ಹಾವೇರಿ: ಪ್ರಕೃತಿಗೆ ಪೂರಕವಾಗಿ ನಮ್ಮ ನಡೆಗಳಿರಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಎಚ್.ವೈ. ಮೀಶಿ ಹೇಳಿದರು.
ಇಲ್ಲಿಯ ಜಿಪಂ ಸಭಾಂಗಣದಲ್ಲಿ ಶನಿವಾರ ಬೆಂಗಳೂರು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪಿ) ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ.ಎಸ್.ಸಿ.ಎಸ್.ಟಿ) ಸಹಯೋಗದಲ್ಲಿ ಏರ್ಪಡಿಸಿದ್ದ ‘ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾಯೋಜನೆ’ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತರಬೇತಿ ಉದ್ದೇಶ ಹಾಗೂ ರೂಪರೇಷೆ ಮಾಹಿತಿ ನೀಡಿದ ಅವರು, ಅಧಿಕಾರಿಗಳು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹವಾಮಾನ ಬದಲಾವಣೆ ಎಂದರೇನು, ಅದರ ಹಿಂದಿನ ವಿಜ್ಞಾನ ಪರಿಣಾಮಗಳು ಮತ್ತು ಅದರ ಜಾಗತಿಕ ಸವಾಲುಗಳು, ಜಾಗತಿಕ ಮಟ್ಟದ ಉಪಕ್ರಮಗಳ ತರಬೇತಿ ಅಸೋಸಿಯೆಟ್ಸ್ ಎಂಪಿ ಸಂಸ್ಥೆ ರುಚಿತಾಶ್ರೀ ಎ.ಎಂ. ಮತ್ತು ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾಯೋಜನೆಯ ಉಗಮ, ಉದ್ದೇಶ, ಕಾರ್ಯತಂತ್ರಗಳ ಕುರಿತು ಎಂಪಿ ಸಂಸ್ಥೆ ಸಂಶೋಧನಾ ವಿಜ್ಞಾನಿ ಡಾ. ಶೃತಿ ಬಿ.ವಿ. ಉಪನ್ಯಾಸ ನೀಡಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ. ಅಶೋಕ ಪಿ., ಬಸವರಾಜ ಬಾಕಿರ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
