More

    ಕೋಳಿ ಕೂಗುವ ಮೊದಲೇ ಕಂಕಣ!

    | ಟಿ.ರಾಮಚಂದ್ರಪ್ಪ ಕೊಂಡ್ಲಹಳ್ಳಿ ಚಿತ್ರದುರ್ಗ

    ವಾಲಗ ಊದೋರಿಲ್ಲ, ಗಟ್ಟಿಮೇಳ ಬಾರಿಸೋರಿಲ್ಲ, ಶಾಮಿಯಾನ ಇರಲಿ, ಹಸಿರು ಚಪ್ಪರವೂ ಕಾಣುವುದಿಲ್ಲ. ಕೋಳಿ ಕೂಗುವ ಮೊದಲೇ ಕಾರ್ಯಕ್ರಮ ಮುಗಿದಿರುತ್ತದೆ. ಅಲ್ಲಿ ನಡೆದದ್ದು ಮದುವೆ ಎಂಬುದು ಗೊತ್ತಾಗುವುದು ಬೆಳಕು ಹರಿದು ಗಂಡು-ಹೆಣ್ಣು ಜೋಡಿಯನ್ನು ನೋಡಿದ ಮೇಲಷ್ಟೇ!

    ಇಡೀ ವಿಶ್ವವನ್ನು ಆವರಿಸಿರುವ ಕರೊನಾ ಮಹಾಮಾರಿ ಕರ್ನಾಟಕದ ಗ್ರಾಮೀಣ ಭಾಗದ ಸಂಸ್ಕೃತಿ, ಸಂಪ್ರದಾಯದ ಮೇಲೂ ಪರಿಣಾಮ ಬೀರಿದೆ. ವಿವಾಹಕ್ಕೆಂದು ಲಕ್ಷಾಂತರ ರೂಪಾಯಿಯನ್ನು ನೀರಿನಂತೆ ಚೆಲ್ಲುತ್ತಿದ್ದವರೀಗ ಸಾವಿರದ ಲೆಕ್ಕದಲ್ಲಿ ಮದುವೆ ಮಾಡಿ ಮುಗಿಸುತ್ತಿದ್ದಾರೆ.

    ಲಾಕ್​ಡೌನ್ ನಿಯಮದಿಂದ ಆಡಂಬರದ ವಿವಾಹಗಳಿಗೆ ಕಡಿವಾಣ ಬಿದ್ದಿರುವ ಪರಿಣಾಮ ಸರ್ಕಾರದ ಷರತ್ತುಗಳಿಗೆ ಜನ ಹೆದರುವಂತಾಗಿದೆ. ಸರಳ ವಿವಾಹಕ್ಕೆ ಸಿದ್ಧರಾಗಿ ಗಂಡು-ಹೆಣ್ಣಿನ ಕಡೆಯ 8-10 ಜನರಷ್ಟೇ ಸೇರಿ ಬೆಳಗಾಗುವ ಮೊದಲೇ ಮದುವೇ ಮುಗಿಸುತ್ತಿದ್ದಾರೆ. ಹಿಂದಿನ ದಿನ ತಯಾರಿ ಆರಂಭವಾಗಿ ಮರುದಿನ ಸೂರ್ಯ ಹುಟ್ಟುವುದರೊಳಗೆ ಮದುವೆಯೇ ಮುಗಿದಿರುತ್ತದೆ. ರಾಜ್ಯಾದ್ಯಂತ ಇಂತಹ ಸರಳ ವಿವಾಹಗಳು ಸದ್ದಿಲ್ಲದೆ ನಡೆಯುತ್ತಿವೆ. ಕರೊನಾ ಆತಂಕ ದೂರಾದ ಮೇಲೂ ಇಂತಹ ಸರಳ ವಿವಾಹ ಮುಂದುವರಿಯಬೇಕೆಂಬ ಅಭಿಪ್ರಾಯ ಕೆಲ ವಲಯದಲ್ಲಿ ಕೇಳಿಬರುತ್ತಿದೆ.

    ಕಾರಣ ಏನು?
    1. ವಿವಾಹಕ್ಕೆ ಸರ್ಕಾರ ನಿಗದಿಪಡಿಸಿರುವ ಷರತ್ತು
    2. ಇಂತಿಷ್ಟೇ ಜನ ಸೇರಬೇಕು, ದೈಹಿಕ ಅಂತರ ಪಾಲಿಸಬೇಕೆಂಬ ನಿಯಮ
    3. ಕರೊನಾ ಸೋಂಕು ಹರಡಬಹುದೆಂಬ ಮುಂಜಾಗ್ರತೆ
    4. ಅಕ್ಕಪಕ್ಕದವರು ತಗಾದೆ ತೆಗೆಯಬಹುದೆಂಬ ಆತಂಕ
    5. ಆರ್ಥಿಕ ಸಂಕಷ್ಟದಿಂದಾಗಿ ಸರಳ ಆಚರಣೆಗೆ ಒಲವು

    ಪ್ರತಿಷ್ಠೆ ಕಾರಣಕ್ಕೆ ನಡೆಯುವ ಆಡಂಬರದ ವಿವಾಹಗಳು ಹೆಣ್ಣು ಹೆತ್ತವರನ್ನು ಸಾಲದ ಸುಳಿಗೆ ಸಿಲುಕಿಸುತ್ತವೆ. ಸರಳ ವಿವಾಹದ ಬಗ್ಗೆ ಪ್ರಜ್ಞಾವಂತರು ಎಷ್ಟೇ ಹೇಳಿದರೂ ಜನರು ಪಾಲನೆ ಮಾಡುತ್ತಿರಲಿಲ್ಲ. ಕರೊನಾದಿಂದ ಜನ ಪಾಠ ಕಲಿತು ಸರಳ ವಿವಾಹಗಳಿಗೆ ಮೊರೆ ಹೋಗಿದ್ದಾರೆ. ಇದನ್ನು ಹೀಗೇ ಮುಂದುವರಿಸಿಕೊಂಡು ಹೋಗಬೇಕು.

    | ಜಿ.ಕೇಶವಮೂರ್ತಿ ಮಾಜಿ ಅಧ್ಯಕ್ಷ, ವ್ಯವಸಾಯ ಸೇವಾ ಸಹಕಾರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts