More

  ಈ ರಾಶಿಯವರು ಕೆಲಸದಲ್ಲಿ ಧೈರ್ಯವಾಗಿ ಮುಂದೆ ಸಾಗಿ: ವಾರಭವಿಷ್ಯ

  ಮೇಷ ರಾಶಿ

  ಮೇಷ ರಾಶಿಗೆ ಸೂರ್ಯ, ಗುರು, ರಾಹು ತ್ರಿ ಗ್ರಹಗಳ ಸಂಯೋಜನೆಯಾಗಿದೆ. ರಾಹು ಸಂಪರ್ಕದಿಂದ ಸೂರ್ಯನ ತೇಜಸ್ಸು ಕಡಿಮೆಯಾಗಿ ಗ್ರಹಣವಾಗಿದೆ. ರಾಹು ಮೇಷದಲ್ಲೇ ಇರುವುದರಿಂದ ಮನಸ್ಸಿಗೆ ಶಾಂತಿ ನೀಡಲು ಸಾಧ್ಯವಾಗುವುದಿಲ್ಲ. ಜತೆಗೆ ಗುರು ರಾಹು ಸಂಧಿಯಾಗುವುದು ಚೆನ್ನಾಗಿರುವುದರಿಂದ ಏಕಾದಶ ಶನಿಯ ಮೇಲೆ ಭರವಸೆ ಇಟ್ಟು ಮುಂದುವರಿಯಿರಿ. ಅಶ್ವಿನಿ ಭರಣಿ ನಕ್ಷತ್ರದವರು ಗುರು ಸ್ಮರಣೆಯಲ್ಲಿ ಇರಿ.

   

  ವೃಷಭ ರಾಶಿ

  ವೃಷಭ ರಾಶಿಗೆ ದ್ವಾದಶಕ್ಕೆ ಗುರು ಬಂದು ಸೇರಿದ್ದಾನೆ. ಹತ್ತರಲ್ಲಿ ಶನಿ ಇದ್ದಾನೆ. ಕೈಲಾದಷ್ಟು ಮಾತ್ರ ಜವಾಬ್ದಾರಿ ನಿರ್ವಹಿಸಿ. ಎಲ್ಲವನ್ನೂ ನಾನೇ ಮಾಡುತ್ತೇನೆ ಎಂದು ಕೈ ಹಾಕಿದರೆ ವಿಫಲರಾಗುತ್ತೀರಾ. ದ್ವಾದಶ ಗುರುವಿನಿಂದ ಶತ್ರುಗಳಿಂದ ಸಂಕಷ್ಟ ಜಾಸ್ತಿಯಾಗಿ ಶಾಂತಿ ಕದಡುತ್ತದೆ. ದ್ವಾದಶದಲ್ಲಿ ಬುಧನು ಇದ್ದು ರಾಶ್ಯಾಧಿಪತಿ ಶುಕ್ರನು ಲಗ್ನದಲ್ಲಿದ್ದು ದೈವ ಯತ್ನದಿಂದ ಮಾತ್ರ ಕೆಲಸ ಮುಂದುವರಿಸಲು ಸಾಧ್ಯ. ದುರ್ಗೆಯನ್ನು ಪೂಜಿಸಿದರೆ ದುಃಖ ದೂರಮಾಡುತ್ತಾಳೆ.

   

  ಮಿಥುನ ರಾಶಿ

  ಮಿಥುನ ರಾಶಿಗೆ ಏಕಾದಶಿಯಲ್ಲಿ ಗುರುವಿದೆ. ಎಲ್ಲವೂ ಒಳ್ಳೆಯದೇ ಆದರೂ ಗುರುವಾರ ಸಂಯೋಜನೆಯಲ್ಲಿ ಇರುವುದರಿಂದ ರಾಹುವೇ ಸೂರ್ಯನನ್ನು ನುಂಗಲು ಹೊರಟಿದ್ದಾನೆ ಎಂದು ಅರ್ಥೈಸಿಕೊಂಡು, ನಿಮ್ಮನ್ನು ನುಂಗುವರು ಇದ್ದಾರೆ ಎಂಬ ಸತ್ಯವನ್ನು ತಿಳಿದು ನಿಮ್ಮ ನಡೆ-ನುಡಿಯನ್ನು ಕಾಪಾಡಿಕೊಂಡು ಹೋದರೆ ಜಯವು ನಿಮ್ಮದಾಗುತ್ತೆ. ಮುಂದಿನ 21 ದಿನಗಳ ಕಾಲ ರಾಮಾಯಣ ಪಾರಾಯಣ ಮಾಡಿರಿ.

   

  ಕಟಕ ರಾಶಿ

  ಗುರು ದಶಮದಲ್ಲಿದ್ದು ಶನಿಯು ಅಷ್ಟಮದಲ್ಲಿದ್ದಾನೆ. ಹೆಜ್ಜೆ ಇಟ್ಟರೆ ಎಚ್ಚರಿಕೆಯಿಂದ ಸಾಗಬೇಕು ಮಲ್ಲಿಗೆ ಮೊಗ್ಗು ಹೂವಾಗಿ ಅದನ್ನು ಕಾಪಾಡಿಕೊಳ್ಳಬೇಕಾದರೆ ದೈವವಲ ತುಂಬಲೇಬೇಕು. ಕೆಲಸ ಕಾರ್ಯ ವಿಚಾರ ವಿಷಯಗಳನ್ನು ಅರಿತು ಮಾಡಿದರೆ ನಿಮ್ಮನ್ನು ರಾಶ್ಯಾಧಿಪತಿ ಚಂದ್ರನೇ ಶಿವನ ಶಿರಸ್ಸಿನಲ್ಲಿದ್ದು ಕಾಪಾಡುತ್ತಾನೆ. ಉಮಾಮಹೇಶ್ವರನ ಪೂಜಿಸಿ. ಶನಿ ಅಷ್ಟೋತ್ತರ ನಿತ್ಯ ಪಾರಾಯಣ ಮಾಡಿರಿ.

   

  ಸಿಂಹ ರಾಶಿ

  ಸಿಂಹ ರಾಶಿಗೆ ಸಪ್ತಮದಲ್ಲಿ ಶನಿ ಇದ್ದು ಅಷ್ಟಮದಲ್ಲಿ ಸಂಚಾರ ಈಗ ಬದಲಾಗಿದ್ದಾನೆ. ಶುಭವನ್ನು ಕೊಟ್ಟು ಮಂಗಳವನ್ನು ಉಂಟು ಮಾಡುತ್ತಾನೆ. ನಿಮ್ಮ ಆಸೆ ಪೂರೈಸಿಕೊಳ್ಳಬಹುದು. ಮಖ ನಕ್ಷತ್ರದ ಅಧಿಪತಿ ಕೇತು. ಈ ನಕ್ಷತ್ರದವರಿಗೆ ಮೇಷದಲ್ಲಿ ರಾಹುವಿನ ಜತೆ ಗುರು ಇರುವುದರಿಂದ ಸುಬ್ರಹ್ಮಣ್ಯ ದೇವರನ್ನು ಅರ್ಚಿಸಲೇಬೇಕು. ಸಂತೋಷ ಲಾಭ ಬರಲು ಗುರು ಅನುವು ಮಾಡಿಕೊಡುತ್ತಾನೆ. ಯಾರೊಂದಿಗೂ ಕಲಹ ಬೇಡ, ಯಾರನ್ನು ನೋಯಿಸುವುದು ಬೇಡ.

   

  ಕನ್ಯಾ ರಾಶಿ

  ಕನ್ಯಾ ರಾಶಿಗೆ ಗುರುಬಲವು ದೂರ ಸರಿದು ಅಷ್ಟಮಕ್ಕೆ ಗುರು ಬಂದಿದ್ದಾನೆ. ಷಷ್ಟದಲ್ಲಿ ಶನಿ ಇದ್ದಾನೆ. ಕೆಲವೊಂದು ಕಾರ್ಯಗಳಲ್ಲಿ ಲಾಭವಾದರೆ ಅಷ್ಟಮ ಗುರುವಿನಿಂದ ಉಂಟಾಗುತ್ತದೆ. ಸಜ್ಜನರ ಮನಸ್ಸನ್ನು ನೋಯಿಸುವುದು ಬೇಡ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ಶನಿಯು ಚೆನ್ನಾಗಿರುವುದರಿಂದ ಮತ್ತೊಬ್ಬರಿಗೆ ಕೊಡಬೇಕಾದ ವಸ್ತು, ಹಣ ಕೊಟ್ಟು ಋಣ ಮುಕ್ತರಾಗಿ ಬಾಳಿರಿ.

   

  ತುಲಾ ರಾಶಿ

  ತುಲಾ ರಾಶಿಗೆ ಸಪ್ತಮದಲ್ಲಿ ಗುರು ಸಾಕಷ್ಟು ಕೆಲಸಗಳನ್ನು ಸಾಧಿಸಿ ಕೊಡುತ್ತಾನೆ. ಪಂಚಮದಲ್ಲಿ ಶನಿ ಸ್ವ ಕ್ಷೇತ್ರದಲ್ಲಿ ಇದ್ದು ಕಾರ್ಯದಲ್ಲಿ ಒತ್ತಡ ಇರುತ್ತದೆ. ಸಪ್ತಮ ಗುರುವಿನಿಂದ ಗೃಹ ಲಾಭ, ಧನ ಸಂಪತ್ತು ಏರಿಕೆ, ಮಂಗಳಕಾರ್ಯಗಳು ನಡೆದು ಸಂತೋಷವಾಗಿರುವ ಸಮಯ. ಗುರು ದತ್ತಾತ್ರೇನನ್ನು ಪೂಜಿಸಿ. ನಿತ್ಯ ಗುರು ಚರಿತ್ರೆಯ ಒಂದು ಅಧ್ಯಾಯ ಪಾರಾಯಣ ಮಾಡಿ. ಚಂಡಿಕಾ ಅಥವಾ ಕಾಳಿಕಾ ಅಷ್ಟೋತ್ತರ ಪಠಿಸಿ.

   

  ವೃಶ್ಚಿಕ ರಾಶಿ

  ಅಂಗೈಯಲ್ಲಿ ಕೈಲಾಸವನ್ನು ತೋರಿಸಲು ಆಗುವುದಿಲ್ಲ. ಕೈಲಾಸವನ್ನು ನೋಡಬೇಕಾದರೆ ಶಿವ ಭಕ್ತಿ ಇರಬೇಕು. ಸುಖವೆಂಬ ಕೈಲಾಸವನ್ನು ಪಡೆಯಲು ಧೈರ್ಯವೊಂದೇ ದಾರಿ. ದೇವರು ಕೈಬಿಡುವುದಿಲ್ಲ. ಪಳನಿ ಸುಬ್ರಮಣ್ಯನನ್ನು ಪ್ರಾರ್ಥಿಸಿ, ನಿಮ್ಮ ಭೂ ವ್ಯವಹಾರ, ದುಡ್ಡಿನ ಸಮಸ್ಯೆ ಇತ್ಯರ್ಥ ಮಾಡಿಕೊಡುತ್ತಾನೆ.

   

  ಧನು ರಾಶಿ

  ಆಕಾಶ ಮುಟ್ಟಲು ಎರಡೇ ಇಂಚು ಎಂಬಂತೆ ಗುರುವು ಪಂಚಮಕ್ಕೆ ಬಂದು ಶನಿಯು ತೃತೀಯದಲ್ಲಿ ಇದ್ದಾನೆ. ಮೇಷದಲ್ಲಿ ರಾಹು ಇರುವುದರಿಂದ ಕೆಟ್ಟ ಮಾತನ್ನು ಆಡಬೇಡಿ. ಪುಣ್ಯವು ನಶಿಸಿಹೋಗುತ್ತದೆ. ನಿಮ್ಮ ಕೆಲಸದಲ್ಲಿ ಧೈರ್ಯವಾಗಿ ಮುಂದೆ ಸಾಗಿ. ಇಚ್ಛಿತ ವರ ಕೊಡಲು ಚಂಡಿಕೆಯೇ ಕಾದಿದ್ದಾಳೆ, ನವಗ್ರಹಗಳು ನಿಮ್ಮನ್ನು ರಕ್ಷಿಸುತ್ತವೆ.

   

  ಮಕರ ರಾಶಿ

  ಶನಿ ಗ್ರಹ ಕೆಟ್ಟದ್ದನ್ನು ಕೊಡುತ್ತಾನೆ ಎಂದು ಯಾರೂ ಭಾವಿಸಬೇಕಾಗಿಲ್ಲ. ಅವನು ಬಂದು ನಮ್ಮ ತಪ್ಪುಗಳನ್ನು ತೋರಿಸಿ ಕೊಟ್ಟು ನಮ್ಮನ್ನು ತಿದ್ದಿ, ಸುಖ ನೀಡುತ್ತಾನೆ. ಶನಿಯು ದ್ವಿತೀಯದಲ್ಲಿದ್ದು ಕೆಡಕು ಸಂಭವಿಸುವುದಿಲ್ಲ. ಶನಿಯ ಸಂಚಾರದ ಅಂತ್ಯಭಾಗದಲ್ಲಿ ಶೇಕಡ 50ರಷ್ಟು ಕೆಲಸ ನಡೆಯುತ್ತದೆ. ಗುರು ಚತುರ್ಥದಲ್ಲಿ ಬಂದಿರುವುದರಿಂದ ಗುರುವಾಯೂರಿನಲ್ಲಿ ನೆಲೆಸಿರುವ ಗುರುವಾಯೂರಪ್ಪನನ್ನು ದರ್ಶಿಸಿ ಬನ್ನಿ.

   

  ಕುಂಭ ರಾಶಿ

  ಕುಂಭ ರಾಶಿ ಎಂದರೆ ದೇವತಾ ಆಹ್ವಾನೆಗೆ ಕಳಶದಲ್ಲಿ ಮಾವಿನ ಸೊಪ್ಪು ಸಹಿತ ತೆಂಗನ್ನು ಇಟ್ಟು ಪೂಜಿಸುವುದು. ಅದೇ ದೇವತಾ ಕಳಶವಾಗುತ್ತದೆ. ಮನುಷ್ಯನು ಜೀವನದಲ್ಲಿ ಮತ್ತೊಬ್ಬರಿಗೆ ಕಳಶಪ್ರಾಯನಾಗಬೇಕು. ತೃತೀಯದಲ್ಲಿ ಗುರು ಬಂದಾಗ ಅಶುಭವೂ ನಡೆಯುವುದಿಲ್ಲ. ಶುಭಕಾಗಿ ಶ್ರೀ ಗುರು ಚರಿತ್ರೆ 11ನೇ ಅಧ್ಯಾಯವನ್ನು ಪಾರಾಯಣ ಮಾಡಿ. ಸಂತೋಷ, ತೃಪ್ತಿ ಸಿಗುತ್ತದೆ.

   

  ಮೀನ ರಾಶಿ

  ಜನ್ಮಗುರು ದ್ವಿತೀಯಕ್ಕೆ ಬಂದು ನಿಮ್ಮ ಭಾಗ್ಯದ ಬಾಗಿಲು ತೆರೆದಿದೆ. ಮೀನ ರಾಶಿಗೆ ಶನಿ ಸಂಚಾರವಿದ್ದರೂ ಪರಿಪೂರ್ಣ ಗುರು ಕಟಾಕ್ಷವಿದ್ದರೆ ನಿಮ್ಮನ್ನು ಯಾವ ಗ್ರಹವು ಬಾಧಿಸುವುದಿಲ್ಲ. ಗುರು ರಾಹು ಸಂಯೋಜನೆಯಲ್ಲಿ ಇರುವುದರಿಂದ ವಿಶೇಷ ಫಲ ಕೊಡನು. ಗುರುವಾರದಂದು ಈಶ್ವರನಿಗೆ ಸಂಜೆಯಲ್ಲಿ ಪಂಚಾಮೃತದಿಂದ ಅಭಿಷೇಕ ಮಾಡಿ. ಮುಂದಿನ ದಿನಗಳು ಶುಭವಾಗಿರುತ್ತದೆ.

  1630 ಕೆ.ಜಿ.ಗೂ ಅಧಿಕ ತೂಕದ ಚಿನ್ನ ವಿಮಾನನಿಲ್ದಾಣದಿಂದ ಕಳವು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts