VIDEO: ಅಭಿಮಾನಿಯ ಆಸೆ ಈಡೇರಿಸಿ ಹೃದಯವಂತಿಕೆ ಮೆರೆದ ವಿರಾಟ್ ಕೊಹ್ಲಿ​

ನವದೆಹಲಿ: ಟೀಂ ಇಂಡಿಯಾದ ಯಶಸ್ವಿ ನಾಯಕ ವಿರಾಟ್​ ಕೊಹ್ಲಿ ಅವರು ಮೈದಾನದಲ್ಲಿ ಸಾಕಷ್ಟು ಅಗ್ರೆಸಿವ್​ ಆಗಿರುವುದನ್ನು ನೋಡಿರುವ ಹೆಚ್ಚಿನವರಿಗೆ ಕೊಹ್ಲಿ ಒಬ್ಬ ಮುಂಗೋಪಿ ಎಂದೇ ಭಾವಿಸಿರುತ್ತಾರೆ. ಆದರೆ, ಅದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಿಮ್ಮ ಮುಂದಿದೆ ಓದಿ….

ಹೌದು, ಕೊಹ್ಲಿ ಸಿಡುಕು ಸ್ವಭಾವದವರಲ್ಲ. ನಿಜವಾಗಿಯೂ ಅವರೊಬ್ಬ ಹೃದಯವಂತ. ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್ ಅಭಿಮಾನಿಯೊಬ್ಬನ ಆಸೆಯನ್ನ ಈಡೇರಿಸಿ ಎಲ್ಲರ ಮನಗೆದ್ದಿದ್ದಾರೆ.

ಅಭ್ಯಾಸದ ವೇಳೆ ಅಭಿಮಾನಿಯೊಬ್ಬ ಮೈದಾನದಲ್ಲೇ ಟೀ ಶರ್ಟ್​ಗೆ ಆಟೋಗ್ರಾಫ್ ಹಾಕುವಂತೆ ಕೇಳಿಕೊಂಡಾಗ ವಿರಾಟ್ ಏನು ಮಾತಾಡದೇ ಆಟೋಗ್ರಾಫ್​ ಹಾಕಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಅಭಿಮಾನಿ ಬನಿಯನ್ ಮೇಲೂ ಆಟೋಗ್ರಾಫ್ ಹಾಕುವಂತೆ ವಿನಂತಿ ಮಾಡಿದ್ದಾನೆ. ಆಗಲೂ ವಿರಾಟ್ ಸಮಾಧಾನದಿಂದಲೇ ಬನಿಯನ್ ಅನ್ನು ಸರಿಯಾರಿ ಹಿಡಿದುಕೊಳ್ಳಲು ಹೇಳಿ ಆಟೋಗ್ರಾಫ್ ಹಾಕಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಇಂಗ್ಲೆಂಡ್ ಪ್ರವಾಸದ ವೇಳೆ ಪುಟ್ಟ ಹುಡುಗನೊಬ್ಬ ವಿರಾಟ್ ಫೋಟೋ ಪ್ಲೀಸ್ ಅಂತ ಕೂಗುತ್ತಿದ್ದ. ಅದನ್ನು ಕಂಡ ಕೊಹ್ಲಿ ಪುಟಾಣಿ ಅಭಿಮಾನಿಗೆ ನಿರಾಸೆ ಮಾಡದೇ ಆತನ ಬಳಿ ಹೋಗಿ ಮೊಬೈಲ್ ಪಡೆದು ಸೆಲ್ಫಿ ಕ್ಲಿಕ್ಕಿಸಿ ಪುಟ್ಟ ಪೋರನ ಖುಷಿಪಡಿಸಿದ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗ ಆಟೋಗ್ರಾಫ್ ವೀಡಿಯೋ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೊಹ್ಲಿ ಹೃದಯ ಶ್ರೀಮಂತಿಕೆಯನ್ನು ಎಲ್ಲರೂ ಕೊಂಡಾಡಿದ್ದಾರೆ. (ಏಜೆನ್ಸೀಸ್​)

https://www.instagram.com/p/BqtQgMKgs10/?utm_source=ig_embed&utm_campaign=embed_video_watch_again