25.5 C
Bangalore
Monday, December 16, 2019

VIDEO| ಮಾಹಿಯ ಮ್ಯಾಸಿವ್​ ಸಿಕ್ಸರ್​ಗೆ ಕೊಹ್ಲಿ ಕೊಟ್ಟ ಪ್ರತಿಕ್ರಿಯೆ ನೋಡಿದರೆ ನೀವು ಫಿದಾ ಆಗುವುದಂತು ಖಂಡಿತ!

Latest News

ಮುಸ್ಲಿಂರಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ

* ಸಾಮರಸ್ಯಕ್ಕೆ ಮುನ್ನುಡಿ ಬರೆದ ಕಾರ್ಯಕ್ರಮವಿಜಯವಾಣಿ ಸುದ್ದಿಜಾಲ ಬಳ್ಳಾರಿನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ...

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ

ಕೊಡಗು: ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ ಎಂದು ವಕೀಲ ಪಿ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದು ಜನಜಾಗೃತಿ ಸಮಿತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ...

ಲಖನೌಗೆ ಕಾಲಿಟ್ಟ ಪೌರತ್ವ ಪ್ರತಿಭಟನೆ; ಕ್ಲಾಸ್​ ರೂಂನಿಂದ ಹೊರಗೆ ಬಂದು ಪೊಲೀಸರ ಮೇಲೆ ಕಲ್ಲು ಎಸೆದ ನಡ್ವಾ ಕಾಲೇಜು ವಿದ್ಯಾರ್ಥಿಗಳು

ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಉತ್ತರ ಪ್ರದೇಶ ಮತ್ತು ದೆಹಲಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕೂಡ ಬೀದಿಗಿಳಿದಿದ್ದು ಪೊಲೀಸರು...

ಈ ಡಿಫರೆಂಟ್ ಮ್ಯಾಗಿ ರುಚಿಯನ್ನು ಬಲ್ಲವರೇ ಬಲ್ಲರು, ತಯಾರಿಸೋದೂ ತುಂಬ ಸಿಂಪಲ್!: ಕಲ್ಪನೆಗೂ ನಿಲುಕದ್ದು ಎಂದ್ರು ನೆಟ್ಟಿಗರು

ಸಾಮಾಜಿಕ ಜಾಲತಾಣಗಳಲ್ಲಿ ಏನೇನೆಲ್ಲ ವೈರಲ್​ ಆಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಅಡುಗೆ, ಫ್ಯಾಷನ್​ನಿಂದ ಹಿಡಿದು ಪ್ರತಿಯೊಂದೂ ಏನೇನೋ ವಿಭಿನ್ನ, ವಿಶಿಷ್ಟ ಸಂಗತಿಗಳೆಲ್ಲ ಶೇರ್​ ಆಗುತ್ತ ಟ್ರೆಂಡ್...

ಲಂಡನ್​: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​ ನಾಯಕತ್ವದ ಟೀಂ ಇಂಡಿಯಾ ಪಡೆ ಅದ್ದೂರಿ ಪ್ರದರ್ಶನ ನೀಡುತ್ತಿದ್ದು, ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ. ನಿನ್ನೆ(ಭಾನುವಾರ) ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಸಂಘಟಿತ ಹೋರಾಟ ನಡೆಸಿದ ಭಾರತ ತಾನು ಎದುರಿಸಿದ ವಿಶ್ವಕಪ್​ನ​ ಎರಡನೇ ಪಂದ್ಯದಲ್ಲೂ ಗೆದ್ದು ಬೀಗಿದೆ.

- Advertisement -

ಕೆನ್ನಿಂಗ್ಟನ್ ಓವಲ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಾಜಿ ನಾಯಕ ಎಂ.ಎಸ್​. ಧೋನಿ ಹಾಗೂ ಹಾಲಿ ನಾಯಕ ವಿರಾಟ್​ ಕೊಹ್ಲಿ ನಡುವಿನ ಆತ್ಮೀಯ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಇತ್ತೀಚೆಗೆ ಧೋನಿ ಸಾಮರ್ಥ್ಯದ ಬಗ್ಗೆ ಪದೇಪದೆ ಪ್ರಶ್ನೆಗಳು ಕೇಳಿಬರುತ್ತಿವೆ. ಆದರೆ, ನಿನ್ನೆ ಧೋನಿ ಬಾರಿಸಿದ ಸಿಕ್ಸರ್​​ಗೆ ಕೊಹ್ಲಿ ನೀಡಿದ ಪ್ರತಿಕ್ರಿಯೆ ಧೋನಿ ಸಾಮರ್ಥ್ಯ ಪ್ರಶ್ನಿಸುವವರಿಗೆ ನೀಡಿದ ಉತ್ತರದಂತ್ತಿತ್ತು.

ಹೌದು, ನಿನ್ನೆಯ ಪಂದ್ಯದಲ್ಲಿ ಕೇವಲ 14 ಎಸೆತದಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್​ ಒಳಗೊಂಡಂತೆ 27 ರನ್​ ಬಾರಿಸಿದ ಧೋನಿ ತಂಡಕ್ಕೆ ಉತ್ತಮ ರನ್​ ಕಾಣಿಕೆ ನೀಡಿದರು. ವಿಶೇಷ ಎಂದರೆ ಆಸಿಸ್​ ವೇಗಿ ಮಿಚೆಲ್​ ಸ್ಟಾರ್ಕ್​ ಎಸೆದ 49ನೇ ಓವರ್​ನಲ್ಲಿ ಧೋನಿ ಸಿಕ್ಸರ್​ ಬಾರಿಸಿದರು.

143 ಕಿ.ಮೀ ವೇಗದಲ್ಲಿ ಬರುತ್ತಿದ್ದ ಚೆಂಡನ್ನು ಡೀಪ್​ ಸ್ವೇರ್​ ಲೆಗ್​ ವಿಭಾಗದಲ್ಲಿ ಬೌಂಡರಿ ಗೆರೆಯ ಆಚೆಗೆ ತಳ್ಳಿದರು. ನಾನ್​ ಸ್ಟ್ರೈಕರ್​ ವಿಭಾಗದಲ್ಲಿ ನಿಂತಿದ್ದ ನಾಯಕ ವಿರಾಟ್​ ಕೊಹ್ಲಿ ಚೆಂಡು​ ಗಾಳಿಯಲ್ಲಿ ಹಾರಿ ಬೌಂಡರಿ ಗೆರೆಯನ್ನು ದಾಟುತ್ತಿರುವುದನ್ನು ಆಶ್ಚರ್ಯ ಚಕಿತದಿಂದಲೇ ನೋಡಿದರು. ಬಳಿಕ ಧೋನಿ ಕಡೆ ತಿರುಗಿ ನೋಡಿ ಎಂತಹ ಸಾಮರ್ಥ್ಯ ನಿಮ್ಮದು ಎಂದು ಹೇಳುವಂತೆ ಗಹಗಹನೆ ನಕ್ಕರು. ಸದ್ಯ ಕೊಹ್ಲಿ ನೀಡಿರುವ ಪ್ರತಿಕ್ರಿಯೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕ್ರೀಡಾಭಿಮಾನಿಗಳ ಮನಸ್ಸನ್ನು ಗೆದ್ದಿದೆ.

ಭಾನುವಾರ ಕೆನ್ನಿಂಗ್ಟನ್​​​​​​ ಓವಲ್​​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​​ ಮಾಡಿದ ಭಾರತ 50 ಓವರ್​ಗಳಲ್ಲಿ 5 ವಿಕೆಟ್​​ ನಷ್ಟಕ್ಕೆ 352 ರನ್​ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್ಸ್​​ ಆಸ್ಟ್ರೇಲಿಯಾ 50 ಓವರ್​ಗಳಲ್ಲಿ ಆಲೌಟ್​​​ ಆಗಿ 316 ರನ್​ ಗಳಿಸಲಷ್ಟೇ ಶಕ್ತವಾಯಿತು. (ಏಜೆನ್ಸೀಸ್​)

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...