More

  ಮಾ.1ರಂದು ಜಲ ಮರುಪೂರಣ ಕಾರ್ಯಾಗಾರ

  ಶಿವಮೊಗ್ಗ: ಜಿಲ್ಲಾ ಒಕ್ಕಲಿಗರ ಒಕ್ಕೂಟದ ಸಹಯೋಗದಲ್ಲಿ ಮಾ.1ರ ಬೆಳಗ್ಗೆ 10ಕ್ಕೆ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೊಳವೆ ಬಾವಿಗೆ ಜಲ ಮರುಪೂರಣ ಮತ್ತು ಅಂತರ್ಜಲ ಪುನಶ್ಚೇತನ ಕಾರ್ಯಗಾರ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ ಎಂದು ನವಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಗೋ.ರಮೇಶ್ ಗೌಡ ತಿಳಿಸಿದ್ದಾರೆ.

  ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ವರ್ಷ ಬರಗಾಲವಿದೆ. ಈಗಲೇ ಅಂತರ್ಜಲ ಕುಸಿದು ಕೊಳವೆ ಬಾವಿಗಳು ಬರಿದಾಗುತ್ತಿವೆ. ಹೊಸ ಕೊಳವೆ ಬಾವಿಗಳಲ್ಲಿ ನೀರಿನ ಸೆಲೆ ಸಿಗುತ್ತಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
  ಚಿತ್ರದುರ್ಗದ ಅಂತರ್ಜಲ ತಜ್ಞ, ಜಿಯೋ ರೈನ್ ವಾಟರ್ ಸಂಸ್ಥೆಯ ಮುಖ್ಯಸ್ಥ ಎನ್.ದೇವರಾಜ್ ರೆಡ್ಡಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ವಿಫಲವಾದ ಬೋರ್‌ವೆಲ್‌ಗಳನ್ನು ಮತ್ತೆ ಮರುಪೂರಣ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
  ಒಕ್ಕಲಿಗರ ಒಕ್ಕೂಟದ ಗೌರವಾಧ್ಯಕ್ಷೆ ಶಾಂತಸುರೇಂದ್ರ ಮಾತನಾಡಿ, ಅಂತರ್ಜಲ ಕುಸಿಯುತ್ತಿರುವುದು ಆತಂಕದ ವಿಷಯವಾಗಿದೆ. ಈ ಕಾರ್ಯಗಾರದಲ್ಲಿ ಸತತ 34 ವರ್ಷಗಳಿಂದ ಅನುಭವವಿರುವ ದೇವರಾಜ್ ತಮ್ಮ ಅನುಭವಗಳನ್ನು ತಿಳಿಸಲಿದ್ದಾರೆ. ರೈತರು, ಪರಿಸರಾಸಕ್ತರು, ನಾಗರಿಕರು, ರೈತರು ಇದರ ಪ್ರಯೋಜನ ಪಡೆಯಬಹು ಎಂದರು.
  ಒಕ್ಕಲಿಗರ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಪ್ರತಿಮಾ ಡಾಕಪ್ಪ, ನವ ಕರ್ನಾಟಕ ನಿರ್ಮಾಣ ವೇದಿಕೆಯ ಸಂತೋಷ್, ನಿಂಗರಾಜು, ಮುನೀರ್, ಧನಲಕ್ಷ್ಮೀ, ದಿನೇಶ್ ಸುದ್ದಿಗೋಷ್ಠಿಯಲ್ಲಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts