ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಸೋನು ಪಾಟೀಲ್

ಬಿಗ್ ಬಾಸ್ ಕನ್ನಡ ಸೀಸನ್ 6ರ ಸ್ಫರ್ಧಿ ಸೋನು ಪಾಟೀಲ್ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಸಂಕೇತ್ ಅವರನ್ನು ಸೋನು ವಿವಾಹವಾಗಿದ್ದಾರೆ.

ಸಂಕೇತ್ ಎಲ್ಲಿಯವರು, ಅವರ ಹಿನ್ನೆಲೆ ಏನು ಎಂಬ ವಿಚಾರವನ್ನ ಸೋನು ಪಾಟೀಲ್ ಬಹಿರಂಗಗೊಳಿಸಿಲ್ಲ. ಇನ್ನೂ ಸಂಕೇತ್ ಹಾಗೂ ಸೋನು ಅವರ ಮದುವೆ ಹಿರಿಯರು ನೋಡಿ ನಿಶ್ಚಯಿಸಿದ್ದಾ ಅಥವಾ ಇಬ್ಬರದ್ದು ಲವ್ ಮ್ಯಾರೇಜಾ ಅನ್ನುವ ಗುಟ್ಟನ್ನೂ ಕೂಡ ಸೋನು ಪಾಟೀಲ್ ಬಿಟ್ಟು ಕೊಟ್ಟಿಲ್ಲ.

ಬಿಗ್ ಬಾಸ್ ಆರನೇ ಆವೃತ್ತಿಯಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ಮುನ್ನ ಸೋನು ಪಾಟೀಲ್ ಮೊಗ್ಗಿನ ಮನಸು, ಗಾಂಧಾರಿ, ಅಮೃತ ವರ್ಷಿಣಿ ಸೇರಿ ಅನೇಕ ಧಾರಾವಾಹಿಯಲ್ಲಿ ನಟಿಸಿದ್ದರು. ಇನ್ನೂ ಬೆಳ್ಳಿ ತೆರೆಗೂ ಕಾಲಿಟ್ಟಿದ್ದ ಸೋನು ಪಾಟೀಲ್ ಧರ್ಮಸ್ಯ, ಗೋಸಿ ಗ್ಯಾಂಗ್ ಸಿನಿಮಾಗಳಲ್ಲಿ ಕೂಡ ನಟಿಸಿ ಮನೆ ಮಾತಾಗಿದ್ದರು.

ಸದ್ದಿಲ್ಲದೆ ವೈವಾಹಿಕ ಜೀವನ್ಕಕೆ ಕಾಲಿಟ್ಟಿರುವ ನಟಿ ಸೋನು ಪಾಟೀಲ್ ಹಾಗೂ ಸಂಕೇತ್ ಅವರಿಗೆ ಹಿರಿತೆರೆ ಹಾಗೂ ಕಿರುತೆರೆಯ ಅನೇಕ ನಟ, ನಟಿಯರು ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ.

Fill in some text