಸೂರ್ಯನು ರಾಶಿಯಲ್ಲಿದ್ದಾನೆ. ಕೆಲಸಗಳು ನಿಮ್ಮ ಪೂರ್ವಜನ್ಮದ ಪಾಪ ಪುಣ್ಯದ ಅನುಸಾರ ನಡೆಯುತ್ತವೆ. ನಿಮ್ಮಉತ್ತಮ ಗುಣ ಎಂದರೆ ದೇವರು ಕೊಟ್ಟಿದ್ದನ್ನು ಸ್ವೀಕರಿಸುವುದು. ದುರ್ಗಾ ಪ್ರಾರ್ಥನೆ ಇರಲಿ. ಮಾತಿನಿಂದ ವೈರತ್ವವನ್ನು ಕಟ್ಟಿಕೊಳ್ಳಬೇಡಿ. ಮಿತ ಭಾಷಿಗಳಾಗಿ ಇಷ್ಟ ದೇವರನ್ನು ಪೂಜಿಸಿ.

    ಮಿಥುನ ರಾಶಿ

    ಮಿಥುನ ರಾಶಿಯವರಿಗೆ ಏಕಾದಶಿಯಲ್ಲಿ ಬುಧ, ಗುರು, ರಾಹು ಸೇರಿದ್ದು ಕಾಲವು ಉತ್ತಮವಾಗಿದ್ದು, 9ನೇ ಮನೆಯ ಸ್ವಕ್ಷೇತ್ರದಲ್ಲಿ ಶನಿ ಇರುವುದರಿಂದ ನಿಮ್ಮ ಗ್ರಹಗತಿಗಳು ಉತ್ತಮವಾಗಿಯೇ ಇವೆ. ಈಜು ಬಲ್ಲವನು ಸಮುದ್ರದ ಅಲೆ ಗಾಳಿಯನ್ನು ತಿಳಿದು ಈಜಿ ದಡವನ್ನು ಸೇರಬೇಕು. ಈಸಬೇಕು ಇದ್ದು ಜಯಿಸಬೇಕು ಎಂಬ ಮಾತನ್ನು ಅರ್ಥೈಸಿಕೊಂಡು ನಿಮಗಿರುವ ಒಳ್ಳೆಯ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಮಹಾ ವಿಷ್ಣು ಸ್ವರೂಪ ಸತ್ಯನಾರಾಯಣ ದೇವರನ್ನು ಪೂಜಿಸಿ. ಸತ್ಯದೇವರ ಅನುಗ್ರಹ ಸಂಪಾದಿಸಿ. ಸುಖ ಸಂತೋಷ ಪಡೆಯಿರಿ.

    ಕಟಕ ರಾಶಿ

    ಚಂದ್ರನ ಮನೆಯಾದ ಕಟಕ ರಾಶಿಯಲ್ಲಿ ಅಂಗಾರಕನು ಸೇರಿದ್ದಾನೆ. ಶುಕ್ರನು ಶುಭಫಲವನ್ನು ನೀಡುತ್ತಾನೆ. ಆದರೆ, ಅಂಗಾರಕನು ಮನಸ್ಸಿಗೆ ದ್ವಿಸ್ವಭಾವದ ಯೋಚನೆಯನ್ನು ಕೊಟ್ಟು ಧೈರ್ಯವನ್ನು ಕುಂದಿಸುತ್ತಾನೆ. ಅದಕ್ಕಾಗಿ ಸುಬ್ರಹ್ಮಣ್ಯ ದೇವರ ಕೃಪೆಯನ್ನು, ಪಾರ್ವತಿ ಸಾಂಬಸದಾಶಿವನ ಅನುಗ್ರಹವನ್ನು ಪಡೆಯಿರಿ. ಜೀವನ ಸಮುದ್ರವನ್ನು ದಾಟಲು ಸಮರ್ಥರಾಗಿರುತ್ತೀರಾ. ಶನಿ ಪ್ರದೋಷದ ಕಥೆಯನ್ನು ಓದಿ ಪೂರ್ವ ಪುಣ್ಯವನ್ನು ವೃದ್ಧಿಸಿಕೊಳ್ಳಿ.

    ಸಿಂಹ ರಾಶಿ

    ಸಿಂಹ ರಾಶಿಯವರಿಗೆ 9ರಲ್ಲಿ ಗುರುವಿದ್ದು, 90 ಭಾಗ ಶುಭಫಲವನ್ನು ಕೊಡುತ್ತಾನೆ. ಶನಿಯು ಸಪ್ತಮದಲ್ಲಿದ್ದರೂ ಸುಕ್ಷೇತ್ರದಲ್ಲಿರುವುದರಿಂದ ಶನಿಯ ಬಾಧೆಯನ್ನು ತಡೆಗಟ್ಟಿ ನಿಮ್ಮ ವ್ಯಾಪಾರ ವಹಿವಾಟುಗಳಲ್ಲಿ ಯಶಸ್ಸನ್ನು, ಇಚ್ಛಿತ ಕಾರ್ಯಗಳನ್ನು ನಡೆಸಿಕೊಡುತ್ತಾನೆ. ಶನೀಶ್ವರನ ಕೃಪಾ ದೃಷ್ಟಿ ಗಾಗಿ ಶನಿ ದೇವರನ್ನು ಪೂಜಿಸಿ. ಸೂರ್ಯ ನಾರಾಯಣನನ್ನು ಪೂಜಿಸಿ. ಆದಿತ್ಯ ಹೃದಯ ಪಾರಾಯಣವನ್ನು ಮಾಡಿರಿ.

    ಕನ್ಯಾ ರಾಶಿ

    ಷಷ್ಟ ದಲ್ಲಿ ಶನಿ ಇರುವುದರಿಂದ ಏನೇ ಕಷ್ಟಗಳು ಆತಂಕಗಳು ಬಂದರೂ ಎಂಥಾ ವಿಧವಾದ ತೊಡಕುಗಳು ಉಂಟಾದರೂ ನೀವು ದೈವಬಲದಿಂದ ಪಾರಾಗುತ್ತೀರಾ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ಋಣ ಮುಕ್ತರಾಗಿ ಬಾಳಿರಿ. ಶ್ರೀರಾಮಚಂದ್ರನನ್ನು ನಿತ್ಯವೂ ಪೂಜಿಸಿ ಪ್ರಾರ್ಥಿಸಿ.

    ತುಲಾ ರಾಶಿ

    ತುಲಾ ರಾಶಿಯವರಿಗೆ ರಾಶಿಯಲ್ಲಿ ಕೇತುವಿದ್ದರೂ, ಸಪ್ತಮದಲ್ಲಿ ಗುರು ಇರುವುದರಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕೊಟ್ಟರೂ ವಿಘ್ನಗಳನ್ನು ತಂದೊಡ್ಡಿ ಮಿತ್ರರಿಂದ ಮನಸ್ಸು ಕೆಡಿಸಿಕೊಂಡು ನೋವು ಉಂಟಾದರೆ ನಮಗೆ ದಾರಿಯನ್ನು ತೋರಿಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೂ ಸಪ್ತಮ ಗುರು ನಿಮಗೆ ಕೆಲಸ ಕಾರ್ಯಗಳಲ್ಲಿ ಜಯವನ್ನು ತಂದು ಕೊಟ್ಟು ಸಂತೋಷವನ್ನು ನೀಡುತ್ತಾನೆ. ದುರ್ಗಾ ಪ್ರಾರ್ಥನೆ ಇರಲಿ. ದುರ್ಗಾ ಸಹಸ್ರನಾಮವನ್ನು ಪಾರಾಯಣ ಮಾಡಿರಿ.

    ವೃಶ್ಚಿಕ ರಾಶಿ

    ವೃಶ್ಚಿಕ ರಾಶಿಯು ಅಂಗಾರಕನ ಮನೆಯಾಗಿದ್ದು ಮೇಷ ವೃಶ್ಚಿಕ ರಾಶಿಯವರು ಸುಬ್ರಮಣ್ಯನ ಅಧೀನದಲ್ಲಿದ್ದಾರೆ. ನನಗೆ ಬೇಕಾದ್ದು ಸಿಗಲಿಲ್ಲವೆಂದು ಚಿಂತೆ ಮಾಡುವ ಬದಲು, ದೇವರು ಕೊಟ್ಟದ್ದನ್ನು ಸ್ವೀಕರಿಸಿ. ಗುರು ಆರರಲ್ಲಿದ್ದು, ಚತುರ್ಥದಲ್ಲಿ ಶನಿ ಸ್ವಕ್ಷೇತ್ರದಲ್ಲಿ ಇದ್ದರೂ ನಿಮಗೆ ಧನವನ್ನು ಕಾರ್ಯಸಿದ್ಧಿಯನ್ನು ಕೊಟ್ಟು ಹರಸುತ್ತಾರೆ.

    ಧನುರ್ ರಾಶಿ

    ಬಲಾಢ್ಯನಾದ ಗುರು ಹಾಗೂ ರಾಶಿಗೆ ಮೂರನೇ ಸ್ಥಾನದಲ್ಲಿರುವ ಶನಿಯು ನಿಮ್ಮ ಎಲ್ಲಾ ಕಷ್ಟಗಳನ್ನು ಕಳೆದು ನಿಮ್ಮನ್ನು ಸಲಹುತ್ತಾನೆ. ಈಗಿರುವ ಸಮಯವು ಅತ್ಯಂತ ಶುಭದಾಯಕವಾಗಿದ್ದು ಏನೇ ಕೆಲಸಕ್ಕೆ ಕೈಹಾಕಿದರೂ ಗ್ರಹ ಬಲದಿಂದ ದೈವಬಲದಿಂದ ಕೀರ್ತಿ ಯಶಸ್ಸನ್ನು ಸಂಪಾದಿಸುವ ಕಾಲ. ಗುರು ಚರಿತ್ರೆಯ ಪಾರಾಯಣ ನಿರಂತರ ಇರಲಿ.

    ಮಕರ ರಾಶಿ

    ನಿತ್ಯವೂ ಮುಂಜಾನೆ ಅದೇ ಸೂರ್ಯ ರಾತ್ರಿಯಲ್ಲಿ ಚಂದ್ರ ಬೆಳಕನ್ನು ನೀಡುತ್ತಾರೆ. ಇದು ಮನುಷ್ಯನ ಎಚ್ಚರಿಕೆಗಾಗಿ. ತನ್ನ ಕೆಲಸದಲ್ಲಿ ತತ್ವಗಳನ್ನು ಪಾಲಿಸಿ ಅದರಲ್ಲಿ ಮಗ್ನನಾಗಿರಲಿ ಎಂದು. ಮಕರ ರಾಶಿಯವರು ಶನಿಯ ಸಂಚಾರದ ಕಡೆಯ ಭಾಗದಲ್ಲಿದ್ದು, ಶನಿಯು ಬಿಡುವ ಕಾಲದಲ್ಲಿ ಸುಮ್ಮನೆ ಕೂತರೆ ಕೆಲಸವು ಆಗುವುದಿಲ್ಲ. ನೀವು ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಪರಿಶ್ರಮವನ್ನು ಹಾಕಿದರೆ ನಿಮಗೆ ಕಾಲವೇ ಒಳ್ಳೆಯ ಸೂಚನೆಯನ್ನು ಕೊಟ್ಟು ತೃಪ್ತಿಯನ್ನು ನೀಡುತ್ತದೆ. ಶನಿಯ ಸ್ತೋತ್ರವನ್ನು ಮಾಡಲು ಮರೆಯದಿರಿ . ಸೋಮವಾರದಂದು ಈಶ್ವರನ ದರ್ಶನ ಮಾಡಿರಿ.

    ಕುಂಭ ರಾಶಿ

    ಮೂರನೇ ಮನೆಯಲ್ಲಿ ಗುರುವಿದ್ದು , ಕೆಲಸಗಳಲ್ಲಿ ಯಾವ ಕೆಡುಕು ಉಂಟಾಗುವುದಿಲ್ಲ. ಆದರೆ, ನಿಮ್ಮ ವ್ಯಾಪಾರ ವಹಿವಾಟುಗಳಲ್ಲಿ ಬೇಡದ ಮಾತುಗಳನ್ನು ಆಡಿಸಿ ನಿಮ್ಮ ಕಾಲಹರಣ ಮಾಡಿಸುತ್ತದೆ. ಆದರೆ, ಅದರಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡಕೂಡದು. ಸಮಯ ಪ್ರಜ್ಞೆ ಒಂದಿದ್ದರೆ ಏನನ್ನಾದರೂ ಸಾಧಿಸಬಹುದು. ನವಗ್ರಹ ಸ್ತೋತ್ರ ಪಠಿಸಿ. ಗುರು ಚರಿತ್ರೆಯ 48ನೇ ಅಧ್ಯಾಯವನ್ನು ಪಾರಾಯಣ ಮಾಡಿ.

    ಮೀನ ರಾಶಿ

    ದ್ವಿತೀಯದಲ್ಲಿರುವ ಗುರುವೇ ಸಾಕು ನಿಮ್ಮ ಜೀವನವನ್ನು ಸರಿಪಡಿಸಿಕೊಳ್ಳಲು, ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು. ದ್ವಾದಶದಲ್ಲಿ ಶನಿ ಇದ್ದರೂ ಪರವಾಗಿಲ್ಲ ನಿಮ್ಮನ್ನು ನೀವೇ ಸುಖವಾಗಿ ಇಟ್ಟುಕೊಳ್ಳುವ ಕಾಲವಿದು. ಗುರು ರಾಶಿಯಲ್ಲಿ ಜನಿಸಿದ ನೀವು ಗುರು ಪೂಜೆಯನ್ನು ಮಾಡಲೇಬೇಕು. ವಿಶ್ವಕ್ಕೆ ಗುರುವಾಗಿರುವ ಪಾರ್ವತಿ ಪರಮೇಶ್ವರರನ್ನು ಸಂಜೆಯ ಸಮಯದಲ್ಲಿ ಪೂಜಿಸಿ. ದ್ವಾದಶ ಶನಿಯ ಅರಿಷ್ಟ ನಿವಾರಣೆ ಆಗುತ್ತದೆ. ನಿಮ್ಮ ಲಲಾಟದಲ್ಲಿ ಬರೆದಿರುವ ದುಷ್ಟಾಕ್ಷರಗಳು ಕೂಡ ಸುಷ್ಟಾಕ್ಷರವಾಗಿ ಬದಲಾಗುತ್ತದೆ. ಗುರು ಚರಿತ್ರೆಯ 14ನೇ ಅಧ್ಯಾಯವನ್ನು ಪಾರಾಯಣ ಮಾಡಿ . ಶನಿವಾರದಂದು ಸುಂದರಕಾಂಡ ಪಾರಾಯಣ ಮಾಡಿರಿ.

    ‘ಗೃಹಜ್ಯೋತಿ’ಯೂ ಗ್ಯಾರಂಟಿ: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಖಚಿತ ಎಂದು ಸರ್ಕಾರಿ ಆದೇಶ

    ನಿರುದ್ಯೋಗಿಗಳಿಗೆ ಯುವನಿಧಿ: ಆದೇಶ ಮಾಡೇಬಿಟ್ಟ ಸರ್ಕಾರ; ಈ ಗ್ಯಾರಂಟಿಗೆ ಷರತ್ತುಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts