ವಾರ ಭವಿಷ್ಯ: ಈ ರಾಶಿಯವರಿಗೆ ಹೋರಾಟದ ದಿನಗಳಾಗಿವೆ. ಧೈರ್ಯದಿಂದ ಮುನ್ನುಗ್ಗುವ ಸ್ವಭಾವ ಬೆಳೆಸಿಕೊಳ್ಳಿ

ಮೇಷ: ಹಣಕಾಸಿನ ಬಗ್ಗೆ ತುಸು ಬಿಗಿಯಾಗಿರಿ. ಮುಖ್ಯವಾಗಿ ಧನಾಧಿಪತಿಯು ಛಿದ್ರಸ್ಥಾನ ಸ್ಥಿತನಾಗಿರುವುದರಿಂದ ಶನೈಶ್ಚರನು ಧೈರ್ಯ ಕುಗ್ಗಿಸುವ ವಿಚಾರದಲ್ಲಿ ಹಸ್ತಕ್ಷೇಪ ನಡೆಸುತ್ತಾನೆ. ಕುಸುಮಾಲೆ ಹೂವಿನಿಂದ ಗಣಪತಿಯನ್ನು ಆರಾಧಿಸಿ. ಒತ್ತಡ ನಿವಾರಣೆಯಾಗುತ್ತದೆ. ಹುಲ್ಲು ಅತಿಯಾಗಿ ಬೆಳೆದ ಜಾಗದಲ್ಲಿ ಹೆಚ್ಚು ಸಂಚರಿಸದಿರಿ. ಮಕ್ಕಳ ಬಗ್ಗೆ ನಿಮ್ಮ ಆಸಕ್ತಿ ಮತ್ತು ಕಾಳಜಿಯಿಂದ ಮನಸ್ಸಿಗೆ ನೆಮ್ಮದಿ. ಒಳ್ಳೆಯ ಸಮಾಚಾರಗಳನ್ನು ಮಕ್ಕಳ ಸಂಬಂಧವಾಗಿ ಪಡೆಯುತ್ತೀರಿ. ಮರಮಟ್ಟುಗಳ ವ್ಯಾಪಾರ ಬೇಡ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 6

ವೃಷಭ: ನಿಮ್ಮ ಬೇಡಿಕೆಗಳು ಹಲವು ಹದಿನೆಂಟು ಎಂಬುದು ಸತ್ಯ. ಆದರೆ ಒಂದೇ ಸಲಕ್ಕೆ ಎಲ್ಲವನ್ನೂ ಈಡೇರಿಸಿಕೊಳ್ಳುವ ಉದ್ವಿಗ್ನತೆಗೆ ಒಳಗಾಗದಿರಿ. ಒತ್ತಡಗಳು ಕಾರಣವಿರದೆ ನಿಮ್ಮನ್ನು ಸುತ್ತುತ್ತಲೇ ಇರುವ ಕಾಲವಿದು. ನಿರಂತರವಾದ ಹೋರಾಟವೇನೋ ಇದು ಎಂಬ ಆತಂಕ ನಿಮ್ಮನ್ನು ಬಾಧಿಸುತ್ತದೆ. ಪ್ರಧಾನವಾಗಿ ನೀವು ಶಿವನನ್ನು, ದುರ್ಗೆಯನ್ನು, ಹನುಮನನ್ನು ಸ್ತುತಿಸಿ. ಹನುಮಾನ್ ಚಾಲೀಸಾ ಓದಿ. ಮನೆಗೆದ್ದು ಮಾರುಗೆಲ್ಲು ಎಂಬುದು ನಿಮ್ಮ ನಿಲುವಾಗಿರಲಿ. ಮಾನಸಿಕ ಶಾಂತಿಗೆ ದಾರಿ ಲಭ್ಯ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 2


ಮಿಥುನ: ರಾಹುವಿನ ಹಿಡಿತವಿದೆ ರಾಶಿಯ ಮೇಲೆ. ವಿಷಯುಕ್ತವಾದ ರಾಹುವನ್ನು ಅಮೃತಮಯವಾಗಿಸಲು ವಿಷ್ಣು ಸಹಸ್ರ ನಾಮಾವಳಿ ಪಠಿಸಿ. ಬೌದ್ಧಿಕ ಕುಶಲತೆಗೆ ಇದರಿಂದ ಸಕಾರಾತ್ಮಕ ಸ್ಪಂದನೆ ಲಭ್ಯ. ಖರ್ಚು ವೆಚ್ಚಗಳ ಮೇಲೆ ಹತೋಟಿ ಸಾಧಿಸಿ. ಕಾಯಿಲೆಗಳ ವಿಚಾರವೂ ಮಿಸುಕಾಟಗಳನ್ನು ತರಬಹುದು. ಆಟೊಮೊಬೈಲ್ಸ್, ಭೂಮಿ ಸಂವರ್ಧನ, ಕಟ್ಟಡ ಕೆಲಸ ನಿರ್ಮಾಣ ಕಾರ್ಯಗಳನ್ನು ಎಚ್ಚರದಿಂದ ನಡೆಸಿ. ನಿಮ್ಮ ಮಾತಿನ ಧಾಟಿ ನಿಮಗೆ ಸಹಾಯಕವಾಗಲಿದೆ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 9

ಕಟಕ: ರಾತ್ರಿ ನೆನೆಸಿದ ಏಳೆಂಟು ಒಣದ್ರಾಕ್ಷಿಗಳನ್ನು ಒಂದು ಪ್ಲೇಟಿನಲ್ಲಿರಿಸಿ ಚಂದ್ರನನ್ನು ಧ್ಯಾನಿಸಿ. ಈ ನೀರಿಗೆ ಒಂದೆರಡು ಹನಿ ಜೇನುತುಪ್ಪ ಬೆರೆಸಿ, ಮನೆಯ ಈಶಾನ್ಯ ಮೂಲೆಯ ಭಾಗದಲ್ಲಿ ಯಾರೂ ತುಳಿಯದ ಕಡೆ ಚೆಲ್ಲಿ. ಚಂದ್ರಧ್ಯಾನ ಮುಗಿಸಿ, ದ್ರಾಕ್ಷಿಗಳನ್ನು ಸೇವಿಸಿ. ಕೆಲವು ಜಂಟುಗಳಿಂದ ಒದಗುವ ಅರಿಷ್ಟಗಳನ್ನು ನಿವಾರಿಸಿಕೊಳ್ಳಲಿದು ಸುಲಭದ ದಾರಿ. ವ್ಯಾಪಾರ ವಹಿವಾಟು ಎಂದಿನಂತೆ ಇರಲಿ. ದೊಡ್ಡ ಬಂಡವಾಳ ಹಾಕುವ ವಿಚಾರವನ್ನು ಸರ›ನೆ ಕೈಗೊಳ್ಳದಿರಿ. ಶೇರು ವ್ಯವಹಾರದಲ್ಲಿ ಎಚ್ಚರ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 1


ಸಿಂಹ: ಹೋರಾಟದ ದಿನಗಳಾಗಿವೆ. ಧೈರ್ಯದಿಂದ ಮುನ್ನುಗ್ಗುವ ಸ್ವಭಾವ ಬೆಳೆಸಿಕೊಳ್ಳಿ. ಧೈರ್ಯವೇ ಎಲ್ಲದ್ದಕ್ಕೂ ಪ್ರಧಾನ ಎನ್ನುವುದನ್ನು ತಿಳಿದಿದ್ದೀರಿ. ಚಾತುರ್ಯದಿಂದ ಕಿರಿಕಿರಿ ತರುವ ವ್ಯಕ್ತಿಗಳನ್ನು ನಿಯಂತ್ರಿಸಿ. ಪರೋಪಕಾರಿ ಪಾಪಣ್ಣರಾಗದಿರಿ. ಎಲ್ಲದಕ್ಕೂ ಒಂದು ಮಿತಿ ಇದೆ. ಪರೋಪಕಾರದಿಂದ ತೊಂದರೆ ಬರುತ್ತವೆ. ನಿಮ್ಮ ಅನುಭವದ ಸಾಂದ್ರತೆ ಗಟ್ಟಿಯಾಗಿದ್ದರೂ ಕೆಟ್ಟದ್ದು ಸಂಭವಿಸಬಹುದು. ದ್ವಾದಶಾದಿತ್ಯರನ್ನು ಸ್ತುತಿಸಿ. ಮಾರುತಿಯನ್ನು ಆರಾಧಿಸಿ. ಆತ ಅನುಗ್ರಹಿಸುತ್ತಾನೆ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 7

ಕನ್ಯಾ: ನೀಚ ಶುಕ್ರನ ಸ್ಥಿತಿಗತಿ ರಾಶಿಗೇ ಆವರಿಸುವುದರಿಂದ ದುರ್ಗಾಳನ್ನು ಮನಸ್ಸಿನ ಏಕಾಗ್ರತೆಯೊಂದಿಗೆ ಧ್ಯಾನಿಸಿ. ಚೆನ್ನಾಗಿ ದುಡಿದು ಸಂಪಾದಿಸಲು ಈ ವಾರದ ಕಾಲಾವಧಿ ಉತ್ತಮವಾಗಿದೆ. ವಾಣಿಜ್ಯ ವಿಚಾರಗಳಲ್ಲಿ ಬಾಳ ಸಂಗಾತಿಯ ಅಭಿಪ್ರಾಯಗಳನ್ನೂ ಕೇಳಿಸಿಕೊಳ್ಳಿ. ಗುರು ಬಲದ ಧನಾತ್ಮಕ ಶಕ್ತಿಲಾಗಾಯ್ತಿನ ನಿಮ್ಮ ಮನೆತನದ ವ್ಯವಹಾರ, ವಹಿವಾಟಿನಲ್ಲಿ ಉತ್ತಮ ಜಿಗಿತಕ್ಕೆ ಅವಕಾಶ ಮಾಡಿಕೊಡಲಿದೆ. ಸೇವಕರನ್ನು ಪ್ರೀತಿಯಿಂದ ಮಾತನಾಡಿಸಿ. ಒಳಿತಾಗುತ್ತದೆ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 9

ತುಲಾ: ನಿಮ್ಮ ಒಳ್ಳೆಯ ಕೆಲಸ ಕಾರ್ಯಗಳು ಕೈಗೂಡಲು ಇದೀಗ ಸೂಕ್ತ ಸಮಯ. ಪ್ರತಿದಿನ ಶ್ರೀವೆಂಕಟೇಶ್ವರ ಅಷ್ಟೋತ್ತರ ನಾಮಾವಳಿ, ನಂದೀಶ್ವರನ ಕುರಿತಾದ ಸ್ತುತಿಗಳನ್ನು ಮಾಡಿ. ಕೃಷಿಯಿಂದ ಹಿಡಿದು ಹಲವು ವಿಚಾರಗಳ ವಹಿವಾಟಿನಲ್ಲಿ ಸಿದ್ಧಿ ಲಭ್ಯ. ಅಸಂಗತವಾದ ರೀತಿಯಲ್ಲಿ ಕೆಲವು ಭಿನ್ನ ಲಿಂಗಿಗಳು ವರ್ತಿಸುವ ಸಾದ್ಯ ಅಲ್ಲಗಳೆಯುವಂತಿಲ್ಲ. ತೊಂದರೆ ತರುವ ಸ್ಥಿತಿಯನ್ನು ನಿಮ್ಮ ಸಂಯಮದಿಂದ ನಿಯಂತ್ರಿಸಲು ಅವಕಾಶವಿದೆ. ಯಾವುದೇ ಸಂದರ್ಭದಲ್ಲಿಯೂ ಕಗ್ಗಂಟುಗಳನ್ನು ಬಿಡಿಸಿಕೊಂಡು ಹೊರಬರಲು ಸಾಧ್ಯ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 3

ವೃಶ್ಚಿಕ: ನಿಮ್ಮದು ಧಾರಾಳಿತನದ ಸ್ವಭಾವ, ಇದು ಶಕ್ತಿಯೂ ಹೌದು. ಒಂದು ಮಿತಿಯೂ ಹೌದು. ಯಾವುದೇ ವಿಚಾರವನ್ನೂ ಸರ›ನೆ ಆಯ್ತು ಸರಿ ಎಂದು ಒಪ್ಪಿಕೊಳ್ಳದಿರಿ. ನೋಡೋಣ, ಸ್ವಲ್ಪ ಸಮಯ ಕೊಡು ಎಂಬುದಾಗಿ ವಿನಂತಿಸಿ. ನಿಮ್ಮ ಯೋಚನೆಗಳನ್ನು ಪೂರ್ತಿಯಾಗಿ ವಿಶ್ಲೇಷಿಸಿದ ನಂತರವೇ ನಿರ್ಧಾರಕ್ಕೆ ಬನ್ನಿ. ಕೈಕೊಡುವವರೇ ಅಧಿಕವಾಗಿ ಇರುತ್ತಾರೆ. ಜಾಗ್ರತೆ ಇರಲಿ. ಕೈಕೆಳಗಿನವರು ಅತಿ ವಿನಯ ತೋರಿಸಿ ನಿಮ್ಮಿಂದ ಸಹಾಯ ಪಡೆದು ನಿಮ್ಮನ್ನೇ ಸಿಕ್ಕಿಸಿ ಹಾಕುತ್ತಾರೆ. ಶಕ್ತಿಶಾಲಿ ರಾಜಕಾರಣಿಗಳಿಗೂ ಇದು ತಪ್ಪಿದ್ದಲ್ಲ. ಪಂಚಮುಖಿ ಹನುಮಂತ ಕವಚ ಓದಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 4

ಧನು: ಏರು ರಸ್ತೆಯಲ್ಲಿ ನೀವಿದ್ದರೂ ಗುರುಬಲ ಎನ್ನುವ ಮರಗಳ ನೆರಳು ನಿಮ್ಮನ್ನು ತುಸುಮಟ್ಟಿಗೆ ನಿರಾಶವಾಗಿಸುತ್ತದೆ. ಹಠ, ಛಲ, ರೊಚ್ಚುಗಳು ಸಕಾರಾತ್ಮಕವಾಗಿರಲಿ. ಸ್ಥೈರ್ಯ ಧೈರ್ಯಗಳಿಂದ ಸಾಡೇಸಾತಿ ಶನೈಶ್ಚರ ಕಾಟವನ್ನು ಎದುರಿಸಲು ಸೂಕ್ತ ನಿಶ್ಚಯ ಮಾಡಿ. ಎದುರಾಗುವ ಕಷ್ಟಗಳನ್ನು ಆಗ ಎದುರಿಸಿ ಗೆಲ್ಲುವುದಲ್ಲದೇ ಸಂಕಲ್ಪಿತ ಕಾರ್ಯ ಸಿದ್ಧಿಗೆ ದಾರಿ ಲಭ್ಯ. ನೀವು ನಿರೀಕ್ಷಿಸಿದ ವೇಗದಲ್ಲಿ ಸಾಧ್ಯ ಎಂದು ಅನ್ನಲಾಗದು. ಚಿಕ್ಕ ಕನ್ನಡಿಗೆ ಕಪು್ಪ ಕಾಡಿಗೆ ಬಳಿದು, ಅದನ್ನು ಅಳಿಸಿಬಿಡಿ. ನಂತರ ಕನ್ನಡಿ ನೋಡುತ್ತ, ದಶರಥರಾಜ ವಿರಚಿತ ಶನೈಶ್ಚರ ಸ್ತೋತ್ರ ಓದಿ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 1

ಮಕರ: ಕಾಲಾಯ ತಸ್ಮೈ ನಮಃ. ಕಾಲಕ್ಕೆ ತಲೆ ಬಗ್ಗಿಸಿ ನಡೆಯಿರಿ. ಆನೆಯ ಎದುರು ಶ್ವಾನವು ಏನೂ ಮಾಡಲು ಸಾಧ್ಯ ಎಂಬುದು ಹೌದಾದರೂ ಸುಖಾಸುಮ್ಮನೆ ದೂರದಿಂದ ಬೊಗಳಿ ನಿಮ್ಮ ಸಮಾಧಾನ ಕೆಡುವ ಸಾಧ್ಯತೆ ಜಾಸ್ತಿ. ನಿಮ್ಮಲ್ಲಿ ಆನೆಯ ಬಲವಿದೆಯೆಂಬುದು ನಿಜ. ಆದರೆ ದೂರದಿಂದ ಬೊಗಳುವ ಶ್ವಾನಗಳನ್ನು ನೀವು ನಿಯಂತ್ರಿಸಲಾರಿರಿ. ಒಂದೇ ಒಂದು (ಶಾಂತಿ ಸಮಾಧಾನಗಳಿಗೆ ಕಾರಣವಾಗುವ) ಸಂಜೀವಿನಿ ಎಂದರೆ ಶಾಂತಚಿತ್ತದಿಂದ ಶನೈಶ್ಚರ, ಚಂದ್ರಪೀಡಾ ನಿವಾರಣಾ ಸ್ತೋತ್ರ ಓದಿ. ಮನಸ್ಸಿಗೆ ನೆಮ್ಮದಿ ಕೊಡುವ ಅಮೃತದ ಧಾರೆ ಇದರಿಂದ ನಿಮಗೆ ಲಭ್ಯ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 3

ಕುಂಭ: ನಿಮ್ಮನ್ನು ಈಗ ಯಶಸ್ಸಿನ ಶಿಖರಕ್ಕೆ ಮೇಲೇರಿಸಲು ಶಿವನೊಲುಮೆ ಅಬಾಧಿತವಾಗಿದೆ. ಅನೂಹ್ಯ ಶಕ್ತಿಯ ಬಲದಿಂದ ನಿಮ್ಮ ಧ್ಯೇಯೋದ್ದೇಶಗಳು ನೆರವೇರುವುದಾದರೂ, ಮನೆಯಲ್ಲಿ ಸಮತೋಲನ ತಪ್ಪದಂತೆ ಕುಟುಂಬದ ಸದಸ್ಯರ ಜತೆ ವ್ಯವಹರಿಸಿ. ಕೆಲಸದಲ್ಲಿ ಯಶಸ್ವಿಯಾಗಿ ಸಫಲತೆಯ ದಿವ್ಯಾಚರಣೆ ನಡೆಸುತ್ತಿರುವಾಗ ಸರ›ನೆ ಯಾರಾದರೂ ಒಬ್ಬರು ಹೀಗಾಗಬೇಕಿತ್ತು ಎಂದು ಕ್ಯಾತೆ ತೆಗೆದು ನಿಮ್ಮನ್ನು ಅಸ್ತವ್ಯಸ್ತಗೊಳಿಸುವ ಸಾಧ್ಯತೆ ಇದೆ. ಅಚಲವಾದ ನಂಬಿಕೆಯಿಂದ ಶಂಭುಶಂಕರನನ್ನು ತ್ರಿದಳಗಳಿಂದ ಪೂಜಿಸಿ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 8

ಮೀನ: ನಿಮ್ಮ ಸ್ವಾಭಿಮಾನವೇ ನಿಮ್ಮ ದೊಡ್ಡ ಆಸ್ತಿ. ಬಹು ಪ್ರಮುಖವಾದ ವಿಷಯದಲ್ಲಿ ನಡೆಯುತ್ತಿರುವ ನಿಮ್ಮ ಹೊಯ್ದಾಟವನ್ನು ನಿಯಂತ್ರಿಸಿಕೊಳ್ಳಿ. ಉತ್ತಮವಾದ ಕಾಲಘಟ್ಟಕ್ಕಾಗಿ ಅವಕಾಶ ಕಾಯುತ್ತಿದೆ. ಮಹತ್ತರವಾದುದನ್ನು ಸಾಧಿಸಲಿದ್ದೀರಿ. ಹೀಗಾಗಿ ಮೂಲದ ನಿಮ್ಮ ದಾರಿಯಿಂದ ಸರ›ನೆ ಹೊರಳಿಕೊಳ್ಳುವ ನಿರ್ಧಾರಗಳ ಬಗ್ಗೆ ತಾಳ್ಮೆ ಒದಗಿಸಿಕೊಳ್ಳಿ. ನಿಮ್ಮದೇ ಆದ ಛಾಪು ಸದ್ಗುರುವಾದ ನರಹರಿಯ ದೆಸೆಯಿಂದ ಹರಳುಗಟ್ಟಿದೆ. ಒಂದು ಹೊಸ ಯೋಜನೆಯು ಸರ›ನೆ ಮನಸ್ಸಿಗೆ ಬರಬಹುದು. ದಿವ್ಯ ಶಕ್ತಿಯ ಒಲುಮೆಯಿಂದ ಎಲ್ಲವನ್ನೂ ಪರಾಮಶಿಸಿ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 5

2 Replies to “ವಾರ ಭವಿಷ್ಯ: ಈ ರಾಶಿಯವರಿಗೆ ಹೋರಾಟದ ದಿನಗಳಾಗಿವೆ. ಧೈರ್ಯದಿಂದ ಮುನ್ನುಗ್ಗುವ ಸ್ವಭಾವ ಬೆಳೆಸಿಕೊಳ್ಳಿ”

  1. ಬದುಕಲು ಮೆದುಳು ಮತ್ತು ಹಣ ಮುಖ್ಯವೇ ಹೊರತು ಇಂತಹ ಆಧಾರ ರಹಿತ ಭವಿಷ್ಯಗಳಿಂದ ಯಾವುದೂ ಸಾಧ್ಯವಿಲ್ಲ.

Leave a Reply

Your email address will not be published. Required fields are marked *