VIDEO| ಫುಟ್ಬಾಲ್​​ ಸ್ಟಾರ್​​ ಆಟಗಾರನ ಪೋಟೊ ತೆಗೆಯಲು ಹೋಗಿ ಏಟು ತಿಂದ ಪ್ರೇಕ್ಷಕ!

ದೆಹಲಿ: ಫುಟ್ಬಾಲ್​​ ಆಟಗಾರನ ಪೋಟೊ ತೆಗೆಯಲು ಹೋದ ಪ್ರೇಕ್ಷಕ ಆತನಿಂದಲೇ ಏಟು ತಿಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

ಬ್ರೆಜಿಲ್​​​​ ತಂಡದ ಸ್ಟಾರ್​​ ಆಟಗಾರ ನೇಮರ್​​ ಅವರು ಪೋಟೊ ತೆಗೆಯಲು ಬಂದ ಪ್ರೇಕ್ಷಕನ ಮುಖಕ್ಕೆ ಗುದ್ದು ನೀಡಿದ್ದಾರೆ.

ಫ್ರೆಂಚ್​​​ ಕಪ್​​ ಫೈನಲ್​​ ಟೂರ್ನಿಯ ಪಂದ್ಯ ಮುಗಿದ ಬಳಿಕ ಎಲ್ಲ ಆಟಗಾರರು ಡ್ರೆಸ್ಸಿಂಗ್‌ ರೂಂಗೆ ತೆರಳುವ ವೇಳೆ ನೇಮರ್​​ ಅಭಿಮಾನಿ ಅವರ ಪೋಟೊ ಕ್ಲಿಕ್ಕಿಸಲು ಮುಂದಾಗಿದ್ದ. ಆದರೆ ಪಂದ್ಯದಲ್ಲಿ ಉತ್ತಮ ಫಲಿತಾಂಶ ದೊರೆಯದ ಕಾರಣ ಬೇಸರಗೊಂಡಿದ್ದ ನೇಮರ್​​​​​​​​​​​​ ಅಭಿಮಾನಿಯ ಮುಖಕ್ಕೆ ಹೊಡೆದಿದ್ದಾನೆ.

ಈ ದೃಶ್ಯಾವಳಿ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ವೈರಲ್​​ ಆಗಿದೆ. ನೇಮರ್​​ ಅವರ ನಡವಳಿಕೆಯಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. (ಏಜೆನ್ಸೀಸ್)