ಸಿಬಿಐ ಅಸ್ತ್ರದಿಂದ ಜೆಡಿಎಸ್​ ನಾಯಕರನ್ನು ಬೆದರಿಸಲು ಸಾಧ್ಯವಿಲ್ಲ: ಸಿ.ಎಸ್.ಪುಟ್ಟರಾಜು

ಮಂಡ್ಯ: ಸಿಬಿಐ ತನಿಖೆ ನೆಪವೊಡ್ಡಿ ಜೆಡಿಎಸ್ ನಾಯಕರನ್ನು ಬೆದರಿಸಲು ಸಾಧ್ಯವಿಲ್ಲ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.

ಪಾಂಡವಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋನ್ ಕದ್ದಾಲಿಕೆ ಪ್ರಕರಣ ಕುರಿತ ಸಿಬಿಐ ತನಿಖೆ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ಜೆಡಿಎಸ್ ನಾಯಕರಿಗೆ ಯಾವುದೇ ತೊಂದರೆಯಾಗುವುದಿಲ್ಲ.

ಸಿಬಿಐ ತನಿಖೆಯಿಂದ ಜೆಡಿಎಸ್ ಕಟ್ಟಿಹಾಕಬಹುದು ಎಂಬ ಬಿಜೆಪಿ ನಾಯಕರ ಲೆಕ್ಕಾಚಾರ ಫಲಿಸದು. ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವುದನ್ನು ಬಿಟ್ಟು ಜನರ ದಿಕ್ಕು ತಪ್ಪಿಸಲು ಬಿಜೆಪಿ ಸಿಬಿಐ ತನಿಖೆ ದಾಳ ಉರುಳಿಸಿದೆ.

ಕೇವಲ 14 ತಿಂಗಳ ಕುಮಾರಸ್ವಾಮಿ ಸರ್ಕಾರದ ಅಧಿಕಾರವಧಿಯ ಫೋನ್ ಕದ್ದಾಲಿಕೆ ವಿಚಾರದಿಂದ ಏನೇನು ಪ್ರಯೋಜನವಾಗುವುದಿಲ್ಲ. ಸಿಬಿಐ ಅಧಿಕಾರಿಗಳು ಹಿಂದಿನ ಯಡಿಯೂರಪ್ಪ ಸರ್ಕಾರ ಹಾಗೂ ಸಿದ್ದರಾಮಯ್ಯ ಸರ್ಕಾರದ ಫೋನ್ ಕದ್ದಾಲಿಕೆಯ ತನಿಖೆ ಕೂಡ ಮಾಡಬೇಕು. ಆಗ ಎಲ್ಲವೂ ಬಹಿರಂಗವಾಗಲಿದೆ.

ಉತ್ತರ ಕರ್ನಾಟಕ ನೆರೆ ಸಂತ್ರಸ್ಥರ ವಿಚಾರದಲ್ಲಿ ಯಡಿಯೂರಪ್ಪ ಸರ್ಕಾರ ಏನೇನು ಮಾಡುತ್ತಿಲ್ಲ. ಕೇಂದ್ರದಿಂದ ಒಂದೇ ಒಂದು ರೂ. ಅನುದಾನ ತಂದಿಲ್ಲ. ಕೇವಲ ಮಂತ್ರಿಮಂಡಲ ರಚನೆಯಲ್ಲಿ ಬ್ಯುಸಿಯಾಗಿರುವ ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ಟೋಪಿ ಹಾಕುತ್ತಿದ್ದಾರೆ ಎಂದು ಕುಟುಕಿದರು.

Leave a Reply

Your email address will not be published. Required fields are marked *