ನಮ್ಮಲ್ಲೊಂದು ‘ಹೇಮಾ ಕಮಿಟಿ’ ಬರಬೇಕು! ವಾಣಿಜ್ಯ ಮಂಡಳಿಯಲ್ಲಿ ಮೀಟೂ ಪರ-ವಿರೋಧ ಜಟಾಪಟಿ

ಬೆಂಗಳೂರು: ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಹೊರಬಿದ್ದ ಬೆನ್ನಲ್ಲೇ ಸಾಲು ಸಾಲು ಹಿರಿಯ ನಟಿಯರು ಸೇರಿದಂತೆ ಯುವ ನಟಿಯರು ತಮಗೆ ಸಹ ನಟರು, ನಿರ್ದೇಶಕರು ಹಾಗೂ ನಿರ್ಮಾಕರಿಂದ ಲೈಂಗಿಕ ಕಿರುಕುಳ ಎದುರಾಗಿತ್ತು ಎಂದು ಕ್ಯಾಮರಾ ಮುಂದೆ ಬಹಿರಂಗ ಹೇಳಿಕೆ ನೀಡಿದರು. ಹೆಸರಾಂತ ಹೀರೋಯಿನ್​ಗಳ ಸ್ಫೋಟಕ ಹೇಳಿಕೆಗಳು ಇದೀಗ ಮಾಲಿವುಡ್​ ಸಿನಿ ಇಂಡಸ್ಟ್ರಿಯನ್ನು ಅಕ್ಷರಶಃ ನೆಲಕಚ್ಚುವಂತೆ ಮಾಡಿದೆ. ಸದ್ಯ ಹೇಮಾ ಕಮಿಟಿ ವರದಿಯ ಆಧಾರ ಮೇರೆಗೆ ದೂರನ್ನು ಕೊಟ್ಟಿರುವ ನಟಿಯರನ್ನು ಖುದ್ದಾಗಿ ಮುಖಾಮುಖಿಯಾಗಿ ಭೇಟಿ ಮಾಡ್ತಿರುವ ಕೇರಳದ ಎಸ್​ಐಟಿ ತಂಡ, ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು, ತನಿಖೆಗೆ ಮುಂದಾಗುತ್ತಿದೆ. ಸದ್ಯ ಈ ಎಲ್ಲಾ ಬೆಳವಣಿಗೆ ಕಂಡ ಸ್ಯಾಂಡಲ್​ವುಡ್​ ಕೂಡ ನಮ್ಮಲ್ಲೂ ಒಂದು ಹೇಮ ಕಮಿಟಿ ಬರಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಆಗ್ರಹಿಸಿದೆ.

ಇದನ್ನೂ ಓದಿ: ಕೋಲ್ಕತ ಹತ್ಯೆ ಕೇಸ್​: ತನಿಖಾಧಿಕಾರಿಗಳ ಕಣ್ಣಿಗೆ ಮಣ್ಣೆರಚುವ ಪ್ರಯತ್ನ! ಸಂದೀಪ್ ವಿರುದ್ಧ ಸಿಬಿಐ ಗರಂ ​

ಇಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೇಮ ಕಮಿಟಿ ವರದಿ ಹೇಗೆ ರಚನೆಯಾಯಿತೋ ಅದೇ ರೀತಿ ನಮ್ಮಲ್ಲಿ ಕೂಡ ಒಂದು ಕಮಿಟಿ ಬರಬೇಕು. ಇದರಿಂದ ನಟಿಯರು ಎದುರಿಸುತ್ತಿರುವ ಸಮಸ್ಯೆಗಳು ಮುಕ್ತವಾಗಿ ಹೊರಬರುತ್ತದೆ ಎಂದು ಕೆಲವರು ಧ್ವನಿ ಎತ್ತಿದ್ದಾರೆ. ಇನ್ನು ಈ ಸಮಸ್ಯೆ ಬಗ್ಗೆ ಮಾತನಾಡಿದ ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, “ಶೂಟಿಂಗ್ ಸಂದರ್ಭದಲ್ಲಿ ಏನೇನೋ ನಡೆಯುತ್ತದೆ. ಇಷ್ಟ ಇಲ್ಲದೇ ಇದ್ರೂ ನಟಿಯರು ಕೆಲ ಸೀನ್​ಗಳಲ್ಲಿ ನಟಿಸುತ್ತಾರೆ” ಎಂದರು.

“ಮಹಿಳಾ ಕಲಾವಿದರ ಬಗ್ಗೆ ಎಷ್ಟು ಸೇಫ್ಟಿ ತೆಗೆದುಕೊಳ್ತಾರೆ, ಅವರಿಗೆ ಯಾವೆಲ್ಲಾ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ತಾರೆ? ಎಷ್ಟೋ ದಿನ ಕಾಡುಗಳಲ್ಲಿ, ದೂರದ ಊರುಗಳಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗುತ್ತದೆ. ಅಂತಹ ನಟಿಯರಿಗೆ ಯಾವ ರೀತಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದು ಗೊತ್ತಾಗಬೇಕು. ಒಂದೇ ಸೀನ್​ಗಳನ್ನು ಪದೇ ಪದೇ ಮಾಡಿಸೋದು ಕೂಡ ಒಂದು ರೀತಿ ಬಲವಂತ ಮಾಡಿದಂತೆಯೇ. ಖಾಸಗಿ ದೃಶ್ಯಗಳನ್ನು ಮಾಡುವಾಗ ನಟಿಯರಿಗೆ ಇರಿಸು ಮುರಿಸು ಆಗೋದು ಸಹಜ. ಹಾಗಾಗಿ ಕರ್ನಾಟಕದಲ್ಲಿಯೂ ಹೇಮ ಕಮಿಟಿ ರೀತಿ ಅಗಲೇಬೇಕು” ಎಂದು ವಾಣಿಜ್ಯ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: AI ಮೂಲಕ ಅಶ್ಲೀಲ ವಿಡಿಯೋ ಸೃಷ್ಟಿಸಿ 50 ಕಾಲೇಜು ಹುಡುಗಿಯರಿಗೆ ಬ್ಲಾಕ್​ಮೇಲ್! ಸ್ಫೋಟಕ ಮಾಹಿತಿ ಬಯಲು

ಸದ್ಯ ಚಿತ್ರರಂಗದ ಹಿರಿಯರು, ನಿರ್ಮಾಕರ ಸಂಘ ಮತ್ತು ಮಹಿಳಾ ಅಯೋಗದ ನಡುವೆ ಮಾತಿನ ಚಕಮಕಿ ನಡೆದಿದ್ದು, ಮೀಟೂ ಪ್ರಕರಣಗಳ ಸಂಬಂಧ ಪರ-ವಿರೋಧ ಜಟಾಪಟಿ ಜೋರಾಗಿದೆ. ಸಭೆಯಲ್ಲಿ ಮಾತು ಮೀರಿ ಗಲಾಟೆಗೆ ತಿರುಗುತ್ತಿದ್ದಂತೆ ಗರಂ ಆದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಮಾಧಾನದಿಂದ ಇರುವಂತೆ ಎಷ್ಟೇ ಹೇಳಿದರೂ ಕೂಡ ಕೆಲವು ನಿರ್ಮಾಪಕರು ಶಾಂತರಾಗಿಲ್ಲ.

ಪ್ರಿಯಕರನ ಆ ಒಂದು ಕಂಡಿಷನ್​ಗೆ ಹೆದರಿ ಬ್ರೇಕಪ್​ ಮಾಡಿಕೊಂಡ ‘ಸೀತಾ ಮಹಾಲಕ್ಷ್ಮಿ’! 7 ತಿಂಗಳ ಹಿಂದಿನ ರಹಸ್ಯ ಬಯಲು

ದೆಹಲಿ ಸಿಎಂ ಸ್ಥಾನಕ್ಕೆ ಒಳಗೊಳಗೆ ಗುದ್ದಾಟ! ಈ ಮೂವರಲ್ಲಿ ಅರವಿಂದ್​ ಕೇಜ್ರಿವಾಲ್​ ಬದಲಿಗೆ ಯಾರು?

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…