ಧೋನಿ ಕಾಪಿ ಮಾಡಲು ಹೋಗಿ ಕೈಸುಟ್ಟುಕೊಂಡ ಪಾಕ್​ ನಾಯಕ ಸರ್ಫರಾಜ್​

ನವದೆಹಲಿ: ಜಿಬಾಂಬ್ವೆ ವಿರುದ್ಧದ ಐದು ಏಕದಿನ ಪಂದ್ಯದ ಸರಣಿಯನ್ನು ವೈಟ್​ವಾಷ್​ ಮಾಡಿರುವ ಪಾಕಿಸ್ತಾನ ತಂಡದ ಪರ ಅನೇಕ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ನಾಯಕನಾಗಿರುವ ಸರ್ಫರಾಜ್​ ಅಹಮದ್​ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡದೆ ಕೊನೆಯ ಪಂದ್ಯದಲ್ಲಿ ಧೋನಿಯನ್ನು ಕಾಪಿ ಮಾಡಲು ಹೋಗಿ ಮುಖಭಂಗ ಅನುಭವಿಸಿದ್ದಾರೆ.

ಧೋನಿ ರೀತಿಯಲ್ಲೇ ವಿಕೆಟ್​ ಕೀಪರ್​ ಕಮ್​ ನಾಯಕನಾಗಿರುವ ಸರ್ಫರಾಜ್,​ ಧೋನಿ ರೀತಿ ಬೌಲಿಂಗ್​ ಮಾಡಲು ಹೋಗಿ ಮುಖಭಂಗ ಅನುಭವಿಸಿದ್ದಾರೆ. ಭಾನುವಾರ ಜಿಂಬಾಬ್ವೆ ವಿರುದ್ಧ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಕೀಪಿಂಗ್​ ಗ್ಲೌಸನ್ನು ಜಮಾನ್​ ಅವರಿಗೆ ನೀಡಿ ಬೌಲಿಂಗ್​ ಮಾಡಿದ ಸರ್ಫರಾಜ್ ಸಿಕ್ಸರ್ ನೀಡುವ ಮೂಲಕ ದುಬಾರಿಯಾದರು.

ಸರ್ಫರಾಜ್​ ಎಸೆದ 48ನೇ ಓವರ್​ನಲ್ಲಿ ಜಿಂಬಾಬ್ವೆ ತಂಡದ ಪೀಟರ್​ ಮೂರ್​ ಸಿಕ್ಸರ್​ ಬಾರಿಸಿದರು. ಅಂತಾರಾಷ್ಟ್ರೀಯಾ ಪಂದ್ಯದಲ್ಲಿ ಮೊದಲ ಬಾರಿಗೆ ಬೌಲ್​ ಮಾಡಿದ ಸರ್ಫರಾಜ್​ ಯಾವುದೇ ವಿಕೆಟ್​ ಪಡೆಯದೇ 2 ಓವರ್​ಗೆ 15 ರನ್​ ನೀಡಿ ಮುಖಭಂಗ ಅನುಭವಿಸಿದರು.

ಧೋನಿ ಬತ್ತಳಿಕೆಯಲ್ಲಿದೆ ಒಂದು ವಿಕೆಟ್​​​
ಟೀಂ ಇಂಡಿಯಾದ ಮಾಜಿ ನಾಯಕ ಎಂ. ಎಸ್​. ಧೋನಿ ಅವರ ಹೆಸರಿನಲ್ಲಿ ಒಂದು ಅಂತಾರಾಷ್ಟ್ರೀಯ ವಿಕೆಟ್​ ದಾಖಲಾಗಿದೆ. 2009 ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ವೆಸ್ಟ್​ ಇಂಡೀಸ್​ ತಂಡದ ಟ್ರಾವೀಸ್​ ಡಾವ್ಲಿನ್​ ಅವರ ವಿಕೆಟ್ ಪಡೆದಿದ್ದಾರೆ. (ಏಜೆನ್ಸೀಸ್​)​