ನಾವೇ ವಿನ್ಯಾಸಗೊಳಿಸಿ ಉತ್ಪಾದಿಸಬೇಕು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸೇವಾ ವಲಯದಲ್ಲಿ ಮುಂಚೂಣಿಯಲ್ಲಿರುವ ಭಾರತದ ಮನಸ್ಥಿತಿಯು ಉತ್ಪಾದನೆಯತ್ತ ಚಲಿಸಬೇಕಿದೆ. ನಾವೇ ಸಂಶೋಧನೆ, ಅಭಿವೃದ್ಧಿ, ವಿನ್ಯಾಸಗೊಳಿಸಿ ಉತ್ಪಾದನೆ ಮಾಡಿದರೆ ಭಾರತವು ಬಹಳ ಬೇಗನೇ ಆರ್ಥಿಕವಾಗಿ ಸದೃಢವಾಗಲಿದೆ ಎಂದು ಎಚ್​ಸಿಎಲ್ ಸಹ ಸಂಸ್ಥಾಪಕ ಪದ್ಮಭೂಷಣ ಡಾ. ಅಜಯ ಚೌಧುರಿ ಅಭಿಪ್ರಾಯಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಇಂದು ನಾವು ಚೀನಾ, ಅಮೆರಿಕ, ಕೊರಿಯಾ, ತೈವಾನ್ ಕಂಪನಿಗಳ ಉತ್ಪನ್ನಗಳಿಗೆ ಮಾರಾಟಗಾರರಾಗಿದ್ದೇವೆ. ಅನ್ಯ ದೇಶಗಳು ವಿನ್ಯಾಸಗೊಳಿಸಿದ, ಬೌದ್ಧಿಕ ಆಸ್ತಿ ಹಕ್ಕು ಹೊಂದಿರುವ ಉತ್ಪನ್ನಗಳನ್ನು ಜೋಡಿಸುವ ‘ಮೇಕ್ ಇನ್ ಇಂಡಿಯಾ’ ದಂಥ ಪರಿಕಲ್ಪನೆಯಿಂದ ವಿದೇಶಿ ಕಂಪನಿಗಳಿಗೆ ಶೇ. 70ರಿಂದ 90 ರಷ್ಟು ಲಾಭವಾಗಲಿದೆ. ಭಾರತಕ್ಕೆ ದಕ್ಕುವುದು ಶೇ. 5ರಿಂದ 7 ರಷ್ಟು ಲಾಭ ಮಾತ್ರ ಎಂದು ಹೇಳಿದರು.

ಭಾರತೀಯರ ಬುದ್ಧಿಮತ್ತೆಯು ಜಗತ್ತಿನ ಯಾವುದೇ ಮುಂದುವರಿದ ದೇಶಗಳ ಜನರ ಬುದ್ಧಿಮತ್ತೆಗಿಂತ ಉತ್ತಮವಾಗಿದೆ. ಬಾಹ್ಯಾಕಾಶ ತಂತ್ರಜ್ಞಾನ, ಸೆಮಿ ಕಂಡಕ್ಟರ್, ವಿದ್ಯತ್​ಚಾಲಿತ ವಾಹನ ಉತ್ಪಾದನೆ, ಡ್ರೋಣ್, ಹೀಗೆ 12 ಕ್ಷೇತ್ರಗಳಲ್ಲಿ ಭಾರತವು ಆಗಾಧವಾಗಿ ಅಭಿವೃದ್ಧಿ ಸಾಧಿಸಲು ಅವಕಾಶಗಳಿವೆ. ಈ ಕ್ಷೇತ್ರಗಳಲ್ಲಿ ನಾವೇ ವಿನ್ಯಾಸಗೊಳಿಸಿ ಉತ್ಪಾದಿಸುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಚಟುವಟಿಕೆಗಳನ್ನು ಉತ್ತೇಜಿಸಲು 20 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.

ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿಯ ಬಿಡಿಕೆ ವಾಲ್ವ್ ಪ್ರೖೆ. ಲಿ. ನ ಬಿಮಲ್ ಮೆಹ್ತಾ, ವನೆಸನ್ಸ್ ಗ್ರುಪ್​ನ ಜಯಂತಿಲಾಲ ಕಟಾರಿಯಾ, ಬ್ಯಾಡಗಿಯ ಮೆ. ಎಸ್. ಸಿ.ಎಂ. ಚತ್ರದ ನ ಬಿ.ಎಂ. ಚತ್ರದ, ಮುದ್ದೆಬಿಹಾಳದ ಶ್ರೀ ಸಾಯಿನಾಥ ದಾಲ್ ಇಂಡಸ್ಟ್ರೀಸ್​ನ ಶರಣಪ್ಪ ಸಜ್ಜನ, ಗೋಕಾಕನ ಮೆ. ನಿಬಾಜಿಯಾ ಕಾಟನ್ ಇಂಡಸ್ಟ್ರೀಸ್ ಸುನೀಲ ಶಾಹ, ಶಿವಮೊಗ್ಗದ ಎಸ್​ಎನ್​ಎಸ್ ಅಲಾಯ್ ಕಾಸ್ಟಿಂಗ್ಸ್ ಸಹನಾ ಇ.ವಿ. ಇವರಿಗೆ ವಾಣಿಜ್ಯ ರತ್ನ ಹಾಗೂ ಬಳ್ಳಾರಿಯ ಆದಿತ್ಯಾ ಟೆಕ್ಸಟೈಲ್ಸ್ ಪಾರ್ಕ್್ ಪ್ರೖೆ. ಲಿಮಿಟೆಡ್​ನ ಜಿ. ಮಲ್ಲಿಕಾರ್ಜುನ ಗೌಡ ಅವರಿಗೆ ನವ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ, ವಿ.ಪಿ. ಲಿಂಗನಗೌಡರ್, ಎಂ.ಸಿ. ಹಿರೇಮಠ, ರಮೇಶ ಪಾಟೀಲ, ವಸಂತ ಲದವಾ, ಮಹೇಂದ್ರ ಲದ್ದಡ, ವಿನಯ ಜವಳಿ, ಕಾರ್ಯದರ್ಶಿ ರವೀಂದ್ರ ಬಳಿಗಾರ, ಪ್ರವೀಣ ಅಗಡಿ, ಇತರರು ಇದ್ದರು. ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಸ್ವಾಗತಿಸಿದರು. ಗೌರವ ಜಂಟಿ ಕಾರ್ಯದರ್ಶಿ ಮಹೇಂದ್ರ ಸಿಂಘಿ ಸಂಸ್ಥೆಯ ಬಗ್ಗೆ ಮಾತನಾಡಿದರು. ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ ಪರಿಚಯಿಸಿದರು. ಸಂಸ್ಥಾಪನಾ ದಿನಾಚರಣೆ ಸಮಿತಿ ಅಧ್ಯಕ್ಷ ಶಶಿಧರ್ ಶೆಟ್ಟರ್ ಪ್ರಾಸ್ತಾವಿಕ ಮಾತನಾಡಿದರು.

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…