More

    VIDEO| ಪ.ಬಂಗಾಳದಲ್ಲಿ ಮೂರೇ ವರ್ಷ ಹಿಂದೆ 165 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಕುಸಿದುದು ಹೀಗೆ ನೋಡಿ…

    ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದ ಸಾರೆಂಗಾದಲ್ಲಿ ಕೇವಲ ಮೂರೇ ವರ್ಷ ಹಿಂದ 165 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಒಂದು ಬುಧವಾರ ಅಪರಾಹ್ನ ಕುಸಿದು ಬಿದ್ದಿದೆ. ಕಳಪೆ ಕಾಮಗಾರಿ ಮೇಲ್ನೋಟಕ್ಕೆ ಸಾಬೀತಾಗಿದ್ದು, ಸುತ್ತಮುತ್ತಲಿನ 20 ಗ್ರಾಮದ ಜನರಿಗೆ ಕುಡಿಯುವ ನೀರಿನ ತತ್ತ್ವಾರ ಎದುರಾಗಿದೆ.

    ಸ್ಥಳೀಯ ವಾಸಿ ಬಾಬುಲಾಲ್ ಮುರ್ಮು ಬುಧವಾರ ಅಪರಾಹ್ನ 3 ಗಂಟೆಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಟ್ಯಾಂಕ್​ನ ಮಧ್ಯಭಾಗದಿಂದ ಸಿಮೆಂಟ್​ನ ಪೀಸ್​ಗಳು ಮೇಲೇಳುವುದನ್ನು ಗಮನಿಸಿದ್ದೆ. ಸ್ವಲ್ಪ ಹೊತ್ತಿನಲ್ಲೇ ಅದು ಸಂಪೂರ್ಣ ಕುಸಿಯತು ಎಂದು ಘಟನೆಯನ್ನು ವಿವರಿಸಿದ್ದಾರೆ.

    ಪಶ್ಚಿಮ ಬಂಗಾಳದ ಸಾರೆಂಗಾ ಪ್ರದೇಶ ಬಹಳಷ್ಟು ನೀರಿನ ಸಮಸ್ಯೆ ಎದುರಿಸುವ ಪ್ರದೇಶ ಎಂದು ಗುರುತಿಸಲ್ಪಟ್ಟಿರುವಂಥದ್ದು. ಈ ಓವರ್ ಹೆಡ್ ನೀರಿನ ಟ್ಯಾಂಕ್​ ಪ್ರಾಜೆಕ್ಟ್ 2012ರಲ್ಲಿ ಶುರುವಾದಾಗ ಈ ಭಾಗದ ಜನರಲ್ಲಿ ಆಶಾಭಾವನೆ ಮೂಡಿತ್ತು. 2016ರಲ್ಲಿ ಕಾಮಗಾರಿ ಪೂರ್ಣಗೊಂಡು ಬಳಕೆಗೆ ಸಿಕ್ಕಾಗಿ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿಪಟ್ಟಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  (ಏಜೆನ್ಸೀಸ್) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts