20.1 C
Bangalore
Tuesday, December 10, 2019

ನೀರಿನ ಸಭೆ ನಡೆಸದಿದ್ದಕ್ಕೆ ಅಸಮಾಧಾನ, ಜಿಪಂ ಸದಸ್ಯರ ಕೋಪ ತಣಿಸಲು ಯತ್ನ

Latest News

ಲೋಕಸಭೆಯಲ್ಲಿ 12 ತಾಸು ಚರ್ಚೆ ಬಳಿಕ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ; ಅಮಿತ್​ ಷಾ ಅವರನ್ನು ಪ್ರಶಂಸಿಸಿದ ಪ್ರಧಾನಿ ಮೋದಿ

ನವದೆಹಲಿ: ಬಹು ವಿವಾದ ಸೃಷ್ಟಿಸಿದ್ದ ಪೌರತ್ವ ತಿದ್ದುಪಡಿ ಮಸೂದೆ ನಿನ್ನೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಗೃಹಸಚಿವ ಅಮಿತ್​ ಷಾ ಅವರು ಬಿಲ್​ ಮಂಡನೆ ಮಾಡುವುದನ್ನೇ ಕಾಂಗ್ರೆಸ್​ ನೇತೃತ್ವದ ಪ್ರತಿಪಕ್ಷಗಳು...

ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡುವ ವರ್ತಕರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ: ದಾಸ್ತಾನು ಪ್ರಮಾಣ ಘೋಷಿಸಿದ ಸರ್ಕಾರ

ಮೈಸೂರು: ಗಗನಕ್ಕೆ ಏರಿರುವ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ. ಈರುಳ್ಳಿಯನ್ನು ಅಕ್ರಮವಾಗಿ ದಾಸ್ತಾನು ಮಾಡುವ ವರ್ತರು ಹಾಗೂ ದಲ್ಲಾಳಿಗಳ ವಿರುದ್ಧ...

ಹೊಸಕೋಟೆ ಸಂಭ್ರಮಾಚರಣೆ ವೇಳೆ ಶರತ್​ ಬಚ್ಚೇಗೌಡ ಮತ್ತು ಎಂಟಿಬಿ ಬೆಂಬಲಿಗರ ನಡುವೆ ಹೊಡೆದಾಟ; ಗ್ರಾಪಂ ಸದಸ್ಯ ಆಸ್ಪತ್ರೆಗೆ ದಾಖಲು

ಹೊಸಕೋಟೆ: ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್​ ಬಚ್ಚೇಗೌಡ ಗೆದ್ದ ಬೆನ್ನಲ್ಲೇ ಅವರ ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆ ನಡೆಸಿದ್ದಾರೆ. ಬಾಣಮಾಕನಹಳ್ಳಿಯಲ್ಲಿ ನಡೆದ ಸಂಭ್ರಮದ ವೇಳೆ ಶರತ್​...

ಸ್ವಾಮಿ ನಿತ್ಯಾನಂದನ ಕಾಲುಮುಟ್ಟಿ ನಮಸ್ಕರಿಸಿದ್ದು ಕೇಂದ್ರ ಗೃಹಸಚಿವ ಅಮಿತ್​ ಷಾ ಅವರಾ? ಫ್ಯಾಕ್ಟ್​ಚೆಕ್​ನಲ್ಲಿ ಬಯಲಾದ ಸತ್ಯ ಏನು ಗೊತ್ತಾ?

ಸ್ವಘೋಷಿತ ದೇವಮಾನವ ಬಿಡದಿ ಧ್ಯಾನಪೀಠದ ನಿತ್ಯಾನಂದ ತಲೆ ಮರೆಸಿಕೊಂಡು ವಿದೇಶಕ್ಕೆ ಪಲಾಯನವಾಗಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಆತನ...

38 ಜನರಿದ್ದ ಮಿಲಿಟರಿ ವಿಮಾನ ಕಣ್ಮರೆ; ಟೇಕ್ಆಫ್​ ಆದ ಕೆಲವೇ ಹೊತ್ತಲ್ಲಿ ಸಂಪರ್ಕ ಕಳೆದುಕೊಂಡ ಸಿ-130 ಹರ್ಕ್ಯುಲಸ್

ಸ್ಯಾಂಟಿಯಾಗೋ: ಚಿಲಿ ದೇಶದ ವಾಯುಪಡೆಗೆ ಸೇರಿದ 38 ಜನರನ್ನೊಳಗೊಂಡ ಮಿಲಿಟರಿ ವಿಮಾನ ಅಂಟಾರ್ಕ್ಟಿಕಾ ಮಾರ್ಗದಲ್ಲಿ ಕಣ್ಮರೆಯಾಗಿದೆ. ಸಿ-130 ಹರ್ಕ್ಯುಲಸ್ ವಿಮಾನ ಪಂಟಾ ಅರೆನಾಸ್ ನಿಂದ ಸಂಜೆ 4.55ಕ್ಕೆ...

ಚಿಕ್ಕಮಗಳೂರು: ಲೋಕಸಭೆ ಚುನಾವಣೆಯ ದೀರ್ಘ ಅವಧಿ ನೀತಿ ಸಂಹಿತೆ ಕಾರಣ ಜಿಲ್ಲಾ ಪಂಚಾಯಿತಿ ಅಧಿಕಾರ ಆಡಳಿತಾಧಿಕಾರಿ ಕೈಯಲ್ಲಿ ಉಳಿದಿದ್ದು ಈ ಅವಧಿಯಲ್ಲಿ ಸಿಇಒ ಪ್ರಮುಖ ನಿರ್ಧಾರಗಳನ್ನು ಏಕ ಸ್ವಾಮ್ಯದಿಂದ ಕೈಗೊಳ್ಳುತ್ತಿದ್ದಾರೆಂಬ ಸದಸ್ಯರ ಕೋಪ-ತಾಪ ತಣಿಸಲು ಸಿಇಒ ಎಸ್​ಅಶ್ವಥಿ ಮುಂದಾಗಿದ್ದಾರೆ.

ಕುಡಿಯುವ ಟ್ಯಾಂಕರ್ ನೀರು ಸರಬರಾಜಿನ ಟೆಂಡರ್ ನೀಡುವಾಗ, ಬೋರ್​ವೆಲ್ ಕೊರೆಸುವಾಗ ತಮ್ಮ ಅಭಿಪ್ರಾಯ ಕೇಳಿಲ್ಲವೆಂದು ಮುನಿಸಿಕೊಂಡಿರುವ ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರ ಅಸಮಾಧಾನದ ಬಗ್ಗೆ ವಿಜಯವಾಣಿ ಮೇ 3 ರಂದು ವರದಿ ಪ್ರಕಟ ಮಾಡಿತ್ತು.

ಇದರಿಂದ ಎಚ್ಚೆತ್ತುಕೊಂಡ ಜಿಪಂ ಸಿಇಒ ಎಸ್.ಅಶ್ವಥಿ ಅವರು, ಕೂಡಲೆ ಎಲ್ಲ ಸದಸ್ಯರನ್ನೂ ಕಾರ್ಯದರ್ಶಿಗಳ ಮೂಲಕ ಸಂರ್ಪಸಿ ತಮ್ಮ ವ್ಯಾಪ್ತಿಯ ಕುಡಿಯುವ ನೀರು ಮತ್ತು ಇತರೆ ಸಮಸ್ಯೆಗಳ ಮಾಹಿತಿ ಪಡೆಯುತ್ತಿದ್ದಾರೆ. ಈ ಸಂದರ್ಭ ಅನೇಕ ಸದಸ್ಯರು ಸಿಇಒ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ನೀತಿ ಸಂಹಿತೆ ಮುಗಿಯುವ ಮೇ 23ರ ನಂತರ ನಾವು ಜಿಪಂ ಕಚೇರಿ ಹೊರ ಭಾಗವೇ ನಿಂತು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕೆಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಜತೆಗೆ ಸಿಇಒ ಅವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರಮುಖ ನಿರ್ಧಾರ ಮಾಡುತ್ತಿರುವ ಬಗ್ಗೆ ಜಿಪಂ ಅಧ್ಯಕ್ಷರೂ ಬೇಸರ ವ್ಯಕ್ತಪಡಿಸಿದ್ದಾರೆ.

ಕಾನೂನು ತೋರಿಸಿ ಆಡಳಿತ ನಡೆಸಲೆತ್ನಿಸಿದ ಸಿಇಒ ಅವರ ಬಗ್ಗೆ ಪ್ರಾರಂಭದಲ್ಲಿಯೇ ಅಪಸ್ವರ ಕೇಳಿ ಬಂದಿದೆ. ಲೋಕಸಭೆ ಚುನಾವಣೆ ಮುನ್ನ ಮಾರ್ಚ್​ನಲ್ಲಿ ದಾವಣಗೆರೆ ಜಿಲ್ಲೆಯಿಂದ ಕಾಫಿನಾಡಿಗೆ ಬಂದ ಸಿಇಒ ಎಸ್.ಅಶ್ವಥಿ ಅವರಿಗೆ ಸದಸ್ಯರ ಪರಿಚಯವೇ ಇನ್ನೂ ಆಗಿಲ್ಲ. ಇವರು ಬಂದ ವಾರದಲ್ಲಿಯೇ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಯಾವುದೇ ಸಭೆ ಸಮಾರಂಭ ನಡೆಯಲಿಲ್ಲ. ಹೀಗಾಗಿ ಜಿಪಂ ಅಧ್ಯಕ್ಷರಾದಿಯಾಗಿ ಯಾವುದೇ ಸದಸ್ಯರ ಜತೆ ಜಿಪಂ ವ್ಯಾಪ್ತಿಯ ಸಮಸ್ಯೆ ಬಗ್ಗೆ ಅನೌಪಚಾರಿಕವಾಗಿಯೂ ಚರ್ಚೆ ಮಾಡಲಿಲ್ಲ.

ಈ ಹಿಂದಿನ ಸಿಇಒ ಅವರೂ ಸದಸ್ಯರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲ ಎಂಬ ಅಪವಾದಕ್ಕೆ ಗುರಿಯಾಗಿದ್ದರು. ಅವರ ಜಾಗಕ್ಕೆ ಬಂದ ಹೊಸ ಸಿಇಒ ಅಶ್ವಥಿ ಅವರೂ ಸಹ ಹಿಂದಿನ ಸಿಇಒ ರೀತಿ ಸದಸ್ಯರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲವೆಂಬುದು ಹಲವು ಸದಸ್ಯರ ಅಸಮಾಧಾನ. ಬಯಲು ಸೀಮೆಯ ಕಡೂರು ತಾಲೂಕು, ಚಿಕ್ಕಮಗಳೂರು ಲಕ್ಯಾ ಹೋಬಳಿಯಲ್ಲಿ ಬರಗಾಲ ತೀವ್ರಗೊಂಡಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿ ಜನರು ಪರದಾಡುವ ಸ್ಥಿತಿ ನಿರ್ವಣವಾಗಿದೆ. ಇದೇ ಪರಿಸ್ಥಿತಿ ಮಲೆನಾಡು ಪ್ರದೇಶದಲ್ಲಿಯೂ ಉಂಟಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕುಡಿಯುವ ನೀರಿನಂತಹ ಗಂಭೀರ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಸಂದರ್ಭ ಅನೌಪಚಾರಿಕವಾಗಿ ಸಭೆ ಕರೆದು ಅಭಿಪ್ರಾಯ ಕೇಳಬೇಕಿತ್ತು ಎಂಬುದು ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಹಲವು ಸದಸ್ಯರ ವಾದ.

ಅಸಹಾಯಕ ಸ್ಥಿತಿಯಲ್ಲಿ ಸಿಇಒ: ಜಿಪಂ ಸಾಮಾನ್ಯ ಸಭೆ ಜ.9ರಂದು ನಡೆದಿದ್ದು, ಮಾ. 9ರಂದು ಸಭೆ ಕರೆಯಬೇಕೆನ್ನುವಷ್ಟರಲ್ಲಿಯೇ ಲೋಕಸಭೆ ಚುನಾವಣೆ ದಿನಾಂಕ ಘೊಷಣೆಯಾಯಿತು. ಹೀಗಾಗಿ ಸಾಮಾನ್ಯ ಸಭೆ ನಡೆದಯದೆ ನಾಲ್ಕು ತಿಂಗಳಾಗಿದೆ. ಕನಿಷ್ಟ ಮೂರು ತಿಂಗಳು ಮೀರದಂತೆ ಸಭೆ ಕರೆಯಬೇಕೆಂಬ ನಿಯಮ ಪಂಚಾಯತ್​ರಾಜ್ ಕಾಯ್ದೆಯಲ್ಲಿದೆ. ಆದರೆ, ನೀತಿ ಸಂಹಿತೆ ಇದಕ್ಕೆ ಅಡ್ಡಿಯಾಗಿದ್ದು, ಸಿಇಒ ಕೂಡ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಕೂಡಲೆ ಅನೌಪಚಾರಿಕ ಸಭೆ ನಡೆಸಲಿ: ಜಿಪಂ ಸಿಇಒ ಅವರು ಕೂಡಲೆ ಎಲ್ಲ ಸದಸ್ಯರನ್ನೊಳಗೊಂಡ ಅನೌಪಚಾರಿಕ ಸಭೆ ಕರೆಯಬೇಕೆಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಒತ್ತಾಯಿಸಿದ್ದಾರೆ. ದೂರವಾಣಿ ಮೂಲಕ ಸಿಇಒ ಅಶ್ವಥಿ ಜತೆ ಮಾತನಾಡಿರುವ ಅವರು, ಜಿಲ್ಲೆಯಲ್ಲಿ ಉಲ್ಬಣಗೊಂಡಿರುವ ಕುಡಿಯುವ ನೀರು ಮತ್ತು ಇತರೆ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಜತೆ ರ್ಚಚಿಸಬೇಕೆಂದು ಸೂಚಿಸಿದ್ದಾರೆ. ಸಿಇಒ ಆಗಿ ಜಿಲ್ಲೆಗೆ ಆಗಮಿಸಿದ ತಕ್ಷಣ ನೀತಿ ಸಂಹಿತೆ ಜಾರಿಯಾಗಿದ್ದು, ಬಹುತೇಕ ಸದಸ್ಯರಿಗೆ ಅವರು ಪರಿಚಯವಾಗಿಲ್ಲ. ನೀತಿ ಸಂಹಿತೆ ಜಾರಿ ಇರುವ ಸಂದರ್ಭ ಕೈಗೊಂಡಿರುವ ಕೆಲ ನಿರ್ಧಾರಗಳೂ ಮರು ಪರಿಶೀಲನೆ ಆಗಬೇಕಿದೆ. ಸ್ಥಳೀಯವಾಗಿ ಸಮಸ್ಯೆಗಳ ಅರಿವಿರುವ ಸದಸ್ಯರಿಂದ ಸಿಇಒ ಅವರು ಈತನಕ ಮಾಹಿತಿ ಸಂಗ್ರಹಿಸಿಲ್ಲ. ಅನೇಕ ಸದಸ್ಯರು ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಸಿಇಒ ಅವರು, ಕಾರ್ಯದರ್ಶಿ ಮೂಲಕ ಸದಸ್ಯರಿಂದ ಮಾಹಿತಿ ಸಂಗ್ರಹಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವೂ ಅಲ್ಲ. ಸದಸ್ಯರಿಗೂ ನೀಡುವ ಗೌರವವೂ ಅಲ್ಲ ಎಂದು ಹೇಳಿದ್ದಾರೆ.

Stay connected

278,740FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...