ಸಿರಿಗೇರಿ: ಗ್ರಾಮದ ಪ್ರಮುಖ ಸರ್ಕಲ್‌ನಲ್ಲಿ ನಿಮಗಾಗಿ ನಾವು ಸಂಸ್ಥೆ ಗ್ರಾಮ ಘಟಕ ಹಾಗೂ ಪೊಲೀಸ್ ಠಾಣೆ ಸಂಯುಕ್ತಾಶ್ರಯದಲ್ಲಿ ಶನಿವಾರ ಹೆಲ್ಮೆಟ್ ಜಾಗೃತ ಜಾಥಾಕ್ಕೆ ಗ್ರಾಪಂ ಅಧ್ಯಕ್ಷ ಹೊಳಗುಂದಿ ಲಕ್ಷ್ಮೀ ಕೆ.ದೇವಣ್ಣ ಮತ್ತು ಉಪಾಧ್ಯಕ್ಷ ರಾಜಮ್ಮ ಡ್ರೈವರ್ ಹುಲುಗಪ್ಪ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು.
ಇದನ್ನೂ ಓದಿ: ಈ 5 ಮನೆ ಮದ್ದುಗಳು ಬಳಸುವ ಮೂಲಕ ಕಣ್ಣಿನ ಡಾರ್ಕ್ ಸರ್ಕಲ್ಗೆ ಹೇಳಿ ವಿದಾಯ! | Dark Circles
ಮುಖ್ಯಪೇದೆ ಬಣಕಾರ್ ಮಹೇಶ್ ಮಾತನಾಡಿ, ಹೆಲ್ಮೆಟ್ ಧರಿಸುವುದರಿಂದ ನಮ್ಮ ಜೀವದ ಜತೆಗೆ ಕುಟುಂಬವನ್ನ ಸಹ ಉಳಿಸಿಕೊಳ್ಳಬಹುದು. ನಗರ, ಜಿಲ್ಲಾ ಪ್ರದೇಶಗಳಿಗೆ ತೆರಳುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ನಿರ್ಲಕ್ಷೃ ಮಾಡದೆ ಪ್ರತಿಯೊಬ್ಬರೂ ಹೆಲ್ಮೆಟ್ ಕೊಂಡುಕೊಳ್ಳಿ ಪ್ರಾಣ ಉಳಿಸಿಕೊಳ್ಳಿ ಎಂದರು.
ನಿಮಗಾಗಿ ನಾವು ಸಂಸ್ಥೆಯ ಗೌರವಾಧ್ಯಕ್ಷ ವಿ.ಹನುಮೇಶ್ ಮಾತನಾಡಿದರು. ಬಳ್ಳಾರಿ ಜಿಲ್ಲೆಯ ಎಸ್‌ಪಿ ಶೋಭಾ ರಾಣಿ, ನಿವೃತ್ತ ಶಿಕ್ಷಕ ಜೆ.ರಾಣಪ್ಪ, ಪತ್ರಕರ್ತ ಶಿವರಾಂ, ಹುಲುಗಪ್ಪ , ಮುಖ್ಯಶಿಕ್ಷಕ ಬಿ.ಆರ್ ಶಿವಕುಮಾರ್, ಡಿವಿಪಿ ಜಿಲ್ಲಾ ಸಂಚಾಲಕ ಲಕ್ಷ್ಮಣ್ ಭಂಡಾರಿ, ನಿಮಗಾಗಿ ನಾವು ಸಂಸ್ಥೆ ಅಧ್ಯಕ್ಷ ಕೊಳ್ಳಿ ಶೇಖರ್, ಉಪಾಧ್ಯಕ್ಷ ಹಳ್ಳಿ ಮರದ್ ನಾಗರಾಜ್, ಖಜಾಂಚಿ ಶಿವಾಜಿರಾವ್, ನಿರ್ದೇಶಕ ಆಲಂಬಾಷ, ಪ್ರಧಾನ ಕಾರ್ಯದರ್ಶಿ ಪುನೀತ್, ಕಾನೂನು ಸಲಹೆಗಾರ ಶೇಖಪ್ಪ, ಬಸವ ಮುಖ್ಯ ಶಿಕ್ಷಕ ವೇಗೀಶ್,
ಎಎಸ್‌ಐ ಶೇಖ್ ಮೆಹಬೂಬ್ ಭಾಷ, ಪ್ರಮುಖರಾದ ಭಜಂತ್ರಿ ರಮೇಶ್, ಯರಿಸ್ವಾಮಿ, ಹಳ್ಳಿ ಮರದ ವೀರೇಶ್, ಲಕ್ಷ್ಮೀಶ, ಶರಣಪ್ಪ, ಮಂಜುನಾಥ್, ಶಿವಕುಮಾರ್, ರಂಗಣ್ಣ, ಚಂದ್ರಶೇಖರ್, ಅಕ್ಬರ್, ಪ್ರಭಾಕರ್ ಇದ್ದರು.