More

    ಈ ರಾಶಿಯವರು ನಿರ್ಣಯ ತೆಗೆದುಕೊಳ್ಳಬೇಕಾದರೆ ಅತ್ಯಂತ ಜಾಗರೂಕರಾಗಿರಬೇಕು: ವಾರಭವಿಷ್ಯ

    ಈ ರಾಶಿಯವರು ನಿರ್ಣಯ ತೆಗೆದುಕೊಳ್ಳಬೇಕಾದರೆ ಅತ್ಯಂತ ಜಾಗರೂಕರಾಗಿರಬೇಕು: ವಾರಭವಿಷ್ಯಮೇಷ ರಾಶಿ

    ಮೇಷ ರಾಶಿಗೆ ಸೂರ್ಯನು ಬಂದು ಬಾಳನ್ನು ಬೆಳಕಾಗಿಸುವುದರಲ್ಲಿ ಸಂದೇಹವಿಲ್ಲ. ರಾಹು ಮೇಷದಲ್ಲಿ ಇರುವುದರಿಂದ ಅಲ್ಪ ಮಟ್ಟಿಗೆ ರವಿಯ ಗ್ರಹಣ ಆಗಿ ಕೆಲಸ ಕಾರ್ಯ ತಡವಾಗುತ್ತದೆ. ಜನ್ಮ ಗುರು ಕೆಲವೊಮ್ಮೆ ಮನಸ್ಸಿಗೆ ದುಃಖ ತಂದು ಕೆಲಸಗಳನ್ನು ತ್ವರಿತ ಗತಿಯಲ್ಲಿ ಮಾಡಲಾಗದೆ ನಿರಾಸೆ ಉಂಟು ಮಾಡುತ್ತಾನೆ. ಏಕಾದಶ ಶನಿ ಮೇಲೆ ನೀವು ನಂಬಿಕೆ ಇಟ್ಟು ಮಹಾದೇವನನ್ನು ಪೂಜಿಸಿ. ಕೆಲಸಗಳಲ್ಲಿ ತಕ್ಕ ಮಟ್ಟಿಗೆ ಉತ್ತಮ ಫಲಿತಾಂಶ ನೀಡುತ್ತಾನೆ.

     

    ವೃಷಭ ರಾಶಿ

    ವೃಷಭ ರಾಶಿಗೆ ಸೂರ್ಯ ಬಂದಿರುವುದು ತಾಪ ಜಾಸ್ತಿ ಮಾಡಿ ಸಂಶಯದಿಂದ ಕೂಡಿದ ವಿಷಯ ಆಚೆ ಬರುತ್ತದೆ. ದ್ವಾದಶಕ್ಕೆ ಗುರು ಬಂದು ಸೇರಿ ಕೆಲಸಗಳು ನೀವು ಅಂದುಕೊಂಡಂತೆ ಮಾಡಲು ಸಾಧ್ಯವಾಗದೇ ಕೈಚೆಲ್ಲಿ ಕೂರುವ ಸಮಯ. ದಶಮದಲ್ಲಿರುವ ಶನಿಯಿಂದ ತೊಂದರೆ ಇರುವುದಿಲ್ಲ. ನಿಮ್ಮ ಅನಂತ ಭಕ್ತಿ ದುರ್ಗ ಚಂಡಿಕಾ ಲಕ್ಷಿಯಮೇಲೆ ಇದ್ದರೆ ದುರ್ಗೆ ದಡವನ್ನು ಸೇರಿಸುತ್ತಾಳೆ.

     

     

    ಮಿಥುನ ರಾಶಿ

    ಏಕಾದಶದಲ್ಲಿ ಸೂರ್ಯ, ಬುಧನಿಂದ ಜನಪ್ರಿಯತೆ ಬರುತ್ತದೆ. ಸೂರ್ಯನೊಂದಿಗೆ ರಾಹು ಇರುವುದರಿಂದ ಒತ್ತಡ ಇದ್ದು, ನಿರ್ಣಯ ತೆಗೆದುಕೊಳ್ಳಬೇಕಾದರೆ ಅತ್ಯಂತ ಜಾಗರೂಕರಾಗಿರಬೇಕು. ಸೂರ್ಯನನ್ನು ಕೆಂಪು ಪುಷ್ಪದಿಂದ ಪೂಜಿಸಿ. ಆದಿತ್ಯ ಹೃದಯ ಪಾರಾಯಣ ಮಾಡಿದರೆ ನಿಮಗೆ ಕೀರ್ತಿಯೂ ಲಾಭವೂ ಉಂಟಾಗುತ್ತದೆ. ಖರ್ಚಿಗೆ ಕಡಿವಾಣ ಹಾಕಿಕೊಂಡು ಮುಂದೆ ಸಾಗಿರಿ.

     

    ಕಟಕ ರಾಶಿ

    9ರ ಗುರು ಇನ್ನು ಒಂದು ವಾರ ಅಲ್ಲೇ ಇದ್ದು ಸರ್ವ ಸುಖ ಆನಂದ ಕೊಟ್ಟಿದ್ದಾನೆ. ಶನಿ ಅಷ್ಟಮದಲ್ಲಿ ಇದ್ದರೂ ತೊಂದರೆ ನೀಡಿಲ್ಲ ಎಂದಾದರೆ ನೀವು ಸಾಂಬಸದಾಶಿವನನ್ನು ಪೂಜಿಸಿ ಎಂದು ಮತ್ತೊಮ್ಮೆ ನೆನಪಿಸುತ್ತೇನೆ. ಶಿವ ಪಂಚಾಕ್ಷರಿ ಪಾರಾಯಣ ಮಾಡಿ. ಆಯಾಸವಾಗುವ ಕೆಲಸ ಮಾಡದೆ ಮುಂದೆ ಸಾಗಿರಿ.

     

    ಸಿಂಹ ರಾಶಿ

    ಸಿಂಹ ರಾಶಿಯವರು ಸಪ್ತದಿನ ಪರ್ಯಂತ ನಿಮ್ಮ ಬಾಯಿಗೆ ಬೀಗ ಹಾಕಿಕೊಂಡರೆ, ಇದೇ 21ರಂದು ನವಮಕ್ಕೆ ಗುರು ಬಂದು ಭಾಗ್ಯದ ಬಾಗಿಲು ತೆರೆಯುತ್ತಾನೆ. 7ರಲ್ಲಿ ಶನಿ ಇರುವುದರಿಂದ ಯಾರನ್ನೂ ಬೈಯಬೇಡಿ, ಯಾರೊಂದಿಗೂ ಜಗಳ ಆಡಬೇಡಿ. ಕೂಡಿಟ್ಟ ಪುಣ್ಯ ಕಳೆದುಕೊಳ್ಳಬೇಡಿ. ಸೂರ್ಯನು ಸಪ್ತಮದಲ್ಲಿ ಇದ್ದು ನಿಮ್ಮ ಬಾಳಿನಲ್ಲಿ ಸಾಕಷ್ಟು ಪರಿಣಾಮ ಬೀರಿ ಜ್ಞಾನದ ಬೆಳಕನ್ನು ನೀಡಿ ಅನುಕೂಲ ಮಾಡುತ್ತಾನೆ.

     

    ಕನ್ಯಾ ರಾಶಿ

    ಈ ವಾರದ ನಂತರದಲ್ಲಿ ಗುರು ಕಟಾಕ್ಷ ಮಾಯವಾಗಿ ವ್ಯವಹಾರ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲು ಆರಂಭಿಸುತ್ತದೆ. ಅದಕ್ಕೆ ಪರಿಹಾರ ಈ ಜಗತ್ತಿಗೆ ಮಹಾ ವಿಷ್ಣುವು ಗುರುವಾಗಿ ಅನುಗ್ರಹಿಸಿ ನಿಮ್ಮನ್ನು ಕಾಪಾಡಲು ಇದ್ದಾನೆ. ಅವನ ನಾಮ ಉಚ್ಚರಿಸಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ನಿಮ್ಮ ಹಣೆಯ ಮೇಲಿನ ದುಷ್ಟಾಕ್ಷರಗಳನ್ನು ಸ್ಪಷ್ಟಾಕ್ಷರಗಳನ್ನಾಗಿ ಶ್ರೀಮನ್ ಮಹಾವಿಷ್ಣುವೇ ಬದಲಾಯಿಸುತ್ತಾನೆ.

     

     

    ತುಲಾ ರಾಶಿ

    ನೀವು ಕಾದು ಕೋಪಗೊಂಡರೆ ಅದಕ್ಕೆ ಪರಿಹಾರ ಇಲ್ಲ. ನಮ್ಮ ಸಮಯಕಾಗಿ ಕಾಯಬೇಕು. ಗುರು ಸಪ್ತಮಕ್ಕೆ ಬಂದು ಒಳ್ಳೆಯ ಸಮಯವನ್ನು ನಿಮಗೆ ನೀಡಿ, ಕೀರ್ತಿ, ಧೈರ್ಯ ಕೊಡುತ್ತಾನೆ. ಶರೀರಕ್ಕೆ ಸಕಾರವನ್ನು, ಮನಸಿಗೆ ಆನಂದವನ್ನು ನೀಡುತ್ತಾನೆ. ಪಂಚಮ ಶನಿಗೆ ಶನಿ ಅಷ್ಟೋತ್ತರ ಪಾರಾಯಣ ಮಾಡಿ.

     

    ವೃಶ್ಚಿಕ ರಾಶಿ

    ರಾಶಿ ಅಧಿಪತಿಯಾದ ಸುಬ್ರಹ್ಮಣ್ಯ ದೇವರು ನಿಮ್ಮ ಕೆಲಸ ಪೂರ್ತಿ ಮಾಡಿಕೊಡುತ್ತಾನೆ. 6ಕ್ಕೆ ಗುರು ಬಂದರೂ ಪರವಾಗಿಲ್ಲ. ಸಕಲ ಗ್ರಹ ಬಲ ನೀನೇ ಎಂದು ಸುಬ್ರಹ್ಮಣ್ಯ ದೇವರ ಧ್ಯಾನವು ಮಲಗುವವರೆಗೂ ಇದ್ದರೆ ಮುನ್ನಡೆಸುತ್ತಾನೆ. ಗ್ರಹ ಬಲ ಇಲ್ಲದಿದ್ದರೂ ದೈವಬಲ ಒಂದಿದ್ದರೆ ಸಾಕು ಎಂದು ತೋರಿಸಿಕೊಡುತ್ತಾನೆ. ಮಣ್ಣಿನಲ್ಲಿ ಮಾಡುವ ಕೆಲಸದಿಂದ ಸಲೀಸಾಗಿ ದುಡ್ಡು ಹರಿದುಬರುತ್ತದೆ.

     

    ಧನುರ್ ರಾಶಿ

    ಧನು ರಾಶಿಯವರಿಗೆ ಮಹಾ ಭಾಗ್ಯದ ಬಾಗಿಲು ತೆರೆದು ಗುರು ದತ್ತಾತ್ರೇಯನೇ ಪಂಚಮದಲ್ಲಿ ನಿಂತು ಪಂಚಮಮ್ ಕಾರ್ಯ ಸಿದ್ಧಿ ಎಂದು ಮುನ್ನಡೆಸುತ್ತಾನೆ. 3ರಲ್ಲಿರುವ ಶನಿಯು ಕಾರ್ಯಗಳಲ್ಲಿ ಜಯಶೀಲರನ್ನಾಗಿ ಮಾಡಿ ಎಲ್ಲರಿಗೂ ಸಂತೋಷ ನೀಡಿ ಉಪಕಾರ ಮಾಡುವ ಸಮಯ ಇದು. ಶಬ್ದ ಮಾಧ್ಯಮದಲ್ಲಿ ಮಧುರವಾದ ಮಾತು ಇರಬೇಕು. ಕಠಿಣ ನಿರ್ಧಾರ, ಕಠಿಣವಾದ ಮಾತು ಬೇಡ.

     

    ಮಕರ ರಾಶಿ

    ಮಕರಾಧಿಪತಿ ಶನಿಯು ದ್ವಿತೀಯದಲ್ಲಿದ್ದು ಚತುರ್ಥಕ್ಕೆ ಸೂರ್ಯನು ಬಂದು ರಾಹುವಿನ ಜತೆ ಇದ್ದಾನೆ. ಆತುರದ ನಿರ್ಧಾರ ಬೇಡ. ಹಣವನ್ನು ಹೂಡುವುದು ಬೇಡ. ನಿಧಾನವಾಗಿ ಸಾಗಿ. ಸ್ಲೋ ಆಂಡ್ ಸ್ಟಡಿ ವಿನ್ ದ ರೇಸ್ ಎಂದು ಜ್ಞಾಪಿಸಿಕೊಂಡು ಅನುಷ್ಠಾನಕ್ಕೆ ತಂದರೆ ನಿಮ್ಮ ಬದುಕು ಚೆನ್ನಾಗಿರುತ್ತದೆ. ಗುರು ಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ.

     

    ಕುಂಭ ರಾಶಿ

    ಶನಿ ಸುಕ್ಷೇತ್ರದಲ್ಲಿ ಇರುವುದು ಒಳ್ಳೆಯದೇ. ಯಾವ ಕೆಡುಕು ಉಂಟಾಗುವುದಿಲ್ಲ. ಕೇಳಿಕೊಂಡು ಮಾಡುವಂತಹ ನಿರ್ಧಾರಗಳು ನಿಮ್ಮಿಂದ ಆಗುವುದು ಬೇಡ. ದ್ವಿತೀಯ ಗುರು ನಿಮಗೆ ಸಹಕಾರ ಕೊಡುತ್ತಾನೆ. ಇನ್ನೇನು ಒಂದೇ ವಾರ ಗುರು ಮುಂದೆ ಸಾಗಲಿದ್ದು ನಿಮ್ಮ ಅಂತಿಮ ಘಟ್ಟದ ಕೆಲಸ ಮಾಡಿಕೊಂಡು ಸಂತೋಷಪಡಿ.

     

    ಮೀನ ರಾಶಿ

    ಮೀನ ರಾಶಿಯವರಿಗೆ ಇನ್ನೇನು ಒಂದೇ ವಾರ ಮೇಷಕ್ಕೆ ಗುರು ಬಂದಾಗ ಶನಿಯ ತಾಪ ಕಡಿಮೆಯಾಗಿ ಒಳ್ಳೆಯ ಕಾಲ ಆರಂಭವಾಗುತ್ತದೆ. ಆರೋಗ್ಯದ ಬಗ್ಗೆ ಗಮನ ಇರಲಿ. ಶರೀರದ ತೂಕವನ್ನು ಪರೀಕ್ಷಿಸಿ. ನಿಯಮಿತ ಆಹಾರ ಸೇವನೆ ಶರೀರವನ್ನು ಸದೃಢವಾಗಿರುತ್ತದೆ. ಮೀನ ರಾಶಿಯವರು ಗುರುವಿನ ಅಧಿಪತ್ಯ ಹೊಂದಿರುವುದರಿಂದ ಉಮಾಮಹೇಶ್ವರನನ್ನು ಪೂಜಿಸಲೇಬೇಕು.

    ಭಾಜಪದ ಮತ್ತೊಂದು ವಿಕೆಟ್ ಪತನ, ಶೆಟ್ಟರ್​ ಬಿಜೆಪಿಗೆ ಗುಡ್​ಬೈ; ನಾಳೆಯೇ ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts