20.4 C
Bengaluru
Monday, January 20, 2020

ವಾರಭವಿಷ್ಯ: ಈ ರಾಶಿಯವರು ಗುರುಬಲದಿಂದಾಗಿ ನೈತಿಕ ಸ್ಥೈರ್ಯ ಸಂಪಾದಿಸಿಕೊಳ್ಳಲಿದ್ದಾರೆ

Latest News

ಸಿಎಎ ಬೆಂಬಲಿಸಿ ರ‌್ಯಾಲಿ

ಬಾದಾಮಿ: ವಿಶ್ವದ ದೊಡ್ಡ ಹಿಂದು ರಾಷ್ಟ್ರವಾದ ಭಾರತದ ಸಂಸ್ಕೃತಿ ಉಳಿಸಿ ಬೆಳೆಸಲು ಕೇಂದ್ರ ಸರ್ಕಾರ ಪೌರತ್ವ ತಿದ್ದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಇದರಿಂದ...

ಕೋಟೆನಗರಿಯಲ್ಲಿ ಆಕರ್ಷಕ ಪಥ ಸಂಚಲನ

ಬಾಗಲಕೋಟೆ: ಸಂಕ್ರಾಂತಿ ಹಬ್ಬದ ಅಂಗವಾಗಿ ಆರ್‌ಎಸ್‌ಎಸ್ ಅಂಗ ಸಂಸ್ಥೆ ರಾಷ್ಟ್ರ ಸೇವಿಕಾ ಸಮಿತಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಸೇವಕಿಯರ ಘೋಷ ಸಹಿತ...

ಧರ್ಮದಲ್ಲಿ ರಾಜಕೀಯ ಸಲ್ಲ

ತೇರದಾಳ: ಧರ್ಮ ಶ್ರೇಷ್ಠವಾಗಿದ್ದು, ಧರ್ಮದಲ್ಲಿ ರಾಜಕೀಯ ಬೆರೆಸಬೇಡಿ. ವೀರಶೈವರು ಲಿಂಗವನ್ನು ತ್ರಿಕಾಲಗಳಲ್ಲಿ ಪೂಜೆಗೈಯುತ್ತ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಧರ್ಮ ಮತ್ತು ಗುರು ಜೀವನ...

ಕಲಾದಗಿಯಲ್ಲಿ ಆರ್ಥಿಕ ಗಣತಿಗೆ ಅಸಹಕಾರ

ಕಲಾದಗಿ: ಗ್ರಾಮದಲ್ಲಿ ರಾಷ್ಟ್ರೀಯ 7ನೇ ಆರ್ಥಿಕ ಗಣತಿ ಕಾರ್ಯ ಒಂದು ವಾರದಿಂದ ಸ್ಥಗಿತಗೊಂಡಿದ್ದು, ಪ್ರಬಲ ಕೋಮಿನ ನೂರಾರು ಮನೆಯವರು ಆರ್ಥಿಕ ಗಣತಿದಾರರಿಗೆ ಮಾಹಿತಿ...

ವೇಗ ಕಾಣದ ಫಾಸ್ಟ್ಯಾಗ್​ !

ಹೀರಾನಾಯ್ಕ ಟಿ. ವಿಜಯಪುರ: ವಾಹನಗಳಿಗೆ ಕಡ್ಡಾಯವಾಗಿ ಫಾಸ್ಟ್ಯಾಗ್ ​ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಆದರೆ, ಸಾಕಷ್ಟು ವಾಹನಗಳಿಗೆ ಫಾಸ್ಟ್ಯಾಗ್  ಅಳವಡಿಸದೆ ಇರುವುದರಿಂದ...

ಮೇಷ: ನಿಮ್ಮ ನಿರೀಕ್ಷೆಗಳು ತುಂಬಾ ಇವೆ. ಆದರೆ ಬುಧನ ಜತೆಗಿನ ನಿಮ್ಮ ರಾಶ್ಯಾಧಿಪ ಕುಜನ ಸಂಯೋಜನೆಯಿಂದಾಗಿ ಹಲವು ಮಹತ್ವದ ವಿಷಯಗಳು ನಿಮ್ಮ ನಿರೀಕ್ಷೆಯ ರೀತ್ಯಾ ನಿರ್ದಿಷ್ಟ ಹಳಿಗಳ ಮೇಲೆ ಸಾಗಲಾಗದೆ ಕುಸಿಯುವ ಭೀತಿ ದಟ್ಟವಾಗಿದೆ. ನಿಮ್ಮ ವೈಯಕ್ತಿಕ ಉತ್ಸಾಹ, ಲವಲವಿಕೆಗಳನ್ನು ಉಪಯೋಗಿಸಿಕೊಳ್ಳಿ. ನಿಮಗೆ ಚಾತುರ್ಯದ ಹೆಜ್ಜೆ ಇಡುವ ಶಕ್ತಿ ಇದ್ದೇ ಇದೆ. ನೀರಿರುವ ಕಡೆಯಲ್ಲಿ ಬೆಂಕಿ ಆವರಿಸಲಾರದು ಎಂಬ ಸತ್ಯ ಸುಳ್ಳಾಗದಂತೆ ನಿಗಾ ಇರಿಸಿ. ಶ್ರೀನಿಧಿಯ ಸ್ತುತಿ ಮಾಡಿ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 9

ವೃಷಭ: ಮಹಾಶಕ್ತಿಯೊಂದನ್ನು ನೀವು ಮಾರುತಿಯ ಸ್ತುತಿಯ ಮೂಲಕವೇ ಸಂಪಾದಿಸಿಕೊಳ್ಳಬೇಕು. ನಿರ್ದಿಷ್ಟ ವೇಳಾಪಟ್ಟಿಯನ್ನು ಮಾಡಿಕೊಳ್ಳಿ. ಒಂದು ತರ್ಕದೊಂದಿಗೆ ವೇಳಾಪಟ್ಟಿಯ ಚೌಕಟ್ಟು ನಿರ್ವಣಗೊಳ್ಳಲಿ. ಕಾಲ ಕೆಳಗಿನ ನೆಲ ಕುಸಿಯುತ್ತಿದೆ ಎನ್ನುವಾಗಲೂ ಗೊಂದಲಕ್ಕೆ ಒಳಗಾಗದೆ ಅರ್ಹರನ್ನು ಬೆಂಬಲಕ್ಕಾಗಿ ಯಾಚಿಸಿ. ಅದರಿಂದ ಒಳಿತುಗಳಿವೆ. ತಮ್ಮಿಂದ ಆಗದಿದ್ದ ಪಕ್ಷದಲ್ಲಿ ಅನುಕೂಲವಿದ್ದ ಸೂಕ್ತರಾದ ಜನರನ್ನು ಹೇಗೆ ಸಂಧಿಸಬೇಕು ಎಂಬುದನ್ನು ನಿಮಗವರು ತಿಳಿಸುತ್ತಾರೆ. ಇದರಿಂದ ಅನುಕೂಲವಿದೆ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 2

ಮಿಥುನ: ಎಲ್ಲವೂ ಮುಗಿದೇ ಹೋಯ್ತು ಎಂಬ ಘಟ್ಟವನ್ನು ತಲುಪುವಿರಾದರೂ ಗುರು ದತ್ತಾತ್ರಯನ ಕರುಣೆಯಿಂದಾಗಿ ಒಣಗಿದ ಮರವೂ ಹೊಸ ಚಿಗುರಿನ ಹಸಿರು ಮೊಳೆಸಲು ಶಕ್ತಿ ಉದ್ಭವಿಸುವ ಸೋಜಿಗ ಸಾಧ್ಯವಾಗುತ್ತದೆ. ನರಸಿಂಹ ಸ್ತುತಿಯೂ ಉತ್ತಮವೇ ಆಗಿದೆ. ಮುಖ್ಯವಾಗಿ ವ್ಯಾಜ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಾಯ್ದೆ ಕಾನೂನುಗಳ ಬೆಂಬಲ ನಿಮಗೆ ಲಭ್ಯ. ಶೀಘ್ರ ಕೋಪಿಗಳು ಎಚ್ಚರದಲ್ಲಿರಬೇಕು. ಒಂದು ಹೋಗಿ ಇನ್ನೊಂದಾಗುವ ಫಜೀತಿ ಎದುರಾಗದಿರಲಿ. ಸಂಗಾತಿಯ ವಿಷಯದಲ್ಲಿ ಜಟಿಲತೆ ಉದ್ಭವಿಸುವ ಸಾಧ್ಯತೆ

ಶುಭದಿಕ್ಕು: ವಾಯುವ್ಯ ಶುಭಸಂಖ್ಯೆ: 5

ಕಟಕ: ನಿಮಗೇ ತಿಳಿಯದಂತೆ ವ್ಯಾಜ್ಯಕ್ಕೆ ವೇದಿಕೆ ನಿರ್ವಣವಾಗಬಹುದು. ಚಾತುರ್ಯವು ನಿಮ್ಮ ಆಸ್ತಿಯಾದರೂ ಏಡಿಯಂತೆ ಅಡಗಿದ್ದು ಕಚ್ಚುವ ವ್ಯಕ್ತಿಗಳು ಪ್ರತ್ಯಕ್ಷವಾಗುತ್ತಾರೆ. ವಾರದ ದ್ವಿತೀಯಾರ್ಧದಲ್ಲಿ ಸಮಸ್ಯೆಯ ಬಿಗಿಯನ್ನು ಎದುರಿಸುವ ಸಾಧ್ಯತೆ ಅಧಿಕ. ಹುಲಿಯಂತೆ ನೀವು ಇರಬಯಸುತ್ತೀರಾದರೂ ನಿಮಗಿಂತಲೂ ಹೆಚ್ಚು ಆಕ್ರಮಣಶೀಲರು ನಿಮಗೆ ತಲೆಬಿಸಿ ತರುತ್ತಾರೆ. ಕಾಗದ ಪತ್ರ, ಹಳೆಯ ಫೈಲುಗಳ ವಿಷಯದಲ್ಲಿ ಎಚ್ಚರ ಇರವಿ. ಆಳುಗಳನ್ನು ಬಲವಾಗಿ ನಂಬಲು ಮುಂದಾಗದಿರಿ. ಮನೆ ದೇವರನ್ನು ಆರಾಧಿಸಿ. ಒತ್ತಡದಿಂದ ಬಿಡುಗಡೆ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 7

ಸಿಂಹ: ಕಷ್ಟದ ದಿನಗಳು. ಗುರುಬಲದಿಂದಾಗಿ ನೈತಿಕ ಸ್ಥೈರ್ಯ ಸಂಪಾದಿಸಿಕೊಳ್ಳುತ್ತೀರಿ. ಸಾಂಸಾರಿಕ ಬಿಕ್ಕಟ್ಟುಗಳನ್ನು ಸ್ನೇಹಶೀಲ ವ್ಯಕ್ತಿಗಳಲ್ಲಿ ಮಾತ್ರ ಹಂಚಿಕೊಳ್ಳಿ. ಜೀವನದ ದಾರಿಯಲ್ಲಿ ಎಲ್ಲವೂ ವಸಂತ ಕಾಲವಾಗಿರುವುದಿಲ್ಲ ಎಂಬ ಸತ್ಯ ನಿಮಗೂ ಗೊತ್ತು. ನಿಮ್ಮ ಪಾಲಿಗೆ ಈಗ ವಸಂತ ಕಾಲ ಬೇಕಿಲ್ಲ. ಬದಲಿಗೆ ರಾತ್ರಿಯ ನಿದ್ದೆಗೆ ಬೇಕಾದಷ್ಟು ಮನಃಶಾಂತಿಯ ಬಗೆಗೆ ಕಾತರಗೊಳ್ಳುತ್ತೀರಿ. ಇಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿರುವಿರಿ. ನಿಮ್ಮ ನಿಲುವನ್ನು ನೋಡದೆಯೇ ಉಲ್ಟಾ ಹೊಡೆಯುತ್ತಾರೆ. ಪಂಚಮುಖಿ ಹನುಮಂತ ಕವಚ ಧರಿಸಿ

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 9

ಕನ್ಯಾ: ಹಣಕಾಸಿನ ವಿಚಾರದಲ್ಲಿ ಎಚ್ಚರ. ಪಡೆದಿರುವ ಸಾಲವನ್ನು ನಿಯೋಜಿತ ಉದ್ದೇಶಕ್ಕೇ ಉಪಯೋಗಿಸಿ. ಸಾಲದ ಬಗೆಗೆ ಎಚ್ಚರ ಇರಲಿ. ನೀವೇ ಸಾಲ ಕೊಡುವವರಾದರೆ ಹಿಂದೆ ಮುಂದೆ ಯೋಚಿಸದೆ ಕೊಡಲು ಮುಂದಾಗದಿರಿ. ನೆಮ್ಮದಿ ಕೆಡಿಸುತ್ತಾರೆ. ಮನೆ ಕಟ್ಟುವ ವಿಷಯದಲ್ಲಿಯೂ ಉತ್ಸಾಹದಿಂದಲೇ ಮುಂದೆ ಬಂದು ನಂತರ ಪರದಾಡುವ ಜಾಯಮಾನದ ಮಂದಿ ನಿಮಗೆ ಗಂಟುಬೀಳಬಹುದು. ಮಾತನಾಡುವಾಗ ಕಟ್ಟೆಚ್ಚರವಿರಲಿ. ಶ್ರೀದೇವಿ ಕೂಷ್ಮಾಂಡಾಳನ್ನು ಸ್ತುತಿಸಿ. ಕ್ಷೇಮ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 2

ತುಲಾ: ಕೆಲವು ನಾಟಕೀಯ ಬೆಳವಣಿಗೆಗಳಿಂದ ನಿಮ್ಮ ಹೆಸರು ಕೆಳಗಿಳಿದೀತು ಎಚ್ಚರ. ಕುಟುಂಬದ ಸದಸ್ಯರನ್ನು ಹದ್ದುಬಸ್ತಿನಲ್ಲಿಡಿ. ಆದರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಕಾಯಕನಿರತರಾಗಿ ಸಾಕಷ್ಟು ಶ್ರಮಪಟ್ಟವರು ನೀವು. ಜನರ ಪ್ರಶಂಸೆಯನ್ನೂ ಗಳಿಸಿದವರಾಗಿದ್ದೀರಿ. ಆದರೆ ಕೆಲವು ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ, ಕ್ಷಿಪ್ರವಾಗಿ ಬೀಸುವ ಬಿರುಗಾಳಿಯಿಂದಾಗಿ ಪರದಾಟವಾಗಬಹುದು. ರುದ್ರತಾಂಡವ ಕಡಲ ಅಲೆಗಳಂತೆ ಸುನಾಮಿ ಸೃಷ್ಟಿಯಾಗದಿರಲಿ ಎಂದು ದಯಾಮಯನಾದ ತ್ರಿಪುರಾಂತಕ ಶಿವನನ್ನು ನಿರಂತರ ಧ್ಯಾನಿಸಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 6

ವೃಶ್ಚಿಕ: ವಿವಾಹೇತರ ಪ್ರೇಮ ವ್ಯವಹಾರಗಳಿಂದ ತೊಂದರೆಗೆ ಒಳಗಾಗುವಿರಿ. ಇದ್ದಕ್ಕಿದ್ದಂತೆ ಕೆಲಸದ ಸ್ಥಳದಿಂದ ಹೊರಬರಬೇಕಾದೀತು. ಹಿಂತಿರುಗಿ ಸಕ್ರಮವಾದ ದಾರಿಗೆ ತಂದುಕೊಳ್ಳುವಲ್ಲಿ ಉಸಿರುಗಟ್ಟುವ ಸಂದರ್ಭ ಎದುರಾಗಬಹುದು. ಹೇರಳವಾದ ಧನಲಾಭಕ್ಕೆ ಸುಗಮವಾದ ದಾರಿ ಇದೆ. ಸ್ವಯಂಕೃತಾಪರಾಧಗಳಿಂದ ಕೆಲವು ಸಲ ಬಂದಷ್ಟೇ ವೇಗದಿಂದ ಹಣ ಕರಗಬಹುದು. ಸೂಕ್ತವಾದ ಲೆಕ್ಕಾಚಾರ, ಶಿಸ್ತು, ಸಂಯಮಗಳಿಂದ ಮಹತ್ವವಾದುದನ್ನು ಹಿಡಿಯಬಲ್ಲಿರಿ. ವೆಂಕಟೇಶ್ವರನನ್ನು ಆರಾಧಿಸಿ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 1

ಧನುಸ್ಸು: ಗೊಂದಲಗಳು ಸುತ್ತುವರಿಯಬಹುದು. ಬತ್ತಳಿಕೆಯಲ್ಲಿರುವ ಬಾಣಗಳನ್ನು ತರ್ಕಬದ್ಧವಾಗಿ ಉಪಯೋಗಿಸಿ. ಕೆಲಸದ ಸ್ಥಳದಲ್ಲಿ ಲಾಭವಿದ್ದರೂ ಕೆಲಸವನ್ನೇ ಬಿಟ್ಟುಬಿಡೋಣ ಎನ್ನಿಸಬಹುದು. ಆದರೆ ಸಾವರಿಸಿಕೊಳ್ಳಿ. ಸೂಕ್ತವಾಗಿ ನಿಯಂತ್ರಿಸಿಕೊಳ್ಳಿ. ಸೂರ್ಯ ಸಿದ್ಧಿಯನ್ನೂ, ಸಂಪಾದಿಸುವುದರ ಜತೆಗೆ ಪರಿತಪಿಸುವ ಮನಸ್ಸಿನ ನಿಯಂತ್ರಣಕ್ಕಾಗಿ ಚಂದ್ರನನ್ನೂ ಸ್ತುತಿಸಬೇಕು. ಸೂಕ್ತವಾದ ಸಂದರ್ಭ ಜನ್ಮಕುಂಡಲಿಯಲ್ಲಿ ಗುರುವಿನ ಬಗೆಗಾಗಿ ಅಗತ್ಯವಿದ್ದಲ್ಲಿ ಕನಕಪುಷ್ಯರಾಗದ ಹರಳನ್ನು ಬಲಗೈ ತೋರುಬೆರಳಿಗೆ ಧರಿಸಿ. ದತ್ತನನ್ನು ಸ್ತುತಿಸಿ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 4

ಮಕರ: ಅಗೋಚರ ಶಕ್ತಿಗಳನ್ನು ತಿಳಿಯುವ ಕುತೂಹಲದೊಂದಿಗೆ ಸಾಮಾಜಿಕ ಜೀವನದಲ್ಲಿ ಸ್ಥಾನಮಾನಗಳನ್ನು ಪಡೆಯಲು ಕೂಡ ಪ್ರಯತ್ನ ನಡೆಸುತ್ತೀರಿ. ಆದರೆ ಮನಸ್ಸನ್ನು ಚಲನಶೀಲ ಇರಿಸಬೇಕಾದ ಚಂದ್ರನನ್ನು ಶನೈಶ್ಚರ ತನ್ನ ಹಿಡಿತದಲ್ಲಿ ಬಂಧಿಸಿರುವುದರಿಂದ ಮನಸ್ಸು ವಿಚಿತ್ರವಾದ ತೊಳಲಾಟಗಳಭ್ನು ನಡೆಸುತ್ತಿರುತ್ತದೆ. ಶನೈಶ್ಚರನೂ ನಿಮ್ಮ ಪಾಲಿಗೆ ಈಗ ಶಕ್ತಿ ಒದಗಿಸಲು ಅಸಹಾಯಕತೆ ಹೊಂದಿದ್ದಾನೆ. ಜಗನ್ಮಾತೆ ಭವಾನಿಯ ಧ್ಯಾನದಿಂದ ದಾರಿ ಸಿಕ್ಕೀತು. ದಶರಥ ರಾಜ ವಿರಚಿತ ಶನೈಶ್ಚರ ಸ್ವಾಮಿ ಸ್ತೋತ್ರ ಪಠಿಸಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 6

ಕುಂಭ: ಏಟುಗಳು ಬೀಳಲಿರುವ ಕಾರಣಕ್ಕಾಗಿ ಈಗಿನಿಂದಲೇ ಎಚ್ಚರ ಕಾದುಕೊಳ್ಳಿ. ಗುರುಬಲವಿದ್ದರೂ ಸರ್ಪದ ಬಾಲ (ಕೇತು) ಉಸಿರುಗಟ್ಟಿಸಿದೆ. ಧಾವಂತದಿಂದ ಹೆಜ್ಜೆ ಇಡದಿರಿ. ಇಡುವ ಹೆಜ್ಜೆಯನ್ನು ಗಟ್ಟಿಯಾಗಿಡಿ. ಹಣದ ಹೊಳೆ ಹರಿಸುವ ಯೋಜನೆಗಳನ್ನು ರೂಪಿಸುವಾಗ ಸಂಬಂಧಿಸಿದ ವಿಚಾರದ ಒಳಹೊರಗೆಲ್ಲ ನಿಮಗೆ ಚೆನ್ನಾಗಿ ತಿಳಿದಿದ್ದರೆ ಮಾತ್ರ ಮುನ್ನುಗ್ಗಿ. ಯಾರನ್ನೋ ನಂಬಿ ಹೆಜ್ಜೆ ಇರಿಸುವ ಸಂಕಲ್ಪ ಕೈಬಿಡಿ. ಸಿನಿಮಾ ತಯಾರಿಕೆ, ಹಂಚಿಕೆ, ಚಿನ್ನಾಭರಣ ವ್ಯವಹಾರಗಳಿಗೆ ಸದ್ಯ ಸುರಕ್ಷಿತ ವರ್ತಮಾನ. ಮಹಾಲಕ್ಷ್ಮಿಯನ್ನು ಸ್ತುತಿಸಿ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 8

ಮೀನ: ಕೆಲವು ಬದಲಾವಣೆಗಳನ್ನು ಒಪ್ಪಿಕೊಳ್ಳುವ ವ್ಯವಧಾನ ತೋರಿಸಿ. ಕೆಲವು ಬದಲಾವಣೆಗಳನ್ನು ಒಪ್ಪಿಕೊಳ್ಳಲೇಬೇಕು. ಆದರೆ ಏಕಾಏಕಿ ಭಾರೀ ಬದಲಾವಣೆ ಮಾಡುತ್ತ ಹೋದರೆ ನಿಮ್ಮ ಶಕ್ತಿ ಕುಗ್ಗಿತೆ ಎಂಬ ಅನುಮಾನ ಬಾರದಿರದು. ನಿಮ್ಮ ಓಟದ ತೀವ್ರತೆಯನ್ನು ತಗ್ಗಿಸಿ. ದೊರಕಬೇಕಾದ ಬಲ ನಿಮಗೆ ದಕ್ಕುತ್ತಿಲ್ಲ. ಆದರೆ ನಿಮ್ಮ ಚಾತುರ್ಯ, ವ್ಯವಧಾನಗಳ ಮಟ್ಟ ಹೇಗಿದೆಯೆಂದರೆ ಸದ್ಯ ಎಂತಹ ವ್ಯತಿರಿಕ್ತ ಪರಿಸ್ಥಿತಿಯನ್ನು ಎದುರಿಸಬಲ್ಲಿರಿ. ಆದರೆ ಮುಂದೆ ಶ್ರೀಹರಿಯ ದಿವ್ಯಾನುಗ್ರಹ ಬೇಕು.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 3

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...