ಗುರುವಾರ ರಾತ್ರಿ ಸುರಿದ ಮಳೆಗೆ ನೀರು ಸರಬರಾಜು ಪೈಪ್‌ಲೈನ್ ಕಟ್

ಮಡಿಕೇರಿ: ಕುಂಡಾಮೇಸ್ತ್ರಿ ನೀರು ಸರಬರಾಜು ವಿಭಾಗದ ನೀರಿನ ಪೈಪ್ ಗುರುವಾರ ರಾತ್ರಿ ಸುರಿದ ಮಳೆಗೆ ಮಣ್ಣು ಜರಿದು ತುಂಡಾಗಿರುವ ಘಟನೆ ನಡೆದಿದೆ.

ಗುರುವಾರ ಜಿಲ್ಲಾದ್ಯಂತ ಉತ್ತಮ ಮಳೆಯಾಗಿತ್ತು. ಮಡಿಕೇರಿಯ ಗಾಳಿಬೀಡು ಭಾಗದಲ್ಲಿ ರಾತ್ರಿ ಸುರಿದ ಮಳೆಗೆ ಮಣ್ಣು ಸಡಿಗೊಂಡು ಜರಿದಿದೆ. ಪರಿಣಾಮವಾಗಿ ಪೈಪ್‌ಲೈನ್ ತುಂಡಾಗಿದ್ದು, ನೀರು ಪೋಲಾಗಿದೆ. ನೀರು ಹೊರ ಹೋಗುತ್ತಿರುವುದರಿಂದ ನೀರು ಸರಬರಾಜು ಮೂಲ ಸ್ಥಾವರದಲ್ಲಿ ವ್ಯತ್ಯಯ ಉಂಟಾಗಿದೆ.

ಕುಂಡಾಮೇಸ್ತ್ರಿ ನಗರದ ಜನತೆಯ ಜಲಮೂಲ. ಈ ಕಾರಣಗಳಿಂದ ನಗರಸಭೆ ಪೌರಾಯುಕ್ತ ರಮೇಶ್ ಸ್ಥಳಕ್ಕೆ ಭೇಟಿನೀಡಿ, ಪರಿಶೀಲನೆ ನಡೆಸಿದರು. ನಂತರ ಸಿಬ್ಬಂದಿಗಳೊಂದಿಗೆ ಸೇರಿ ಪೈಪ್ ಲೈನ್ ಸರಿಪಡಿಸಲಾಯಿತು.

Leave a Reply

Your email address will not be published. Required fields are marked *