ವಾರ ಭವಿಷ್ಯ| 12-05-2019 ರಿಂದ 18-05-2019

ಮೇಷ:  ಶತ ಪ್ರಯತ್ನ ನಡೆಸಿದರೂ ಮುಗಿಸಲಾರದೇ ಉಳಿದಿದ್ದ ಕೆಲಸ ಒಂದನ್ನು ಕೊನೆಗೂ ಮಾಡಿ ಮುಗಿಸುವ ಸಂಭ್ರಮ ನಿಮಗೆ ಒದಗಿ ಬರಲಿದೆ. ಎದುರಿಸಲೇಬೇಕಾದದ್ದು ಹತ್ತಿರದವರ ಮೂಲಕವೇ ಎದುರಾಗುವ ಕಿರಿಕಿರಿಗಳು. ಆದರೆ ನಿಮ್ಮಲ್ಲಿ ತಾಳ್ಮೆ ಇದೆ. ಕರುಣಾಮಯಿಯಾದ ಕನ್ನಿಕಾ ಪರಮೇಶ್ವರಿಯನ್ನು ಆರಾಧಿಸಿ. ಮಾಡಿ ಮುಗಿಸಿದ ಕೆಲಸದ ಸಂಭ್ರಮವೇ ಮೊದಲಾಗಿ ಹಲವು ಹೊಸ ಯೋಜನೆಗಳನ್ನು ಪೂರೈಸಬೇಕಾದ ಕೆಲಸಗಳು ನಿಮಗೀಗ ಸುಲಭವಾಗಲು ದಾರಿಗಳು ಸ್ಪಷ್ಟವಾಗಲಿವೆ. ವರ್ಚಸ್ಸನ್ನು ವೃದ್ಧಿಸುವ ಅವಕಾಶಗಳು ಜಾಸ್ತಿ. ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 3

ವೃಷಭ:  ಕಮಲದ ಹೂವುಗಳಿಂದ ಮಹಾಲಕ್ಷ್ಮಿಯ ಆರಾಧನೆ ನಡೆಸಿ. ಆರ್ಥಿಕ ಸಮಸ್ಯೆಗಳಿಂದ ದೂರವಾಗಲು ಸಾಧ್ಯತೆಗಳನ್ನು ಹುಡುಕುವವರಿಗೆ ಇದರಿಂದ ದಾರಿಗಳು ಲಭ್ಯ ಎಂಬುದು ಒಂದು ಕಡೆ. ಹಣ ಕೊಟ್ಟು ಹಿಂದಿರುಗಿ ಪಡೆಯಲಾರದ ಬೇಗುದಿಗೆ ಒಳಗಾದವರಿಗೆ ಹಣ ಹಿಂದಿರುಗಿ ಬರುವಲ್ಲಿಯೂ ಮಹಾಲಕ್ಷ್ಮಿಯ ಅನುಗ್ರಹ ಲಭ್ಯ. ಹೊಸ ಕೆಲಸಕ್ಕೆ ಅವಕಾಶಗಳು ಇವೆಯಾದರೂ, ಇರುವ ಕೆಲಸ ತೊರೆದು ಹೊಸತು ಹುಡುಕುವ ಪ್ರಯತ್ನ ಬೇಡ. ಅಗ್ನಿ ಮಂತ್ರ ಪಠಿಸಿ. ಜ್ಞಾನ ಸಂವರ್ಧನೆಗೆ ಇದರಿಂದ ದಾರಿ ಸುಗಮ. ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 5

ಮಿಥುನ:  ವೈವಾಹಿಕ ಜೀವನ ನರಕವಾಗುವ ಸಾಧ್ಯತೆಗಳನ್ನು ಹೆಡೆ ಎತ್ತಿರುವ ರಾಹುವು ಕೇತುವಿನ ತಮೋಗುಣವನ್ನು ಸಂವರ್ಧಿಸಿ ನಿರ್ವಿುಸಲು ಸಾಧ್ಯ. ಹಸುವಿನ ಹಾಲಿನಲ್ಲಿ ಬೆರೆಸಿದ ಜೇನುತುಪ್ಪವನ್ನು ತುಳಸಿ ಗಿಡದ ತಳದಲ್ಲಿ ಭಕ್ತಿ ಪೂರ್ವಕವಾಗಿ ಸುರಿದು ಶ್ರೀ ಲಕ್ಷ್ಮೀನರಸಿಂಹನನ್ನು ಸ್ತುತಿಸಿ. ಸಾಮಾಜಿಕ ವಲಯದಲ್ಲಿ ಕೀರ್ತಿ ಸಂಪಾದಿಸುವಿರಿ. ಕೆಲವರಿಗೆ ವಿದೇಶ ಪ್ರವಾಸ ಯೋಗವೂ ಬರಬಹುದು. ವಹಿವಾಟಿಗೆ ಸಂಬಂಧಿಸಿದ ಪ್ರವಾಸದಿಂದ ಲಾಭಕ್ಕೂ ದಾರಿ ಇದೆ. ಆದರೆ ವೈಯಕ್ತಿಕ ಜೀವನದ ಬಿರುಗಾಳಿಯನ್ನು ಶಾಂತವಾಗಿಸಿಕೊಳ್ಳುವ ಚತುರತೆ ಬೇಕೇಬೇಕು. ಶುಭದಿಕ್ಕು: ಪೂರ್ವ ಶುಭಸಂಖ್ಯೆ: 9

ಕಟಕ:  ನಿಮ್ಮ ವಿಚಾರದಲ್ಲಿ ಮೂಗು ತೂರಿಸುವ ಜನರನ್ನು ನೀವು ನಿಯಂತ್ರಿಸಲು ಮಾರುತಿಯ ಅನುಗ್ರಹವಿದೆ. ನಿಮ್ಮ ಇಂದಿನ ಕಾರ್ಯ, ವಿಶೇಷವಾದ ತಿರುವನ್ನು ಪಡೆದು ನಿಮ್ಮ ಪಾಲಿಗೆ ಶಾಂತಿ ಸಮಾಧಾನ ತರಲು ಸಾಧ್ಯವಿದೆ. ಚಿನ್ನ ಮತ್ತು ಬೆಳ್ಳಿಯ ಮಾರಾಟ ವ್ಯವಹಾರ, ಸಿನಿಮಾ ವಿತರಣೆ, ನಿರ್ಮಾಣ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡವರಾದರೆ ಕೊಂಚ ತಾಳ್ಮೆ ಅಗತ್ಯ. ಯಾಮಾರಿಸುವ ಜನ ಇರುತ್ತಾರೆ. ಕೆಲಸದಲ್ಲಿರುವವರು ಪ್ರಮೋಷನ್ ನಿರೀಕ್ಷ್ಷಿಸಲು ಉತ್ತಮ ಕಾಲ. ಶ್ರೀದೇವಿ, ಲಲಿತಾಳನ್ನು ಸ್ತುತಿಸಿ. ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 3

ಸಿಂಹ: ಪರದಾಟಗಳನ್ನು ಎದುರಿಸುತ್ತಲೇ ಬಂದಿದ್ದೀರಿ. ಅಗ್ನಿ ಭಯ ಸಾಧ್ಯ. ನಿವಾರಣೆಗಾಗಿ ದುರ್ಗಾ ಅಷ್ಟೋತ್ತರ ಓದಿ. ವಿನಾಕಾರಣವಾಗಿ ಇರುವ ಕೆಲಸ ಬಿಟ್ಟು ಸ್ವಂತದ್ದನ್ನೇನೋ ಮಾಡುತ್ತೇನೆ ಎಂದು ಸರ›ನೆ ನಿರ್ಧರಿಸದಿರಿ. ಸ್ವರ್ಣಾಕರ್ಷಕ ಭೈರವನನ್ನು ಆರಾಧಿಸಿ. ಶ್ರೀ ಲಕ್ಷ್ಮೀನಾರಾಯಣ ಮಂತ್ರ ಭಾಗ ಓದಿ. ಷಟ್ ಚಕ್ರಗಳಲ್ಲಿ ಒಂದಾಗ ವಿರುದ್ಧ ಚಕ್ರವನ್ನು ಬಲಪಡಿಸಿಕೊಳ್ಳಲು ಚಂಡಿಕಾಳನ್ನು ಆರಾಧಿಸಿ. ಸೂಕ್ತವಾದ ವ್ಯಾಘ್ರನೇತ್ರ ಎಂಬ ಹರಳು ಧರಿಸುವುದರಿಂದ ಜೈವಿಕ ಶಕ್ತಿ, ಉತ್ಸಾಹ ಸಂವರ್ಧನೆ ಹೆಚ್ಚಲು ಸಾದ್ಯ. ಮನೋಬಲಕ್ಕೆ ಫಲವಂತಿಕೆ ಲಭ್ಯ. ಶುಭದಿಕ್ಕು: ಉತ್ತರ ಶುಭಸಂಖ್ಯೆ: 8

ಕನ್ಯಾ: ಕೈ ಇಟ್ಟಲ್ಲಿ ಒಳಿತಾಗುವ ವಿಚಾರಗಳು ಹೆಚ್ಚು. ಆತ್ಮವಿಶ್ವಾಸ ವೃದ್ಧಿಸಲಿದೆ. ಒಂಟಿ ಸಲಗದಂತೆ ಬಲಶಾಲಿಯಾಗಿ ನೀವು ಕಾಲಿಟ್ಟಲ್ಲಿಯೇ ಸರಿಯಾದ ದಾರಿ ಎಂಬ ವರ್ತಮಾನ ಹರಳುಗಟ್ಟುತ್ತದೆ. ನಿಗೂಢವಾದ ಶಕ್ತಿಯೊಂದು ನಿಮ್ಮನ್ನು ಕಾಪಾಡಲು ಉತ್ಸಾಹದಲ್ಲಿದೆ. ಸಲಹೆ ಪಡೆಯದೆ ವಜ್ರವನ್ನಾಗಲಿ, ಪಚ್ಚೆಯ ಹರಳನ್ನಾಗಲೀ ಧರಿಸಲು ಹೋಗದಿರಿ. ಅನುಕೂಲಕರನಾಗಬೇಕಾದ ಬುಧನು ವ್ಯಗ್ರನಾಗಬಾರದು. ನೀಳ ಕಾಯದ ಒಬ್ಬ ವ್ಯಕ್ತಿ ಕೆಲವು ತೊಡಕುಗಳನ್ನು ತರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾನೆ. ಕಾಲಭೈರವನನ್ನು ಪೂಜಿಸಿ. ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 5

ತುಲಾ:  ಎಲ್ಲವೂ ಸರಿಯಾಗಿತ್ತು. ಆದರೆ ಕೆಲ ದಿನಗಳಿಂದ ದುಷ್ಟರ ಗುಂಪು ತಲೆನೋವು ತರುತ್ತಲಿದೆ. ಇಲ್ಲಾ ಈ ಕೆಲ ದಿನಗಳಲ್ಲಿ ತಲೆನೋವಿನ ವಿಚಾರ ನಿಮಗೆ ಸ್ಪಷ್ಟವಾಗಬಹುದು. ನಿಮ್ಮ ಮೃದು ಧೋರಣೆಯನ್ನು ದುರುಪಯೋಗಪಡಿಸಿಕೊಳ್ಳುವ ವಿಚಾರ ಸಂಭವಿಸುತ್ತದೆ. ನಿಮಗೆ ನೀವೇ ಸ್ವತಂತ್ರ ಮನೋಭಾವನೆಯೊಂದಿಗೆ ಎದುರಾಗುವ ಬಿರುಗಾಳಿಯನ್ನು ಎದುರಿಸುವ ಶಕ್ತಿ ಇದೆಯಾದರೂ ಅತಿಯಾದ ಆತ್ಮವಿಶ್ವಾಸ ತೊಂದರೆ ಸೃಷ್ಟಿಸಬಹುದು. ಗುರು ರಾಘವೇಂದ್ರದ ಆರಾಧನೆಯಿಂದ ಸಂಕಲ್ಪಿತ ಕಾರ್ಯ ಸಿದ್ಧಿ. ಶುಭದಿಕ್ಕು: ಪೂರ್ವ ಶುಭಸಂಖ್ಯೆ: 9

ವೃಶ್ಚಿಕ:  ಮಾತಿನ ಸೂಕ್ಷ್ಮಗಳಿಂದ ಗೆಲ್ಲಲು ಮುಂದಾಗಿ. ಇಡೀ ವಾರವೂ ಒಂದಲ್ಲಾ ಒಂದು ಒತ್ತಡ ನಿಮ್ಮನ್ನು ಆವರಿಸಿಕೊಳ್ಳಲಿದೆ. ಆದರೂ ಒಂದು ಕ್ರಿಯಾಶೀಲ ಚೈತನ್ಯ ನಿಮ್ಮ ಬೆಂಗಾವಲಿಗಿದೆ ಎನ್ನುವುದೂ ಅಷ್ಟೇ ಸತ್ಯ. ಗಾಣದ ಎತ್ತಿನಂತೆ ಸುತ್ತಾಡಿ, ಜಗ್ಗಿ, ಎಳೆದಾಡಿ ಬೆವರು ಸುರಿಸಲೇಬೇಕು. ಬೆವರು ಸುರಿಸಿದಾಗಲೂ ಫಲ ಸಿಗದಿರುವುದು ಹಲವರ ಪ್ರಾರಬ್ಧವಾಗಿರುತ್ತದೆ. ಆದರೆ ನಿಮ್ಮ ಅದೃಷ್ಟದಲ್ಲಿ ಒಳಿತನ್ನು ತರಲು ಬುಧನ ಸಹಾಯ ಸಿಗಲಿದೆ. ಬೌದ್ಧಿಕ ಶಕ್ತಿ ಪ್ರದರ್ಶಿಸಿ. ಒರಟುತನ, ಒಣಚರ್ಚೆ ಫಲ ನೀಡದು. ತ್ರಿಪುರಸುಂದರಿ ಸ್ತೋತ್ರಾವಳಿ ಪಠಿಸಿ. ಶುಭದಿಕ್ಕು: ಉತ್ತರ ಶುಭಸಂಖ್ಯೆ: 1

ಧನು: ಮೋಡಗಳು ತುಂಬಿ ಮಳೆ ಬರುವ ಚೈತನ್ಯ ಇರುವುದು ಕಂಡುಬರುತ್ತಿರುವಾಗಲೇ ಬಿರುಗಾಳಿಯ ಹೊಡೆತದಿಂದಾಗಿ ಆವರಿಸಿದ ಮೋಡಗಳು ಚದುರಿ ಅಮೃತಮಯವಾಗಬೇಕಾದ ಮಳೆ ಬರುವುದೇ ಇಲ್ಲ. ಇಂಥ ನಿರಾಸೆ ಎದುರಿಸುತ್ತಿರಬೇಕಾಗುತ್ತದೆ. ಸಮತೋಲನ ಕಳಕೊಳ್ಳದಿರಿ. ಶಿವನನ್ನು ಆರಾಧಿಸಿ. ಶನಿವಾರದಂದು ಮುಖವನ್ನು ಬಗ್ಗಿಸಿ ನೋಡಿದ ಎಳ್ಳೆಣ್ಣೆಯನ್ನು ಹನುಮಂತನ ದೇವಸ್ಥಾನದ ದೀಪಕ್ಕೆ ಸುರಿಯಿರಿ. ಕುಬೇರ ಅಷ್ಟೋತ್ತರ ಪಠಿಸಿ. ಸಿಕ್ಕಿಬಿದ್ದ ಹಣದ ಗಂಟು ನಿಮಗೆ ತಲುಪಲು ಸಾಧ್ಯವಿದೆ. ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 7

ಮಕರ:  ಶನಿ ಕಾಟದ ಅಬ್ಬರದ ದಿನಗಳಿವು. ಮಾತು ವಿಷಮವಾಗಿರದೇ ಆನಂದಮಯ ವರ್ತಮಾನವನ್ನು ಸೃಷ್ಟಿಸುವಂತಿರಲಿ. ಯಾರನ್ನೂ ಹೆಗಲಿಗೇರಿಸಿಕೊಳ್ಳದಿರಿ. ಮಹಾ ಮಹಿಮ ಸಂಪನ್ನೆಯಾದ ಶ್ರೀದೇವಿ ಅನ್ನಪೂರ್ಣೆಯನ್ನು ಆರಾಧಿಸಿ. ನಿಮ್ಮನ್ನು ಪರೀಕ್ಷಿಸುವ ಮಂದಿಯಿಂದಾಗಿ ಕಿರಿಕಿರಿಯಾಗಿ ಉದ್ರೇಕಗೊಳಿಸುವ ವರ್ತಮಾನ ನಿರ್ವಣವಾದೀತು. ಆದರೆ ಶಾಂತರಾಗಿದ್ದರೆ ಯುದ್ಧ ಗೆಲ್ಲುತ್ತೀರಿ. ಶಕ್ತಿಗಿಂತ ಯುಕ್ತಿ ಮೇಲಾಗಿರಬೇಕಾದ ಈ ಘಟ್ಟದಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿ. ಶ್ರೀಲಕ್ಷ್ಮಿವೆಂಕಟೇಶ್ವರನನ್ನು ಸ್ತುತಿಸಿ. ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 4

ಕುಂಭ:  ಒಳಿತಿನ ದಾರಿ ಹಿಡಿಯಲು ಹೇಳಿ ಮಾಡಿಸಿದ ಕಾಲ. ಹಿರಿಯರನ್ನು ಆದರಿಸಿ. ಉತ್ತಮವಾದ ಸಲಹೆ ಸೂಚನೆಗಳನ್ನು ಅವರಿಂದ ಪಡೆಯುವಿರಿ. ನಿರುದ್ಯೋಗಿಗಳಿಗೆ ಒಳಿತಿನ ಸುದ್ದಿ ಬರಲಿದೆ.ವರ್ಚಸ್ಸನ್ನು ವರ್ಧಿಸಿ ಗೆಲ್ಲಿಸಬಲ್ಲ ಶನೈಶ್ಚರ ಕರುಣಾಮಯಿಯಾಗಿರುವ ದಿವ್ಯ ಕಾಲವಾಗಿದೆ ಸದ್ಯದ ವರ್ತಮಾನ. ಹೆಸರಿಗೆ ಕಳಂಕ ತರುವ ಮಂದಿ ಸುತ್ತಾಡಬಹುದು ನಿಮ್ಮ ಬಳಿಯೇ. ನಾಜೂಕಾಗಿ ವರ್ತಿಸಿ. ಜಗಳ ಮಾಡದೇ ಅರಿಷ್ಟದ ಜನರನ್ನು ದೂರಕ್ಕೆ ಕಳಿಸಿ. ಮಕ್ಕಳು ಹಾಗೂ ಸಂಗಾತಿ ಸಹಕಾರಿಯಾಗಿ ಇರುತ್ತಾರೆ. ವರದಶಂಕರನ ಪೂಜಸಿ. ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 6

ಮೀನ:  ನಿಮಗೆ ನೀವೇ ಸಮಸ್ಯೆಯಾಗುತ್ತೀರಿ. ಮಾತೇ ನಿಮ್ಮನ್ನು ಪರದಾಡುವ ಪರಿಸ್ಥಿತಿಗೆ ತರುತ್ತದೆ. ಆಯಾತ, ನಿರ್ಯಾತ ವಹಿವಾಟಕ್ಕೆ ಸಂಬಂಧಿಸಿದಂತೆ ವಿದೇಶ ಪ್ರವಾಸ ಕೂಡಿ ಬರಬಹುದು. ರಾಜಕಾರಣದಲ್ಲಿ ಪ್ರಗತಿ ಕಾಣಲು ಕಾಲಘಟ್ಟ ಶಕ್ತಿದಾಯಕವಾಗಿದೆ. ವೈಯಕ್ತಿಕ ರಗಳೆಗಳನ್ನೇ ನಿಯಂತ್ರಿಸಿಕೊಳ್ಳಲು ಕಷ್ಟವಾಗುತ್ತದೆ. ಒಂದನ್ನು ಮಾಡಲು ಹೋಗಿ ಇನ್ನೊಂದಾಗುತ್ತದೆ. ಸುಮ್ಮನೆ ಕುಳಿತು ಬಿಡುವ ಎಂಬ ನಿರಾಸೆ ಕಾಡಬಹುದು. ಸದಾಶಯದಿಂದ ಮುನ್ನುಗ್ಗಿ. ವರದ ಶಂಕರ ಮಹಾಸ್ವಾಮಿಯನ್ನು ಆರಾಧಿಸಿ. ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 7