ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಅಪರೇಟರ್‌ಗಳಿಗೆ ವಾರದ ರಜೆ(Weekly holiday for water operator on a rotating basis) ನಿಗದಿಪಡಿಸಿ ಪಂಚಾಯತ್ ರಾಜ್ ಆಯುಕ್ತಾಲಯ ಸುತ್ತೋಲೆ(Circuler)ಹೊರಡಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ನಿಯಮ ರಚಿಸಿದ್ದು, ಈ ನಿಯಮದ ಅನ್ವಯ ರಜೆ ನೀಡಲು ನಿರ್ಧರಿಸಲಾಗಿದೆ.
ಅಲ್ಲದೆ, ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ವಾರದಲ್ಲಿ ಒಂದು ದಿನ ರಜೆ ನಿಗದಿಪಡಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಗ್ರಾಮೀಣಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಶೀಲಿಸಿದ್ದು, ವಾಟರ್ ಅಪರೇಟರ್‌ಗಳಿಗೆ ವಾರದಲ್ಲಿ ಒಂದು ದಿನ ರಜೆಯನ್ನು ನಿಗದಿಪಡಿಸಲಾಗಿದೆ.
ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜು ನಿರ್ವಹಣೆಗೆ ಅನಾನುಕೂಲವಾಗದಂತೆ ಆವರ್ತನ ಮಾದರಿಯಲ್ಲಿ ವಾರದ ರಜೆ ನಿಗದಿಪಡಿಸಬೇಕು. ವಾರದ ರಜೆ ನೀಡುವ ಸಂದರ್ಭದಲ್ಲಿ ರಜೆ ಪಡೆಯುವ ವಾಟರ್ ಅಪರೇಟರ್ ಅವರು ನಿರ್ವಹಿಸುತ್ತಿದ್ದ ಪ್ರಕಾರ್ಯವನ್ನು ಗ್ರಾಮ ಪಂಚಾಯಿತಿಯ ಮತ್ತೊಬ್ಬ ವಾಟರ್ ಅಪರೇಟರ್ ಮುಖೇನ ನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ವಅರದ ರಜೆಯನ್ನು ವಾಟರ್ ಅಪರೇಟರ್‌ಗಳು ಅವರ ಹಕ್ಕು ಎಂಧು ಪರಿಗಣಿಸುವಂತಿಲ್ಲ ಹಾಗೂ ವಾರದ ನಿಗದಿತ ರಜೆಯನ್ನು ಪಡೆಯದೆ ಮುಂದಿನ
ವಾರಕ್ಕೆ ಹಿಂಬಾಕಿ ಎಂದು ಭಾವಿಸಿ ಸತತವಾಗಿ ರಜೆ ಪಡೆಯಲು ಅವಕಾಶವಿಲ್ಲ. ಪ್ರಕೃತಿ ವಿಕೋಪ, ಸ್ಥಳೀಯ ಜಾತ್ರೆ, ಸಭೆ, ಸಮಾರಂಭಗಳು, ಮತ್ತಿತರ ವಿಶೇಷ ಸಂದರ್ಭಗಳಲ್ಲಿ ವಾರದ ರಜೆಯನ್ನು ಮಂಜೂರು ಮಾಡುವಂತೆ ಒತ್ತಾಯಿಸುವಂತಿಲ್ಲ. ಆದಾಗ್ಯೂ ಇಂತಹ ಸಂದರ್ಭಗಳಲ್ಲಿ ರಜೆ ಮಂಜೂರು ಮಾಡುವುದು ಆಯಾ ಗ್ರಾಮ ಪಂಚಾಯಿತಿಯ ವಿವೇಚನೆಗೆ ಒಳಪಟ್ಟಿರುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.