ಮೇಷ ರಾಶಿ
ಜೇಷ್ಠ ಬಹುಳ ಅಮಾಸ್ಯೆಯು ಮಣ್ಣೆತ್ತಿನ ಅಮಾವಾಸ್ಯೆ ಎಂದೇ ಪ್ರಸಿದ್ಧವಾಗಿದೆ. ಅಮಾವಾಸ್ಯೆಯಲ್ಲಿ ಉಪರಿ ಆಗಿ ಆಷಾಢ ಮಾಸದ ಪ್ರತಿಪತ್ ತಿಥಿ ಬಂದಿರುತ್ತದೆ. ಇಲ್ಲಿಗೆ ಮಘಾದಿ ಪಂಚ ಮಾಸಗಳ ಷೋಡಶ ಕರ್ಮಗಳ ಉತ್ತರಾಯಣ ವಿಧಿ ಮುಗಿದು, ಮನುಷ್ಯ ದೈವಕ್ಕೆ ಶರಣಾಗಿ, ದಕ್ಷಿಣಾಯಣದಲ್ಲಿ ಬರುವ ಎಲ್ಲ ಪೂಜೆ ಮಾಡಲು ಸಿದ್ಧನಾಗಬೇಕು. ಗುರು, ರಾಹು ಒಟ್ಟಿಗೆ ಇದ್ದು ಸಿಟ್ಟನ್ನು ಬಿಟ್ಟು ಬೆಟ್ಟು ಮಾಡಿ ನಿಮ್ಮನ್ನು ತೋರಿಸುವವರ ಎದುರು ಛಲದಿಂದ ಮುಂದೆ ಸಾಗಿ ಕಳೆದುಕೊಂಡ ಸ್ಥಾನವನ್ನು ಗಳಿಸಿ ಅಸಾಧ್ಯವಾದದನ್ನು ಪಡೆಯಲು ಸುಬ್ರಹ್ಮಣ್ಯ ದೇವರ ಪೂಜೆ ಇರಲಿ. ಗುರುವಿಗೆ ದತ್ತಾತ್ರೇಯ ಚರಿತ್ರೆಯ 14 ಅಧ್ಯಾಯ ಪಾರಾಯಣ ಮಾಡಿ, ಸುಖವನ್ನು ಕಂಡುಕೊಳ್ಳಿ.
ವೃಷಭ ರಾಶಿ
ವೃಷಭ ರಾಶಿಗೆ ಬುಧನು 12ರಲ್ಲಿದ್ದು ಸೂರ್ಯನು ತನ್ನ ಮಿತ್ರ ಕ್ಷೇತ್ರದಲ್ಲಿದ್ದಾನೆ . ದ್ವಾದಶದಲ್ಲಿ ಗುರು ಇರುವುದರಿಂದ ನಿಮ್ಮ ಕುಲ ಗುರುಗಳನ್ನು ಪೂಜಿಸಿ ನಿಮ್ಮ ಕಷ್ಟ ಕಾಲ ಕಳೆದುಕೊಂಡು ಕೊಟ್ಟ ಸುಖವನ್ನು ಅನುಭವಿಸಿ. ದುರ್ಗಾ ಸಪ್ತಶತಿ ಪಾರಾಯಣ ಮಾಡಿದರೆ ಒಳ್ಳೆಯ ಕಾರ್ಯಗಳು ತಾನಾಗಿಯೇ ಈಡೇರುತ್ತವೆ.
ಮಿಥುನ ರಾಶಿ
ರಾಶ್ಯಾಧಿಪತಿ ಬುಧನು ಏಕಾದಶದಲ್ಲಿ ಇದ್ದು, ರವಿ, ಬುಧ ಇಬ್ಬರೂ ಸ್ನೇಹ ಜೀವಿಗಳು. ಬುಧನು ರವಿ, ಶನಿಯರ ಸಂಪರ್ಕ ಸೇತುವೆ. ಈ ಸಮಯವು ಚೆನ್ನಾಗಿದ್ದು 11ರಲ್ಲಿ ಈ ಗುರುವಿರುವ ಫಲವನ್ನು ಒಂಬತ್ತರ ಶನಿಯ ಯೋಗವನ್ನು ಅನುಭವಿಸಿ. ಎಲ್ಲಾ ಕ್ಷೇತ್ರದಲ್ಲೂ ತಾಳ್ಮೆ ಜಾಣ್ಮೆಯಿಂದ ವರ್ತಿಸಿದರೆ ಕೆಲಸಗಳು ನೆರವೇರುವುದು. ಬದರಿ ನಾರಾಯಣನನ್ನು ಪೂಜಿಸಿ, ಶುಭ ಆಗುತ್ತದೆ.
ಕಟಕ ರಾಶಿ
ಶುಕ್ರನು ಕರ್ಕಾಟಕ ರಾಶಿಯಲ್ಲಿ ಇದ್ದು, ಅಷ್ಟಮ ಶನಿಯು 19ನೇ ತಾರೀಖಿನಿಂದ ಹಿಂದಿನ ಮನೆಗೆ ಸರಿದು ಸ್ವಲ್ಪ ಮಟ್ಟಿಗೆ ಜೀವನದಲ್ಲಿ ಬೆಳಕನ್ನು ಚೆಲ್ಲುತ್ತಾನೆ. ರಾಶ್ಯಾಧಿಪತಿ ಚಂದ್ರನೇ ಆಗಿರುವುದರಿಂದ ಮನಸ್ಸು ಸಂಕಲ್ಪ ಶುಭವಾಗಿದ್ದರೆ ಕರ್ಕಾಟಕ ರಾಶಿಯವರಿಗೆ ಯಾವ ಗ್ರಹಗಳು ಭಾಧಿಸುವುದಿಲ್ಲ. ಮಹೇಶ್ವರನ ವ್ರತ ಕಥೆಯನ್ನು ಓದಿ ಆಷಾಢ ಮಾಸದಲ್ಲಿ ಬರುವ ಶನಿ ಪ್ರದೋಷ ವ್ರತವನ್ನು ಮಾಡಿದರೆ ನಿಮ್ಮ ಮುಖದಲ್ಲಿ ತೇಜಸ್ಸು ಉಂಟಾಗಿ ಸಾಕ್ಷಾತ್ ಪರಮೇಶ್ವರಿ ಕಾಪಾಡುತ್ತಾನೆ.
ಸಿಂಹ ರಾಶಿ
ಆರನೇ ಮನೆಯ ಫಲವನ್ನು ಕೊಡಲು 19ರಂದು ಶನಿ ಹಿಂದೆ ಸರಿದು, ಗುರು ಕಟಾಕ್ಷದಿಂದ ಕಾರ್ಯಗಳು ನಿಮ್ಮಂತೆಯಾಗಿ ಸುಖವನ್ನು ಕೊಡುವ ಕಾಲ. ಎಷ್ಟೇ ಮಳೆ ಗಾಳಿ ಮಿಂಚು ಬಂದರೂ ಸೂರ್ಯನ ತೇಜಸ್ಸು ಭೂಮಿಯ ಮೇಲೆ ಇದ್ದೇ ಇರುತ್ತದೆ . ಸಿಂಹ ರಾಶಿಯವರ ತೇಜಸ್ಸಿಗೆ ಯಾವ ಧಕ್ಕೆಯೂ ಆಗುವುದಿಲ್ಲ. ಸೂರ್ಯನಾರಾಯಣನ ಪೂಜಿಸಿ, ಶುಭವಾಗುವುದು.
ಕನ್ಯಾ ರಾಶಿ
ಕಳ್ಳರು ತಲೆಮರೆಸಿಕೊಂಡು ಮಾರುವೇಷದಲ್ಲಿ ಪ್ರಪಂಚ ಪರ್ಯಟನೆ ಮಾಡಬಹುದು. ಶನಿಯ ಸಂಕಷ್ಟವನ್ನು ನೀಗಲು ಕೊಟ್ಟ ಮಾತಿಗೆ ತಪ್ಪದಂತೆ ನಡೆದುಕೊಳ್ಳಿ. ಸಂಕಷ್ಟಗಳನ್ನು ದೂರ ಮಾಡುವ ಕೌಸ್ತುಭ ಹೆಸರುಳ್ಳ ಸಂಕಟಹರ ವೆಂಕಟೇಶ್ವರನನ್ನು ಪ್ರತಿನಿತ್ಯ ತ್ರಿಕಾಲದಲ್ಲಿ ಪೂಜಿಸಿ.
ತುಲಾ ರಾಶಿ
ತುಲಾ ರಾಶಿಗೆ ದಶಮದಲ್ಲಿ ಶುಕ್ರನಿದ್ದಾನೆ, 9ರಲ್ಲಿ ರವಿ ಬುಧರಿದ್ದಾರೆ. ಪರೀಕ್ಷೆ ಇರಲಿ ನ್ಯಾಯವೇ ಇರಲಿ ನ್ಯಾಯಾಲಯವೇ ಇರಲಿ, ಎಲ್ಲಾ ಕಡೆ ನಿಮಗೆ ನ್ಯಾಯ ಸಿಗುವಂತೆ ಮಾಡುವುದು ಪರಮಾತ್ಮನ ಉದ್ದೇಶ ಎಂದು ಪೂಜಿಸಿ. ತುಲಾ, ವೃಷಭ ರಾಶಿಯಲ್ಲಿ ಹುಟ್ಟಿದವರು ದುರ್ಗೆಯನ್ನು ಪೂಜಿಸಲೇಬೇಕು.
ವೃಶ್ಚಿಕ ರಾಶಿ
ಚತುರ್ಥದಲ್ಲಿ ಶನಿ ಇದ್ದಾನೆ. ಮತ್ತೆ ಶನಿಯು 3ನೇ ಮನೆಗೆ ಬಂದು ಶುಭವನ್ನು ಉಂಟು ಮಾಡುತ್ತಾನೆ. ಪರಮಾತ್ಮನ ಕೃಪೆ ಒಂದಿದ್ದರೆ ಕೇವಲ ಮೂರು ನಿಮಿಷ ಸಾಕು ಮುಕ್ತಿಯನ್ನು ನೀಡಲು, ನಿಮ್ಮ ಜೇಬನ್ನು ತುಂಬಿಸಲು. ಆರರ ಗುರುವಿಗೆ ಗುರುಕ್ಷೇತ್ರವಾದ ಗಾಣಗಾಪುರಕ್ಕೆ ಹೋಗಿ ಗುರು ದತ್ತಾತ್ರೇಯನನ್ನು ದರ್ಶಿಸಿ ಬನ್ನಿ. ಶುಭವಾಗುವುದು.
ಧನುರ್ ರಾಶಿ
ಶನಿ ಸಂಚಾರ ಮತ್ತೆ ಮಕರಕ್ಕೆ ಬಂದು ನಿಮಗೆ ಅಲ್ಪಸ್ವಲ್ಪ ನಿರಾಸೆ ಉಂಟು ಮಾಡಿದರೂ ಗುರು ಪಂಚಮದಲ್ಲಿದ್ದು ಯಾವ ತಾಪತ್ರಯಗಳು ಉಂಟಾಗಲಾರದು. ಶ್ರೀ ರಾಮನಂತೆ ಪರಿಶುದ್ಧವಾಗಿ ಮಾತಾಪಿತರನ್ನು ಪೂಜಿಸಿದರೆ ಅವರ ಆಶೀರ್ವಾದದಿಂದ ಜೀವನದಲ್ಲಿ ರಾಜಯೋಗವು ಬಂದು ನಿಮ್ಮನ್ನು ಸೇರುತ್ತದೆ. ಚಂಡಿಕಾ ಪರಮೇಶ್ವರಿ ಶತ್ರುಗಳನ್ನು ಸೋಲಿಸುತ್ತಾಳೆ. ರಾಜಯೋಗ ಕೊಡಲು ಶ್ರೀರಾಮಚಂದ್ರನನ್ನು ಮರೆಯದೆ, ಜತೆಯಲ್ಲಿ ದತ್ತಾತ್ರೇಯನನ್ನು ಆರಾಧನೆ ಮಾಡಿದರೆ ಶುಭವನ್ನು ಪಡೆದುಕೊಳ್ಳುತ್ತೀರಾ.
ಮಕರ ರಾಶಿ
ಮತ್ತೆ ಜನ್ಮಕ್ಕೆ ಶನಿ ಬಂದು ಅಲ್ಪ ಗೊಂದಲ ಉಂಟಾಗುತ್ತದೆ. ಭಗವದ್ ಭಕ್ತನಾಗಿ ಗುರುದೇವರನ್ನು ಅರ್ಚಿಸಿ. ಶನಿಯ ಬಾಧೆಯನ್ನು ತಡೆಯಲು ವೈಕುಂಠ ನಿವಾಸಿ ವೆಂಕಟೇಶ್ವರನನ್ನು ಪೂಜಿಸಿ. ಲಾಭವು ಬರುತ್ತದೆ. ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿ. ಉಲ್ಲಾಸವು ನಿಮ್ಮದಾಗುತ್ತದೆ.
ಕುಂಭ ರಾಶಿ
ಕುಂಭ ರಾಶಿಗೆ ದ್ವಾದಶದಲ್ಲಿ ಶನಿ ಬಂದು ಆತಂಕ ನೀಡುತ್ತಾನೆ. ಕುಂಭವು ಮಹಾಲಕ್ಷ್ಮಿಯ ಸ್ಥಾನ. ಲಕ್ಷ್ಮಿ ನರಸಿಂಹನನ್ನು ಪೂಜಿಸಿ. ಸದ್ದಿಲ್ಲದೆ ಕಷ್ಟಗಳು ಮಾಯವಾಗಿ ಮನಮೋಹಕ ವಿಚಾರಗಳಲ್ಲಿ ಪಾಲ್ಗೊಂಡು ಅಭಿವೃದ್ಧಿಯನ್ನು ಪಡೆಯುತ್ತೀರಾ.
ಮೀನ ರಾಶಿ
ಏಕಾದಶಕ್ಕೆ ಶನಿ ಬರಲಿದ್ದು, 2ರಲ್ಲಿ ಗುರು, ರಾಹು ಶುಭವನ್ನು ತರುತ್ತಾರೆ. ಮೇ 21, 2024ರವರೆಗೂ ಯಾವ ಗ್ರಹಗಳ ಬಾಧೆ ನಿಮಗಿಲ್ಲ. ಗುರು ಒಬ್ಬನೇ ಸಾಕು, ಸರ್ವ ಸುಖವನ್ನು ಕೊಡಲು. ಗುರುವೇ ಮುನಿದರೆ ಹರಿಹರರು ಕೂಡ ಕಾಪಾಡಲಾಗುವುದಿಲ್ಲ. ನಿಮ್ಮ ಕುಲ ಗುರುಗಳನ್ನು ಪೂಜಿಸಿ. ನಿಮ್ಮ ಮನೋ ಇಚ್ಛೆಯು ಪೂರ್ಣವಾಗುತ್ತದೆ. ಶನಿ ಅಷ್ಟೋತ್ತರ ಪಠಿಸಿ. ಗುರು ಚರಿತ್ರೆಯ 11ನೇ ಅಧ್ಯಾಯವನ್ನು ಪಾರಾಯಣ ಮಾಡಿ.
ಬಸ್ ಡೋರೇ ಕಿತ್ತು ಹೋಯ್ತು!; ಉಚಿತ ಪ್ರಯಾಣಕ್ಕಾಗಿ ಮಹಿಳೆಯರ ‘ಶಕ್ತಿ’ ಪ್ರಯೋಗ