VIDEO| ರಿವರ್ಸ್​ ಸ್ವೀಪ್​ನಲ್ಲಿ ಸಿಕ್ಸರ್​ ಬಾರಿಸಿದ ಯುವರಾಜ್​ ಸಿಂಗ್​ಗೆ ಮೆಚ್ಚುಗೆ ಸುರಿಮಳೆ

ನವದೆಹಲಿ: ಟೀಂ ಇಂಡಿಯಾದ ಹಿರಿಯ ಆಟಗಾರ ಯುವರಾಜ್​ ಸಿಂಗ್​ ಅವರು ಮಾಲ್ಡೀವ್ಸ್​ನಲ್ಲಿ ನಡೆದ ಸ್ನೇಹಾತ್ಮಕ ಪಂದ್ಯದಲ್ಲಿ ಅಪರೂಪದ ರಿವರ್ಸ್​ ಸ್ವೀಪ್​ ಹೊಡೆಯುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ.

ಏರ್​ ಇಂಡಿಯಾ ಮತ್ತು ಮಾಲ್ಡೀವ್ಸ್​ ಕ್ರಿಕೆಟ್​ ತಂಡದ ನಡುವೆ ಮೇಲ್​ ನಗರದ ಇಕುವೇನಿ ಕೀಡಾಂಗಣದಲ್ಲಿ ನಡೆದ ಸ್ನೇಹಾತ್ಮಹ ಪಂದ್ಯದಲ್ಲಿ ಏರ್​ ಇಂಡಿಯಾ ಪರ ಆಡಿದ ಯುವಿ ರಿವರ್ಸ್​ ಸ್ವೀಪ್​ ಮೂಲಕ ಸಿಕ್ಸರ್​ ಬಾರಿಸಿ, ಕ್ರೀಡಾಶಕ್ತರ ಮೆಚ್ಚುಗೆ ಗಳಿಸಿದ್ದಾರೆ. ಮಾಲ್ಡೀವ್ಸ್​ ಕ್ರೀಡಾ ಸಚಿವಾಲಯ ಉಭಯ ದೇಶಗಳ ನಡುವೆ ಸಾಮರಸ್ಯ ಬೆಸೆಯಲು ಭಾರತ-ಮಾಲ್ಡಿವ್ಸ್​ ಕ್ರಿಕೆಟ್​ ಸರಣಿಯನ್ನು ಆಯೋಜಿಸಿದ್ದಾರೆ.

ಮಾಲ್ಡಿವ್ಸ್​ ತಂಡದಲ್ಲಿ ಅಲ್ಲಿನ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಮತ್ತು ಉಪಾಧ್ಯಕ್ಷ ಫೈಸಲ್​ ನಸೀಮ್​ ಕೂಡ ಸೇರಿರುವುದು ವಿಶೇಷವಾಗಿತ್ತು.

ಈ ಬಗ್ಗೆ ಮಾಲ್ಡೀವ್ಸ್​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯುವರಾಜ್​ ಸಿಂಗ್​ ಎರಡು ದೇಶಗಳ ನಡುವಿನ ಸ್ನೇಹತ್ವವನ್ನು ಬಲಗೊಳಿಸಲು ಕ್ರಿಕೆಟ್​ ಅನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ಯುವಿ ಅವರ ರಿವರ್ಸ್​ ಸ್ವೀಪ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, ಹೆಚ್ಚು ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಳ್ಳುತ್ತಿದೆ. (ಏಜೆನ್ಸೀಸ್​)

https://www.instagram.com/p/Bt7mn49n9oa/?utm_source=ig_embed&utm_campaign=embed_video_watch_again