ಹಾರ್ದಿಕ್​ ಪಾಂಡ್ಯಗಿರುವ ಆಲ್​ರೌಂಡರ್​ ಪಟ್ಟ ಕಿತ್ತುಹಾಕಿ: ಭಜ್ಜಿ ಗರಂ

ನವದೆಹಲಿ: ಟೀಂ ಇಂಡಿಯಾದ ಲೆಗ್​​ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಅವರು ಹಾರ್ದಿಕ್​ ಪಾಂಡ್ಯ ವಿರುದ್ಧ ವಕ್ರ ದೃಷ್ಟಿ ಬೀರಿದ್ದು, ಪಾಂಡ್ಯ ಪ್ರದರ್ಶನದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಪ್ರಸ್ತುತ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐತಿಹಾಸಿಕ 5 ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುಗ್ಗರಿಸಿರುವ ಭಾರತದ ವಿರುದ್ಧ ಭಜ್ಜಿ ಬೇಸರ ವ್ಯಕ್ತಪಡಿಸಿದ್ದಾರೆ. ಉತ್ತಮ ಆಲ್​ರೌಂಡರ್​ ಎನಿಸಿಕೊಂಡಿರುವ ಹಾರ್ದಿಕ್​ ಪಾಂಡ್ಯ ಎರಡು ಟೆಸ್ಟ್​ ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ತೋರಿದ್ದು, ಇದರಿಂದ ಕೋಪಗೊಂಡಿರುವ ಭಜ್ಜಿ ಹಾರ್ದಿಕ್​ಗೆ ಇರುವ ಉತ್ತಮ ಆಲ್​ರೌಂಡರ್ ಎಂಬ ಹೆಸರನ್ನು ತೆಗೆದುಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.​

ಹಾರ್ದಿಕ್​ ಪಾಂಡ್ಯ ನಾಲ್ಕು ಇನ್ನಿಂಗ್ಸ್​ನಿಂದ ಕೇವಲ 90 ರನ್​ ಗಳಿಸಿ, ಮೂರು ವಿಕೆಟ್ ಪಡೆದಿದ್ದಾರೆ.​ ಈ ವಿಚಾರವನ್ನು ಪ್ರಸ್ತಾಪಿಸುತ್ತಾ, ಹಾರ್ದಿಕ್​ ಅವರು ಟೆಸ್ಟ್​ ಪಂದ್ಯಗಳಲ್ಲಿ ಆಡುವುದನ್ನು ಇಂಗ್ಲೆಂಡ್​ ಆಲ್​ರೌಂಡರ್​ಗಳಾದ ಬೆನ್​ ಸ್ಟೋಕ್ಸ್​, ಸ್ಯಾಮ ಕುರ್ರನ್​ ಮತ್ತು ಕ್ರಿಸ್​ ವೋಕ್ಸ್​ರನ್ನು ನೋಡಿ ಕಲಿಯಬೇಕಿದೆ ಎಂದೂ ಸಲಹೆ ನೀಡಿದ್ದಾರೆ.

ಓರ್ವ ಬ್ಯಾಟ್ಸ್​ಮನ್​ ಆಗಿ ಈತ ಹೆಚ್ಚು ರನ್​ ಗಳಿಸುತ್ತಿಲ್ಲ. ಹಾಗೇ ಬೌಲಿಂಗ್​ನಲ್ಲೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸವನ್ನು ಹೊಂದಿಲ್ಲ. ಇಂತಹ ಸಂದರ್ಭದಲ್ಲಿ ಈತ ಸರಿಯಾಗಿ ಬೌಲಿಂಗ್​ ಮಾಡದೇ ಇದ್ದಲ್ಲಿ, ಮುಂದಿನ ಪರಿಸ್ಥಿತಿ ಕಠಿಣವಾಗಿರಲಿದೆ ಎಂದು ಎಚ್ಚರಿಸಿದ್ದಾರೆ.

ಈ ಹಿಂದೆ ಹರ್ಭಜನ್​ ಅವರು ಭಾರತದ ನಿರಂತರ ಸೋಲಿನ ಬಗ್ಗೆ ತುಟಿ ಬಿಚ್ಚಿ ಎಂದು ಕೋಚ್​ ರವಿಶಾಸ್ತ್ರಿ ಅವರನ್ನು ಒತ್ತಾಯಿಸಿದ್ದರು. (ಏಜೆನ್ಸೀಸ್​)