VIDEO | ಗೆಲುವಿನ ಖುಷಿಯಲ್ಲಿದ್ದ ಸಿಎಸ್​ಕೆ ಬ್ರಾವೋಗೆ ಧೋನಿ ಮಗಳು ಜೀವಾ ಮಾಡಿದ ಕ್ರೀಡಾ ಪಾಠ ಹೀಗಿತ್ತು

ಕೋಲ್ಕತ: ಭಾನುವಾರ ಸಂಜೆ ನಡೆದ ಚೆನ್ನೈ ಸೂಪರ್​​ ಕಿಂಗ್ಸ್​ ಮತ್ತು ಕೋಲ್ಕತ ನೈಟ್​​ ರೈಡರ್ಸ್​ ಎದುರಿನ 29ನೇ ಐಪಿಎಲ್​​ ಪಂದ್ಯದಲ್ಲಿ ಧೋನಿ ಪಡೆ ಅಮೋಘ ಪ್ರದರ್ಶನ ತೋರುವ ಮೂಲಕ ಐದು ವಿಕೆಟ್​​ಗಳ ಜಯ ಸಾಧಿಸಿದರು.


ಪಂದ್ಯ ಮುಗಿದ ಬಳಿಕ ಮಹೇಂದ್ರ ಸಿಂಗ್​ ಧೋನಿ ಮಗಳು ಜೀವಾ ಆಲ್ ರೌಂಡರ್​​​​​ ಡ್ವೇಯ್ನ್​​ ಬ್ರಾವೋ ಅವರಿಗೆ ಟೋಪಿ ಹಾಕುವ ಬಗ್ಗೆ ಹೇಳಿಕೊಟ್ಟಿರುವ ವಿಡಿಯೋವನ್ನು ಚೆನ್ನೈ ಸೂಪರ್​​ ಕಿಂಗ್ಸ್​​​ ಟ್ವಿಟರ್​​ ಖಾತೆಯಲ್ಲಿ ಪೋಸ್ಟ್​​ ಆಗಿದ್ದು, ವೈರಲ್​ ಆಗಿದೆ.


ಇಲ್ಲಿನ ಈಡೆನ್​​ ಗಾರ್ಡನ್​​ನಲ್ಲಿ ನಡೆದ ಪಂದ್ಯದಲ್ಲಿ ಸಿಎಸ್​​ಕೆ ಅದ್ಭುತ ಪ್ರದರ್ಶನ ತೋರುವ ಮೂಲಕ ಜಯ ಸಾಧಿಸಿ ಪ್ಲೇ ಆಫ್​​ ಸ್ಥಾನ ಭದ್ರಪಡಿಸಿಕೊಂಡಿದೆ. ಪಂದ್ಯ ಜಯದ ಸಂತೋಷದೊಂದಿಗೆ ಧೋನಿ ತನ್ನ ಮಗಳನ್ನು ಕ್ರೀಡಾಂಗಣಕ್ಕೆ ಕರೆತಂದಿದ್ದರು. ಈ ವೇಳೆ ಬ್ರಾವೋ ಅವರಿಗೆ ಟೋಪಿ ಯಾವ ರೀತಿ ಹಾಕಿಕೊಳ್ಳಬೇಕು ಎಂದು ಪಾಠ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.
ಧೋನಿ ಇದಕ್ಕೂ ಮೊದಲು ಆಸ್ಟ್ರೇಲಿಯಾದ ಪ್ರವಾಸಕ್ಕೂ ಜೀವಾ ಅವರನ್ನು ಕರೆದುಕೊಂಡು ಹೋಗಿದ್ದರು. (ಏಜನ್ಸೀಸ್​)

Leave a Reply

Your email address will not be published. Required fields are marked *