ಕ್ರಿಕೆಟ್​ ಇತಿಹಾಸದಲ್ಲೇ ಹಿಂದೆಂದೂ ನೋಡಿರದಂತಹ ಬೌಲಿಂಗ್​ ಎಡವಟ್ಟು!

ಸೇಂಟ್ ಕಿಟ್ಸ್(ವೆಸ್ಟ್​ಇಂಡೀಸ್​): ಕ್ರೀಡಾ ಲೋಕದಲ್ಲಿ ಕೆಲವೊಮ್ಮೆ ಆಟಗಾರರು ಮಾಡುವ ಎಡವಟ್ಟುಗಳು ನೋಡುಗರಿಗೆ ನಗು ತರಿಸುತ್ತದೆ. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ವೆಸ್ಟ್​ಇಂಡೀಸ್​ ವೇಗಿ ಶೇಲ್ಡನ್​ ಕಾಟ್ರೆಲ್ ಮಾಡಿರುವ ಬೌಲಿಂಗ್​ ಎಲ್ಲರನ್ನು ನಗೆಗಡಲ್ಲಲ್ಲಿ ತೇಲುವಂತೆ ಮಾಡಿದೆ.

ಬುಧವಾರ ವಾರ್ನರ್​ ಪಾರ್ಕ್​ನಲ್ಲಿ ನಡೆದ ಬಾಂಗ್ಲಾದೇಶ ಮತ್ತು ವೆಸ್ಟ್​ಇಂಡೀಸ್​ ನಡುವಿನ ಮೂರನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ವೇಳೆ ಕ್ರಿಕೆಟ್​ ಇತಿಹಾಸದಲ್ಲಿ ಅತಿ ಕೆಟ್ಟ ಬೌಲಿಂಗ್​ ಮಾಡಿದ ಪ್ರಸಂಗ ನಡೆದಿದೆ.​

ವೇಗಿ ಶೇಲ್ಡನ್​ ಕಾರ್ಟೆಲ್​ ಓಡಿ ಬಂದು ಎಸೆದ ಚೆಂಡು ನೇರವಾಗಿ ಬ್ಯಾಟ್ಸ್​ಮನ್​ ಕಡೆ ತೆರಳದೇ ಸೆಕೆಂಡ್​ ಸ್ಲಿಪ್​ನಲ್ಲಿ ನಿಂತಿದ್ದ ಕ್ಷೇತ್ರ ರಕ್ಷಕನ ಕೈ ಸೇರಿದೆ. ತಕ್ಷಣ ಅಂಪೈರ್​ ಆಶ್ಚರ್ಯದಿಂದಲೇ ನಗುತ್ತಾ ಅದನ್ನು ನೋಬಾಲ್​ ಎಂದು ಪರಿಗಣಿಸಿದರು. ತನ್ನಿಂದಾದ ತಪ್ಪಿಗೆ ಕಾರ್ಟೆಲ್​ ತಂಡದ ಸದಸ್ಯರನ್ನು ಕ್ಷಮೆಯಾಚಿಸಿದರು.

ಈ ಸಂಬಂಧ ವಿಡಿಯೋವನ್ನು ಫಾಕ್ಸ್​ ಸ್ಪೋರ್ಟ್ಸ್​ ಆಸ್ಟ್ರೇಲಿಯಾ ಫೇಸ್​ಬುಕ್​ ಪೇಜ್​ನಲ್ಲಿ ಫೋಸ್ಟ್​ ಮಾಡಿದ್ದು, ಈಗಾಗಲೇ 3 ಲಕ್ಷ ಜನರು ವೀಕ್ಷಣೆ ಮಾಡಿದ್ದು, ಲಕ್ಷಾಂತರ ಲೈಕ್ಸ್​ ಹಾಗೂ ಕಮೆಂಟ್​ಗಳು ಬಂದಿವೆ.

ಈ ಪಂದ್ಯದಲ್ಲಿ 9 ಓವರ್​ ಮಾಡಿದ್ದ ಕಾರ್ಟೆಲ್ 6.55 ಎಕನಾಮಿಯಲ್ಲಿ 59 ರನ್​ ನೀಡಿ​ 1 ವಿಕೆಟ್​ ಪಡೆದುಕೊಂಡಿದ್ದರು. 18 ರನ್​ಗಳ ಅಂತರದಿಂದ ವೆಸ್ಟ್​ಇಂಡೀಸ್ ಪಂದ್ಯವನ್ನು ಕೈಚೆಲ್ಲಿತು. (ಏಜೆನ್ಸೀಸ್​)

Bowler delivers no-ball shocker

That didn't quite go to plan…

FOX Sports Australia ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಜುಲೈ 29, 2018