ಪಂಚಕಲ್ಯಾಣಿಯಲ್ಲಿ ನೀರು ಖಾಲಿ!

ಮೇಲುಕೋಟ: ಅಭಿವೃದ್ಧಿ ಹಿನ್ನೆಲೆಯಲ್ಲಿ ಪುರಾಣ ಪ್ರಸಿದ್ಧ ಮೇಲುಕೋಟೆಯ ಪಂಚಕಲ್ಯಾಣಿಯಲ್ಲಿನ ನೀರನ್ನು ಖಾಲಿ ಮಾಡಲಾಗಿದ್ದು, ಪುಣ್ಯಕ್ಷೇತ್ರಕ್ಕೆ ಬರುವ ಭಕ್ತರ ಸ್ನಾನಕ್ಕೆ ಟ್ಯಾಂಕ್ ನೀರನ್ನು ವ್ಯವಸ್ಥೆ ಮಾಡಲಾಗಿದೆ.

ಇನ್ಫೋಸಿಸ್ ಪ್ರತಿಷ್ಠಾನದಿಂದ ಪಂಚಕಲ್ಯಾಣಿಯ ಜೀರ್ಣೋದ್ಧಾರ ಕಾಮಗಾರಿ ಆರಂಭವಾಗಿದ್ದು, ಕಲ್ಯಾಣಿಯ ನೀರನ್ನು ಯಂತ್ರಗಳ ಮೂಲಕ ಹೊರ ತೆಗೆದು, ಹೂಳು ತೆಗೆಯಲಾಗುತ್ತಿದೆ. ಅಲ್ಲದೆ ಬೆಟ್ಟದ ತಪ್ಪಲಿನಿಂದ ಬರುತ್ತಿದ್ದ ಮಳೆ ನೀರಿನ ಜಾಗಗಳನ್ನು ಗುರುತಿಸಿ ಕಾಮಗಾರಿ ಮಾಡುತ್ತಿರುವುದು ವಿಶೇಷ.

ಕಾಮಗಾರಿ ಆರಂಭವಾಗಿ ತಿಂಗಳು ಕಳೆದಿದೆ. ಕಲ್ಯಾಣಿಯ ಸುತ್ತಲಿನ ಕಲ್ಲಿನ ಗೋಡೆಗಳ ಮಂಟಪಗಳನ್ನು ತೆಗೆದು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಮಣ್ಣಿನಿಂದ ಮುಚ್ಚಿಕೊಂಡಿದ್ದ ಮಂಟಪ, ವಿಗ್ರಹಗಳನ್ನು ಹೊರತೆಗೆಯುವ ಕಾರ್ಯ ಆರಂಭವಾಗಿದೆ.
ಮೀನುಗಳ ರಕ್ಷಣೆ: ನೀರಿನಲ್ಲಿದ್ದ ಸಾವಿರಾರು ಮೀನುಗಳನ್ನು ತೆಪ್ಪದ ಕಲ್ಯಾಣಿಗೆ ಬಿಡಲಾಗಿದೆ. ಅದರಲ್ಲೂ ಬಣ್ಣ ಬಣ್ಣದ ಮೀನುಗಳು ಎಲ್ಲರ ಗಮನ ಸೆಳೆಯುತ್ತಿವೆ.

ತ್ಯಾಜ್ಯಗಳ ರಾಶಿ: 5 ವರ್ಷಗಳ ಹಿಂದೆ ಸರ್ಕಾರದ ವತಿಯಿಂದ ಹೂಳು ತೆಗೆಯಲಾಗಿತ್ತು. ಅದಾಗಿಯೂ ಒಳಭಾಗದಲ್ಲಿ ಬಟ್ಟೆ, ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಯೇ ಕಂಡುಬಂದಿದೆ. ಸಂಸ್ಥೆಯ ನೌಕರರು ತ್ಯಾಜ್ಯವನ್ನು ಹೊರತೆಗೆಯುವ ಕಾಯಕದಲ್ಲಿ ನಿತರರಾಗಿದ್ದಾರೆ. ಪ್ರತಿದಿನ ನೂರಾರು ಜನರು ಕೆಲಸ ಮಾಡುತ್ತಿದ್ದು. ಸಂಸ್ಥೆಯ ಅಧಿಕಾರಿಗಳು ಸ್ಥಳದಲ್ಲಿದ್ದು, ಕೆಲಸ ಮಾಡಿಸುತ್ತಿರುವುದು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ.

 

Leave a Reply

Your email address will not be published. Required fields are marked *