More

    ನಮಗೆ ಕಡಿಯೋಕೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡೋಕಾಗುತ್ತಾ?ಸಚಿವ ಜಮೀರ್ ಅಹ್ಮದ್

    ಹೊಸಪೇಟೆ: ರಾಜ್ಯದಲ್ಲಿ ಮಳೆ ಅಭಾವದಿಂದ ನಮಗೆ ಕುಡಿಯಲು ನೀರಿಲ್ಲಾ, ತಮಿಳುನಾಡಿಗೆ ನೀರು ಬಿಡೋಕಾಗುತ್ತಾ? ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಪ್ರಶ್ನಿಸಿದರು.

    ನಗರದಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕೂ ಮುನ್ನ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿಯಿಂದ ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಸುಪ್ರಿಂ ಕೋರ್ಟಿಗೆ ಸರಿಯಾಗಿ ಮಾಹಿತಿ ನೀಡಲಾಗಿದೆ. ಈ ಹಿಂದೆ ಮಳೆಗಾಲ ಉತ್ತಮವಾಗಿದ್ದಾಗ ನಾವು ಬಿಟ್ಟಿದ್ದೇವೆ. ಈಗ ಮಳೆ ಇಲ್ಲಾ, ಬರ ಇದೆ. ನಮಗೆ ಕುಡಿಯೋಕೆ ನೀರಿಲ್ಲ ಎಂದ ಮೇಲೆ ತಮಿಳುನಾಡಿಗೆ ನೀರು ಎಲ್ಲಿಂದ ಬಿಡೋಕಾಗುತ್ತದೆ. ಸುಪ್ರೀಂ ಕೋರ್ಟ್ ಏನು ಹೇಳುತ್ತಿದೆಯೋ ಅದನ್ನು ಪಾಲನೆ ಮಾಡಬೇಕಾಗುತ್ತದೆ. ಯಾವುದೇ ರೀತಿಯಲ್ಲಿ ಲೋಪವಾಗಿಲ್ಲಾ, ನಾವು ಸುಪ್ರಿಂಗೆ ಸರಿಯಾಗಿಯೇ ಮಾಹಿತಿ ನೀಡಿದ್ದೇವೆ.

    ನವೆಂಬರ್‌ನಲ್ಲಿ ಹಂಪಿ ಉತ್ಸವ ಆಚರಣೆಗೆ ತೀರ್ಮಾನಿಸಲಾಗಿತ್ತು. ಆದರೆ, ಬರದ ಹಿನ್ನಲೆಯಲ್ಲಿ ಜನವರಿ ಅಥವಾ ಪೆಬ್ರವರಿಗೆ ಅದನ್ನು ಮುಂದೂಡಲಾಗಿದೆ. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ ಅವರ ಆಶಯದಂತೆ ಮುಂದಿನ ವರ್ಷದಿಂದ ನವೆಂಬರ್ ತಿಂಗಳಲ್ಲಿಯೇ ಉತ್ಸವ ಆಚರಿಸಲಾಗುವುದು. ಮೈಸೂರು ದಸರಾ ಉತ್ಸವ ಮೊದಲೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts