More

    ವಾರಭವಿಷ್ಯ: ಪಳನಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪೂಜಿಸಿದರೆ ಈ ರಾಶಿಯವರಿಗೆ ರಾಜಯೋಗ ಬರಲಿದೆ

     

    ವಾರಭವಿಷ್ಯ: ಪಳನಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪೂಜಿಸಿದರೆ ಈ ರಾಶಿಯವರಿಗೆ ರಾಜಯೋಗ ಬರಲಿದೆ

    ಮೇಷ: ಸುಖ ಸಂಸಾರ ನಡೆಸಲು ದೈವಕೃಪೆ ಅತ್ಯವಶ್ಯಕ. ಮೇಷ ವೃಶ್ಚಿಕಕ್ಕೂ ರಾಶ್ಯಾಧಿಪತಿ ಅಂಗಾರಕ. ಅವನಿಗೆ ಷಣ್ಮುಖ, ದ್ವಾದಶ ಹಸ್ತ, ದ್ವಾದಶ ನೇತ್ರವಿದ್ದು ಎಲ್ಲವನ್ನೂ, ಮನುಷ್ಯನ ಸತ್ಸಂಗವನ್ನು ಅವಲೋಕಿಸುತ್ತಿರುತ್ತಾನೆ. ಷಣ್ಮುಖನನ್ನು ಪೂಜಿಸಿ ಗೆಲುವು ಸಾಧಿಸಿ. ನಿಮ್ಮ ಪ್ರಯತಗಳಿಗ್ನೆ ಸತ್ಫಲ ನೀಡುವವನು ದೇವರೊಬ್ಬನೇ.

    ವೃಷಭ: ವೃಷಭ-ತುಲಾ ರಾಶಿಗೆ ಶುಕ್ರ ಅಧಿಪತಿಯಾಗಿದ್ದು, ಮಿಥುನ ರಾಶಿ ಬುಧನ ಮನೆ. ವ್ಯವಹಾರಗಳನ್ನು ಯಾರಿಗೂ ಮೋಸ ಮಾಡದೆ ಅಚ್ಚುಕಟ್ಟಾಗಿ ನಿರ್ವಹಿಸಿದಲ್ಲಿ ಕಾರ್ಯ ಜಯವಾಗುವುದು. “ದುರ್ಗಾಂ ಹರತಿ ದು@ಖ@’. ಸೌಖ್ಯ ಕೊಡುವವಳು ಜಗನ್ಮಾತೆಯೊಬ್ಬಳೇ.

    ಮಿಥುನ: 9ರ ಗುರುವು ಅಲ್ಪಸ್ವಲ್ಪ ಕಾರ್ಯಜಯ, ಸಂತಸವನ್ನು ಕೊಡುತ್ತಾನೆ. ಪುಣ್ಯಕ್ಕಾಗಿ, ದೈವಕ್ಕಾಗಿ ಧನವನ್ನು ಖರ್ಚು ಮಾಡಲು ಸತ್​ಚಿಂತನೆ ಕೊಡುತ್ತಾನೆ. ಅದರಂತೆ ನಡೆದುಕೊಳ್ಳಿ. ಈ ಉಪಕಾರವು ನಿಮಗೆ ರಕ್ಷಣೆ ನೀಡಿ ಸಂತಸದತ್ತ ಕೊಂಡೊಯ್ಯುತ್ತದೆ. ಸದಾಕಾಲ ವಿಷ್ಣುನಾಮದ ಸ್ಮರಣೆಯಲ್ಲಿರಿ.

    ಕಟಕ: ಅರ್ಧ ಚಂದ್ರಾಕಾರದ ಚಂದ್ರನ ಬಿಂಬವನ್ನು ಧಾರಣೆ ಮಾಡಿರು ವವನು ಶಿವನೊಬ್ಬನೇ. ಮನುಷ್ಯನ ಕೈಯಲ್ಲಿ ಅತಿಯಾದ ಶೀತವನ್ನು, ಮಿತಿಮೀರಿದ ಸೂರ್ಯನ ತಾಪ ತಡೆಯಲು ಆಗುವುದಿಲ್ಲ. ಆದ್ದರಿಂದ ಉಮಾಮಹೇಶ್ವರನನ್ನು ಪೂಜಿಸಿ. ಸಪ್ತಾಷ್ಟಮ ಶನಿ-ಗುರುಗಳ ಆಗುಹೋಗುಗಳನ್ನು ಶಿವನೇ ಗ್ರಹಬಂಧನ ಮಾಡುತ್ತಾನೆ.

    ಸಿಂಹ: ಶನಿ-ಗುರು ಸಂಚಾರ ವಕ್ರತೆಯಲ್ಲಿ ಸಾಗಿದೆ. ಗ್ರಹಗಳು ವಕ್ರಸಂಚಾರದಲ್ಲಿ ಹಿಂದಿನ ಮನೆ ಲ ಕೊಟ್ಟರೂ ಯಾವ ಅತೀತವನ್ನು ಮಾಡುವುದಿಲ್ಲ. ಸಿಂಹವಾಹಿನಿಯಾದ ದುರ್ಗೆಯನ್ನು ಪೂಜಿಸಿ. ಸಕಲವು ಲಭಿಸಿ ಸುಖಸಂತೋಷ ಪಡೆಯುತ್ತೀರಿ. ಗುರು ದತ್ತಾತ್ರೇಯನನ್ನು ಪೂಜಿಸಿ.

    ಕನ್ಯಾ: ಕಲಿಯಬೇಕಾದ್ದು ಬಹಳವಿರುತ್ತದೆ. ಆದರೆ ಆಯುಷ್ಯ ಎಷ್ಟು ಕಾಲವೆಂದು ಯಾರಿಗೂ ತಿಳಿದಿಲ್ಲ. ರಾಮಾಷ್ಟಕ ಪಾರಾಯಣ ಮಾಡಿ, ರುನಾಥನನ್ನು ಧ್ಯಾನ ಮಾಡಿದರೆ, ಆಂಜನೇಯನನ್ನು ಪೂಜಿಸಿದರೆ ನಿಮ್ಮ ಕೆಟ್ಟಕಾಲ ಕಳೆದು ಭೋಗಭಾಗ್ಯ ಪಡೆಯುವುದರಲ್ಲಿ ಸಂದೇಹಬೇಡ.

    ತುಲಾ: ನಿಮಗೆ ಬೇಕಾದ್ದನ್ನು ಕೊಡಲು ದೈವವು ಕಾದಿದೆ. ಗಿಡದಲ್ಲಿ ಹಣ್ಣು ಬಿಟ್ಟರೆ ಅದನ್ನು ಕತ್ತರಿಸಿ ನೀವು ತಿಂದು, ಅನ್ಯರಿಗೂ ಕೊಡುವ ಬುದ್ಧಿಯಿದ್ದರೆ ಶಿವನು ನಿಮ್ಮ ಆಸೆ ಪೂರೈಸುತ್ತಾನೆ. ಶಿವನ ದಾರಿದ್ರ$್ಯದು@ಖದಹನ ಸ್ತೋತ್ರವನ್ನು ನಿತ್ಯ ಪಾರಾಯಣ ಮಾಡಿ. ಶಿವನ ಅನುಗ್ರಹ ಪಡೆದುಕೊಳ್ಳಿ.

    ವೃಶ್ಚಿಕ: ರಾಜಯೋಗ ಪಡೆಯಲು ಪಳನಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿ. ಮೂರನೇ ಮನೆಯ ವಕ್ರೀನಡಿಯಲ್ಲಿ ಶನಿ, ಚತುರ್ಥದಲ್ಲಿ ಗುರು ವಕ್ರೀಯನಾಗಿದ್ದಾನೆ. ವಕ್ರಗತಿಯಲ್ಲಿ ಗ್ರಹಗಳು ಯಾವ ಕೇಡನ್ನು ಮಾಡುವುದಿಲ್ಲ. ನಿಮಗೆ ಬೇಕಾದ ಧನ ಬರಬೇಕಾದರೆ ಪಳನಿಗೆ ಹೋಗಿ ಒಂದು ಸೇವೆಯನ್ನು ಪ್ರಾರ್ಥಿಸಿರಿ.

    ಧನು: ಕ್ಷಮೆ, ದಯೆಯನ್ನು ತೋರಿಸುವ ಏಕೈಕ ಗ್ರಹ ಗುರು. ಗುರುವನ್ನು ದೇವಾಲಯದಲ್ಲೂ ಪೂಜಿಸಬಹುದು. ಆದರೆ ಅದಕ್ಕಿಂತ ನಿಮ್ಮನ್ನು ಸಾಕಿ ಸಲುಹಿದ ತಂದೆಯನ್ನು ಗೌರವಿಸಿ. ವಿಶೇಷವಾಗಿ ಗುರು ಪ್ರಾರ್ಥನೆ ಮಾಡಿ. ಯಥಾಶಕ್ತಿ ದೀನರ ಸೇವೆ ಮಾಡಿ. ಶ್ರೀಗುರುಚರಿತ್ರೆ 14ನೇ ಅಧ್ಯಾಯ ಪಾರಾಯಣ ಮಾಡಿ. ಕನಸು ನನಸಾಗುತ್ತದೆ.

    ಮಕರ: ಆಯಾ ಮನೆಯ ಗ್ರಹಾಧಿಪತಿಗಳು ಅವರ ಸ್ಥಾನಪಲ್ಲಟ ನೋಡಿ ಲವನ್ನು ಕೊಡುತ್ತಾರೆ. ಮಕರ&ಕುಂಭ ಅಧಿಪತಿ ಶನಿ. ನಾವೆಲ್ಲ ಬದುಕಿರುವುದು ನಮ್ಮ ಪಿತೃಗಳು ಸಂಪಾದನೆ ಮಾಡಿರುವ ಪುಣ್ಯದಿಂದ, ಕಾಲಕ್ಕೆ ತಕ್ಕಂತೆ ನಡೆದರೆ ದೇವರೇ ದಾರಿ ತೋರುತ್ತಾನೆ. ದೇವರೇ ನಿಮ್ಮನ್ನು ಕೈಹಿಡಿದು ನಡೆಸುತ್ತಾನೆ.

    ಕುಂಭ: ಗುರು ವಕ್ರಗತಿಯಲ್ಲಿದ್ದು, ಶನಿ ಮಕರ ರಾಶಿಯಿಂದ ವಕ್ರಸ್ಥಿತನಾಗಿದ್ದು, ಸಮಯ ತಟಸ್ಥವಾಗಿರುತ್ತದೆ. ನಿಮ್ಮ ಕೆಲಸಗಳನ್ನು ವಿವೇಚನೆಯಿಂದ ಮಾಡಲು ಉದ್ಯುಕ್ತವಾಗಿರಬೇಕು. ಇಂದಿನ ಕೆಲಸ ಇಂದೇ ಮಾಡಬೇಕು. ದೈವಮಾರ್ಗದಲ್ಲಿ ನಡೆದು ಶ್ರೀಲಕ್ಷಿ$್ಮನರಸಿಂಹ ಅಷ್ಟೋತ್ತರ (ಕರಾವಲಂಬನ ಸ್ತೋತ್ರ) ಪಾರಾಯಣ ಮಾಡಿ.

    ಮೀನ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಏಕಾದಶ ಶನಿಯ ಸಮಸ್ತ ಸುಖವನ್ನು ಅನುಭವಿಸಿ. ಜೀವನದಲ್ಲಿ ವಿನಯವಿರಬೇಕು. ವಿಚಾರ ವಿಳಂಬವಿರಬಾರದು. ಕೈಯಲ್ಲಿರುವ ಕೆಲಸ, ತಲೆಯ ಮೇಲೆಹೊತ್ತ ಜವಾಬ್ದಾರಿ ಎರಡನ್ನೂ ನಿರ್ವಹಿಸಬೇಕು. ಪೌರ್ಣಮಿಯಂದು ಲಲಿತಾ ಸಹಸ್ರನಾಮ ಪಾರಾಯಣ ಮಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts