ವಾರಾಣಸಿಯಲ್ಲಿ ಮೋದಿ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​​ ಅಭ್ಯರ್ಥಿ ಅಜಯ್​ ರಾಯ್​

ನವದೆಹಲಿ: ವಾರಾಣಸಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಅಜಯ್​ ರಾಯ್​ ತಮ್ಮ ಪ್ರತಿಸ್ಪರ್ಧಿ ನರೇಂದ್ರ ಮೋದಿಯವರ ವಿರುದ್ಧ ಇಂದು ವಾಗ್ದಾಳಿ ನಡೆಸಿದ್ದಾರೆ.

2014ರಲ್ಲಿ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಇದುವರೆಗೂ ಈ ದೇಗುಲಗಳ ಪಟ್ಟಣವಾದ ವಾರಾಣಸಿಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಿಲ್ಲ. ಇಲ್ಲಿ ಪ್ರಗತಿಯಾಗಬೇಕಾದದ್ದು ಇನ್ನೂ ಸಾಕಷ್ಟು ಇದೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಇಲ್ಲಿ ಎಲ್ಲ ಕೆಲಸಗಳನ್ನೂ ಅರೆಕಾಲಿಕವಾಗಿ ಮಾಡಲಾಗಿದೆಯೇ ಹೊರತು ಶಾಶ್ವತವಾಗಿ ಉಳಿಯುವಂಥದ್ದನ್ನು ಏನೂ ಮಾಡಿಲ್ಲ ಎಂದು ಆರೋಪಿಸಿದ ರಾಯ್​, ಜನರು ಕಾಂಗ್ರೆಸ್​ಗೆ ಮತ ಹಾಕಿ ಗೆಲ್ಲಿಸುತ್ತಾರೆ ಎಂಬ ಆತ್ಮವಿಶ್ವಾಸ ನನಗೆ ಇದೆ. ಬಿಜೆಪಿ ಕೇಂದ್ರ ಸರ್ಕಾರದ ಐದು ವರ್ಷದ ಆಡಳಿತದ ಬಗ್ಗೆ ಅವರು ತೃಪ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ.

ಅಜಯ್​ ರಾಯ್​ ಅವರು ವಾರಾಣಸಿಯಲ್ಲಿ ಎರಡನೇ ಬಾರಿಗೆ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ಭಾರಿ ಮತಗಳಿಂದ ಮೋದಿ ವಿರುದ್ಧ ಸೋತಿದ್ದರು.

Leave a Reply

Your email address will not be published. Required fields are marked *