More

  ಈ ರಾಶಿಯವರು ಎಚ್ಚರಿಕೆಯಿಂದ ಮುಂದೆ ಸಾಗಿರಿ: ವಾರಭವಿಷ್ಯ

  ಮೇಷ

  ಈ ವಾರವು ಮಹಾನಕ್ಷತ್ರವಾದ ಮಖಾ ನಕ್ಷತ್ರದಿಂದ ಆರಂಭವಾಗುತ್ತದೆ. 12ರ ಗುರು ಇನ್ನೇನು ಏಪ್ರಿಲ್ 21ರಿಂದ ಮುಂದೆ ಹೋಗಿ ನಿಮ್ಮನ್ನು ಕೆಲವು ಸಂಕಟಗಳಿಂದ ಪಾರು ಮಾಡುತ್ತಾನೆ. ನೀವು ಯಾರನ್ನು ಗುರು ಸ್ವರೂಪ ಎಂದು ಕಂಡಿರುವಿರೋ ಅವರು ನಿಮಗಾಗಿ ಪ್ರಾರ್ಥನೆಯನ್ನು ಸದಾ ಮಾಡಿ ನಿಮ್ಮ ಉಜ್ವಲ ಭವಿಷ್ಯಕ್ಕೆ ಕಾರಣರಾಗುತ್ತಾರೆ. ಮೇಷ ರಾಶಿಯಲ್ಲೇ ರಾಹು ಇರುವುದರಿಂದ ಸುಬ್ರಹ್ಮಣ್ಯನನ್ನು ಸದಾ ಪೂಜಿಸಿ. ಉಚ್ಚ ರಾಶಿಗೆ ಬರುವ ಸೂರ್ಯನನ್ನು ಪ್ರಾರ್ಥಿಸಿ.

   

  ವೃಷಭ

  ವೃಷಭ ರಾಶಿಯವರಿಗೆ ದ್ವಾದಶಕ್ಕೆ ಮುಂದೆ ಸೂರ್ಯನು ಬರಲಿದ್ದಾನೆ. ಆದ್ದರಿಂದ ಕೆಲವು ಸಂಕಟ ಉಂಟಾಗಬಹುದು. ಸಂಕಟದಿಂದ ಹೊರ ಬರಬೇಕಾದರೆ ದುರ್ಗೆಯನ್ನು, ಶ್ರೀಚಕ್ರ ರಾಜರಾಜೇಶ್ವರಿಯನ್ನು ಪೂಜಿಸಿ. ದೈವಬಲ ಇಲ್ಲದವನು ದುರ್ಬಲನಾಗುತ್ತಾನೆ ಎಂದು ಶಾಸ್ತ್ರವೇ ಹೇಳಿದೆ. ದ್ವಾದಶಕ್ಕೆ ಗುರು ಬರಲಿದ್ದಾನೆ. ಎಚ್ಚರಿಕೆಯಿಂದ ಮುಂದೆ ಸಾಗಿರಿ. ಕೊಟ್ಟ ಮಾತು ಉಳಿಸಿಕೊಳ್ಳಿ. ಮಾತನ್ನು ಮುರಿದರೆ ಜೀವನವು ಏರುಪೇರಾದೀತು.

   

  ಮಿಥುನ

  ಏಕಾದಶಕ್ಕೆ ಗುರು ಬರುವವನಿದ್ದಾನೆ. ಮಾತನಾಡುವವನು ಮಾಡುವುದಿಲ್ಲ. ಮಾತನಾಡದವನು ಏನನ್ನೂ ಗೆಲ್ಲಬಹುದು. ಮಾತಿನಲ್ಲಿ ಎಚ್ಚರವಿರಲಿ. ಏಕಾದಶದಲ್ಲಿ ರಾಹುವಿದ್ದರೂ ಪಂಚಮ ಕೇತುವು ಸಂಬಂಧ ಕೆಡಿಸಿ ನಿಮ್ಮ ವ್ಯಕ್ತಿತ್ವಕ್ಕೆ ಕುತ್ತು ತರುತ್ತಾನೆ. ಮನುಷ್ಯನು ಶುಕ್ಲಚಂದ್ರನಂತೆ ಬೆಳೆಯಬೇಕೇ ಹೊರತು ಅಮಾವಾಸ್ಯೆಯ ಬಾಡಿದ ಚಂದ್ರನಾಗಬಾರದು. ಹನುಮಾನ್ ಸಮೇತ ಶ್ರೀರಾಮಚಂದ್ರನನ್ನು ಪೂಜಿಸಿ. ಜೀವನವು ಸಾಫಲ್ಯವಾಗುತ್ತದೆ.

   

  ಕಟಕ

  ಜಲಕ್ಕೆ ಮಡಿ-ಮೈಲಿಗೆಯಿಲ್ಲ. ಹರಿಯುವ ಗಂಗೆ ಯಾವಾಗಲೂ ಶುದ್ಧಳೇ. ಗಂಗೆ ಹರಿಯುವ ಕಡೆ ನೀರು ತಾನೇ ಶುದ್ಧೀಕರಣಗೊಂಡು ಕುಡಿಯಲು, ಸ್ನಾನ ಮಾಡಲು ಯೋಗ್ಯವಾಗಿ, ಮನುಷ್ಯನ ಪಾಪಗಳನ್ನು ಕಳೆದು ನವಚೈತನ್ಯ ಮೂಡಿಸುತ್ತಾಳೆ. ಈಶ್ವರನ ತಲೆ ಮೇಲೆ ಗಂಗೆ-ಗೌರಿ ಕುಳಿತಿದ್ದಾರೆ. ನೀರನ್ನು ನೆನಪಿಸಿಕೊಂಡು ಈಶ್ವರನ ಅರ್ಚನೆಯನ್ನು ಮಾಡಿ. ಗ್ರಹಗಳ ಬಾಧೆಯು ತಟ್ಟದ ಹಾಗೆ ನಿಮ್ಮನ್ನು ಶಂಕರನೇ ಮಂಗಳಕರವಾಗಿ ನಡೆಸುತ್ತಾನೆ.

   

  ಸಿಂಹ

  ಸಿಂಹ ರಾಶಿಯವರಿಗೆ 9ರಲ್ಲಿ ಸೂರ್ಯನಿದ್ದಾನೆ. 10ರಲ್ಲಿ ಶುಕ್ರ, 11ರಲ್ಲಿ ಅಂಗಾರಕನಿರುವುದರಿಂದ ಸಮಾಧಾನ ಆಗುವ ಮಟ್ಟಿಗೆ ಈ ವಾರವು ನಡೆದು ಯಾವ ಅಶುಭವೂ ಉಂಟಾಗುವುದಿಲ್ಲ. ಸಿಂಹಕ್ಕೆ ಸಿಂಹವೇ ಸಾಟಿ. ಮಖಾ ನಕ್ಷತ್ರದಲ್ಲಿ ಹುಟ್ಟಿದವರು ಧೈರ್ಯವಾಗಿ ಮುನ್ನಗ್ಗಿ ಕೆಲಸ ಮಾಡಿಕೊಂಡು ಜಯ ಸಾಧಿಸಿ. ದೈವಬಲ ಚೆನ್ನಾಗಿರಲು ಸೂರ್ಯನನ್ನು ಪೂಜಿಸಿ. ಸಪ್ತಮ ಶನಿ, ಅಷ್ಟಮ ಗುರುವಿದ್ದರೂ ಸ್ವಕ್ಷೇತ್ರದಲ್ಲಿರುವುದರಿಂದ ನೀವು ಚಿಂತಿಸುವ ಅಗತ್ಯವಿಲ್ಲ.

   

  ಕನ್ಯಾ

  ದ್ವಿತೀಯದಲ್ಲಿ ಕೇತುವಿದ್ದಾನೆ. ಮಾತಿನಲ್ಲಿ ಎಚ್ಚರ ವಹಿಸಬೇಕು. ಕೊಟ್ಟ ಮಾತಿಗೆ ಕಟ್ಟುಬಿದ್ದು, ಗುರುಹಿರಿಯರ ಆಶೀರ್ವಾದ ಪಡೆದು ಆರರ ಶನಿಯನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಏನನ್ನಾದರೂ ಜಯಿಸಬಹುದು. ಲಕ್ಷ್ಮೀ ಸತ್ಯನಾರಾಯಣ ಕಥಾಶ್ರವಣ ಮಾಡಿರಿ. ಸತ್ಯನಾರಾಯಣ ಅಷ್ಟೋತ್ತರ ಪಠಿಸಿ.

   

  ತುಲಾ

  ಲಗ್ನದಲ್ಲಿ ಕೇತುವಿರುವುದರಿಂದ, ನಿಮ್ಮ ಕೆಲಸಗಳು ನಿರ್ವಿಘ್ನವಾಗಿ ನಡೆಯಲು ಚಿಂತಾಮಣಿ ಗಣಪತಿಯನ್ನು ಪೂಜಿಸಿ. ಮನುಷ್ಯನಿಗೆ ಮಾತನಾಡಲು ಸಮಯವಿರುತ್ತದೆ. ದೇವತಾ ಪ್ರಾರ್ಥನೆಗೆ ಸಮಯವಿಲ್ಲ. ಅನ್ಯರ ಮಾತಿನಿಂದ ಲಾಭವಿಲ್ಲ. ನಿಮ್ಮಲ್ಲಿ ದೈವಬಲ ತುಂಬಿಕೊಳ್ಳಿ. ಸಪ್ತಮಕ್ಕೆ ಗುರು ಬಂದು ಜೀವನ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸುಖವನ್ನು ಕಾಣಬಹುದು.

   

  ಧನಸ್ಸು

  ಮಾಯಾ ವೇಷದಲ್ಲಿ ದೇವತೆಗಳು ವಾನರ ರೂಪ ಧರಿಸಿ ಶ್ರೀರಾಮಚಂದ್ರನ ಜತೆಯಲ್ಲಿ ಲಂಕಾಸುರನ ಸಂಹಾರ ಮಾಡುವಾಗ ಅವರ ಪಾತ್ರ ದೊಡ್ಡದು. ದೇವತೆಗಳೇ ವಾನರರಾಗಿರುವುದರಿಂದ ಅವರು ಶೂರರೂ ವೀರರೂ ಹೌದು. ಅಂತಹ ಹನುಮಂತನನ್ನು ಪೂಜಿಸಿ ಪ್ರಾರ್ಥಿಸಿ. ಕೇವಲ 3 ವಾರ ಕಳೆದರೆ ಗುರುಬಲ ದೊರಕಿ ನಿಮಗೆ ರಾಜ್ಯ ಕೋಶಾದಿಗಳನ್ನು ಹನುಮಂತನೇ ತಂದುಕೊಡುತ್ತಾನೆ. 100ಕ್ಕೆ 99 ಭಾಗ ಶುಭವೇ ಸಿಗುವುದು.

   

  ವೃಶ್ಚಿಕ

  ದೇವತಾ ಪರಿಹಾರವು ಹಲವಾರು ಇರುತ್ತದೆ. ದ್ವಾದಶದಲ್ಲಿ ಕೇತುವಿರುವುದರಿಂದ ಆರರಲ್ಲಿ ರಾಹುವಿರುವುದರಿಂದ ಅನ್ಯದಾರಿಯೇ ಕಾಣುವುದಿಲ್ಲ. ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ಕಾರ್ಯ ಬೇಡ. ಪಳನಿ ಸುಬ್ರಹ್ಮಣ್ಯ ಸ್ವಾಮಿಯನ್ನು ಬೇಡಿದರೆ ಏನನ್ನಾದರೂ ಕೊಡುತ್ತಾನೆ. ನಾಗದುರ್ಗಾ ದೇವಿಯನ್ನು ಪೂಜಿಸಿ ಇಷ್ಟಾರ್ಥ ಪಡೆದುಕೊಳ್ಳಿ.

   

  ಮಕರ

  ರಾಶ್ಯಾಧಿಪತಿ 2ರಲ್ಲಿ, ಗುರು- ಮೂರರಲ್ಲಿ, 4ರಲ್ಲಿ ರವಿ-ಬುಧ-ರಾಹು, ಪಂಚಮದಲ್ಲಿ ಶುಕ್ರನಿದ್ದಾನೆ. ಈ ಗ್ರಹಸ್ಥಿತಿಯಲ್ಲಿ ನಿಮಗೆ ನಿಮ್ಮ ಕೆಲಸವು ಶೇ. 50 ನಡೆದರೂ ದೊಡ್ಡ ಯೋಗವೇ. ಯೋಗಿಗಳ ಹಾಗೆ ಜೀವನ ಬದಲಾಯಿಸಿಕೊಂಡು ದೇವರ ಧ್ಯಾನದಲ್ಲಿ ನಿರತರಾಗಿದ್ದರೆ ಕಷ್ಟಗಳನ್ನು ಕಳೆದು ಇಷ್ಟಾರ್ಥ ನೆರವೇರಿಸುತ್ತಾನೆ. ಶನಿ ಅಷ್ಟೋತ್ತರ ಪಾರಾಯಣ ಮಾಡಿ. ಈ ವಾರ ನಂಜನಗೂಡಿನ ಶ್ರೀಕಂಠೇಶ್ವರನನ್ನು ದರ್ಶಿಸಿ.

   

  ಕುಂಭ

  ರಾಶ್ಯಾಧಿಪತಿ ಶನಿ ರಾಶಿಯಲ್ಲೇ ಇದ್ದು, ಕುಂಭಕ್ಕೆ ಗುರು 2ರಲ್ಲಿದ್ದಾನೆ. ಸ್ವಕ್ಷೇತ್ರದಲ್ಲಿ ಇರುವುದರಿಂದ, ನೀವು ದೃಢಸಂಕಲ್ಪ ಮಾಡಿ ಅಪೂರ್ಣವಾದ ಕೆಲಸಗಳು ಪೂರ್ಣ ಮಾಡುವ ಸಮಯ. ಏಪ್ರಿಲ್ 21ರ ನಂತರ ಗುರುವು ರಾಹುವು 3ನೇ ಮನೆಯಲ್ಲಿ ಇರುತ್ತಾರೆ. ಮಧ್ಯಾವಸ್ಥೆಯ ಶನಿ ಸಂಚಾರ ಇರುವಾಗ, ನಡೆನುಡಿ ಎಚ್ಚರವಾಗಿರಲಿ. ಗುರು ಚರಿತ್ರೆ ಪಾರಾಯಣ ನಿತ್ಯವೂ ಮಾಡಿ.

   

  ಮೀನ

  ಮೀನ ರಾಶಿಯವರು ಗುರುವಿಗೆ ಶರಣಾದಲ್ಲಿ ಏನನ್ನಾದರೂ ಪಡೆಯಬಹುದು. ಗುರು ಎಂಬ ಶಬ್ದದಲ್ಲಿ ವಿಶ್ವಾಸವಿಟ್ಟು, ಗುರುಗಳ ಮಾತಿನಂತೆ ನಡೆದರೆ ಯಾವ ಕುಂದು-ಕೊರತೆ ಬರುವುದಿಲ್ಲ. ದ್ವಾದಶದಲ್ಲಿ ಶನಿಯಿದ್ದರೂ ಗುರು ಕಟಾಕ್ಷ ಚೆನ್ನಾಗಿದ್ದರೆ ನೀವು ಒಳ್ಳೆಯ ಕೆಲಸವನ್ನು ಮಾಡುತ್ತೇನೆಂಬ ನಂಬಿಕೆ ಇದ್ದರೆ, ಶನಿ ನಿಮಗೆ ಹಾನಿ ತರುವುದಿಲ್ಲ. ಆರೋಗ್ಯದ ಬಗ್ಗೆ ಮಾತ್ರ ಎಚ್ಚರವಿರಲಿ.

  ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts