ಮೂಡುಬಿದಿರೆ: ಕರಾವಳಿಯ ಹೆಚ್ಚಿನ ದೇವಸ್ಥಾನಗಳು ಜೀರ್ಣೋದ್ಧಾರ ಕಾಣುತ್ತಿವೆ. ಮೂಡುಬಿದಿರೆಗೆ ಬೇರೆ ಬೇರೆ ಕಡೆಯಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಿದ್ದು, ನಮ್ಮ ಪ್ರತಿಯೊಬ್ಬರ ನಡೆ ನುಡಿ, ಆಚಾರ ವಿಚಾರಗಳು, ನಡವಳಿಕೆ ಉತ್ತಮವಾಗಿರಬೇಕು. ಇಲ್ಲಿನ ಸನಾತನ ಸಂಸ್ಕೃತಿ, ಆಚಾರ ವಿಚಾರವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಬೇರೆ ಬೇರೆ ಕಡೆಗಳಿಗೆ ಪಸರಿಸಲು ದೇವಸ್ಥಾನಗಳು ಮಾದರಿಯಾಗಬೇಕಿದೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ಬ್ರಹ್ಮಕಲಶೋತ್ಸವದ ಹೊಸ್ತಿಲಿನಲ್ಲಿರುವ ಮಹತೋಭಾರ ಶ್ರೀ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ, ಕ್ಷೇತ್ರದ ವೆಬ್‌ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಚುನಾವಣಾ ಪೂರ್ವದಲ್ಲಿ ಕ್ಷೇತ್ರಕ್ಕೆ ಬಂದು ಸೋಮನಾಥನ ಆಶೀರ್ವಾದ ಪಡೆದುಕೊಂಡಿದ್ದೆ. ಅದರಂತೆ ಜಿಲ್ಲೆಯ ಜನರ ಜತೆ ಬೆರೆಯಲು ಅವಕಾಶ ಸಿಕ್ಕಿದೆ ಎಂದರು.
ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ದೇವಳದ ಆನುವಂಶಿಕ ಮೊಕ್ತೇಸರ, ಚೌಟರ ಅರಮನೆಯ ಕುಲದೀಪ ಎಂ., ಜೋಯ್ಲಸ್ ತಾಕೊಡೆ ಮತ್ತಿತರರಿದ್ದರು.
ಆನ್‌ಲೈನ್ ಹೂಡಿಕೆ ಹೆಸರಲ್ಲಿ ಮಹಿಳೆಯೋರ್ವರಿಗೆ 15.27 ಲಕ್ಷ ರೂ. ವಂಚನೆ