ಹಣದ ಸಂಪತ್ತಿಗಿಂತಲೂ ಜ್ಞಾನದ ಸಂಪತ್ತು ಮೌಲ್ಯಯುತ: ಡಾ. ವೂಡೇ ಪಿ. ಕೃಷ್ಣ

ಬೆಂಗಳೂರು ಹಣದ ಸಂಪತ್ತಿಗಿಂತಗಲೂ ಜ್ಞಾನದ ಸಂಪತ್ತು ಬಹಳ ಮೌಲ್ಯಯುತವಾದುದು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ವತಿಯಿಂದ ಮೈಸೂರು ವಿಶ್ವವಿದ್ಯಾಲಯದ ಎಂ.ಎ ಕನ್ನಡದಲ್ಲಿ 10 ಚಿನ್ನದ ಪದಕ ಪಡೆದಿರುವ ಚಾಮರಾಜನಗರದ ತೇಜಸ್ವಿನಿ ಎಂಬ ವಿದ್ಯಾರ್ಥಿನಿಗೆ ‘ಎಂ. ತಿಮ್ಮಯ್ಯ ವಿದ್ಯಾಚೇತನ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ಎಲ್ಲ ವಯಸ್ಸಿನ್ನಲಿಯೂ ಹಣ ಸಂಪಾದನೆ ಮಾಡಬಹುದು. ಆದರೆ, ವಿದ್ಯೆ, ಜ್ಞಾನ ಮತ್ತು ಪದವಿ ಸಂಪಾದನೆ ಮಾಡುವುದು ಕಷ್ಟದ ವಿಷಯ. ತಂದೆ-ತಾಯಿ ಇಲ್ಲದ ತಬ್ಬಲಿ ಯುವತಿಯೊಬ್ಬಳು ತೇಜಸ್ವಿನಿ ಎಂಬ ವಿದ್ಯಾರ್ಥಿನಿ ಸ್ನಾತಕ ಮತ್ತು ಸ್ನಾತಕೋತ್ತರ ಎರಡೂ ಪದವಿಯಲ್ಲಿ 10 ಚಿನ್ನದ ಪದಕ ಪಡೆದಿರುವುದು ಖುಷಿಯ ವಿಚಾರ ಎಂದರು.

ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜಾನಾರಾಧ್ಯ ಮಾತನಾಡಿ, ಆರಂಭದಿಂದಲೇ ಇಂಗ್ಲಿಷ್ ಕಲಿತು ಜೀವನವನ್ನು ಎಡಬಿಡಂಗಿತನ ಮಾಡಿಕೊಂಡಿರುವ ಯುವಕರಿದ್ದಾರೆ. ಆದರೆ, ಮಾತೃ ಭಾಷೆಯಲ್ಲಿ ಪ್ರಭುದ್ಧತೆ ಸಾಧಿಸಿ, ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿತು ಜೀವನ ರೂಢಿಸಿಕೊಳ್ಳದಿರುವವರು ತುಂಬಾ ವಿರಳ ಎಂದರು.

ಈ ಕಾರಣದಿಂದಲೇ ಮಹಾತ್ಮ ಗಾಂಧೀಜಿ ಅವರು ಮಾತೃ ಭಾಷೆಯನ್ನು ತಾಯಿ ಎದೆ ಹಾಲಿಗೆ ಹೋಳಿಸಿದ್ದರು. ಮಾತೃಭಾಷಾ ಕಲಿಕೆಯನ್ನು ಜಾಗತಿಕವಾಗಿಯೂ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಸನ್ಮಾನ ಸ್ವೀಕರಿಸಿದ ತೇಜಸ್ವಿನಿ ಎಂಬ ವಿದ್ಯಾರ್ಥಿಯ ಪಿಎಚ್.ಡಿ. ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಂ. ತಿಮ್ಮಯ್ಯ, ಕಾರ್ಯಾಧ್ಯಕ್ಷ ಸಿದ್ಧಯ್ಯ ಸೇರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share This Article

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…

ಸುಖವಾದ ನಿದ್ದೆ ಬೇಕೆಂದರೆ ಯೋಗದ ಮೊರೆಹೋಗಿ

ಪ್ರ:ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ 2-3 ತಾಸು ನಿದ್ರೆ ಬಂದರೆ ಹೆಚ್ಚು. ಸುಖನಿದ್ರೆಗಾಗಿ ಯಾವ ಯೋಗ…

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…