More

    ವಾರ ಭವಿಷ್ಯ | ಈ ರಾಶಿಯವರು ನಾಗಾಭರಣವನ್ನು ಧರಿಸಿರುವ ಶಿವನನ್ನು ಪೂಜಿಸಿದರೆ ಶ್ರೇಯಸ್ಕರ

    ವಾರ ಭವಿಷ್ಯ | ಈ ರಾಶಿಯವರು ನಾಗಾಭರಣವನ್ನು ಧರಿಸಿರುವ ಶಿವನನ್ನು ಪೂಜಿಸಿದರೆ ಶ್ರೇಯಸ್ಕರಮೇಷ: ಈ ರಾಶಿಯವರಿಗೆ ದ್ವಾದಶದಲ್ಲಿ ರಾಹು-ಗುರು ಆಗುಹೋಗಗಳು ವ್ಯತ್ಯಯವಾಗಿ ಅಸಮಾಧಾನ, ನಿರಾಸೆ ಉಂಟಾಗಬಹುದು. ಕೆಲಸಗಳು ಪರಿಪೂರ್ಣವಾಗಿ ಕೈಗೂಡದೆ ದುಃಖಕ್ಕೆ ಕಾರಣವಾಗಬಹುದು. ಈ ಸಮಯದಲ್ಲಿ ರಾಹುವಿನ ನಿರ್ಗಮನಕ್ಕೆ ಕಾದು ಗುರುವನ್ನು, ನಾಗಾಭರಣವನ್ನು ಧರಿಸಿರುವ ಶಿವನನ್ನು ಪೂಜಿಸಿದರೆ ಶ್ರೇಯಸ್ಕರ.

    ವೃಷಭ: ಇದೇ 15ರಂದು ಪ್ರಾತಃಕಾಲದಲ್ಲಿ ಸೂರ್ಯನು ದ್ವಾದಶದಿಂದ ಜನ್ಮಕ್ಕೆ ಬರುತ್ತಾನೆ, ಗುರು, ರಾಹು, ಬುಧರು ದ್ವಾದಶದಲ್ಲಿ ಇರುತ್ತಾರೆ. ಸಂಯಮದಿಂದ ನ್ಯಾಯದೃಷ್ಟಿಯುಳ್ಳವರಾಗಿ ಯಾರಿಗೂ ನೋವನ್ನು ಉಂಟುಮಾಡದೆ ನಿಮ್ಮ ಕಾರ್ಯ ಸಾಧಿಸಿಕೊಳ್ಳಿ. ಮನುಷ್ಯನಾದವನು ಕೈಲಾದಷ್ಟು ಭಾರವನ್ನು ಮಾತ್ರ ಹೊತ್ತರೆ ದೇಹಕ್ಕೆ ಹಾನಿ ಉಂಟಾಗುವುದಿಲ್ಲ. ಚಂಡಿಕಾ ಮಹಾಲಕ್ಷ್ಮಿಯನ್ನು ಪೂಜಿಸಿ. ಶುಭವಾಗುವುದು.

    ಮಿಥುನ: ಈ ರಾಶಿಗೆ ಕುಜ ಬಂದು ಸೇರಿ ನೀಚನಾದರೂ ಏಕಾದಶಿಯಲ್ಲಿ ಗುರು ಇರುವುದರಿಂದ ರಕ್ಷಣೆ ಇರುತ್ತದೆ. ಏಕಾದಶ ಗುರು ರಾಹುವಿನ ಸಂಯೋಜನೆಯಲ್ಲಿ ಇದ್ದು ನಿಮ್ಮ ಪಾಪಪುಣ್ಯಗಳನ್ನು ತುಲನೆಗೆ ಹಾಕಿ ಫಲ ನೀಡುತ್ತಾನೆ. ನಿರಂತರವಾಗಿ ಸುಬ್ರಹ್ಮಣ್ಯನ ಕೃಪೆ ಸಂಪಾದಿಸಿಕೊಳ್ಳಿ. ಕೋಪ-ತಾಪ ಬಿಟ್ಟು ಉದಯ ಸೂರ್ಯನಂತೆ ಎಲ್ಲರಿಗೂ ಬೆಳಕನ್ನು ನೀಡಿ 9ನೇ ಶನಿಯು ಕೊಡುವ ಶುಭಫಲವನ್ನು ಸ್ವೀಕರಿಸಿ.

    ಕಟಕ: ಜಲ ರಾಶಿಯಲ್ಲಿ ಹುಟ್ಟಿದ ನೀವು ಜಲದಷ್ಟೇ ಶುಚಿಯಾಗಿರುವವರು. ಎಲ್ಲರ ದಾಹ ತೀರಿಸುವ ವ್ಯಕ್ತಿಯಾಗಿದ್ದೀರಿ. ಭಕ್ತಿಯಲ್ಲಿ ಶುದ್ಧತೆ ಇಟ್ಟುಕೊಂಡರೆ ಅಷ್ಟಮ ಶನಿ, ದಶಮ ಗುರು ಕೇಡನ್ನು ತಂದೊಡ್ಡುವದಿಲ್ಲ. ಪ್ರಾತಃಕಾಲದಲ್ಲಿ ಎದ್ದು ಶನಿ ಅಷ್ಟೋತ್ತರ ದಶರಥ ವಿರಚಿತ ಶನಿಸ್ತೋತ್ರವನ್ನು ಪಾರಾಯಣ ಮಾಡಿ. ಈಶ್ವರನಿಗೆ ಬಿಲ್ವಪತ್ರೆಯನ್ನು ಇರಿಸಿ. ನಿಮ್ಮ ಬಾಳು ಸಾರ್ಥಕವಾಗುವುದು.

    ಸಿಂಹ: 9ರಲ್ಲಿ ಗುರು ಬಂದಿದ್ದಾನೆ. ನಿಮ್ಮ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ. ಮಘಾ ನಕ್ಷತ್ರದವರಿಗೆ ಯಾರು ಆತಂಕ ಮಾಡಿದರೂ ಧನವಿಲ್ಲದ್ದಾಗ ದೇವರೇ ಧನವನ್ನು ಕೊಟ್ಟು ನಿಮ್ಮನ್ನು ಮುಂದೆ ಸಾಗಿಸುತ್ತಾನೆ. ನಿಮ್ಮ ದೈವಭಕ್ತಿಯನ್ನು ಮುಂದುವರಿಸಿ, ಸೂರ್ಯನಾರಾಯಣ, ಸುಬ್ರಹ್ಮಣ್ಯ, ದುರ್ಗೆಯನ್ನು ಪ್ರಾರ್ಥಿಸಿ. ಗುರುಚರಿತ್ರೆಯ ಒಂದು ಅಧ್ಯಾಯವನ್ನು ಪ್ರತಿನಿತ್ಯ ಪಾರಾಯಣ ಮಾಡಿ. ಹೆಚ್ಚಿನ ಧನ-ಕೀರ್ತಿ ಸಂಪಾದಿಸುವಿರಿ.

    ಕನ್ಯಾ: ಸಾಲವನ್ನು ಕೊಟ್ಟವನು ಅದನ್ನು ಹಿಂದಿರುಗಿಸದಿದ್ದಾಗ ಕಿರುಕುಳ ಕೊಡುತ್ತಾನೆ, ನೊಂದು ಕೊಳ್ಳುತ್ತಾನೆ. ಜೀವನದಲ್ಲಿ ಹತ್ತು ಹಲವಾರು ತಪ್ಪುಗಳನ್ನು ಮಾಡಿದರೆ ಗುರುಕಟಾಕ್ಷವಿಲ್ಲದೆ ನರಳ ಬೇಕಾಗುತ್ತದೆ. ಯಾರಿಗೆ ಏನು ಕೊಡಬೇಕು ಅದನ್ನು ಕೊಟ್ಟು ಶಾಪದಿಂದ ಮುಕ್ತರಾಗಿ ಬದುಕಿ.

    ತುಲಾ: ಸಪ್ತಮ ಗುರುವು ಸುಖವಾಗಿರಲಿ ಎಂದು ಮನೆ, ಒಳ್ಳೆಯ ಮನಸ್ಸನ್ನು, ಮಕ್ಕಳನ್ನು, ಸಂತೋಷವನ್ನು ಕೊಟ್ಟಿದ್ದಾನೆ. ಬಂದಿದ್ದೆಲ್ಲ ಬರಲಿ ಗೋವಿಂದನ ದಯೆ ಇರಲಿ ಎಂಬಂತೆ ವೆಂಕಟೇಶ್ವರನನ್ನು ಪೂಜಿಸಿ. ಇಂದಿನಿಂದ ಪಂಚಶನಿವಾರ ನಿಮ್ಮ ಮನೆಯ ಹತ್ತಿರ ಇರುವ ವೈಕುಂಠಪತಿಯ ದೇವಸ್ಥಾನಕ್ಕೆ ತೆರಳಿ ಅವನನ್ನು ದರ್ಶಿಸಿ ಶುಭಾಂಶ ನೂರರಷ್ಟು ಮುಟ್ಟಿ ಸಂತೋಷವಾಗಿರುತ್ತೀರಿ.

    ವೃಶ್ಚಿಕ: ಶುದ್ಧಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿ, ದೈವ ಒಲಿದು ಮನೆಯ ಬಾಗಿಲಿಗೆ ಶುಭವನ್ನು ತರುತ್ತದೆ. ನಿಮ್ಮ ಋಣವನ್ನು ತೀರಿಸಿ ದೈವದ ಹರಕೆ ಬಾಕಿ ಇದ್ದರೆ ಅದನ್ನು ದೇವರಿಗೆ ಮುಟ್ಟಿಸಿ. ಕಷ್ಟಕಾಲದಲ್ಲಿ ನಿಮ್ಮ ಜೊತೆ ಇದ್ದು ನಡೆಸಿದವರನ್ನು ಸಂದರ್ಶಿಸಿ ಪ್ರಾರ್ಥಿಸಿ, ಸಂಕ್ರಮಣದ 15ನೇ ತಾರೀಖಿನಂದು ಅವರಿಂದ ಆಶೀರ್ವಾದ ಪಡೆಯಿರಿ. ಶುಭಕಾಲ ಒದಗಿ ಬರಲಿದೆ.

    ಧನುಸ್ಸು: ಈ ರಾಶಿಯವರಿಗೆ ತೃತೀಯ ಶನಿ, ಪಂಚಮದಲ್ಲಿರುವ ಗುರುವು ರಾಜಯೋಗ, ಸುಖವನ್ನು ಕೊಡುವುದಲ್ಲದೆ ಕೀರ್ತಿಯಿಂದ ಬದುಕನ್ನು ನಡೆಸಿ ತೋರಿಸಲು ಮುಂದಿದ್ದಾರೆ. ದೇವರಲ್ಲಿ ಅನನ್ಯ ಭಕ್ತಿ ಇರಲಿ. ಗುರುವಿನ ರಾಶಿಯಲ್ಲಿ ಹುಟ್ಟಿದ, ಶತಾಯುಷ್ಯ ಜೀವನವಿರುವ ನೀವು ಗುರುಚರಿತ್ರೆಯನ್ನು ತಪ್ಪದೆ ಓದಿ. ರಾಜಯೋಗ ಬೇಕಾದರೆ ರಾಮನ ಪಟ್ಟಾಭಿಷೇಕವನ್ನು ಪಾರಾಯಣ ಮಾಡಿ.

    ಮಕರ: ಈ ರಾಶಿಯವರಿಗೆ ಕಡೆಯ ಭಾಗದ ಶನಿಯ ಸಂಚಾರವಿದ್ದು ಏನು ಬೇಕೊ ಅಷ್ಟೇ ಕೊಟ್ಟು ನಿಮ್ಮನ್ನು ನೋಡುತ್ತಿರುತ್ತಾನೆ. ಪರಮಾತ್ಮನು ಮನುಷ್ಯನ ಪಾಪ ಪುಣ್ಯಗಳನ್ನು ತುಲನೆ ಮಾಡುತ್ತಿರುತ್ತಾನೆ. ಪುಣ್ಯ ಸಂಪಾದನೆ ಮಾಡಿ. ದೈವಭಕ್ತಿಯಿಂದ ಬಾಳಿ. ಶನಿಯ ಸಂಚಾರ ಮುಗಿಯವವರೆಗೂ ಶಿವ ಅಷ್ಟೋತ್ತರ ಪಠಿಸಿ. ಶಿವನನ್ನು ಬಿಲ್ವಪತ್ರೆಯಿಂದ ಪೂಜಿಸಿ.

    ಕುಂಭ: ಜನ್ಮದಲ್ಲಿ ಶನಿ ಇದು ತೃತೀಯದಲ್ಲಿ ಗುರುವಿದ್ದಾನೆ. ಅವಾಂತರ-ಅವಸರದ ಕೆಲಸಗಳು ಬೇಡ. ನಿಮ್ಮನ್ನು ತಿದ್ದಿಕೊಂಡು ಬಾಳನ್ನು ನಡೆಸಿ. ಯಾರಿಗೂ ಕೇಡನ್ನು ಬಯಸದೆ ಕೆಟ್ಟ ಆಲೋಚನೆ ಮಾಡದೆ ಮೌನದಿಂದ ಇರಿ. ಮಹಾವಿಷ್ಣುವನ್ನು ಪೂಜಿಸಿ. ಶನಿಯ ತಾಪವು ಕುಗ್ಗಿ ನಿಮಗೆ ಶನಿ ಸಂಚಾರದಲ್ಲೂ ದೇವರೇ ಕೈಹಿಡಿದು ನಡೆಸುತ್ತಾನೆ.

    ಮೀನ: ದೈವಭಕ್ತಿ ಎಂಬ ಸಮುದ್ರದಲ್ಲಿ ಮಿಂದು, ದೈವ ದರ್ಶನ ಮಾಡಿ ಶ್ರೀಹರಿಯ ಪ್ರಾರ್ಥನೆ ಮಾಡಿ, ನಿಮ್ಮ ಶನಿಯ ಸಂಚಾರಕ್ಕೆ ತಡೆ ಹಾಕಿಕೊಳ್ಳಿ. ದೇಶಕಾಲ, ದೇವರು ಕೊಟ್ಟದ್ದನ್ನು ಸ್ವೀಕರಿಸಿ, ಕಾಪಾಡುತ್ತಾನೆಂಬ ನಂಬಿಕೆ ಇಟ್ಟುಕೊಳ್ಳಿ. ಗುರುವು ದ್ವಿತೀಯದಲ್ಲಿರುವುದರಿಂದ ನೀವು ಮಾಡಿದ ಕೆಲಸಗಳಿಗೆ ತಕ್ಕ ಪ್ರತಿಫಲ ನೀಡಿ ಸಂತೋಷ ತರುತ್ತಾನೆ. ಅನಂತಪದ್ಮನಾಭನ ವ್ರತ ಕಥೆ ಓದಿ. ಅನಂತವಾಗಿ ದೈವಬಲವು ಒದಗಿ ಬರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts