ಕಂಪ್ಲಿ: ನೇಕಾರ ಸಮುದಾಯಗಳು ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು ರಾಜಕೀಯ ಪ್ರಾತಿನಿಧ್ಯಗಳಿಸುವಲ್ಲಿ ಮುಂದಾಗಬೇಕು ಎಂದು ಬಳ್ಳಾರಿ ಗ್ರಾಮೀಣ ನೇಕಾರ ಸಮುದಾಯ ಒಕ್ಕೂಟದ ಅಧ್ಯಕ್ಷ ರಾಮರಾಜು ಹೇಳಿದರು.
ಇದನ್ನೂ ಓದಿ: ನೇಕಾರಿಕೆ ಮಾನವನ ಮಾನ ಕಾಯುವ ಕಾಯಕ; ಡಾ. ಬಸವರಾಜ ಕೇಲಗಾರ
ಶ್ರೀ ತೊಗಟವೀರ ಕ್ಷತ್ರಿಯ ನೇಕಾರ ಭವನದಲ್ಲಿ ನೇಕಾರ ಸಮುದಾಯ ಸಂಘ ಗುರುವಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆ, ಸ್ವಾತಂತ್ರ್ಯೋತ್ಸವ ನಿಮಿತ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೇಕಾರಿಕೆ ನಂಬಿ ಜೀವನ ಸಾಗಿಸುವ ನೇಕಾರರ ಸ್ಥಿತಿ ಚಿಂತಾಜನಕವಾಗಿದು,್ದ ಸರ್ಕಾರ ನೇಕಾರರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕು. ಆಧುನಿಕತೆಗೆ ತಕ್ಕಂತೆ ನವೀನ ತಂತ್ರಜ್ಞಾನ ಆಧಾರಿತ ಉದ್ಯೋಗ ಕಂಡುಕೊಳ್ಳುವಲ್ಲಿ ಮುಂದಾಗಬೇಕು ಎಂದರು.
ಅಖಂಡ ಬಳ್ಳಾರಿ ಜಿಲ್ಲಾ ನೇಕಾರ ಸಮುದಾಯಗಳ ಸಂಘದ ಜಿಲ್ಲಾಧ್ಯಕ್ಷ ಸಿ.ದೇವಾನಂದ ಮಾತನಾಡಿ, ಸರ್ಕಾರದ ತರಬೇತಿ, ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಸ್ವಉದ್ಯೋಗವಂತರಾಗಬೇಕಿದೆ.
ಉನ್ನತ ಶಿಕ್ಷಣ, ಹುದ್ದೆ ಗಳಿಸುವ ಮೂಲಕ ವೈಯಕ್ತಿಕ ಮತ್ತು ಸಮುದಾಯದ ಪ್ರಗತಿ ಸಾಧಿಸಬೇಕಿದೆ ಎಂದರು. ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿವರೆಗೆ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣವಂತರು, ನೌಕರರು, ಸಾಧಕರು, ನಿವೃತ್ತ ಸೈನಿಕರನ್ನು ಗೌರವಿಸಲಾಯಿತು.
ನೇಕಾರ ಸಮುದಾಯಗಳ ಸಂಘದ ತಾಲೂಕು ಅಧ್ಯಕ್ಷ ಪಿ.ಬ್ರಹ್ಮಯ್ಯ, ಕಾರ್ಯದರ್ಶಿ ಜಿ.ಸುಧಾಕರ, ಪ್ರಮುಖರಾದ ವೆಂಕಟಕೊಂಡಯ್ಯ, ನೀಲಕಂಠಪ್ಪ, ಸಿದ್ಮಲ್ ವೀರಭದ್ರಪ್ಪ, ಸಪ್ಪರದ ರಾಘವೇಂದ್ರ, ಗರಡಿ ಈರಣ್ಣ, ಗದ್ಗಿ ವಿರೂಪಾಕ್ಷಿ, ಶ್ರೀನಿವಾಸ, ಡಾ.ಸುಧಾಕರ್, ಭಾರತಮ್ಮ, ಕೊಟೇಶ್ವರಿ, ಕಮಲಮ್ಮ, ರಮಣಮ್ಮ ಇತರರಿದ್ದರು.