VIDEO| ಬೆಳ್ಳುಳ್ಳಿ ಸಿಪ್ಪೆ ಬಿಡಿಸಲು ಇಲ್ಲಿದೆ ಸುಲಭಾತಿಸುಲಭ ವಿಧಾನ: ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ವಿಡಿಯೋ!

ನವದೆಹಲಿ: ಕೆಲವರಿಗೆ ಅಡುಗೆ ಮಾಡುವುದು ಎಷ್ಟು ಇಷ್ಟವೋ, ಈರುಳ್ಳಿ ಕತ್ತರಿಸುವುದು ಹಾಗೂ ಬೆಳ್ಳುಳ್ಳಿ ಬಿಡಿಸುವುದೆಂದರೆ ಕೆಲವರಿಗೆ ಅಷ್ಟೇ ಕಷ್ಟ. ಬೆಳ್ಳುಳ್ಳಿಯ ಘಾಟು ಕೈಯಲ್ಲಿ ಅಂಟಿಕೊಳ್ಳುತ್ತದೆ ಎಂಬ ಕಾರಣಕ್ಕೆ ಅನೇಕರು ಅದನ್ನು ಬಿಡಿಸಲು ಹಿಂದೇಟು ಹಾಕುತ್ತಾರೆ. ಆದರೆ, ಅದಕ್ಕೆ ಯೋಚನೆ ಮಾಡುವ ಅಗತ್ಯವಿಲ್ಲ. ಇಲ್ಲೊಬ್ಬಳು ಮಹಿಳೆ ಬೆಳ್ಳುಳ್ಳಿಯನ್ನು ಹೇಗೆ ಬಿಡಿಸಬೇಕೆಂಬುದನ್ನು ಸುಲಭ ಮಾಡಿದ್ದಾಳೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದೆ.

ಹೌದು, @VpestilenZ ಎಂಬ ಹೆಸರಿನ ಟ್ವಿಟರ್​ ಬಳಕೆದಾರನೊಬ್ಬ ವಿಡಿಯೋವೊಂದನ್ನು ಅಪ್​ಲೋಡ್​ ಮಾಡಿದ್ದು, ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದೆ. ಸಾಕಷ್ಟು ಕೋರಿಯನ್​ ಆಹಾರವನ್ನು ತಯಾರಿಸುವವರಿಗೆ ಬೆಳ್ಳುಳ್ಳಿ ಬಿಡಿಸಲು ಇದು ಉತ್ತಮ ವಿಧಾನವಾಗಿದೆ ಎಂದು ವಿಡಿಯೋ ಕುರಿತು ಬಳಕೆದಾರಳು ಬರೆದುಕೊಂಡಿದ್ದಾರೆ.

ಮಹಿಳೆಯು ಚಾಕುವಿನಿಂದ ಸಿಪ್ಪೆಯ ಒಳಗಿರುವ ಬೆಳ್ಳುಳ್ಳಿಯ ತಿರುಳನ್ನು ಮಾತ್ರ ಬಿಡಿಸಿ ಸಿಪ್ಪೆಯನ್ನು ಹಾಗೇ ಉಳಿಸುತ್ತಿರುವುದು ವೈರಲ್​ ಆಗಿರುವ ವಿಡಿಯೋದಲ್ಲಿದೆ. ಈಗಾಗಲೇ ವಿಡಿಯೋವನ್ನು 22 ಮಿಲಿಯನ್​ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 4 ಮಿಲಿಯನ್​ಗು ಅಧಿಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1 ಲಕ್ಷ 45 ಸಾವಿರ ಮಂದಿ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರೀಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

2 Replies to “VIDEO| ಬೆಳ್ಳುಳ್ಳಿ ಸಿಪ್ಪೆ ಬಿಡಿಸಲು ಇಲ್ಲಿದೆ ಸುಲಭಾತಿಸುಲಭ ವಿಧಾನ: ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ವಿಡಿಯೋ!”

  1. Sir,
    Kindly cover agricultural aspect also to enable farmers know innovative techniques.
    With regards

  2. ಇನ್ನೂ ಸುಲಭವಾಗಿ ಬೆಳ್ಳುಳ್ಳಿಯನ್ನು ಬಿಡಿಸಬಹುದು. ಬೆಳ್ಳುಳ್ಳಿಯನ್ನು ಬಾಣಲೆಯಲ್ಲಿ ಹಾಕಿ ಸ್ವಲ್ಪ ಎಣ್ಣೆಯಲ್ಲಿ ಬಾಡಿಸಿದರೆ, ಸಿಪ್ಪೆ ಸಲೀಸಾಗಿ ಬಿಟ್ಟುಕೊಳ್ಳುವುದು. ಎಣ್ಣೆ ಹಾಕದೆಯೂ ಬಾಡಿಸಬಹುದು.

Leave a Reply

Your email address will not be published. Required fields are marked *