ಯುದ್ಧದ ಮಾತು ಬರುತ್ತಿರುವುದು ನಮ್ಮಿಂದಲ್ಲ ಎಂದ ಪಾಕಿಸ್ತಾನದ ಸೇನಾಧಿಕಾರಿ ಆರಿಫ್​ ಗಫೂರ್​

ಇಸ್ಲಾಮಾಬಾದ್​: ಗಡಿಯಲ್ಲಿ ಪಾಕಿಸ್ತಾನ ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ವರದಿಗಳನ್ನು ಪಾಕಿಸ್ತಾನ ಸೇನೆಯ ಮೇಜರ್​ ಜನರಲ್​ ಆಸಿಫ್​ ಗಫೂರ್​ ಇಂದು ನಿರಾಕರಿಸಿದ್ದಾರೆ.

ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನ ತನ್ನ ಗಡಿಯಲ್ಲಿ ಎಲ್ಲ ತಯಾರಿಗಳನ್ನೂ ಮಾಡಿಕೊಳ್ಳುತ್ತಿದೆ ಎಂಬ ಮಾಧ್ಯಮ ವರದಿಗಳು, ಅದಕ್ಕೆ ಪೂರಕ ಎನಿಸುವ ವಿಡಿಯೋಗಳು ಶುಕ್ರವಾರ ಬೆಳಗ್ಗಿನಿಂದಲೂ ಉಭಯ ದೇಶಗಳಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.

ಇದೇ ಹಿನ್ನೆಲೆಯಲ್ಲಿ ಇಂದು ಮಾತನಾಡಿರುವ ಪಾಕಿಸ್ತಾನ ಸೇನೆಯ ಆಸಿಫ್​ ಗಫೂರ್​, ” ನಾವು ಯುದ್ಧಕ್ಕೆ ಯಾವ ಸಿದ್ಧತೆಗಳನ್ನು ನಡೆಸುತ್ತಿಲ್ಲ. ಆದರೆ, ನಿಮ್ಮಿಂದ (ಭಾರತ) ನಮಗೆ ಯುದ್ಧದ ಬೆದರಿಕೆಗಳು ಬರುತ್ತಿವೆ. ಯುದ್ಧ ಆರಂಭಿಸುವ ಯಾವುದೇ ಸಿದ್ಧತೆಗಳೂ ಪಾಕಿಸ್ತಾನದಿಂದ ಆಗುತ್ತಿಲ್ಲ,” ಎಂದು ಗಫೂರ್​ ಹೇಳಿದ್ದಾರೆ.

“ನಿಮ್ಮಿಂದ ಬರುತ್ತಿರುವ ಯುದ್ಧದ ಬೆದರಿಕೆಗಳಿಗೆ ಪ್ರತಿಕ್ರಿಯೆ ಕೊಡುವುದು ನಮ್ಮ ಹಕ್ಕು,” ಎಂದೂ ಗಫೂರ್​ ಇದೇ ವೇಳೆ ಹೇಳಿದ್ದಾರೆ.