More

    ನೀರಿನ ಟ್ಯಾಂಕ್ ಸಿಮೆಂಟ್ ಪಿಲ್ಲರ್ ಬಿರುಕು

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್
    ಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಚ್ಚೇರಿಪೇಟೆ ಹೃದಯಭಾಗದಲ್ಲಿರುವ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು, ಪಿಲ್ಲರ್‌ಗಳು ಬಿರುಕು ಬಿಟ್ಟು ನೆಲಕ್ಕುರುಳುವ ಆತಂಕ ಎದುರಾಗಿದೆ.
    ಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಜನರ ಕುಡಿಯುವ ನೀರಿನ ಬವಣೆ ನೀಗಿಸುವಲ್ಲಿ ಗ್ರಾಪಂ ಯಶ್ವಸಿಯಾಗಿತ್ತು. ಆದರೆ ನೀರು ಪೂರೈಕೆ ಮಾಡುವ 50 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಕುಸಿಯುವ ಹಂತ ತಲುಪಿದೆ. 20 ವರ್ಷಗಳ ಹಿಂದೆ ಮುಂಡ್ಕೂರು ಗ್ರಾಪಂ ಮನೆಗಳಿಗೆ ನಳ್ಳಿ ನೀರಿನ ಯೋಜನೆ ಜಾರಿಗೆ ತಂದಾಗ ಉಡುಪಿ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ವಿಭಾಗದಿಂದ ರಾಷ್ಟ್ರೀಯ ಗ್ರಾಮೀಣ ನೀರು ಸರಬರಾಜು ಯೋಜನೆಯಡಿಯಲ್ಲಿ ಇದನ್ನು ನಿರ್ಮಿಸಲಾಗಿತ್ತು.
    ಸದ್ಯ ಟ್ಯಾಂಕ್‌ನ ನಾಲ್ಕು ಪಿಲ್ಲರ್‌ಗಳಲ್ಲಿ ಮೇಲಿಂದ ಕೆಳಗಿನವರೆಗೂ ಬಿರುಕು ಕಾಣಿಸಿವೆ. ಕಂಬಗಳ ಬುಡದಲ್ಲೇ ಸಿಮೆಂಟ್ ಕಿತ್ತು ಒಳಭಾಗದ ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿದು ಹೊರಗೆ ಗೋಚರಿಸುತ್ತಿದೆ. ಇದು ರಸ್ತೆಯ ಪಕ್ಕದಲ್ಲೇ ಇದ್ದು ಇಲ್ಲಿ ನೂರಾರು ವಾಹನಗಳು ಸಂಚರಿಸುತ್ತಿರುತ್ತವೆ. ಸಮೀಪದ ಮೈದಾನದಲ್ಲಿ ದಿನನಿತ್ಯ ಮಕ್ಕಳು ಕೂಡ ಆಟ ಆಡಿಕೊಂಡಿರುತ್ತಾರೆ. ಅಲ್ಲದೆ ರಿಕ್ಷಾ ಚಾಲಕರು ಪಾರ್ಕಿಂಗ್‌ನಲ್ಲಿ ಜಾಗ ಇಲ್ಲದ್ದಿದರೆ ರಿಕ್ಷಾವನ್ನು ಟ್ಯಾಂಕ್ ಪಕ್ಕದಲ್ಲೆ ಪಾರ್ಕಿಂಗ್ ಮಾಡುತ್ತಾರೆ. ಒಂದು ವೇಳೆ ಇದೇನಾದರೂ ಕುಸಿದರೆ ಭಾರಿ ಅನಾಹುತ ಸಂಭವಿಸಬಹುದು. ಕೂಡಲೇ ಸಂಬಂಧಿತ ಅಧಿಕಾರಿಗಳು ಟ್ಯಾಂಕ್ ತೆರವುಗೊಳಿಸಿ ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿಕೊಡಬೇಕು ಎಂದು ಸಚ್ಚೇರಿಪೇಟೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ನೀರಿನ ಟ್ಯಾಂಕ್ ನಿರ್ಮಿಸಿ ಹಲವಾರು ವರ್ಷಗಳು ಕಳೆದಿರಬಹುದು. ಈಗ ಅದು ಸಂಪೂರ್ಣ ಬಿರುಕುಬಿಟ್ಟಿದ್ದು, ಕುಸಿಯುವ ಹಂತದಲ್ಲಿದೆ. ಕೂಡಲೇ ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕು.
    | ಸುರೇಶ್ ಸ್ಥಳೀಯ ನಿವಾಸಿ

    ಶಿಥಿಲಗೊಂಡಿರುವ ಈ ಟ್ಯಾಂಕ್ ಧರೆಗೆ ಉರುಳಿದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಆದಷ್ಟು ಬೇಗ ಇದನ್ನು ತೆರವುಗೊಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
    | ಹರೀಶ್ ಕುಮಾರ್ ಸ್ಥಳೀಯ ನಿವಾಸಿ

    ಶಿಥಿಲಗೊಂಡಿರುವ ಟ್ಯಾಂಕ್‌ನ ಪರಿಸ್ಥಿತಿ ಪರಿಶೀಲನೆ ಮಾಡಲಾಗಿದೆ. ಈ ಬಾರಿ ಶೀಘ್ರ ಹಳೆಯ ಟ್ಯಾಂಕ್ ತೆರವು ಮಾಡಿ ನೂತನ ಟ್ಯಾಂಕ್ ನಿರ್ಮಿಸಲಾಗುವುದು.
    | ಭಾಸ್ಕರ ಶೆಟ್ಟಿ ಮುಂಡ್ಕೂರು ಗ್ರಾಪಂ ಉಪಾಧ್ಯಕ್ಷರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts