ಮಳೆ ನೀರು ಸಂರಕ್ಷಣೆಗೆ ಕ್ರಮ ಕೈಗೊಳ್ಳಿ

ಯಾದಗಿರಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬರಗಾಲವನ್ನು ಸಮರ್ಪಕವಾಗಿ ನಿರ್ವಹಿಸಲು ಜಲಾನಯನ ಪ್ರದೇಶಗಳಲ್ಲಿ ನೀರು ಹಾಗೂ ಸಂಪನ್ಮೂಲ ನಿರ್ವಹಣೆ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಲ್ಲಿಕಾಜರ್ುನ ಕೆಂಗನಾಳ ಸಲಹೆ ನೀಡಿದ್ದಾರೆ.

ಕೂಡ್ಲೂರು ಗ್ರಾಮದಲ್ಲಿ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಸಹಯೋಗದಡಿ ಜಲಾನಯನ ಪ್ರದೇಶದ ರೈತರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾಯರ್ಾಗಾರ ಉದ್ಘಾಟಿಸಿದ ಅವರು, ಜಿಲ್ಲೆಯ ಬಹುಭಾಗ ಜಲಾನಯನ ಪ್ರದೇಶವಾಗಿದೆ. ಸುಜಲಾ-3ನೇ ಹಂತದ ಯೋಜನೆಯಡಿ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯ ಸಕರ್ಾರ ವಿಶ್ವಬ್ಯಾಂಕ್ ನೆರವಿನಡಿ ಕೈಗೊಂಡಿದೆ ಎಂದರು.

ಸರ್ವೇ ಮಾಡಿ ಸಮರ್ಪಕ ಬಳಸಲು ಜಲಾನಯನ ಪ್ರದೇಶದ ಪ್ರತಿ ರೈತರಿಗೆ ಭೂ ಸಂಪನ್ಮೂಲ ಚೀಟಿ ನೀಡಿ ಅದರ ಬಳಕೆ ಕುರಿತು ತರಬೇತಿ ನೀಡುವ ಕಾರ್ಯಕ್ರಮ ಪ್ರಾರಂಭವಾಗಿದೆ. ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲೂಕುಗಳ ಕೆಲ ಆಯ್ದ ಜಲಾನಯನ ಪ್ರದೇಶಗಳಲ್ಲಿ ಈಗಾಗಲೇ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಳೆ ನೀರು ಸಂರಕ್ಷಣೆ ಕ್ರಮಗಳನ್ನು ರೈತರು ತಮ್ಮ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಕೇವಲ ದವಸಧಾನ್ಯ ಬೆಳೆಗಳಲ್ಲದೆ ಅರಣ್ಯ, ತೋಟಗಾರಿಕೆ ಹಾಗೂ ಮರಮುಟ್ಟು ಗಿಡಗಳನ್ನು ಬದುಗಳೊಂದಿಗೆ ನಾಟಿ ಮಾಡುವುದರಿಂದ ವಾತಾವರಣದಲ್ಲಿ ಅನುಕೂಲಕರ ಬದಲಾವಣೆ ತರಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಣ್ಣು ಹಾಗೂ ನೀರು ನಿರ್ವಹಣೆ ವಿಜ್ಞಾನಿ ಡಾ.ಉಮೇಶ ಬಾರಿಕರ ಮಾತನಾಡಿ, ರೈತರಿಗೆ ಭೂ ಸಂಪನ್ಮೂಲ ಚೀಟಿಗಳನ್ನು ಅಥರ್ೈಸಿಕೊಳ್ಳುವುದು ಹಾಗೂ ಅದರ ಬಳಕೆ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ಸಾಯಿಬಣ್ಣ ಇತರರಿದ್ದರು. ರೈತರಿಗೆ ಸುಮಾರು 300 ಭೂ ಸಂಪನ್ಮೂಲ ಚೀಟಿ ವಿತರಿಸಲಾಯಿತು.