ಬೆಂಗಳೂರು: ಭಾರತೀಯ ಜನತಾ ಪಾರ್ಟಿಯ ಕೆಲಸ ಎಂದರೆ ಕೇವಲ ಚುನಾವಣೆ ಬಂದಾಗ ಮಾಡುವ ಕೆಲಸವಲ್ಲ, ನಾವೆಲ್ಲರೂ ಸಮಾಜ ಸೇವಕರು, ಸಮಾಜವನ್ನು ಮುನ್ನಡೆಸುವಂತಹವರು, ಸಾಮಾಜಿಕ ಕಾರ್ಯಕರ್ತರಾಗಿ ಕೆಲಸವನ್ನು ನಿಭಾಯಿಸುತ್ತಿದ್ದೇವೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಕಾಟಂನಲ್ಲೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಗ್ರಾಮಾಂತರ ಮಂಡಲದ ನೂತನ ಪದಾಧಿಕಾರಿಗಳ ಮತ್ತು ಮೋರ್ಚಾಗಳ ಘೋಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಪಕ್ಷದಲ್ಲಿರುವ ಸ್ಥಾನಮಾನಗಳು ಹುದ್ದೆಗಳಲ್ಲ, ಅದು ಜವಾಬ್ದಾರಿ. ಹೀಗಾಗಿ ನಾವೆಲ್ಲರೂ ಅದನ್ನು ನಿಭಾಯಿಸಿಕೊಳ್ಳುವಂತರಾಗಬೇಕು. ನಮ್ಮ ಸಾರ್ವಜನಿಕ ಕೆಲಸದ ಜೊತೆ ಜೊತೆಗೆ ಒಂದು ರಾಜಕೀಯ ಪಕ್ಷವಾಗಿ, ನಾವು ಸಾಮಾಜಿಕ ಕಾರ್ಯಕರ್ತರಾಗಿ ಕೆಲಸವನ್ನು ನಿಭಾಯಿಸಬೇಕು ಎಂದು ಹೇಳಿದರು.
ಒಂದು ಬಲವಾದ ಸಂಘಟನೆಯನ್ನು ಕಟ್ಟುವ ದೃಷ್ಟಿಯಿಂದ ನಮ್ಮ ಪಕ್ಷದ ತರಬೇತಿ ಶಿಬಿರಗಳಲ್ಲಿ ನಮ್ಮ ಕೆಲಸ ’ಸರ್ವ ಸ್ಪರ್ಶಿ – ಸರ್ವ ವ್ಯಾಪಿ’ಯಾಗಬೇಕು ಎನ್ನುವ ಮಾತಿದೆ. ಇಂದು ಇಲ್ಲಿ ಎಸ್ಸಿ ಮೋರ್ಚಾ, ಒಬಿಸಿ ಮೋರ್ಚಾ, ಯುವ ಮೋರ್ಚಾ, ಮಹಿಳಾ ಮೋರ್ಚಾ, ಆರ್ಡಬ್ಲ್ಯೂಡಬ್ಲ್ಯೂ ಸ್ಲಮ್ ಮೋರ್ಚಾ, ಆರ್‌ಡಬ್ಲ್ಯೂಎ ಹೀಗೆ ಎಲ್ಲ ಕ್ಷೇತ್ರವನ್ನು ನಾವು ತಲುಪಿದ್ದೇವೆ. ಯಾವ ಭಾಗದಲ್ಲಿ ಕೊರತೆಯಿದೆಯೋ ಅದನ್ನು ಕೂಡಾ ಸಂಪೂರ್ಣ ಮಾಡಬೇಕಿದೆ ಎಂದರು. ಇದೇ ವೇಳೆ ಇದು ಹುದ್ದೆಯಲ್ಲ ಬದಲಿಗೆ ಜವಾಬ್ದಾರಿ. ನಮಗೆ ಯಾವ ಜವಾಬ್ದಾರಿ ನೀಡಿದ್ದಾರೋ ಅದರ ಬಗ್ಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕಿ ಮಂಜುಳಾ ಲಿಂಬಾವಳಿ, ಗ್ರಾಮಾಂತರ ಮಂಡಲದ ಅಧ್ಯಕ್ಷ ಹೆಚ್. ಎಸ್. ಪಿಳ್ಳಪ್ಪ, ನಿಕಟಪೂರ್ವ ಅಧ್ಯಕ್ಷ ಬಿ. ಎನ್. ನಟರಾಜ್, ಮಾಜಿ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ಪ (ಪಾಪಣ್ಣ), ಕೆ.ಎಂ.ಎಂ.ಮಂಜುನಾಥ್, ಬೈರತಿ ರಮೇಶ್, ರಾಂಪುರ ಗಣೇಶ್, ರಾಮಾಂಜಿನೇಯ, ಜ್ಯೋತಿಪುರ ಕೆಂಪೇಗೌಡ ,ಶಾಸಕಿ ಮಂಜುಳಾ ಲಿಂಬಾವಳಿ, ಗ್ರಾಮಾಂತರ ಮಂಡಲದ ಅಧ್ಯಕ್ಷ ಹೆಚ್. ಎಸ್. ಪಿಳ್ಳಪ್ಪ, ನಿಕಟಪೂರ್ವ ಅಧ್ಯಕ್ಷ ಬಿ. ಎನ್. ನಟರಾಜ್, ಮಾಜಿ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ಪ (ಪಾಪಣ್ಣ), ಕೆ.ಎಂ.ಎಂ.ಮಂಜುನಾಥ್, ಬೈರತಿ ರಮೇಶ್, ರಾಂಪುರ ಗಣೇಶ್, ರಾಮಾಂಜಿನೇಯ, ಜ್ಯೋತಿಪುರ ಕೆಂಪೇಗೌಡ ಸೇರಿದಂತೆ ಮಂಡಲದ ಪದಾಧಿಕಾರಿಗಳು, ಗ್ರಾಮಾಂತರ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.